ಇವತ್ತು ರಾಷ್ಟ್ರೀಯ ಓದುಗರ ದಿನ ವಿಶೇಷ ಲೇಖನ-ಗಾಯತ್ರಿಸುಂಕದ

ಹಲೋ
ಇವತ್ತು ರಾಷ್ಟ್ರೀಯ ಓದುಗರ ದಿನ
ಓದುವುದು ಒಂದು ಉತ್ತಮ ಹವ್ಯಾಸವೇ ಸಾರಿ. ಕೈಯಲ್ಲಿ ಒಂದು ಪುಸ್ತಕ ಇದ್ದರೆ ಸಾಕು, ನಾವು ಜಗತ್ತನ್ನೇ ಮರೆತು  ಬಿಡುತ್ತೇವೆ, ಅಷ್ಟರ ಮಟ್ಟಿಗೆ ಪುಸ್ತಕ ನಮ್ಮನ್ನು ಆಕ್ರಮಿಸಿ ಬಿಡುತ್ತದೆ,

ಮನುಷ್ಯ ಯಾವಾಗ ಭಾಷೆಯನ್ನು ಕಲಿತಾನೋ ಆಗ ಬಂದಿದ್ದೇ ಓದುವ ಹವ್ಯಾಸ.
ಈಗ ಮೊಬೈಲ್, ಇಂಟರ್ನೆಟ್. ಬಂದರೂ ಪುಸ್ತಕ ಮಾತ್ರ ಆಲ್ ಟೈಮ್ ಫೇವರಿಟ್.
ಗ್ರಂಥಾಲಯ ಕೇವಲ ಪುಸ್ತಕಗಳನ್ನಿಡುವ ಕೋಣೆ ಅಲ್ಲ, ಅದು ನಮ್ಮ ಜ್ಞ್ಞಾನದ ಹೆಬ್ಬಾಗಿಲು ಕೂಡ. ಓದುವುದು ನಮ್ಮನ್ನು ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿ ಬಿಡುತ್ತದೆ ಎಂದರೆ ಪಕ್ಕಕ್ಕೆ ತಮಟೆ ಬಾರಿಸಿದರೂ ನಾವು ನಮ್ಮ ಲೋಕದಲ್ಲಿ ಮಗ್ನರಾಗಿ ಬಿಡುತ್ತೇವೆ.
ನಮ್ಮ ದುಃಖಗಳನ್ನು ಮರೆಯಲಿಕ್ಕೂ ಸಹ ಓದುವುದು ಒಂದು ಔಷಧಿಯಂತೆ.ನಾವು ಚಿಕ್ಕವರಿದ್ದಾಗ ತ್ರಿವೇಣಿ, ಸಾಯಿಸುತೆ, ವೈದೇಹಿ  ಅವರ ಕಾದಂಬರಿಗಳನ್ನು ಓದುವ  ಅಭಿಮಾನಿ ವರ್ಗ ಇತ್ತು.ಎಷ್ಟೋ ಸಾರಿ ಓದುವುದರಲ್ಲಿ ಮಗ್ನರಾಗಿ ಕುಕ್ಕರ್ ಸಿಟಿ ಹೊಡೆದರೂ ಕೇಳದೆ ಕುಕ್ಕರ್ ಸ್ಪೋಟ ಆದ ಎಷ್ಟೋ ಉದಾಹರಣೆಗಳನ್ನು ನೋಡಿದ್ದೇನೆ.ಒಲೆಯ ಮೇಲೆ ಕಾಯಿಸಲು ಇಟ್ಟ ಹಾಲು ಸೀದು ಹಾಳಾಗುವುದು ಮಾಮೂಲು ಆಗಿತ್ತು. ಅಷ್ಟರ ಮಟ್ಟಿಗೆ ಓದು ಹುಚ್ಚು ಹಿಡಿದಿತ್ತು.
ಓದುವುದು, ನಮಗೆ ಜ್ಞಾನದ ಹೆಬ್ಬಾಗಿಲು ಅಷ್ಟೇ ಅಲ್ಲ, ಅದು ವ್ಯಕ್ತಿತ್ವದ ವಿಕಸನಕ್ಕೆ ದಾರಿ ಕೂಡ. ಓದುವ ಹವ್ಯಾಸ ಇದ್ದರೆ ಬೇರೆ ಫ್ರೆಂಡ್ ಅವಶ್ಯಕತೆ ಇಲ್ಲ.ಓದಿನಿಂದ  ನಮಗೆ ಗೊತ್ತಿಲ್ಲದಹಾಗೆ ನಮ್ಮಲ್ಲಿ ಅನೇಕ ಬದಲಾವಣೆ  ನೋಡ ಬಹುದು.  ಮನಸ್ಸು ಪರಿಪಕ್ವ ಅನಿಸಲು ಶುರು ಆಗುತ್ತದೆ. ಚಿಕ್ಕ ಚಿಕ್ಕ ಸಂಗತಿಗಳಿಗೆ ರಿಯಾಕ್ಟ್  ಮಾಡುವುದನ್ನು ಬಿಡುತ್ತೇವೆ.


ಪುಸ್ತಕವು ಲೇಖಕರ, ಪ್ರಕಾಶಕರ ಮತ್ತು ಓದುಗನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಎಷ್ಟೋ ಜನ ಪುಸ್ತಕ ಬರೆದು ಜೀವನ ಕಟ್ಟಿ  ಕೊಂಡಿದ್ದರೆ ,ಕೆಲವು ಜನ ಪುಸ್ತಕ ಓದಿ ಭವಿಷ್ಯ ರೂಪಿಸಿ ಕೊಂಡಿದ್ದಾರೆ.
ಬನ್ನಿ, ಓದುಗರ ದಿನವನ್ನು  ಸಂಭ್ರಮ ಪಡೋಣ.
ಬನ್ನಿ . ಓದುಗರ ದಿನವನ್ನು ಪ್ರತಿ ದಿನ ಆಚರಿಸೋಣ


Leave a Reply

Back To Top