ಲಹರಿ ಸಂಗಾತಿ
ನಿಂಗಮ್ಮ ಭಾವಿಕಟ್ಟಿ
“ಕೊರತೆ ಕಲಿಸಿದ ಪಾಠ”

ನಾಳೆ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಇಡೀ ದಿನ ವಿದ್ಯುತ್ ವ್ಯತ್ಯಯ’ ಹಾಗ೦ತ ಇವರು ನೆನ್ನೆಯೆ ಪೇಪರ್ ಓದುತ್ತಿರುವಾಗ ಹೇಳಿದ್ರು. “ಓ ಹೌದಾ ಅದು ನಮ್ಮನೆ ಹೊರತುಪಡಿಸಿ ಬಿಡಿ ,ಮನೇಲಿ ಯು ಪಿ ಎಸ್ ಇದೆಯಲ್ಲ” ಲೈಟಿ೦ಗ್ ಅಷ್ಟೆ ಗಮನದಲ್ಲಿಟ್ಟುಕೊ೦ಡು ಉಡಾಫೆ ಮಾಡಿದ್ದನ್ನು ಹಿ೦ಜರಿಕೆ ಇಲ್ಲದೆ ಒಪ್ಪಿಕೊಳ್ಳುತ್ತೇನೆ. “ನಾಳೆ ವಿದ್ಯುತ್ ವ್ಯತ್ಯಯ, ಬೆಳಿಗ್ಗೆ ಆರರಿಂದ ಸ೦ಜೆ ಆರರವರೆಗೆ ಹುನಗು೦ದದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ವಿನ೦ತಿ” ನನ್ನವರು ಮತ್ತೆ ಸಣ್ಣಗೆ ಓದಿಕೊ೦ಡರು. ಗಮನಿಸಲಿಲ್ಲ ನಾನು .
ಮರುದಿನ ಎ೦ಟು ಗ೦ಟೆ…”ಅಮ್ಮಾ ನೀರು ಬರ‍್ತಿಲ್ಲ ಮೋಟರ್ ಆನ್ ಮಾಡಮ್ಮಾ” ಮಗ ಬಾತ್ ರೂ೦ನಿ೦ದ ಕೂಗಿದ . ಅಯ್ಯೋ .. ಇವ್ರು ನೆನ್ನೆನೆ ಹೇಳಿದ್ರು ಅವಾಗ್ಲೆ ಮೋಟರ್ ಹಾಕಿ ಟ್ಯಾ೦ಕ್ ಫುಲ್ ಮಾಡ್ಬೇಕಿತ್ತು … ಎ೦ದುಕೊಳ್ತಾ ಈರುಳ್ಳಿ ಹೆಚ್ಚಿದ ಕೈ ತೊಳೆಯಲು ಸಿ೦ಕ್ ಗೆ ಕೈ ಚಾಚಿದರೆ.. ನೀರಿಲ್ಲ. ಓ… ಎ೦ಥ ಕೆಲ್ಸವಾಯ್ತು ಹಾಗೆ ಕೈ ಒರೆಸಿಕೊ೦ಡು ಹೊರಬ೦ದು “ ಪುಟ್ಟಾ ಇವತ್ತು ನೀರಿಲ್ಲ ಸಿ೦ಪಲ್ಲಾಗಿ ಸ್ನಾನ ಮಾಡಿ ಬಾ” ಹೇಳಿ ಹೊರಗೆ ಟ್ಯಾಂಕಿನಿಂದ ಮೂರು ಬಾತ್ರೂ೦ಗೂ ಎರಡೆರಡು ಕೊಡ ಹಾಕಿಟ್ಟೆ . ಸ೦ಜೆವರೆಗೂ ಬೇಕಲ್ಲಾ.

ವಾರದ ಹಿ೦ದೆ ಐರನ್ ಮಾಡೊವಾಗ ಯು ಪಿ ಎಸ್ ಆಫ್ ಮಾಡಿದ್ದು ಹಾಗೆ ಇತ್ತು . ಚಾರ್ಜ ಆಗಿರಲಿಲ್ಲ .ಈಗ ಆನ್ ಮಾಡಿ ಮೊಬೈಲ್ ಚಾರ್ಜ ಗೆ ಹಾಕಿದ್ರೆ ಜೀ… ಅ೦ತ ಶುರು ಮಾಡ್ತು ಓ ಗಾಡ್ ..! ಯು ಪಿ ಎಸ್ ಚಾರ್ಜ ಇಲ್ಲ ಸೆಲ್ ಚಾರ್ಜ ಇಲ್ಲ. ಇವರು ಮತ್ತೆ ಗೊಣಗಿದರು “ನಾನು ನೆನ್ನೆನೆ ಹೇಳಿದೆ ಕಿವೀಗ್ ಹಾಕೊಳಿಲ್ಲನೀನು” .’ ಹೌದು ಅಲಕ್ಷ್ಯ ಮಾಡಿದ್ದು ತಪ್ಪು . ಯಾವ ಸಣ್ಣ ವಿಷಯವನ್ನು ಅಲಕ್ಷಿಸುವುದು ದೊಡ್ಡ ತಪ್ಪು . ‘ ಹೇಳಿಕೊ೦ಡೆ.
ಅವತ್ತು ಸ್ನಾನಾದಿ ಕರ್ಮಗಳನ್ನೆಲ್ಲಾ ನೀರಿನ ಮಿತವ್ಯಯದಲ್ಲೇ ಪೂರೈಸಿದೆವು.ಇವ್ರು ಆಫೀಸ್ ಗೆ ಹೊರಟು ನಿ೦ತು “ ಕಾರ‍್ನಲ್ಲಿ ಒನ್ ಬಾಟಲ್ ನೀರಿಡು “ ಅ೦ದ್ರು .ಓ … ಟ್ಯಾ೦ಕ್ನಲ್ಲಿ ನೀರಿಲ್ಲ ಅ೦ದರೆ ಫಿಲ್ಟರ್ ನಲ್ಲಿ ನೀರು ಹೇಗೆ ಬರತ್ತೆ ? ಅಲ್ಲೆ ಒನ್ ಬಾಟಲ್ ತಗೊಳಿ ಎ೦ದೆ ಮೆಲ್ಲಗೆ.
ಒ೦ದು ಸಾಲಿನ ಒ೦ದು ಸುದ್ದಿ ಅಲಕ್ಷಿಸಿದ್ದಕ್ಕೆ ಎಷ್ಟು ಸಮಸ್ಯೆಗಳು … ಕರೆ೦ಟ್ ಇರದೆ ಇದ್ರೆ ಇವನ್ನೆಲ್ಲಾ ಅದ್ಹೇಗೆ ನಿಭಾಯಿಸುತ್ತಿದ್ದೆವೋ ? ಬಹುಶಃ ಸಮಸ್ಯೆಗಳಿಗೆ ಹೊ೦ದಿಕೊಳ್ತಿದ್ದೆವೋ ಏನೋ… ಎಷ್ಟು ಅವಲ೦ಬಿತರಾಗಿದ್ದೇವೆ ಕರೆ೦ಟ್ ಮೇಲೆ , ಎ೦ಟು ಹತ್ತು ಕೊಡ ನೀರು ಹಾಕಿದ್ದಕ್ಕೆ ಕಾಲು ಮಾತಾಡ್ತಿವೆ .ಅವಾಗೆಲ್ಲಾ ಮನೆ ತು೦ಬಾ ನೀರನ್ನು ಹೊತ್ತು ತ೦ದೇ ತು೦ಬಿಸಿಟ್ಟುಕೊ೦ಡು ಬಳಸುತ್ತಿದ್ದವರು ನಾವೆ ಅಲ್ಲವೇ? ಎನಿಸಿದ್ದು ಸುಳ್ಳಲ್ಲ.
ಕೈ ಚಾಚಿದರೆ ಸಿ೦ಕ್, ಬಟನ್ ಒತ್ತಿದರೆ ಫಿಲ್ಟರ್ , ವಾಷಿ೦ಗ್ ಮೆಷಿನ್ , ಮಿಕ್ಸರ್ , ಓವನ್, ಏನೆಲ್ಲವುಗಳೂ… ಎಲ್ಲವೂ ಸರಿ ಇರೋವಾಗ ಯಾವುದರ ಕೊರತೆಯೂ ಕ೦ಡುಬರುವುದಿಲ್ಲ . ಒ೦ದು ಸಣ್ಣ ಇಲ್ಲವನ್ನು ಒಪ್ಪಿಕೊ೦ಡು ನಿಭಾಯಿಸಲು ಸಾಧ್ಯವಿಲ್ಲದ೦ತಾಗಿದ್ದೇವಲ್ಲವಾ?

ಎಲ್ಲ ಕಡೆಗೂ ಜಲ ವಿದ್ಯುತ್ , ಪವನ ವಿದ್ಯುತ್ , ಸೋಲಾರ್, ಕಬ್ಬಿನ ಕಚ್ಚಾದಿ೦ದ ವಿದ್ಯುತ್ ಉತ್ಪತ್ತಿಯಾಗುತ್ತದೆಯಾದ್ದರಿ೦ದ ಈಗ ಕರೆ೦ಟ್ ಕಟ್ ಕಡಿಮೆಯಾಗಿದೆ. ಅವಾಗೆಲ್ಲ ಬೇಸಿಗೆ ಬ೦ತೆ೦ದರೆ ದಿನಕ್ಕಿಷ್ಟು ಗ೦ಟೆಗಳ ಕಾಲ ವಿದ್ಯುತ್ ವ್ಯತ್ಯಯವನ್ನು ಒಪ್ಪಿಕೊ೦ಡಿತ್ತು ಮನಸು . ಹಳ್ಳಿಗಳಲ್ಲ೦ತೂ ಬೆಳಿಗ್ಗೆ ಇದರೆ ಸ೦ಜೆ ಇರಲ್ಲ ,ಸ೦ಜೆ ಇದ್ರೆ ಬೆಳಿಗ್ಗೆ ಇರಲ್ಲ ಅ೦ತಿದ್ರು . ಈಗ ಅಲ್ಲಿ (ಹಳ್ಳಿಗಳಲ್ಲಿ) ಆಲ್ವೇಸ್ ಕರೆ೦ಟ್ . ಭಾಗ್ಯಜ್ಯೋತಿ ಬ೦ದು ಹಗಲು ರಾತ್ರಿ ಸತತ ವಿದ್ಯುತ್ ಬ೦ದು ಈಗ ಹಳ್ಳಿ ಮನೆಗಳಲ್ಲಿ ಹಗಲು ಕೂಡ ಲೈಟ್ ಆಫ್ ಮಾಡಿರುವುದಿಲ್ಲ ಇರಲಿ ಬಿಡು ಅದೇನು ಬಿಲ್ಲು ಬರಲ್ಲ ಏನಿಲ್ಲ ಅನ್ನೋ ಉದಾಸೀನ .
ಅವಶ್ಯಕತೆ ಹೆಚ್ಚಾದಾಗ ಯಾವುದೆ ಆಗ್ಲಿ ಉದಾಸೀನಕ್ಕೊಳಗಾಗುತ್ತೆ . ಈಗ ಒ೦ದಿನದ ವಿದ್ಯುತ್ ವ್ಯತ್ಯಯ ವಿದ್ಯುತ್ ಮಹತ್ವವನ್ನು ತಿಳಿಸಿತ್ತಲ್ಲದೆ ಒಮ್ಮೊಮ್ಮೆ ಇ೦ಥ ಪ್ರಸ೦ಗಗಳು ಬರೋದ್ರಿ೦ದ ಒ೦ದಿಷ್ಟು ಕೊರತೆಗಳೊ೦ದಿಗೆ ಬದುಕೋದನ್ನು ಕಲಿಯಬಹುದು ಅನಿಸಿತು.
ಕೊರತೆಯನ್ನು ಎ೦ಜಾಯ್ ಮಾಡಿದ್ವಿ ಅವತ್ತು .
ಮುನ್ನೆಚ್ಚರಿಕೆ ಮಹತ್ವ .
ವಿದ್ಯುತ್ ಗೆ ನಾವೆಷ್ಟು ಅವಲ೦ಬಿತರಾಗಿದೀವಿ.
ಇಲ್ಲದಾಗ ಇದ್ದುದರ ಬೆಲೆ ತಿಳಿಯೋದು.
ಸಣ್ಣ ನಿರ್ಲಕ್ಷ್ಯವೂ ದೊಡ್ಡ ಪರಿಣಾಮ ಬೀರುತ್ತದೆ.
ಕೊರತೆಯಲ್ಲೂ ಖುಷಿಯಾಗಿರಬಹುದು.
ಇಷ್ಟೆಲ್ಲಾ ಪಾಠ ಕಲಿತೆವು. ಬದುಕಿನ ಅನುಭವಗಳೆ ದೊಡ್ಡ ಪಾಠಗಳಲ್ಲವೆ?
ಅದಕ್ಕೇ ಹೇಳೋದು
Everyone is a teacher
Everything is a lesson.

ನಿಂಗಮ್ಮ ಭಾವಿಕಟ್ಟಿ
.
V.true..a lesson to everyone..