ವಿಶೇಷ ಸಂಗಾತಿ
ಕೆ.ಜೆ.ಪೂರ್ಣಿಮಾ
ಲಹರಿ : ಹಸ್ತಪ್ರತಿ ಹರಿದಾಸ
ಸಾಹಿತ್ಯಕ್ಕೆ ದರ್ಪಣ
: ವೇದಶಾಸ್ತ್ರಗಳಲ್ಲಿ ಅಡಕವಾದ ನಿತ್ಯ ಸತ್ಯಗಳ ನೀತಿ ತತ್ವಗಳನ್ನು ವಚನ ರೂಪದಲ್ಲಿ ಶಿವಶರಣರು ಹೇಳಿರುವಂತೆ, ಕನ್ನಡ ವಾಗ್ಮಯಕ್ಕೆ ಹರಿದಾಸರಗಳು ಸೆಲ್ಲಿಸಿದ ಸೇವೆ ಬಹು ಅಮೂಲ್ಯವಾದದು, ಈ ದಾಸವಗ್ಮಯವೂ ಆಡಿನ ರೂಪ ತಾಳಿ ಬಳಿಕ ಮಾತಿಗೆ ಬಹಳ ಹತ್ತಿರವಾಗಿ ರಾಶಿ ರಾಶಿಯಾಗಿ ಬೆಳೆದು ಜನರ ಜೀವನದಲ್ಲಿ ಒಂದು ಚಿರಂತನವಾದ ಸ್ಪೂರ್ತಿ ಕೇಂದ್ರವನ್ನು ನಿರ್ಮಾಣ ಮಾಡಿತು, ಈ ದಾಸ ಸಾಹಿತ್ಯವು 14ನೇ ಶತಮಾನದಲ್ಲಿ ಉದಯವಾಯಿತು ಎಂದು ಹೇಳಬಹುದು ಆದರೆ ಯಾವಾಗ ಹುಟ್ಟಿದೆ ಎಂದು ಹೇಳುವುದು ಕಷ್ಟವಾಗಿದೆ.
ಯಾವುದೇ ಬಗೆಯ ಸಾಹಿತ್ಯವನ್ನು ಅಭ್ಯಾಸ ಮಾಡಬೇಕಾದರೂ ಮೊದಲ ಹಂತವಾಗಿ ಈ ಸಾಹಿತ್ಯವನ್ನು ಸಂಗ್ರಹಿಸಬೇಕು ಸಮಕಾಲಿನ ಸಾಹಿತ್ಯ ಸಂಗ್ರಹಣೆ ಮುದ್ರಣ ವ್ಯವಸ್ಥೆಯಿಂದಾಗಿ ಸುಲಭವಾಗಿ ಇಂದಿನ ಸಾಹಿತ್ಯವನ್ನು ಸಂಗ್ರಹಿಸುವುದು ಅಷ್ಟು ಸುಲಭದ ಕೆಲಸವಲ್ಲ ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳ ಹಳಮೆಯಿದ್ದರೂ ಈ ಸಾಹಿತ್ಯವೆಲ್ಲ ದಾಖಲಾಗಿರುವುದು ಹಸ್ತಪ್ರತಿಗಳಲ್ಲಿ, ಆದ್ದರಿಂದ ಅಂದು ಇಂದು ಎಂದಾದರೂ ಅಭ್ಯಾಸಗಳು ಮೊದಲು ಅಸ್ತಪ್ರತಿ ಸರ್ವೇಕ್ಷಣ ಕಾರ್ಯ ಮಾಡುವುದು ಅನಿವಾರ್ಯ. ನಮ್ಮಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ ಒಂದು ಧಾರ್ಮಿಕ ಆವರಣ ವಿರುತ್ತದೆ.
ಅತ್ತಪರ್ತಿಯಲ್ಲಿರುವ ಗ್ರಂಥಗಳನ್ನು ಮನೆತನದ ಆಸ್ತಿ ಎಂದು ಪರಿಗಣಿಸಿ, ದೇವರ ಬಳಿ ಇಟ್ಟು ಪೂಜೆ ಮಾಡಲಾಗುತ್ತದೆ ಈ ರೀತಿಯ ಭಾವನಾತ್ಮಕ ಸಂಬಂಧವನ್ನು ಬಲವಾಗಿರುವುದರಿಂದ ತಮ್ಮಲ್ಲಿರುವ ಸಾಹಿತ್ಯ ಕೃತಿಗಳ ಅಥವಾ ಗ್ರಂಥಗಳ ಪ್ರತಿಗಳನ್ನು ಯಾರು ಅಷ್ಟು ಸುಲಭವಾಗಿ ಇತರರಿಗೆ ಕೊಡುವುದಿಲ್ಲ. ಕೆಲವರಿಗೆ ಅವುಗಳ ಬಗ್ಗೆ ಏನೂ ತಿಳಿದಿರುವುದಿಲ್ಲ ಅವುಗಳನ್ನು ಓದುವ ಸಾಮರ್ಥ್ಯವಿರದಿದ್ದರೂ ಅವರು ಅವುಗಳನ್ನು ಪೂಜೆ ಮಾಡುವುದನ್ನು ಬಿಡುವುದಿಲ್ಲ, ಇನ್ನು ಕೆಲವರಿಗೆ ಅವುಗಳಲ್ಲಿ ವಿಷಯದ ಅರಿವಿದ್ದು ಆರ್ಥಿಕವಾಗಿ ಅವುಗಳನ್ನು ಪ್ರಕಟಿಸುವ ಸ್ಥಿತಿಯಲ್ಲಿರುವುದಿಲ್ಲ ಆದರೂ ಅವರು ವರ್ಷಕ್ಕೊಮ್ಮೆ ದಸರಾ ಹಬ್ಬದ ಮೂಲ ನಕ್ಷತ್ರದಂದು ಅವುಗಳ ಧೂಳು ಕೊಡವಿ, ಊದಿನ ಕಡ್ಡಿ ಒತ್ತಿಸುತ್ತಾರೆಯೇ ವಿನಹ ಇತರರಿಗೆ ಅದನ್ನು ಕೊಡುವುದಿಲ್ಲ, ಕಾರಣ ತಮ್ಮಿಂದ ಹಸ್ತ ಪ್ರತಿಗಳನ್ನು ಪಡೆಯಲು ಬಂದವರನ್ನು ವಿಪರೀತ ಹಣ ಸಂಪಾದಿಸರೆಂಬ ಯೋಜನೆಯನ್ನು ಕೆಲವರಿ ಇಟ್ಟುಕೊಂಡಿರುತ್ತಾರೆ ಹೀಗಾಗಿ ನಮ್ಮಲ್ಲಿ ಅರ್ಥ ಪ್ರತಿಗಳ ಸಂಗ್ರಹಣೆ ಬಲು ಕಷ್ಟಕರವಾದ ಕೆಲಸ ಅದರಲ್ಲೂ ದಾಸ ಸಾಹಿತ್ಯ ಇತರ ಲಿಖಿತ ಕಾವ್ಯ ಕೃತಿಗಳಂತಲ್ಲ, ನೂರಾರು ವರ್ಷಗಳ ಕಾಲ ಕೇವಲ ಬಾಯಿಂದ ಬಾಯಿಗೆ ದಾಟಿಬಂದಂತಹ ಸಾಹಿತ್ಯ ಆಸಕ್ತರು ಓದು ಬರಹ ಬಲ್ಲವರು ಗಾಯನದಲ್ಲಿ ಪರಿಶ್ರಮವುಳ್ಳರು ತಮಗೆ ಇಷ್ಟವಾಗಿ ತೋರಿದ ಹಾಡುಗಳನ್ನ ಬರೆದಿಟ್ಟುಕೊಳ್ಳಲು ಮೊದಲು ಮಾಡಿದರು ಆಗ ದಾಸ ಸಾಹಿತ್ಯದ ಲಿಖಿತ ಪ್ರತಿಭೆಗಳು ತಯಾರಾದವು ‘ ಲೋಕೋ ಭಿ ನ್ನರುಚಿ: ಆದುದರಿಂದ ಒಬ್ಬೊಬ್ಬರು ಸಂಗ್ರಹಿಸಿಟ್ಟ ಹಾಡುಗಳು ಒಂದೊಂದು ರೀತಿಯವು ಕೃಷ್ಣನ ಬಾಲಲೀ ಕೆಲವರಿಗೆ ಮೆಚ್ಚುಗೆಯಾಗಿರಬಹುದು, ಮಧ್ವ ಶಾಸ್ತ್ರ ಮತ ತತ್ವಗಳ ಆಸಕ್ತಿ ಕೆಲವರಿಗೆ ಇರಬಹುದು ಯಾವುದೇ ರೀತಿಯ ಕೃತಿಯಾದರು ಪರವಾಗಿಲ್ಲ ಹರಿದಾಸರು ಆಡಿದ್ದಾರೆ ಸರಿ ಎನ್ನುವ ಮನೋಭಾವ ಹಲವರಿಗೆ ಇರಬಹುದು ಅಂದರೆ ವೈಯಕ್ತಿಕವಾದ ಭಕ್ತಿ ಸಾಹಿತ್ಯ ಅಭಿರುಚಿ ಮದ್ವ ಮತ ನಿಷ್ಠೆ, ದಾಸರ ಹುಟ್ಟಿ ಬೆಳೆದ ಸ್ಥಳಗಳ ಪರಿಸರದ ಪ್ರಭಾವ ಭಾಂಧವ್ಯ ಅಭ್ಯಾಸ ಸತ್ತಿ ಆಡುವ ಗೀಳು ಇವೆ ಮೊದಲಾದ ಕಾರಣಗಳಿಂದ ದಾಸ ಸಾಹಿತ್ಯ ಸಂಗ್ರಹಣೆ ನಡೆದಿರುವುದು ಕಂಡುಬರುತ್ತದೆ. ಜೈನ, ವೀರಶೈವ, ವೈದಿಕ ಮಠಗಳಲ್ಲಿ ಆಯಾ ಸಾಹಿತ್ಯ ಸಂಗ್ರಹ ವಿಫಲವಾಗಿರುವಂತೆ ಮಾ ದ್ವಾಮಠಗಳಲ್ಲಿ ದಾಸ ಸಾಹಿತ್ಯದ ಸಂಗ್ರಹ ವಿಲ್ಲ. ಬಹುಶ: ಮಠದ ಪರಿಸರದಲ್ಲಿ ವ್ಯಾಸ ಸಾಹಿತ್ಯಕ್ಕೆ ಇದ್ದ ಮುನ್ನಡೆ ದಾಸ ಸಾಹಿತ್ಯಕ್ಕೆ ಇಲ್ಲದಿದುದರಿಂದ ಇಂದು ನಾವು ದಾಸ ಸಾಹಿತ್ಯ ಸಂಗ್ರಹಣೆಗೆ ದಾಸರ ಸಂಬಂಧಿಗಳನ್ನೋ, ಆಸಕ್ತರನ್ನೋ, ಆಸ್ತಿಕರನ್ನೋ ಅವಲಂಬಿಸಬೇಕಾಗಿದೆ.
ಹೀಗೆ ಈಗ ಉಪಲಬ್ಧವಿರುವ ದಾಸ ಸಾಹಿತ್ಯದ ಹ ಸ್ತಪ್ರತಿಗಳನ್ನು :
೧. ಓಲೆಯ ಪ್ರತಿಗಳು
೨. ದಪ್ಪ ಕೈಕಾಗದದ ಹ ಸ್ತಪ್ರತಿಗಳು
೩. ಸಾಮಾನ್ಯ ಕಾಗದದ ಹ ಸ್ತಪ್ರತಿಗಳು
ಎಂದು ವಿಂಗಡಿಸಿಕೊಳ್ಳಬಹುದು, ಇವುಗಳೊಂದಿಗೆ ಹಳೆಯ ಮುದ್ರಿತ ಪ್ರತಿಗಳಿಗೂ ಪ್ರತ್ಯೇಕ ಹಸ್ತ ಪ್ರತಿಗಳ ಬೆಲೆಯನ್ನು ಕೊಡುವುದು ಉಂಟು, ಅಂತೆಯೇ ಕಂಠಸ್ತವಾಗಿರುವ ದಾಸರ ಪದಗಳನ್ನು ಧ್ವನಿಮುದ್ರಿಸಿಕೊಂಡು ಅವುಗಳಿಗೂ ಪ್ರತ್ಯೇಕ ಹಸ್ತಪ್ರತಿಯ ಬೆಲೆಯನ್ನು ಕೊಡಬಹುದು. ಈ ಎಲ್ಲಾ ರೀತಿಯ ಅಸ್ತಪ್ರತಿಗಳು ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹರಿದಾಸ ಸಾಹಿತ್ಯ ವಿಭಾಗದ ಗ್ರಂಥ ಬಂಡಾರದಲ್ಲಿ ಇವೆ. ಧ್ವನಿ ಮುದ್ರಿತವಾದ ನೂರಾರು ಹಾಡುಗಳೊಂದಿಗೆ ಸುಮಾರು ೩೦೮. ಇವುಗಳೊಂದಿಗೆ ಸಾಕಷ್ಟು ಹಳೆಯ ಮುದ್ರಿತ ಪ್ರತಿಗಳು ಇದ್ದು ಗ್ರಂಥ ಭಂಡಾರವನ್ನು ಶ್ರೀಮಂತವಾಗಿಸಿವೆ . ಓಲೆಯ ಪ್ರತಿಗಳು ಕನ್ನಡ ಲಿಪಿಯಲ್ಲಿಯೂ ಕಾಗದದ ಪ್ರತಿಗಳು ದೇವನಾಗರಿ, ತೆಲುಗು ಮತ್ತು ಕನ್ನಡ ಲಿಪಿಗಳಲ್ಲಿಯು ಇವೆ.
ಹಸ್ತಪ್ರತಿಗಳು ಒಂದೊಂದೇ ಪ್ರತಿಗಳಾಗಿದ್ದು ಮತ್ತೆ ಬಳಸುವುದರಿಂದ ಬಲು ಬೇಗ ಜೀರ್ಣವಾಗಿ ನಶಿಸಿ ಹೋಗುತ್ತವೆ. ಮುಟ್ಟಿದರೆ ಪುಡಿಯಾಗುವ ಸ್ಥಿತಿಗೆ ಬಂದಿರುವ ಓಲೆಯ ಕಾಗದದ ಅರ್ಥ ಪ್ರತಿಗಳು ಇವೆ. ಹೀಗಾಗಿ ಅವುಗಳನ್ನು ಮುತುವರ್ಜಿಯಿಂದ ನೋಡಿಕೊಂಡು ಕಾಪಾಡದಿದ್ದರೆ ನಮ್ಮ ಮುಂದಿನ ತಲಮಾರಿಗೆ ಅವುಗಳಲ್ಲಿರುವ ವಿಚಾರದ ನೀಡಿಕೆ ಅಸಾಧ್ಯ ಆದುದರಿಂದ ಅತ್ತ ಪ್ರತಿಗಳ ಸಂಗ್ರಹಣೆ ಎಷ್ಟು ಕಷ್ಟ ಸಾಧ್ಯವೋ ಅವುಗಳ ಸಂರಕ್ಷಣೆ ಇನ್ನೂ ಹೆಚ್ಚಿನ ಜವಾಬ್ದಾರಿಯುತವಾದದ್ದು.
ಇಲ್ಲಿ ಮೊಟ್ಟಮೊದಲಿಗೆ ಗಮನಿಸಬೇಕಾದಂತಹ ಅಂಶವೆಂದರೆ ಅರ್ಥ ಪ್ರತಿಗಳನ್ನು ಬಳಸುವವರಿಗೆ ಅವು ನಮ್ಮವು ಎನ್ನುವ ಅಭಿಮಾನ ಅತ್ಯಗತ್ಯ ಒಂದು ಎಳೆ ಮಗುವನ್ನು ಮಗುವನ್ನು ಎತ್ತಿಕೊಳ್ಳುವಾಗ ಇರುವ ಎಲ್ಲಿ ತಗಲಿಸಿಬಿಡುತ್ತವೆಯೋ ಬೀಳಿಸಿ ಬಿಡುತ್ತೇವೆಯೋ, ಎಲ್ಲಿ ಅವಕ್ಕೆ ನೋವಾಗುತ್ತದೆಯೋ ಎನ್ನುವ ಆತಂಕ ಎಚ್ಚರ ಕಳಕಳಿಗಳು ಒಂದು ಅಸ್ತಪ್ರತಿಯನ್ನು ಕೈಗೆ ತೆಗೆದುಕೊಳ್ಳುವಾಗಲೂ ಇರಲೇಬೇಕು.
ಈ ಹಿಂದಿನವರು ಹಸ್ತ ಪ್ರತಿಗಳ ರಕ್ಷಣೆಗೆ ಅನೇಕ ಮಾರ್ಗಗಳನ್ನ ಹುಡುಕಿಕೊಂಡಿದ್ದರು. ಅವುಗಳನ್ನು ನಕುಲು ಮಾಡಿ ಬಣ್ಣದ ಬಟ್ಟೆಗಳಲ್ಲಿ ಕಟ್ಟಿಡುತ್ತಿದ್ದರು, ಜೊತೆಗೆ ಹೊಂಗೆ ಎಲೆ ಬೇವಿನ ಎಲೆ, ಕರ್ಪೂರದ ಹೆಂಟೆಗಳು, ಹರಿಶಿಣ ಶ್ರೀಗಂಧದ ಪುಡಿಗಳನ್ನು ಅಸ್ತಪ್ರತಿಗಳೊಂದಿಗಿಟ್ಟು ಗಂಟು ಕಟ್ಟಿಡುವುದು ಇವೆ ಮೊದಲಾದ ಕ್ರಮಗಳಿಂದ ಬೆಳ್ಳಿ ಮೀನು, ಜಿರಲೆ, ಪುಸ್ತಕ ಕೀಟ, ಗೆದ್ದಲು, ಮೊದಲಾದ ಪುಸ್ತಕ ವೈರಿಗಳಾದ ಕ್ರಿಮಿಕೀಟಗಳನ್ನು ನಿವಾರಿಸುತ್ತಿದ್ದರು.
ಇನ್ನು ಕಾಗದದ ಅರ್ಥ ಪ್ರತಿಗಳಾದರೆ ದಪ್ಪ ಬಟ್ಟೆ ಹಾಗೂ ರಟ್ಟುಗಳನ್ನು ಬಳಸಿ ಪ್ರತಿಗಳಿಗೆ ರಟ್ಟು ಹಾಕಿಡುವ ಮೂಲಕ ರಕ್ಷಣೆ ಒದಗಿಸುತ್ತಿದ್ದರು. ಸೌದೆ ಒಲೆ. ಸುರುಗುಗಳನ್ನು ಹೊತ್ತಿಸುತ್ತಿದ್ದ ಹಂಚಿನ ಮನೆಗಳಲ್ಲಿ ದೊಡ್ಡ ದೊಡ್ಡ ಮರದ ಪೆಟಾರಿಗಳಲ್ಲೂ, ಸಂದೂಕಗಳಲ್ಲೂ, ಬೆತ್ತದ ಬುಟ್ಟಿಗಳಲ್ಲೂ ಅಸ್ತಪ್ರತಿಗಳನ್ನು ಇಟ್ಟು ಅವುಗಳನ್ನು ಹೊಗೆ ಗಂಡಿಗಳಲ್ಲಿಡುತ್ತಿದ್ದರು. ಹೊಗೆಯ ಹಾಗೂ ಬೆಚ್ಚನೆಯ ವಾತಾವರಣದಿಂದಾಗಿ ಹ ಸ್ತಪ್ರತಿಗಳಿಗೆ ಬೂಸ್ಟ್ ಹಿಡಿಯುತ್ತಿರಲಿಲ್ಲ , ಹಸ್ತ ಪ್ರತಿಗಳನ್ನು ಮನೆಯ ಮಾಡಿನ ಬಿದುರುಗಳ ಸಂಧಿಯಲ್ಲಿ ಸಿಕ್ಕಿಸು ತಿದ್ದುದ್ದು ಸಾಮಾನ್ಯವಾಗಿತ್ತು. ಹಸ್ತ ಪ್ರತಿಗಳು ಹೊಗೆಯಿಂದ ಕಪ್ಪಾದರೂ ಹುಳು ಹುಪ್ಪಟೆಗಳಿಗೆ ತುತ್ತಾಗುತ್ತಿರಲಿಲ್ಲ, ತಂಡಿ ಹಿಡಿದು ಅವುಗಳ ಮೇಲೆ ಬೂಸ್ಟ್ ಬೆಳೆಯುತ್ತಿರಲಿಲ್ಲ ಓಲೆಯ ಪ್ರತಿಗಳಾದರೆ ವಿಶೇಷ ಮುತುವರ್ಜಿ ವಹಿಸಿ ಓಲೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಆ ಓಲೆಗಳ ಅಳತೆಗೆ ಸರಿಯಾಗಿ ಕತ್ತರಿಸಿದ ಎರಡು ಮರದ ಪಟ್ಟಿಗಳನ್ನು ಅವುಗಳ ಮೇಲೊಂದು ಕೆಳಗೊಂದು ಇಟ್ಟು ಒಂದು ದಾರದಿಂದ ಕಟ್ಟು ಕಟ್ಟಿ ಇಡುತ್ತಿದ್ದರು. ಅವುಗಳ ಅಳತೆ ಗಾತ್ರಗಳಿಗೆ ಅನುಗುಣವಾಗಿ ನಡುನಡುವೆ ರಂದ್ರಗಳನ್ನು ಕೊರೆದು ಅವುಗಳ ಮೂಲಕ ಉದ್ದನೆಯ ದಾರವನ್ನು ಪೋಣಿಸಿ ಕಟ್ಟಿಡುತ್ತಿದ್ದುದೂ ಸರ್ವೇಸಾಮಾನ್ಯವಾಗಿತ್ತು
ಹರಿದಾಸ ಸಾಹಿತ್ಯದ ಕೆಲವು ಅಸ್ತಪ್ರತಿಗಳಿಗೆ ಕೃಷ್ಣನ ರಟ್ಟು ಹಾಕಿ ಸಂರಕ್ಷಿಸುವುದು ಗಮನಾರ್ಹವಾಗಿದೆ.
ಕಾಲ ಬದಲಾದಂತೆ ಈಗ ಹಸ್ತಪ್ರತಿಗಳ ಸಂರಕ್ಷಣೆ ಮೊದಲಿಗಿಂತಲೂ ಸುಲಭವಾಗಿದೆ, ಶಿಥಿಲವಾಗಿರುವ ಹಸ್ತಪ್ರತಿಗಳನ್ನು ಓಲೆಯದಾಗಲೀ ಕಾಗದರದಲ್ಲಾಗಲೀ ಕೂಡಲೇ ನಕಲು ಮಾಡಿ ಮೂಲದೊಂದಿಗೆ ತಾಳೆ ನೋಡಿ ರಟ್ಟು ಹಾಕಿಸಿ ಇಟ್ಟುಕೊಳ್ಳುವುದು ಒಳ್ಳೆಯದು ಮತ್ತೆ ಮತ್ತೆ ಆ ಪ್ರತಿಯನ್ನು ಪರಿಶೀಲಿಸಿದಾಗ ಅದರ ನಕಲನ್ನೇ ನೋಡಿದರೆ ಸಾಕು ಓಲೆಯ ಪ್ರತಿಗಳಲ್ಲಿ ಅವು ಒಣಗಿ ಕುಡಿ ಆಗಲು ಅವಕಾಶ ಕೊಡದಂತೆ ಧೂಳು ಮುಚ್ಚುವುದಕ್ಕೆ ಆಸ್ಪದವು ಇಲ್ಲದಂತೆ ಒಂದು ರೀತಿಯ ಕ್ರಿಮಿನಾಶಕ ಎಣ್ಣೆಯನ್ನ ಬಳಿದು ಅವು ಮೆತ್ತಿಗೆ ಇರುವಂತೆ ನೋಡಿಕೊಳ್ಳಲಾಗುತ್ತದೆ.
ಮೈಸೂರಿನ ಪ್ರಾಚ್ಯ ಸಂಶೋಧನಾ ಸಂಸ್ಥೆಯಲ್ಲಿಯೂ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೂ ಈ ಸ್ಥಳೀಯವಾಗಿ ತಯಾರಿಸಿದ ಎಣ್ಣೆಯ ಉಪಯೋಗವನ್ನು ಅದರ ಪರಿಣಾಮವನ್ನು ನೋಡಬಹುದು. ಓಲೆಗಳ ಎರಡು ಪಕ್ಕಗಳಿಗೂ ಕುಂಚಗಳಿಂದ ಆ ಎಣ್ಣೆಯನ್ನು ಸವರಿ ಒಂದರ ಮೇಲೊಂದರಂತೆ ಜೋಡಿಸಿ ಇಂದಿನವರು ಮಾಡುತ್ತಿದ್ದಂತೆಯೇ ಅವುಗಳ ಎರಡು ಮಕ್ಕಳಿಗೂ ಮರದ ತೆಳ್ಳನೆಯ ಹಲಗೆಗಳನ್ನು ಜೋಡಿಸಿ ರಂದ್ರದ ಮೂಲಕ ದಾರವನ್ನು ಪೋಣಿಸಿ ಕಟ್ಟಿಡಬೇಕು, ಜೊತೆಗೆ ಅಷ್ಟು ಬಿಗಿಯಾಗಿಯೂ ಕಟ್ಟದೆ ಸಡಿಲವಾಗಿಯೂ ಕಟ್ಟದೆ ಓಲೆಗಳ ಸುರಕ್ಷಿತವಾಗಿರುವಂತೆ ನೋಡಿಕೊಂಡು ಕಟ್ಟಬೇಕು ಹ ಸ್ತಪ್ರತಿಗಳಿಗೆ ಬೂಸ್ಟ್ ಹಿಡಿಯದಂತೆ ಅವ ನಿಯಂತ್ರಣ ಕೊಠಡಿಗಳಲ್ಲಿ ಇಡುವುದು ಹವಾಗುಣಕ್ಕೆ ತಕ್ಕಂತೆ ಪ್ರತಿಗಳಿಗೆ ವಿದ್ಯುತ್ ಶಾಕದ ಹಾರೈಕೆ ಮಾಡುವುದು ವೈಜ್ಞಾನಿಕವಾಗಿ ತಯಾರಿಸಲಾಗಿರುವ ಬಗೆ ಬಗೆಯ ರಾಸಾಯನಿಕ ಕ್ರಿಮಿನಾಶಕ ದ್ರಾವಣಗಳನ್ನು ಬಳಸುವುದು ಕಾಲಕಾಲಕ್ಕೆ ಹ ಸ್ತಪ್ರತಿಗಳ ಬೂಸ್ಟ್ ಧೂಳುಗಳನ್ನು ವರೆಸಿ ತೆಗೆಯುವುದು ಇವೆ ಮೊದಲಾದ ಕ್ರಮಗಳನ್ನು ಅನುಸರಿಸಿ ಹಸ್ತಪ್ರತಿಗಳು ನಶಿಸಿ ಹೋಗದಂತೆ ತಡೆಯಬಹುದು.( ಹಲಗೆಗಳಿಗೆ ವಿಷಯುಕ್ತ ಆಯಿಲ್ ಅಂದರೆ ಟರ್ಮಿನೇಟರ್ ಆಯಿಲ್ ಹಾಗೂ ಟೀಕುಡ್ ಪೌಡರ್ ಅನ್ನು ಮಿಶ್ರಣ ಮಾಡಿ ಪೇಂಟಿಂಗ್ ಬ್ರಷ್ ನಿಂದ ನಯವಾಗಿ ಲೇಪಿಸಿ ನೆರಳಿನಲ್ಲಿ ಒಣಗಿಸಬೇಕು. ಇದರಿಂದಾಗಿ ಹಸ್ತಪ್ರತಿಗಳು ಹುಳುಗಳ ಕ್ರಿಮಿಕೀಟಗಳಿಂದ ರಕ್ಷಣೆಗೊಂಡು ದೀರ್ಘಕಾಲ ಬಾಳಿಕೆ ಬರುತ್ತದೆ ಜೊತೆಗೆ ಸುಂದರವಾಗಿ ಕಾಣುತ್ತದೆ )
ಯಂತ್ರಗಳ ಬಳಕೆ ಹೆಚ್ಚಿರುವ ಈ 21ನೇ ಶತಮಾನದ ಕೊನೆಯ ಭಾಗದಲ್ಲಿ ಹಸ್ತಪ್ರತಿಗಳ ಸಂರಕ್ಷಣೆ ಇನ್ನೂ ಸರಳ ಸುಲಭವಾಗಿದೆ, ಹಸ್ತ ಪ್ರತಿಗಳ ಬೆರಳಚ್ಚಿನ ಪ್ರತಿಗಳನ್ನ ತೆಗೆದಿಡಬಹುದು ಮನುಷ್ಯನ ಶಕ್ತಿ ಕಾಲುಗಳನ್ನು ಹೆಚ್ಚು ವ್ಯಯ ಮಾಡದಂತೆ ಹಸ್ತ ಪ್ರತಿಗಳ ನೆರದಕ್ಕಿನ ಅಥವಾ ಜೆರಾಕ್ಸ್ ಪ್ರತಿಗಳನ್ನು ತೆಗೆಯುವುದು ಮೈಕ್ರೋಫೀಲಿಮ್ ಮಾಡಿಕೊಳ್ಳುವುದು ಫೋಟೋ ಸ್ಟ್ಯಾಟ್ ನಕ್ಕಲುಗಳನ್ನು ತೆಗೆಯುವುದು, ಇವು ಸಹಜವಾಗಿ ಸ್ವಲ್ಪ ದುಬಾರಿಯಾದರೂ ಪರಿಣಾಮಕಾರಿಯಾದ ಕ್ರಮಗಳಾಗಿವೆ. ಕಂಟೆಷ್ಟವಾಗಿರುವ ಕೀರ್ತನೆಗಳನ್ನು ಧ್ವನಿ ಮುದ್ರಿತ ಕ್ಯಾಸೆಟ್ 2 ಗಳಾಗಿ ಪರಿವರ್ತಿಸಿ ಸಿಡಿಗಳಲ್ಲಿ ಸಂಗ್ರಹಿಸಿ ರಕ್ಷಿಸಬಹುದು ಅಥವಾ ಬಲ್ಲವರಿಂದ ಹಾಡಿಸಿ ಶೀಘ್ರ ಲಿಪಿಯನ್ನ ಬಳಸಿ ಬರೆದಿಟ್ಟುಕೊಳ್ಳಬಹುದು.
ಇಷ್ಟೆಲ್ಲ ಕಷ್ಟಪಟ್ಟು ಸಂಗ್ರಹಿಸಿದ ಪ್ರತಿಗಳನ್ನು ಪ್ರಕಟಿಸುವುದೇನು ಸುಲಭದ ವಿಷಯವಲ್ಲ, ಕಾರಣ ಸುಮಾರು ನೂರಾ ಅರವತ್ತು ವರ್ಷಗಳಿಂದಚೆಗೆ ಅಷ್ಟೇ ಮುದ್ರಣ ಕಲೆ ಹುಟ್ಟಿ ಬೆಳೆಯಲಾರಂಭಿಸಿದ್ದು ಅದಕ್ಕಿಂತ ಮೊದಲು ಗ್ರಂಥಗಳ ಪ್ರಸಾರಣ ಕಾರ್ಯ ಹೇಗೆ ನಡೆಯುತ್ತೇನೆಂದರೆ ಹ ಸ್ತಪ್ರತಿಗಳನ್ನು ನಕಲು ಮಾಡಿ ದಾನ ಮಾಡುತ್ತಿದ್ದರು.ಗ್ರಂಥದಾನ ಒಂದು ಪುಣ್ಯ ಕಾರ್ಯವನ್ನು ನಂಬಿಕೆ ನಮ್ಮದಾಗಿದ್ದು, ಕೆಲವೊಂದು ಉದಾಹರಣೆ ಹೈಮ ವ್ಯಾಕರಣವನ್ನು ಏಷ್ಯಾ ಖಂಡದಾದ್ಯಂತ ಪ್ರಚಾರಕ್ಕೆ ತರಬೇಕೆಂಬ ಆಸೆಯಿಂದ ಮುನ್ನೂರು ಜನ ಲಿಪಿಕಾರರಿಂದ ಮೂರು ವರ್ಷಗಳ ಕಾಲ ಸತತವಾಗಿ ಪ್ರತಿ ಮಾಡಿಸಿ ಅದರ ೧, ೨೫,೦೦೦ ಪ್ರತಿಗಳನ್ನು ಹಂಚಿದನಂತೆ. ಇನ್ನು ಕರ್ನಾಟಕದ ದಾನಚಿಂತಾಮಣಿ ಅತ್ತಿಮಬ್ಬೆ ಪೊನ್ನನ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ದಾನ ಮಾಡಿದ ವಿಷಯ ಸರ್ವವಿದಿತ ಆದರೆ ಹರಿದಾಸ ಸಾಹಿತ್ಯಕ್ಕೆ ಈ ಒಂದು ಪರಿಪಾಠ ಇರಲಿಲ್ಲ. ಅದು ಹಿಂದೆಯೇ ಹೇಳಿದಂತೆ ನೂರು ವರ್ಷಗಳ ಕಾಲ ಕೇವಲ ಬಾಯಿಯಿಂದ ಬಾಯಿಗೆ ಹರಿದು ಬಂದಂತಹ ಸಾಹಿತ್ಯ ಯಾರಿಗೆ ಯಾವ ಕೀರ್ತನೆ ಮನಸ್ಸಿಗೆ ಬರುತ್ತದೆ ಅದನ್ನು ಬರೆದಿಟ್ಟುಕೊಂಡಿದ್ದು.
ಈಗ ನಮಗೆ ಸಿಕ್ಕಿರುವ ಹರಿದಾಸ ಸಾಹಿತ್ಯದ ಹಸ್ತ ಪ್ರತಿಗಳಲ್ಲಿ ಪ್ರಾಚೀನವಾದ ಲಿಖಿತ ಕಾಲದ ಸೂಚನೆ ಇರುವ ಪ್ರತಿ ಕೇವಲ ೧೬೭ ವರ್ಷ ಹಿಂದಿನದು. ಉಳಿದ ಅರ್ಥ ಪ್ರತಿಗಳಲ್ಲಿ ಕಾಲ ನಿರ್ದೇಶನವಿಲ್ಲ, ಅವುಗಳ ಸ್ವರೂಪವನ್ನು ಗಮನಿಸಿ ಹೇಳುವುದಾದರೆ ಯಾವ ಒಂದು ಪ್ರತಿಯೊಂದು ಸುಮಾರು ೨೦೦ ವರ್ಷಗಳಿಗಿಂತ ಇಂದಿನದೆಂದು ಗುರುತಿಸುವುದು ಬಲು ಕಷ್ಟ. ದಾಸ ಸಾಹಿತ್ಯದ ಅರ್ಥ ಪ್ರತಿಗಳ ಈ ಪರಿಸ್ಥಿತಿಯಿಂದಾಗಿ ಅವುಗಳಲ್ಲಿ ಸ್ಕಾಲತ್ಯಗಳು ಹೆಚ್ಚು. ಹೀಗಿರುವಾಗ ಕೆಲವು ಮಹನೀಯರು ಸಿಕ್ಕಿದ ಕೆಲವು ಅಸ್ಥ ಪ್ರತಿಗಳನ್ನು ಮುದ್ರಿಸುವ ಮನಸ್ಸು ಮಾಡಿದ್ದು ಕನ್ನಡಿಗರ ಪುಣ್ಯವೇ ಸರಿ.
ಸುಮಾರು ಕ್ರಿಸ್ತಶಕ ೧೮೫೦ ರಲ್ಲಿ ಮಂಗಳೂರಿನಲ್ಲಿ ಪ್ರಕಟವಾಗಿರುವ’ ದಾಸರ ಪದಗಳು ‘ ಎಂಬ ಕಲ್ಲಚ್ಚಿನ ಪ್ರತಿಯೇ ಪ್ರಾಚೀನವಾದುದು.
ಇದರಲ್ಲಿ ಸಂಪಾದಕರ ಹೆಸರಿನ ಪುಟ್ಟ ತ್ರುಟಿ ತವಾಗಿದ್ದರೂ ೧೮೭೧ ರಲ್ಲಿ ಅಚ್ಚಾಗಿರುವ ಇದರ ನಕಲಿ ಎನ್ನಬಹುದಾದ ಪ್ರತಿಯಿಂದ ಇದರ ಸಂಪಾದಕರು ಗ್ಯಾರಟ್ ರವರು ಎಂದು ಭಾವಿಸಲಾಗಿದೆ. ೧೫೮ ಪುಟಗಳಿರುವ ಈ ಪುಸ್ತಕದಲ್ಲಿ ಬೇರೆ ಬೇರೆ ದಾಸರುಗಳು ೧೭೩ ಕೀರ್ತನೆಗಳಿವೆ. ಅನಂತರ ೧೮೭೧ ರಲ್ಲಿ ಅಚ್ಚಾಗಿರುವ ಮುದ್ರಿತ ಪ್ರತಿ ಡೆಮ್ಮಿ ಅಷ್ಟದಳದ ಆಕಾರವಿದ್ದು ೧೭೧ ಪುಟದಲ್ಲಿದೆ. ಬಳಿಕ೧೮೭೩ ರಲ್ಲಿ ಮದ್ರಾಸಿನಲ್ಲಿ ಅಚ್ಚಾಗಿರುವ ಹರಿಭಜನ ಕೀರ್ತನೆಯಲ್ಲಿ ಬೇರೆ ಬೇರೆ ದಾಸರ ಪದಗಳಿವೆ. ಬೆಂಗಳೂರಿನ ಕರ್ನಾಟಕ ಬುಕ್ ಡಿಪೋ ಅಚ್ಚಾ ಮಾಡಿರುವ ಹರಿ ಭಜನ ಕೀರ್ತನೆ ( ಕನಕದಾಸರ ಕೀರ್ತನೆಗಳು ಮತ್ತು ಕಬೀರದಾಸರ ಕೆಲವು ದೋಹಗಳು ಇವೆ ). ಕರ್ನಾಟಕಾಕ್ಷರ ಮುದ್ರಶಾಲೆಯಿಂದ ತೆಲುಗು ಲಿಪಿಯಲ್ಲಿ ಅಚ್ಚಾಗಿರುವ ಕನಕದಾಸರ ಭಕ್ತಿಸರ ಇತ್ಯಾದಿ ಪುಸ್ತಕಗಳನ್ನು ನೋಡಬಹುದು. ೧೮೭೭ರಲ್ಲಿ ಬೆಳಗಾoನಿಂದ ಪ್ರಕಟವಾಗಿರುವ ಹರಿಕಥಾಮೃತಸಾರ ೧೮೮೮ ರಲ್ಲಿ ಬೆಂಗಳೂರಿನ ವಿಚಾರ ದರ್ಪಣ ಮುದ್ರಶಾಲೆಯಿಂದ ಪ್ರಕಟವಾಗಿರುವ ಕನಕದಾಸರ ನಳ ಚರಿತ್ರೆ ೧೮೯೧ ರಲ್ಲಿ ಬೆಂಗಳೂರಿನಿಂದ ಪ್ರಕಟವಾದ ಕನಕದಾಸರ ಅರಿಭಕ್ತಸಾರ ಇವುಗಳು ದಸ ಸಾಹಿತ್ಯದ ಪ್ರಾರಂಭದ ಪ್ರಕಟಣೆಗಳು. ಅನಂತರ ೧೮೯೪ ರಿಂದ ಮಡಕಶಿರ ಬಾಲಕೃಷ್ಣರಾಯರ ಪುರಂದರ ದಾಸಲುವಾರು ಪಾಡಿನ ಕೀರ್ತನಲು ( ತೆಲುಗು ಲಿಪಿಯಲ್ಲಿ ಇದೆ ) ಬೆಳಗಾವಿಯ ಆಬಾಜಿ ರಾಮಚಂದ್ರ ಸಾವನ್ ತರ ದಾಸರ ಪದಗಳ ಸಂಗ್ರಹವು ( ದೇವನಾಗರಿ ರಿಲಿಪಿಯಲ್ಲಿದೆ ) ಇವೆ. ಆದಾಗೆ ೧೯೧೪ ರಲ್ಲಿ ಬೆಂಗಳೂರಿನ ಟಿ ಎಂ ಕೃಷ್ಣಯ್ಯ ಶೆಟ್ಟರು, ೧೯೨೩ ರ ವೇಳೆಗೆ ಉಡುಪಿಯ ಪವನ್ಜೆ ಗುರುರಾಯರು ಹರಿದಾಸ ಸಾಹಿತ್ಯದ ಪ್ರಕಟಣೆಯನ್ನು ಪ್ರಾರಂಭಿಸಿದರು ಮುಂದೆ ಎರಡು ಮೂರು ವರ್ಷದಲ್ಲಿ ಶುಭೋದಯ. ೧೯೪೪ ಹೊತ್ತಿಗೆ ರಾಯಚೂರು ಜಿಲ್ಲೆಯ ಲಿಂಗಸೂರಿನ ವರದೇಂದ್ರ ಹರಿದಾಸ ಸಾಹಿತ್ಯ ಮಂಡಲದಿಂದ ಶ್ರೀ ಗೋರುಬಾಳು ಹನುಮಂತ ರಾಯರು ದಾಸ ಸಾಹಿತ್ಯದ ಸಂಪುಟಗಳನ್ನು ಪ್ರಕಟಿಸಲಾರಂಭಿಸಿದರು ಆ ತರುವಾಯದಲ್ಲಿ ಬಂದಂತಹ ಮುಖ್ಯ ಪ್ರಕಟಣೆಗಳೆಂದರೆ ಪುರಂದರ ಕನಕ ಚತುರ್ಥ ಶತಮಾನೋತ್ಸವದ ಸಂದರ್ಭ ಪ್ರಕಟಣೆಗಳು -(ಸು. ೧೯೬೫) ಮತ್ತು ಮಿಂಚಿನ ಬಳ್ಳಿ ಪ್ರಕಾಶನದವರು ಧಾರವಾಡದಿಂದ ಪ್ರಕಟಿಸಿದ ಪುರಂದರ ಸಾಹಿತ್ಯದ ಆರು ಸಂಪುಟಗಳು (ಸಂ. ಶ್ರೀ ಬೆಂಗೇರಿ ಹುಚ್ಚ ರಾವ, ಶ್ರೀ ಬೆಟಿಗೇರಿ ಕೃಷ್ಣಶರ್ಮ ) ಹೀಗೆ ಪ್ರಮುಖ ಹರಿದಾಸರ ಕೀರ್ತನೆಗಳ ಹಾಗೂ ಕನಕದಾಸರ ಕಾವ್ಯಗಳ ಸಂಗ್ರಹಣೆ ಹಾಗೂ ಪ್ರಕಟಣೆಯ ಕಾರ್ಯಗಳು ಸುಮಾರು ೧೩೫ ವರ್ಷಗಳಿಂದ ನಿರಂತರವಾಗಿ ನಡೆದು ಬಂದಿದೆ. ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿದ ಪ್ರಕಾಶನ ಸಂಸ್ಥೆಗಳೆಂದರೆ ಶ್ರೀ ಮನ್ಮದ್ವ ಸಿದ್ಧಾಂತ ಗ್ರಂಥಾಲಯ, ಉಡುಪಿ, ಶ್ರೀ ವರದೇಂದ್ರ ಹರಿದಾಸ ಸಾಹಿತ್ಯ ಮಾಲೆ ಲಿಂಗಸೂರು, ಸುಭೋದ ಪ್ರಕಟನಾಲಯ ಬೆಂಗಳೂರು, ಸಮಾಜ ಪುಸ್ತಕಾಲಯ ಧಾರವಾಡ, ಮಿಂಚಿನಬಳ್ಳಿ ಕಾರ್ಯಾಲಯ ಧಾರವಾಡ, ಪರಿಮಳ ಸಂಶೋಧನಾ ಮತ್ತು ಪ್ರಕಾಶನ ಮಂದಿರ ನಂಜನಗೂಡು, ಗುರುಕೃಪಾ ಗ್ರಂಥಮಾಲ ಮೈಸೂರು, ಕನಕ ಪುರಂದರರ ನಾಲ್ಕು ನೂರು ವರ್ಷಗಳ ಉತ್ಸವ ಸಮಿತಿಗಳು, ದಾಸಶ್ರಮ ಸಂಶೋಧನಾ ಪ್ರಕಟಣಾ ಮಾಲೆ ಇತ್ಯಾದಿಗಳನ್ನು ಹೆಸರಿಸಬಹುದು.
ಅಂತೆಯೇ ವ್ಯಕ್ತಿಗಳನ್ನು ಹೆಸರಿಸುವುದರಲ್ಲಿ ಮಡಕ ಶಿರಾ ಬಾಲಕೃಷ್ಣರಾವ್, ಆಬಾ ಜಿ ರಾಮಚಂದ್ರ ಸಾವಂತ್, ಟಿಎನ್ ಕೃಷ್ಣಯ್ಯ ಶೆಟ್ಟಿ, ಟೀಕೆ ಕೃಷ್ಣಸ್ವಾಮಿ ಶೆಟ್ಟಿ, ಹರಿದಾಸರತ್ನಂ ಗೋಪಾಲ ದಾಸರು ಮೊದಲಾದವರನ್ನು ಹೆಸರಿಸಬಹುದು.
ಹೀಗೆ ದಾಸರ ಕೀರ್ತನೆಗಳ ಸಂಕಲನಗಳು ಕಾವ್ಯಗಳು ಪ್ರಕಟವಾದುದು ದಾಸ ಸಾಹಿತ್ಯ ಪ್ರಕಟಣೆಯಲ್ಲಿ ಮೊದಲ ಹಂತ ಅನಂತರ ದಾಸ ಸಾಹಿತ್ಯದ ವಿಮರ್ಶೆ ಸಂಶೋಧನೆ ದಾಸರ ಚರಿತ್ರೆ ದಾಸ ಸಾಹಿತ್ಯ ಸಂಗ್ರಹಕಾರರು ಇತ್ಯಾದಿಗಳನ್ನು ಕುರಿತಂತೆ ನೂರಾರು ಪುಸ್ತಕಗಳು ಪ್ರಸ್ತುತ ಪ್ರಕಟವಾಗಿವೆ ಅವುಗಳಲ್ಲಿ ಮುಖ್ಯವಾದವುಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ
ಕೆ. ಜೆ ಪೂರ್ಣಿಮ