ಕಾವ್ಯ ಸಂಗಾತಿ
ಡಾ ಶಾರದಾಮಣಿ ಹುನಶಾಳ
ಶುಭಾರಂಭ
ಶುಭ್ರ ಆಕಾಶಕ್ಕೆ
ರವಿಕಿರಣ
ಸುವರ್ಣ ಸಿಂಚನ
ಮಾಡುವಂತೆ.
ಕವಿಯ ಲೇಖನಿ
ಹೊಸ ಪದಗಳ
ಗಮಕ ಹಾಡುವಂತೆ..
ನಿಮ್ಮ ಜೀವನವನ್ನು
ನವ ಚೇತನದ
ಚಿಲುಮೆಯಂತೆ..
ಸ್ಫೂರ್ತಿಯ ಸೆಲೆಯಂತೆ..
ಸುಖ ಸಂತೋಷ,
ಸಂಬ್ರಮ ಸಮೃದ್ಧಿಗಳ
ನೆಲೆಯಂತೆ,ಮಾಡೆಂದು..
ಬಸವನಲ್ಲಿ ಪ್ರಾರ್ಥಿಸುತ್ತಾ
ಇಂದಿನ ದಿನದ
ಶುಭಾರಂಭ ಮಾಡುವೆ..
ಶುಭ ದಿನಕ್ಕೆ ಶುಭೋದಯ.
ಡಾ ಶಾರದಾಮಣಿ ಹುನಶಾಳ