ವಿಶಾಲಾ ಆರಾಧ್ಯ ಅವರ ಗಜಲ್

ಅವನೆಂದರೆ ಹಾಗೆಯೇ ತೇಲುವಾಗಸದ ಮೋಡದಂತೆ
ತಣ್ಣನೆಯ ಸದ್ದಿಲ್ಲದೆ ಹರಿವ ಅಂತರಂಗದ ಹೊನಲಂತೆ

ಅವನೆಂದರೆ ಹಾಗೆಯೇ ಚತುರ್ದಶಿಯ ಶಶಿಯಂತೆ
ಹಾಲಂತೆ ಚೆಲ್ಲುವರಿವ ಎದೆಯ ಬೆಳದಿಂಗಳಂತೆ

ಅವನೆಂದರೆ ಹಾಗೆಯೇ ಹಕ್ಕಿಗಳ ಚಿಲಿಪಿಲಿಯಂತೆ
ಕವಿಗಿಂಪಾಗಿ ಸುರಿವ ಒಡಲ ಕಚಗುಳಿಯಂತೆ

ಅವನೆಂದರೆ ಹಾಗೆಯೇ ಅಮವಾಸ್ಯೆಯ ಇರುಳಂತೆ
ತಮದ ನೀರವದೆ ಸುಳಿವ ಮಾತಿರದ ಮೌನದಂತೆ

ಅವನೆಂದರೆ ಹಾಗೆಯೇ ಬುದ್ಧನ ಮುಗುಳಂತೆ
ನಡೆದಷ್ಟೂ ಸಿಗುವ ಅಲ್ಲಮನ ಬಯಲಿನಂತೆ


2 thoughts on “ವಿಶಾಲಾ ಆರಾಧ್ಯ ಅವರ ಗಜಲ್

  1. ಅದೆಷ್ಟು ಮನಕ್ಕೆ ಶಶಿಯ ಭಾವ ಕವಿತೆ ಬಹಳ ಚಲೋ ಐತಿ ನೋಡ್ರಿ ..

Leave a Reply

Back To Top