ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ”

ಭವ್ಯ ಬದುಕು ಕಟ್ಟಿಕೊಳ್ಳಲು ವಿಮಾನವೇರಿದರು
ಕೊನೆಯ ಕ್ಷಣದಲ್ಲಿದ್ದೇವೆಂದು ಅರಿಯದಾದರು
 ಏನು ಅರಿಯದೆ ಊಟಕ್ಕೆ ಕುಳಿತವರು
 ವಿಧಿಯ ಮುಂದೆ ಸೋತು ಜೀವ ತೆತ್ತರು

 ಸುಟ್ಟು ಕರಕಲಾದವು ಜೀವನದ ಕನಸುಗಳು
 ಭಯಾನಕವಾಯಿತು ಕ್ರೂರತೆಯ ಕ್ಷಣಗಳು
 ಬದುಕ ಬಯಸಿದವರ ಘೋರ ದುರಂತ
 ಅನಿರೀಕ್ಷಿತವಾದ ಭೀಕರ ಅಪಘಾತ

 ಅರಿವಿಲ್ಲದೆ ಗಲ್ಲ ತೋಯಿಸಿದ ಕಣ್ಣೀರು
 ಮನಕಲಕುವ ದೃಶ್ಯದೀ ಅಂತರಂಗದ ಗೆಳೆಯರು
 ಭವ್ಯ ಬದುಕಿನ ಕನಸು ಕಂಡವರು  
 ಹೃದಯವಿದ್ರಾವಕವಾಗಿ ಬೂದಿಯಾಗಿ ಬಿಟ್ಟರು


Leave a Reply

Back To Top