ಜೆನ್ನಿಫರ್ ವಿಲಿಯಮ್ಸ್ ಅವರ ಇಂಗ್ಲೀಷ್ ಕವಿತೆಯ ಅನುವಾದ ಡಾ. ಸುಮಾ ರಮೇಶ್, ಅವರಿಂದ

ಎಲೆಗಳು ನರ್ತಿಸಲಾರಂಭಿಸಿದಾಗ, ಹಾಗೂ
ಹೊಸ ಗಾಳಿಯೊಂದು ಬೀಸಿದಾಗ;
ಹಕ್ಕಿಗಳು ಹಾಡಲಾರಂಭಿಸಿದಾಗ, ಮತ್ತು
ಹೊಸ ಹಾಡೊಂದನ್ನು ರಚಿಸಿದಾಗ;
ನನ್ನಾತ್ಮದಾಳದೊಳಗಿನ ನದಿಗಳಿಂದ ಯಾವಾಗ
ನನ್ನೆಡೆಗೆ ಬರುತ್ತಿರುವ ಕಡಲ ಸದ್ದನ್ನು ಕೇಳಲಾರಂಭಿಸುವೆ ನಾನು,
ವಿರಮಿಸುವೆ ಹಾಗೆಯೇ ನಾನು ಸುಖಿಸುತ್ತಾ  ಬೆಚ್ಚನೆಯ ಸಮಗ್ರತೆಯಲ್ಲಿ,
ತಡೆಯಲಾಗದಿದ್ದರೂ ನನಗೆ ಕಾಣಬಲ್ಲೆ
ಎಂದಿಗೂ ಕದಲಿಸಲಾಗದ ಸಂಪರ್ಕವನ್ನು
ನನ್ನ ಸುತ್ತಲಿರುವ ಎಲ್ಲದರೊಂದಿಗೆ.

————————————————————————————————-

2 thoughts on “ಜೆನ್ನಿಫರ್ ವಿಲಿಯಮ್ಸ್ ಅವರ ಇಂಗ್ಲೀಷ್ ಕವಿತೆಯ ಅನುವಾದ ಡಾ. ಸುಮಾ ರಮೇಶ್, ಅವರಿಂದ

Leave a Reply

Back To Top