ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ


ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯನ್ನು
One of the best ಅಲ್ಲ Top of the best ಶಾಲೆ ಮಾಡಿದ ಕೀರ್ತಿ ಬಿ.ಚಂದ್ರಶೇಖರ ಅವರಿಗೆ ಸಲ್ಲುತ್ತದೆ.


ಇವರು ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಲ್ಲಟಗಿ ಗ್ರಾಮದವರು.
 ITI ಮಾಡಿ KPC ಅಲ್ಲಿ ಸೂಪರ್ವೈಸರ್ ಆಗಿ ಕೆಲಸ ನಿರ್ವಹಿಸಿ ನಂತರ ರಿಸೈನ್ ಮಾಡಿ ಬಂದು ಡಿಸ್ಟೆನ್ಸ್ ಪದವಿ ಮಾಡಿಕೊಂಡು ಗೊಬ್ಬರ ಕ್ರಿಮಿನಾಶಕ ಮತ್ತು ಭತ್ತ ವ್ಯಾಪಾರ ಮಾಡಿದರು ಆ ಕೆಲಸ ಅವರಿಗೆ ತೃಪ್ತಿ ನೀಡಲಿಲ್ಲ.
 ಮಾನ್ವಿಯಲ್ಲಿ ಒಂದು ಹಾರ್ಡ್ವೇರ್ ಅಂಗಡಿ ಓಪನ್ ಮಾಡಿ 8 ವರ್ಷಗಳು ಆಗಿತ್ತು . ಆದರೆ ಅವರ ಶಾಲೆ ಮಾಡುವ ಮತ್ತು ಸಂಸ್ಥೆ ಕಟ್ಟುವ ಕನಸು ಅವರನ್ನು ಕಾಡುತ್ತಲೇ ಇತ್ತು.ತಮ್ಮ ಕನಸಿನ ಬೆನ್ನೇರಿ ಎಲ್ಲವನ್ನೂ ಬಿಟ್ಟು ಸೀದಾ ತಮ್ಮ ಊರಿಗೆ ಅಂದರೆ ಬಲ್ಲಟಗಿ ಗ್ರಾಮಕ್ಕೆ ಬಂದರು.ಅಲ್ಲಿ ತಮ್ಮ ಕನಸಿನ ಜೊತೆ ಹೆಜ್ಜೆ ಹಾಕತೊಡಗಿದರು.

ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆ ತೆರೆದು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ರಾಯಚೂರು, ಮಾನ್ವಿ, ಸಿರವಾರ ಸುತ್ತಮುತ್ತಲಿನ ಊರಿನ ಮನೆಮಾತಾಗಿರುವ ಬಿ.ಚಂದ್ರಶೇಖರ ಸರ್ ಅವರ ಯಶೋಗಾಥೆ ಬರೆಯಲು ಖುಷಿ ಎನಿಸುತ್ತದೆ.



” ಸಾಧನೆಯಿಲ್ಲದ ಬದುಕು ಬರಡು” ಎಂಬ ಮಾತಿನಂತೆ ಇಂಗ್ಲೀಷ್ ಭಾಷೆಯಿಂದ ವಂಚಿತರಾದ ಬಿ.ಚಂದ್ರಶೇಖರ ಅವರು ಒಂದು ಖಾಸಗಿ ಶಾಲೆ ಮಾಡುವ ಕನಸು ಕಂಡು ನನಸು ಮಾಡಿದ ಪರಿ ತಿಳಿದರೆ ನಿಜಕ್ಕೂ ರೋಚಕ.
ಹೌದು ಉದ್ಯೋಗ, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಹಿಂದೆಯೇ ಇದ್ದೇವೆ. ಆದರೆ ನಮ್ಮಲ್ಲಿ ಒಳ್ಳೆ ಕೆಲಸ, ಸಮಾಜ ಸೇವೆ, ಮಾಡುವ  ಜನರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಬೆನ್ನುತಟ್ಟುವಲ್ಲಿ ಕೂಡ ನಾವು ಮೌನವಾಗಿದ್ದೇವೆ ಎನ್ನುವುದಕ್ಕಿಂತ, ಅಸಡ್ಡೆ ತೋರುತ್ತಿದ್ದೇವೆ ಎಂದರೂ ಕೂಡ ತಪ್ಪಾಗಲಾರದು.ನಮ್ಮ ಜೊತೆ ನಮ್ಮ ಊರಿನಲ್ಲಿ/ ಸುತ್ತಮುತ್ತಲಿನ ಸಮಾಜ ಸೇವೆ ಮಾಡುವವರನ್ನು ನಾವು ಹೊಗಳುವುದುಕ್ಕಿಂತ ತೆಗಳುವುದು ಹೆಚ್ಚು.  ಕರ್ನಾಟಕದಲ್ಲಿ ನಮ್ಮ ಜಿಲ್ಲೆ ಯಾವುದರಲ್ಲೂ ಕಡಿಮೆ ಇಲ್ಲ ಶಿಕ್ಷಣ, ಸಾಹಿತ್ಯ, ತಾಂತ್ರಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಾವುಗಳು ಮುಂದೆ ಇದ್ದೇವೆ, ಆದರೆ ಕಾಣುತ್ತಿಲ್ಲ ಕಾರಣ ಇಷ್ಟೇ ಪ್ರೋತ್ಸಾಹದ ಕೊರತೆ.
ಯಾರು ಹೊಗಳಲಿ ತೆಗಳಲಿ ತಾವು ಮಾತ್ರ ಎರಡು ದಶಕಗಳಿಂದ ತಮ್ಮ ಕಾರ್ಯ ಮಾಡುತ್ತಾ ಎಲ್ಲರಿಗೂ ಶಿಕ್ಷಣ ನೀಡುವ ಕಾಯಕ ಮಾಡುತ್ತಾ ಬಂದ ಇವರ ಕಾರ್ಯ ಶ್ಲಾಘನೀಯ.

ಶಾಲೆ ಮಾಡುವ ಹಂಬಲ….

 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿಯ ಕೊರತೆಯಿಂದ ಈಗಿನಂತೆ ಆಗ ಶಿಕ್ಷಣ ವ್ಯವಸ್ಥೆ ಗುಣಮಟ್ಟದಾಗಿರಲಿಲ್ಲ. ಇಂಗ್ಲೀಷ್ ಓದು ಬರೆಹ ಎಂದರೆ ಅದು ಕೈಗೆಟುಕದ ಹುಳಿ ದ್ರಾಕ್ಷಿ ಎನ್ನುವ ಮನಸ್ಥಿತಿ ಇದ್ದ ಸಮಯದಲ್ಲಿ ಚಂದ್ರಶೇಖರ ಅವರು ಕರ್ನಾಟಕ ರೈತ ಸಂಘಟನೆಗಳ ಮುಖಂಡರ ಮುಂದೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಮಾಡುವ ಮನೋಭೀಷ್ಟವನ್ನು ವ್ಯಕ್ತಪಡಿಸಿದಾಗ ತಮ್ಮ ನಿರೀಕ್ಷೆಯಂತೆ ಉತ್ತರ ಬರದಿದ್ದರೂ; ಯಾರು ಅವರ ಕನಸಿಗೆ ತಣ್ಣೀರು ಎರಚಲಿಲ್ಲ.
ರೈತ ಸಂಘಟನೆಯ ಮುಖಂಡರು ಉಚಿತ ಶಿಕ್ಷಣ ನೀಡಲು ಸಲಹೆ ನೀಡಿದರು ಆದರೆ ಚಂದ್ರಶೇಖರ ಅವರು  ಒಪ್ಪಲಿಲ್ಲ.ಆಗ ಸರಿ ನಾವೇ ಮಾಡುತ್ತೇವೆ ಎಂದು  ರೈತ ಸಂಘಟನೆಯ ಮುಖಂಡರು 198687 ರಲ್ಲಿ ಊರಿನಲ್ಲಿ ಪದವಿ ಪಡೆದ ಇಬ್ಬರು ಹೆಣ್ಣುಮಕ್ಕಳನ್ನು ಶಿಕ್ಷಕರನ್ನಾಗಿ ನೇಮಿಸಿ ತಮ್ಮ ಸ್ವಂತ ಹಣದಿಂದ ಅವರಿಗೆ ವೇತನ ನೀಡಿ ಹನುಮದೇವರ ಗುಡಿಯಲ್ಲಿ ಶಾಲೆ ನಡೆಸಿದರು ಇದು ತುಂಬಾ ದಿನ ನಡೆಯಲಿಲ್ಲ ಎರಡು ವರ್ಷಗಳಲ್ಲಿ ಶಾಲೆ ಮುಚ್ಚಲಾಯಿತು


ಸಂಸ್ಥೆಯ ಉದಯ

ಶಿಕ್ಷಣದ ಕೊರತೆ ಎಲ್ಲೆಡೆ ಎದ್ದು ಕಾಣುತ್ತಿತ್ತು ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಣದ ಕೊರತೆ ಶಿಕ್ಷಕರ ಕೊರತೆಯಿಂದ ಸಾಮಾನ್ಯ ಮಕ್ಕಳ ಪಾಲಿಗೆ ಇಂಗ್ಲೀಷ್ ಎನ್ನುವುದು ಕೈಗೆಟುಕದ ನಕ್ಷತ್ರ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.
ಅನುಕೂಲಸ್ಥರು ಬೇರೆ ಊರಿಗೆ ಮಕ್ಕಳನ್ನು ಕಳುಹಿಸಿ ಶಿಕ್ಷಣ ಕೊಡಿಸುತ್ತಿದ್ದರು. ಅವರು ಇಂಜಿನಿಯರ್, ಡಾಕ್ಟರ್ ಮತ್ತೇನೋ ಆಗುತ್ತಿದ್ದರು.
ಆದರೆ ಗ್ರಾಮೀಣ ಜನರಿಗೆ ಇಂಗ್ಲೀಷ್ ಕಲಿಯುವ ಆಸೆ ಇದ್ದರೂ ಕಲಿಯಲಾಗದೆ ಚಿಂತಾಜನಕವಾಗಿತ್ತು. ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ನಿರ್ವಹಿಸಲು  ಬೇರೆ ಕಡೆಯಿಂದ ಬಂದವರು ಇಂಗ್ಲಿಷ್ ಮಾತನಾಡುವುದನ್ನು ಕಣ್ಣು, ಬಾಯಿ ಬಿಟ್ಟುಕೊಂಡು ನೋಡುವ ಸ್ಥಿತಿ ಇತ್ತು. ಇದನ್ನು ಮನಗಂಡ ಚಂದ್ರಶೇಖರ ಅವರನ್ನು ಆಂಗ್ಲ ಮಾಧ್ಯಮ ಶಾಲೆ ತೆರೆಯುವ ತವಕ ಕನಸು ಕಾಡುತ್ತಿತ್ತು. ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಅವರ ಮಾವಿನ ತೋಟದ ಹೊಲದಲ್ಲಿ ಎರಡು ಕೊಠಡಿ ಕಟ್ಟಿ ಐದು ಜನರ ಪಾಲುದಾರಿಕೆಯಲ್ಲಿ 2000 ನೇ ಇಸವಿಯಲ್ಲಿ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಸರಿನಲ್ಲಿ ಪ್ರಾರಂಭ ಮಾಡಿದರು.ಬರೋಬ್ಬರಿ ಸುಮಾರು 20 ವರ್ಷಗಳ ನಂತರ ಚಂದ್ರಶೇಖರ ಸರ್ ಅವರ ಕನಸು ನನಸಾಯಿತು.
ಮೊದಲು ಇಬ್ಬರು ಶಿಕ್ಷಕರು 35 ಮಕ್ಕಳಿಂದ ಶುರುವಾಯಿತು. ಎರಡು ವರ್ಷಗಳಲ್ಲಿ ಶಾಲಾ ನಿಭಾಯಿಸುವ ಖರ್ಚು ವೆಚ್ಚ ಕಂಡ ಬಿ. ಚಂದ್ರಶೇಖರ ಅವರ ಸ್ನೇಹಿತರು ತಮ್ಮ ಪಾಲುದಾರಿಕೆಯನ್ನು ಹಿಂತೆಗೆದುಕೊಂಡರು.
ಮೊದಲ ವರ್ಷ 750 ರೂ. ಶಾಲಾ ಶುಲ್ಕದಿಂದ ಪ್ರಾರಂಭವಾದ ಶಾಲೆ ಎರಡನೇ ವರ್ಷ ಕಟ್ಟಡ ಕಟ್ಟಲು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು 1000 ರೂ. ಶಿಕ್ಷಣ ಶುಲ್ಕ ನಿಗದಿ ಮಾಡಿದರು. ಹೀಗೆ ಅವರು ತಮ್ಮ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ಶಾಲೆ ಮಾಡಬೇಕು, ಮಕ್ಕಳಿಗೆ ಕಷ್ಟವಿಲ್ಲದಂತೆ ಇಂಗ್ಲಿಷ್ ಭಾಷೆ ಕಲಿಸಬೇಕು ಎಂದು ಛಲ ತೊಟ್ಟು ಒಂದು ಸಂಸ್ಥೆ ಸ್ಥಾಪನೆ ಆಯಿತು.

ಸಂಸ್ಥೆಯ ಬೆಳವಣಿಗೆ

ಶ್ರದ್ಧೆ, ನಿಷ್ಠೆ, ಪ್ರೀತಿ ವಿಶ್ವಾಸ ನಿಸ್ವಾರ್ಥದಿಂದ ಎಸಗಿದ ಕಾರ್ಯ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾಡುವ ಕಾರ್ಯವನ್ನು ಮನಃಪೂರ್ವಕವಾಗಿ ಮಾಡಿ ತೃಪ್ತಿಯನ್ನು ಪಡೆಯಬೇಕು, ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆ ಶಿಕ್ಷಣದ ಕೊರತೆ ಕಾಣುತ್ತಿತ್ತು.ಚಂದ್ರಶೇಖರ ಅವರು ಆಂಗ್ಲ ಮಾಧ್ಯಮ ಶಾಲೆ ಮಾಡಿದ್ದು ತುಂಬಾ ಜನರಿಗೆ ತಲುಪಿ ಅವರ ಮೇಲೆ ಪ್ರಭಾವ ಬೀರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದರು.
ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರತೊಡಗಿದರು. ಪರಾರ್ಥಕ್ಕಾಗಿ ಮುಡುಪಿಟ್ಟ ಬದುಕು ಸೋಲುವುದಿಲ್ಲ.ಶೈಕ್ಷಣಿಕ ಆರಂಭದಲ್ಲಿ 35 ಮಕ್ಕಳಿಂದ ಪ್ರಾರಂಭವಾದ ಶಾಲೆ ಇಂದು 550 ಕ್ಕಿಂತ ಹೆಚ್ಚು ಮಕ್ಕಳಿಂದ ಶಾಲೆ ನಡೆಯುತ್ತಿದೆ ಎಂದರೆ ಇವರ ಪರಿಶ್ರಮ ಮೆಚ್ಚಲೇಬೇಕು.ಪ್ರಾರಂಭದಲ್ಲಿ ಪೂರ್ವ ಪ್ರಾಥಮಿಕದಿಂದ ಶುರುವಾದ ಶಾಲೆ ಈಗ ಮೆಟ್ರಿಕ್ ವರೆಗೆ ಇದೆ.
ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯದಿಂದ ನುರಿತ ಶಿಕ್ಷಕರನ್ನು ಕರೆತಂದು ಅತ್ಯುತ್ತಮ ಶಿಕ್ಷಣ ನೀಡಿದ, ನೀಡುತ್ತಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಸಂಸ್ಥೆಯ ಬೆಳವಣಿಗೆಗೆ ಪಟ್ಟ ಶ್ರಮ…

ಶಾಲೆ ಮಾಡುವ ಆಸೆಯನ್ನು ಇಟ್ಟುಕೊಂಡ ಇವರು ತಮ್ಮ ಹೊಲದಲ್ಲಿ ಶಾಲೆ ನಿರ್ಮಿಸಿದರು. ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಒಳ್ಳೊಳ್ಳೆ ಶಾಲೆಗಳಿಗೆ ಭೇಟಿ ನೀಡಿ ಶಾಲೆಯನ್ನು ಉನ್ನತೀಕರಿಸಲು ಬಹಳ ಶ್ರಮ ವಹಿಸಿದರು.
ಅಲ್ಲದೆ ಪದವಿ ಪಡೆದ ಶಿಕ್ಷಕರನ್ನು ಸಂದರ್ಶನ ಮಾಡಿ ಬೇರೆ ಜಿಲ್ಲೆಗಳಿಂದ ಶಿಕ್ಷಕರನ್ನು ಕರೆತಂದು ಉತ್ತಮ ವೇತನ ನೀಡುವುದರ ಜೊತೆಗೆ ಅವರಿಗೆ ಊಟ,ವಸತಿ ನೀಡಿದ್ದಾರೆ. ಅಲ್ಲದೆ ಶಿಕ್ಷಕರಿಗೆ ಊಟ ನೀಡುವ ನಿಟ್ಟಿನಲ್ಲಿ ಹಾಸ್ಟೆಲ್ ತೆಗೆದರು ಮೊದಲು 3 ಮಕ್ಕಳಿಂದ ಪ್ರಾರಂಭವಾಗಿ ಈಗ 150 ಕ್ಕೂ ಹೆಚ್ಚು ಮಕ್ಕಳಿಂದ ಕೂಡಿದೆ.
ಒಂದು ಸಂಸ್ಥೆ ಕಟ್ಟುವುದು, ನಡೆಸುವುದು ಸಾಮಾನ್ಯ ವಿಷಯ ಅಲ್ಲ ಅದಕ್ಕೆ ಬಂಡವಾಳ ಹೂಡಿಕೆ ಮಹತ್ತರ ಪಾತ್ರ ವಹಿಸುತ್ತದೆ.ಸಂಸ್ಥೆ ಬೆಳೆಸಲು ಮತ್ತು ಶಾಲೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ  ಬಿ. ಚಂದ್ರಶೇಖರ ಅವರು ತಮಗೆ ಬೀಗರು ಕೊಟ್ಟ ಎರಡು ಎಕರೆ ಜಮೀನು ಮಾರಿದ್ದು ಕೂಡ ಅವರಿಗೆ ಶಿಕ್ಷಣ ಕೊಡುವುದರ ಮೇಲೆ ಇರುವ ಒಲವು, ದಿಟ್ಟ ನಿಲುವು ಗಮನಿಸಬೇಕಾಗುತ್ತದೆ.ಅಲ್ಲದೆ ತಮ್ಮ ಇಡೀ ಕುಟುಂಬವೇ ಈ ಶಾಲೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಬಿ. ಚಂದ್ರಶೇಖರ ಅವರ ಹೆಂಡತಿ ಶ್ರೀದೇವಿ, ಮಗ ಸಂತೃಪ್ತ, ಸೊಸೆ ಶೃತಿ, ಮಗಳು ಅಕ್ಷತಾ ಮತ್ತು ಸಂಬಂಧಿಕರು ಹೀಗೆ ಕುಟುಂಬದವರು ಪಣತೊಟ್ಟು ನಿಂತಿದ್ದಾರೆ.

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಸಂಸ್ಥೆ….

ಸಂಸ್ಥೆ ಶುರುವಾಗಿ 25 ವರ್ಷ ಆಯಿತು ಇವರ ಮತ್ತು ಶಿಕ್ಷಕರ ಶ್ರಮದಿಂದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಈ ಸಂಸ್ಥೆ ಗರಿಗೆದರಿ ಬೆಳೆಯತೊಡಗಿದೆ. ಸುವ್ಯವಸ್ಥಿತವಾದ ಆಧುನಿಕ, ತಾಂತ್ರಿಕ ವಸ್ತುಗಳಿಂದ ಕೂಡಿದ್ದು ಶಾಲೆಯು ಭವ್ಯ ಕಟ್ಟಡ ಹೊಂದಿದೆ. ಮಕ್ಕಳಿಗೆ  ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಸುಸಜ್ಜಿತವಾದ ಸಭಾಗೃಹವಿದೆ, ವಿಜ್ಞಾನ ಪ್ರಯೋಗಾಲಯ, ಅಟಲ್ ಟಿಂಕರಿಂಗ್  ಪ್ರಯೋಗಾಲಯ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ ಹೀಗೆ ಎಲ್ಲಾ ತರಹದ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವ ಮೂಲಕ ಅತ್ಯುತ್ತಮ ಶಾಲೆಯನ್ನಾಗಿ ಮಾಡಿದ್ದಾರೆ. ಈಗ ಆ ಶಾಲೆಯ ಪ್ರತಿಯೊಬ್ಬ ಮಗು ಕೂಡ ಇಂಗ್ಲಿಷ್ ಭಾಷೆಯನ್ನು ಸರಾಗವಾಗಿ ಮಾತನಾಡುತ್ತದೆ.ಬರೀ ಆಧುನಿಕತೆಗೆ ಮಾರು ಹೋಗದೆ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ಮಕ್ಕಳಿಗೆ ಸಂಸ್ಕೃತ ಶ್ಲೋಕಗಳನ್ನು ಕಲಿಸುವುದು,ಭಗವದ್ಗೀತೆಯ ಸಾರವನ್ನು ತಿಳಿಸುವುದು, ಉತ್ತಮ ನಡುವಳಿಕೆ ನೀಡುವುದು ಹೀಗೆ ಒಂದು ಮಗು ಸಮಾಜದಲ್ಲಿ ಸಭ್ಯತೆಯಿಂದ ಬಾಳುವುದು, ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುವುದನ್ನು ಕಲಿಸಲಾಗುತ್ತದೆ.ಈ ಶಾಲೆ ಬರೀ ಪಾಠದಲ್ಲಿ ಮಾತ್ರ ಅಲ್ಲ ಆಟದಲ್ಲಿ ಕೂಡ ಅಂತರ ರಾಜ್ಯದಲ್ಲಿ ಹೆಸರು ಮಾಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ 10 ಬೆಳ್ಳಿ ಪದಕ ಮತ್ತು 11 ಕಂಚಿನ ಪದಕ ಪಡೆದಿದ್ದಲ್ಲದೆ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 21 ಬಂಗಾರದ ಪದಕ 2 ಕಂಚಿನ ಪದಕ ಗಳಿಸಿದ ಕೀರ್ತಿ ಸಲ್ಲುತ್ತದೆ.
ಅಲ್ಲದೆ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಎಲ್ಲಾ ತರಹದ ಅನುಭವ ಶಿಕ್ಷಣ ನೀಡುತ್ತಿದ್ದಾರೆ.

ಈ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಪ್ರತಿಯೊಬ್ಬ ಶಿಕ್ಷಕರ ಪರಿಶ್ರಮ ಕೂಡ ಮಹತ್ತರ ಪಾತ್ರ ವಹಿಸುತ್ತದೆ ಇದನ್ನು ಮರೆಯುವಂತಿಲ್ಲ. ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಮೇಡಂ ಅವರಿಗೆ ಇನ್ನೂ ಅತ್ಯುತ್ತಮ ಶಿಕ್ಷಣ ನೀಡುವ ಆಸೆ ಇದೆ.
ಬಿ.ಚಂದ್ರಶೇಖರ ಸರ್ ಅವರು ಸಾಧಕ ಸಾಲಿನಲ್ಲಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.

ಗ್ರಾಮೀಣ ಭಾಗದ ಮಕ್ಕಳಿಗೆ ಇನ್ನೂ ಹೆಚ್ಚಿನ ಹೊಸ ಹೊಸ ರೀತಿಯ ಶಿಕ್ಷಣ ವ್ಯವಸ್ಥೆ ಈ ಸಂಸ್ಥೆಯಿಂದ ಆಗಲಿ ಮತ್ತು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಈ ಶಾಲೆಗೆ ಶುಭ ಹಾರೈಸುವೆ. ಇನ್ನೂ ಅನೇಕರಿಗೆ ಇವರ ಆದರ್ಶ ನಿಲುವು ದಿಟ್ಟತನ ಕಂಡ ಕನಸು ನನಸು ಮಾಡಿದ ಪರಿ, ಹೆಗ್ಗಳಿಕೆ ಮತ್ತೊಬ್ಬರಿಗೆ ಸ್ಪೂರ್ತಿ ಆಗಲಿ ಎಂದು ಆಶಿಸುವೆ.
ಮತ್ತೊಮ್ಮೆ ಅಭಿನಂದನೆಗಳು ತಿಳಿಸುತ್ತೇನೆ.

———————————————————————-

6 thoughts on “ಸಮಾಜಸೇವಕರಾದ ಬಿ.ಚಂದ್ರಶೇಖರ ಬಲ್ಲಟಗಿ ಅವರ ಯಶೋಗಾಥೆ-ಕವಿತಾ ಹಿರೇಮಠ

  1. Dear Mrs. Kavita Hiremat,
    Your article is truly wonderful. Your words are both insightful and beautifully articulated, capturing the essence of Sri Basaveshwara English medium school, Ballatagi in a way that is deeply moving. The journey of SBES and our esteemed administrator, Mr. B. Chandrashekar, is nothing short of inspiring.
    I am proud of Mr. Chandrashekar’s remarkable achievements and wish him continued good health and peace. May our school’s future be filled with success and happiness. I feel privileged to have the opportunity to work within this esteemed institution.

    Warm regards,
    Marian Ashok Sequeira

  2. Dear mam
    We are so thankful for your gratitude towards our school,we agreed with your words on our beloved admin, his thoughts towards school improvising as the one of the bestest school in our region is inspiring.

Leave a Reply

Back To Top