‘ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ’ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ
_________
ಜ್ಞಾನವೆಂಬುದು ಎಲ್ಲರೊಡನೆ ಬೀರದಿರಬೇಕು,
———————————————-
ಜ್ಞಾನವೆಂಬುದು ಬೀದಿಯ ಪಸರವೆ?
ಬೊಕ್ಕಣಕ್ಕೆ ತುಂಬುವ ಹುರುಳಿಯೆ?
ಚೀಲದೊಳಗಣ ಜೀರಿಗೆಯೆ?
ಗಣದೊಳಗಣ ಹಿಂಡಿಯೆ?
ಜ್ಞಾನವೆಂಬುದು ಎಲ್ಲರೊಡನೆ ಬೀರದಿರಬೇಕು,
ಗೆಲ್ಲ ಸೋಲಿನ ಮಾತು ಬಂದಡೆ ಗೆಲ್ಲವ ನುಡಿಬೇಕು
ಅಮಗೆಶ್ವೇರಲಿಂಗವೆಂಬೆನು.

ಶರಣೆ ಅಮುಗೆರಾಯಮ್ಮನ ವಚನ
ಸ ವ ಸಂ: 5, ವ-645 ಪುಟ-202

ಶರಣೆ ಅಮುಗೆ ರಾಯಮ್ಮ ನೇಕಾರ ವೃತ್ತಿಯ ದಿಟ್ಟ ಗಣಾಚಾರಿ ಶರಣೆ .ಅವಳ ಗಂಡ ಅಮುಗೆ ದೇವಯ್ಯಾ .ಶರಣರ ಸಂಕುಲದಲ್ಲಿಯೇ ಶ್ರೇಷ್ಠ ವಿಚಾರ ಹೊಂದಿದ ಬಂಡಾಯಗಾರ್ತಿ ವಸ್ತು ನಿಷ್ಠ ಚಿಂತಕಿ ಅಮುಗೆ ರಾಯಮ್ಮ. ಅವಳು ಪ್ರತಿಪಾದಿಸಿದ ವಚನಗಳು ನೇರ ದಿಟ್ಟ ನಿರಂತರ ಹಾಗು ಸಂಘರ್ಷಕ್ಕೆ ಸ್ಪೂರ್ತಿಯಾಗುತ್ತವೆ.

ಜ್ಞಾನವೆಂಬುದು ಬೀದಿಯ ಪಸರವೆ?
————————————
ಜ್ಞಾನವೇನು ರಸ್ತೆಯ ಪಕ್ಕದಲ್ಲಿ ಪಸರಿಸಿದ ಹುಲ್ಲು ಅಥವಾ ಕಸವೇ ? ಜ್ಞಾನವು ನಿತ್ಯ ಸಾಧನ ಮಾಡಿ ಪಡೆಯುವ ಒಂದು ಕಠಿಣ ತಪಸ್ಸು. ಜ್ಞಾನವೆಂಬುದು ಶಿಕ್ಷಣವಲ್ಲ ಪಠ್ಯ ಪುಸ್ತಕದ ಭಾಷೆ ಅಲ್ಲ. ಜ್ಞಾನವೆಂಬುದು ಅಂತರಂಗ ಬಹಿರಂಗದ ಸಮನ್ವ ಸಾಧನ . ಹೀಗಾಗಿ ಜ್ಞಾನವೇನು ರಸ್ತೆಯಲಿ ಬಿದ್ದಿರುವುದೇ ?

ಬೊಕ್ಕಣಕ್ಕೆ ತುಂಬುವ ಹುರುಳಿಯೆ?
————————————
ಜ್ಞಾನವು ಬೊಕ್ಕಣಕೆ ಕಿಸೆಗೆ ಹಾಕುವ ಪದಾರ್ಥವಲ್ಲ ಹುರುಳಿಯ ಕಾಳಲ್ಲ.ಜ್ಞಾನವು ಉಪಜೀವನದ ಮಾರ್ಗವಲ್ಲ .ಹೊಟ್ಟೆ ಹೋಲುಬಿಗೆ ಜ್ಞಾನವಲ್ಲ . ಬೊಕ್ಕಣ ಅಂದರೆ ಕಿಸೆ ಅಥವಾ ಪಾಕೆಟ್
ಅದರಲ್ಲಿ ತುಂಬಿಕೊಳ್ಳುವ ಪಡಿ ಪದಾರ್ಥವಲ್ಲ. ಜ್ಞಾನವದು ಅವಿರಳ ಅನುಭವ .

ಚೀಲದೊಳಗಣ ಜೀರಿಗೆಯೆ?
——————————-
ಜ್ಞಾನವಿದು ಚೀಲದೊಳ  ಇಡುವ  ಮಸಾಲೆ ಪದಾರ್ಥವಾದ ಜೀರಿಗೆಯಲ್ಲ . ಅಡುಗೆ ಪ್ರಾಪಂಚಿಕ ವಿಷಯಕ್ಕೆ ಬಳಕೆಯಾಗುವ ಜೀರಿಗೆ ಜ್ಞಾನವಲ್ಲ.ಜ್ಞಾನವನ್ನು ಹಗುರವಾಗಿ ಕಾಣುವ ಭವಿಗಳಿಗೆ ಚಾಟಿ ಏಟು ಕೊಡುವ ದಿಟ್ಟ ಶರಣೆ ಜ್ಞಾನವು ಪರಿಶುದ್ಧ ಮನಸಿನಿಂದ ಪಡೆಯುವ ದಿವ್ಯ ಚೈತನ್ಯ ಮಾರ್ಗ .

ಗಣದೊಳಗಣ ಹಿಂಡಿಯೆ? (ಗಾಣದೊಳಗಣ  ಎಂದಾಗಬೇಕು   ವಚನ ಸಂಕಲನದಲ್ಲಿ   ಆದ ತಪ್ಪು )
———————————————————————————————————–
ಜ್ಞಾನವು ಜನ ಸಮುದಾಯದಲ್ಲಿ ಸಿಗುವ ಹಿಂಡಿಯೇ.? ಇಲ್ಲಿ ಗಣ ಬದಲಾಗಿ ಗಾಣವೆಂದಾದರೆ ಎಣ್ಣೆ ತೆಗೆದ ಗಾಣಿಗ ಕಾಳಿನ ಬೀಜಗಳ ಘನ ತಾಜ್ಯ ಹಿಂಡಿ .ಅದನ್ನು ರೈತರು ತಮ್ಮ ದನಕರುಗಳಿಗೆ ಹಾಕುತ್ತಾರೆ. ಜ್ಞಾನವೆಂಬ ಎಣ್ಣೆ ತೆಗೆದು ಉಳಿದ ಜೊಟ್ಟು ಎಂಬ ಹಿಂಡಿಯಲ್ಲ ಜ್ಞಾನವು .

ಜ್ಞಾನವೆಂಬುದು ಎಲ್ಲರೊಡನೆ ಬೀರದಿರಬೇಕು,
——————————————-
ಜ್ಞಾನವು ಎಲ್ಲರೊಳಗೆ ಕೂಡಿರಬೇಕು . ಎಲ್ಲರ ಏಳಿಗೆ ಅಭಿವೃದ್ಧಿಯ ಮಂತ್ರವಾಗಬೇಕು ಜ್ಞಾನವು. ವ್ಯಕ್ತಿಗತ ಪ್ರತಿಷ್ಠೆ ಅಹಂ ಭಾವಕ್ಕೆ ಕಾರಣವಾಗಬಾರದು. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡುವ ವ್ಯವಧಾನವಾಗಬೇಕು.ಎಲ್ಲರೊಳಗೆ ಬೆರೆತ ಅನುಭಾವವೇ ಜ್ಞಾನವು.ಬೀರದಿರಬೇಕು ಬದಲಾಗಿ ಬಿರದಿರಬೇಕು ಎಂದಾಗಬೇಕು . ಅಂದರೆ ಜ್ಞಾನವನ್ನು ಎಲ್ಲರಿಗೂ ಹಂಚುವಂತಾಗಬೇಕು. ನಮ್ಮ ಮನೆಯ ದೀವಿಗೆ ರಸ್ತೆಯ ಮೇಲೂ ಬೆಳಕು ಕೊಡುತ್ತದೆ . ನಮ್ಮ ಮನೆಯ ಅಗರ ಬತ್ತಿಯು ಪಕ್ಕದ ಮನೆಯಲ್ಲೂ ತನ್ನ ಪರಿಮಳ ಬಿರುವಂತೆ ಹಾಗೆ ಜ್ಞಾನವು ಎಲ್ಲರೊಳಗೆ ಕೂಡಿಕೊಂಡು ಜನರನ್ನು ಉದಾತ್ತಗೊಳಿಸಬೇಕು.

6 thoughts on “‘ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ’ಡಾ ಶಶಿಕಾಂತ ಪಟ್ಟಣ ರಾಮದುರ್ಗ

  1. ಅಮುಗೆ ರಾಯಮ್ಮನವರ ವಚನವನ್ನು ಸರಿಪಡಿಸಿ… ಅದರ ಅರ್ಥವನ್ನು ಎಲ್ಲರಿಗೂ ತಿಳಿಯುವಂತೆ ಸಮಂಜಸವಾಗಿ, ವೈಚಾರಿಕತೆಯ ಹಿನ್ನೆಲೆಯಲ್ಲಿ ಅರ್ಥೈಸಿದ್ದೀರಿ ಸರ್
    ಧನ್ಯವಾದಗಳು

    ಸುಧಾ ಪಾಟೀಲ
    ಬೆಳಗಾವಿ

  2. ಜ್ಞಾನಪೂರಿತ, ಅರ್ಥಪೂರ್ಣ, ಸರಳ, ಸ್ಪಷ್ಟ ಪದಗಳಿಂದ ಮಾಡಿದ ವಚನ ವಿಶ್ಲೇಷಣೆ ಸರ್. ತುಂಬ ಮಾರ್ಮಿಕವಾದ ಬರಹ ಸರ್

    ಡಾ ಗೀತಾ

Leave a Reply

Back To Top