ಕಾವ್ಯ ಸಂಗಾತಿ
ಗೀತಾ ಆರ್
ನನ್ನಪ್ಪ

ಮೊದಲ ಹೆಜ್ಜೆ ಹಾಕಿಸುತ್ತಾ ನಗುತ್ತಿದ್ದನಪ್ಪ
ಮೊದಲ ಮಾತು ಕರೆಯುವುದೇ ಅಮ್ಮಾ
ಹೆಗಲಲ್ಲಿ ಮೇಲೊತ್ತು ಕುಣಿಸುತ್ತಿದ್ದನಪ್ಪಾ
ಅವಿತು ಅಮ್ಮನ ಸೆರಗಲೀ ಮರೆತೆವಪ್ಪನಾ
ಬೆನ್ನಮೇಲೇರಿಸಿ ಕೂಸುಮರಿಮಾಡಿದನಪ್ಪಾ
ಅಮ್ಮ ಮಡಿಲೇರಿ ನಗುತ್ತಾ ಮರೆತೆವಪ್ಪನಾ
ತನ್ನ ತುತ್ತು ಮಕ್ಕಳಿಗುಣಿಸಿ ಸಂತೋಷಪಟ್ಟ
ಕೇಳೋ ಮೊದಲೆ ತಮಗೆಲ್ಲಾ ತಂದವನಪ್ಪಾ
ನಮ್ಮೇಲ್ಲರ ಪ್ರೀತಿಲೀ ಹಿಂದುಳಿದವನೆ ಅಪ್ಪಾ
ಶಿಸ್ತು ಭಯಕ್ಕೆ ಪ್ರೀತಿ ಕಾಣದಾಯಿತೇ ಅಪ್ಪಾ
ಹತ್ತು ತಿಂಗಳು ಒಡಲಲ್ಲಿ ಹೊತ್ತು ಹೆತ್ತಳಮ್ಮ
ನನ್ನೆದೆಯ ಹಾಲುಣಿಸಿ ಸಲಹಿದಳು ಅಮ್ಮಾ
ಮಕ್ಕಳೆಲ್ಲಾರ ಬೆಳವಣಿಗೆಗೆ ತಾನಿರುವರೆಗೂ
ಸಂಸಾರ ಭಾರ ಹೊತ್ತು ಸಾಕಿ ಸಲಹಿದನಪ್ಪಾ
ಸಂಸಾರ ಸಾಕಲು ದುಡಿಯುವವನೇ ಅಪ್ಪಾ
ನಿನ್ನ ಪ್ರೀತಿ ಕಾಳಜಿ ಕಾಣದಂದು ಕ್ಷಮಿಸಪ್ಪಾ
ಸದಾ ಹೆಣ್ಣು ಮಕ್ಕಳೇ ಅಪ್ಪಂದಿರಿಗಿಷ್ಟ
ಅವರ ಜವಾಬ್ದಾರಿಯು ಅಷ್ಟೇ ಕಷ್ಟ
ಬೆಳೆದ ಗಂಡು ಮಕ್ಕಳ ಬೆಳವಣಿಗೆ ಕಂಡು
ನೋಡಿ ಋಷಿ ಪಡುವವನೂ ಅಪ್ಪಾ
ಬೆಳೆದ ಹೆಣ್ಣು ಮಕ್ಕಳ ಬೆಳವಣಿಗೆ ಕಂಡು
ನೋಡಿ ಭಯಪಡುವವನೂ ಅಪ್ಪಾ
ನೆರೆದ ಮಗಳ ಕಂಡು ಅಜ್ಜ ಅಜ್ಜಿ ಅಮ್ಮ
ಸಂತೋಷದೀ ಖುಷಿ ಪಡುವರೆಲ್ಲಾ
ಮರೆಯಲ್ಲಿ ಮನದಲ್ಲೇ ಆಳುವನು ಅಪ್ಪಾ
ಬಿಟ್ಟೋಗುವಳೊಂದುದಿನ ಮಗಳೆಂದು
ನಮಗಾಗಿ ಚಳಿ ಮಳೆ ಬಿಸಿಲೇನ್ನದೇ ಸದಾ
ಕಷ್ಟ ಪಡ್ತಾ ದುಡಿಯುವನೇ ಅಪ್ಪಾ
ನಿನ್ನ ಕಷ್ಟ ನೋವು ಜವಾಬ್ದಾರಿಗಳ
ಗಮನಿಸದೆ ಮರೆತೆವೆ ಕ್ಷಮಿಸಪ್ಪಾ.
(ನನ್ನಪ್ಪನ ಪಾದಗಳಿಗರ್ಪಣೆ)
_______________________________________________________________________________________
ಗೀತಾ ಆರ್.

One thought on “ಗೀತಾ ಆರ್ ಅವರ ಕವಿತೆ ನನ್ನಪ್ಪ”