ಶರಣ ಸಂಗಾತಿ
ಗುಂಬಳ್ಳಿ ಬಸವರಾಜ್
‘ನಿಜಸುಖಿ ಹಡಪದ ಅಪ್ಪಣ್ಣ’
ನಿಜಸುಖಿ ಹಡಪದ ಅಪ್ಪಣ್ಣ
ಹಸಿವಿನಾಸೆಗೆ ಅಶನವ ಕೊಂಬರು ವಿಷಯದಾಸೆಗೆ
ಹುಸಿಯನುಡಿವರು ಹಸನಾಗಿ ವ್ಯಸನವ ಹೊತ್ತು,
ಭಸಿತವ ಹೂಸಿ ವಿಶ್ವವ ತಿರುಗಿದರು ಈ ಹುಸಿಯ
ಬಿಟ್ಟು ಮಾಯೆಯ ಮಸಕವ ಮಾಣ್ಣಲ್ಲದೆ
ನಮ್ಮ ಬಸವ ಪ್ರಿಯ ಕೂಡಲ ಚನ್ನಬಸವಣ್ಣ
12ನೇ ಶತಮಾನದ ವಚನ ಆಂದೋಲನದ ಮೂಲಕ ಸಾಮಾಜಿಕ ಸಮಾನತೆ ಬೆಳಕು ಚೆಲ್ಲಿದ ಬಸವಣ್ಣರವರ ಆಪ್ತ ಕಾರ್ಯದರ್ಶಿಯಾಗಿ ಬಲಗೈ ಬಂಟನಾಗಿ ಕಾರ್ಯನಿರ್ವಹಿಸಿದ ಶರಣ ಸಮೂಹದ ಅಪರೂಪದ ವ್ಯಕ್ತಿತ್ವ ಅಪ್ಪಣ್ಣರವರದ್ದು, ಅಪ್ಪಣ್ಣ ರವರು ಕ್ರಿ.ಶ1035 ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಚನ್ನವೀರಪ್ಪ ಹಾಗೂ ದೇವಿಕಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದ ಇವರು ಆಧ್ಯಾತ್ಮಿಕ ಜ್ಞಾನದ ತುಡಿತಕ್ಕೆ ಒಳಗಾದವರು.ಅಪ್ಪಣ್ಣ ರವರ ಮೊದಲ ಹೆಸರು ಜೀವಣ್ಣ ಎಂದು. ತಮ್ಮ ಮೊದಲ ಗುರು ಶಿವಶಂಕರಯ್ಯ ಸ್ವಾಮಿ ಹಿರೇಮಠರವರಿಂದ ಶಿಕ್ಷಣವನ್ನು ಪಡೆಯುವಾಗಲೆ ಮೌಢ್ಯದದ ವಿರುದ್ಧ ಬಂಡಾಯ, ಸಮಾಜದಲ್ಲಿ ಬೇರೊರಿದ್ದ ಅಸಮಾನತೆ ಕುರಿತು ಗುರುಗಳೊಂದಿಗೆ ಆಗಾಗ ಗಹನ ಚರ್ಚೆ ಮಾಡುತ್ತಿದ್ದರು.ಓದಿನ ತುಡಿತದೊಂದಿಗೆ ಸಮಾಜದ ಮೌಡ್ಯ, ಢಾಬಚಾರದಿಂದ ಸಮಾಜವನ್ನು ಜಾಗೃತಿಗೊಳಿಸುವ ಮನದ ತುಡಿದ ಇವರಲ್ಲಿತ್ತು. ನಂತರದ ವಿದ್ಯಾಭ್ಯಾಸವನ್ನು ಬಿಜಾಪುರ ಗಣಾಚಾರಿ ಮಠದ ಈಶ್ವರಯ್ಯನವರಿಂದ ಪ್ರೇರಿತಗೊಂಡು ವಿದ್ಯಾಭ್ಯಾಸವನ್ನು ಪೂರ್ಣ ಮಾಡುವ ವೇಳೆಗೆ ಅವರನ್ನು ವ್ಯವಸಾಯಕ್ಕೆ ಪೋಷಕರು ಮಸಬಿನಾಳಕ್ಕೆ ಕರೆತಂದರು. ಸಮಾಜದಲ್ಲಿದ್ದ ಕಂದಾಚಾರ ಮೌಡ್ಯತೆಯ ನೆಲೆ ಕುರಿತು ಅಪ್ಪಣ್ಣರವರಲ್ಲಿ ವೈರಗ್ಯ ಉಂಟಾಯಿತು.
ಅಪ್ಪಣ್ಣರವರು ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸಿ ನುಡಿದಂತೆ ನಡೆದವರು.
ದೇವದೇವ ಮಹಾಪ್ರಸಾದ…..
ನಿಮ್ಮ ಶರಣರು ಏನಿಚ್ಚೆಗೆ ಬಪ್ಪರೇ? ಚಕಿತ ಮಭಿದತ್ತೇ ಶ್ರುತಿರಪಿ ಎನ್ನಲು, ಎಮ್ಮ ನುಡಿ ಶರಣರ ತಾಗ ಬಲ್ಲುದೆ?
ಹಣೆಯ ಹೊಣೆಯ ತೋರಿ ಉದರವ ಹೊರೆವಾ ನಿಮ್ಮ ಮರೆಯಲಡಗಿಪ್ಪ ಹಡಪಿಗ
ನಾನಯ್ಯ
ಇವರ ವಚನದಲ್ಲಿರುವ ಹಡಪಿಗ ಪದದ ಶಬ್ದವು ತಾಂಬೂಲ ಚೀಲ ಅಥವಾ ಕ್ಷೌರಿಕ ಸಾಮಾನುಗಳ ಪೆಟ್ಟಿಗೆ ಎಂಬ ಅರ್ಥವನ್ನು ಕೊಡುತ್ತದೆ.ಕಾಯಕ ಯಾವುದೇ ಇರಲಿ ಶರಣರ ತತ್ವ ಕಾಯಕದಲ್ಲಿ ಕ್ರಮ ನಿಷ್ಠರಾಗಿದ್ದವರು. ಆ ಕಾಲ ಗಟ್ಟದಲ್ಲಿದ್ದ ವರ್ಗ ತಾರತಮ್ಯ, ನೀತಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಸಮಾನತೆಯ ಅಡಿಗಲ್ಲನ್ನು ಹಾಕಿದವರು.
ಆಪ್ತ ಕಾರ್ಯದರ್ಶಿ : ಬಸವೇಶ್ವರರನ್ನು ನೆರಳಿನಂತೆ ಹಿಂಬಾಲಿಸಿದವರು. ಮುಂಜಾನೆಯಿಂದ ಪ್ರಾರಂಭವಾಗುವ ಕಾರ್ಯಗಳಿಂದ ಇರುಳಿನವರಗೆ ಎಲ್ಲಾ ಕಾರ್ಯಗಳಲ್ಲಿ ಬಾಗಿಗಳಾಗುತ್ತಿದ್ದರು.
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು ಎನ್ನರಿವು
ನಿಮ್ಮ ಘನ ದೊಳಗೆ ಸವೆದು.
ನಿಶ್ಚಲ ನಿಜೈಕ್ಯವಾಗಿ
ಬಸವ ಪ್ರಿಯ ಕೂಡಲ ಚನ್ನಸಂಗಯ್ಯ
ಬಸವೇಶ್ವರರಿಗೆ ಎನ್ನ ತನು ಮನ ನಿಮ್ಮದು ಎಂದು ಸಮರ್ಪಣ ಭಾವದೊಂದಿಗೆ ಅವರಿಲ್ಲಿರುವ ಜ್ಞಾನವನ್ನು ಬಸವೇಶ್ವರರನ್ನು ಸ್ಮರಿಸುವುದಕ್ಕಾಗಿ ಬಳಸುತ್ತಾರೆ.
ಅನುಭವ ಮಂಟಪದಲ್ಲಿ ಅಪ್ಪಣ್ಣ ಶರಣರು : ಕಾಯಕ ಸಮುದಾಯಗಳಿಗೆ ಸಮಾಜದ ಮುಖ್ಯವಾಗಿ ತರುವುದರೊಂದಿಗೆ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಪಟ್ಟವರನ್ನೇ ಸಮಾಜದ ಮುನ್ನಲೆಗೆ ತರಲು ವಿಶ್ವದ ಪ್ರಥಮ ಸಂಸತ್ತು ಎಂದೆ ಬಿಂಬಿತವಾದ ಅನುಭವ ಮಂಟಪದ ಕಾರ್ಯ ನಿರ್ವಹಣೆಯ ಜವಾಬ್ದಾರಿ ಅಪ್ಪಣ್ಣರವರಿಗೆ ನೀಡಲಾಯಿತು. ಇವರಿಗೆ ತಿಳಿಯದೆ ಯಾವ ಕಾರ್ಯ ಜರುಗುತ್ತಿರಲ್ಲಿ. ಅನುಭವ ಮಂಟಪದ ಸಂಚಾಲಕರಾಗಿ ಅಪ್ಪಣ್ಣ ಕಾರ್ಯನಿರ್ವಹಿಸಿದರು. ಅನುಭವ ಮಂಟಪಕ್ಕೆ ಅಲ್ಲಮಪ್ರಭುಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರಿ ಬಲು ಅಪರೂಪ. ಇವರು ಸುಮಾರು 251 ವಚನಗಳು ಹಾಗೂ ಅಪ್ಪಣ್ಣರ ಮಡದಿ ಶಿವಶರಣೆ ಹಡಪದ ಲಿಂಗಮ್ಮ ರವರು 114 ವಚನಗಳನ್ನು ರಚಿಸಿರುವುದು ನಮಗೆ ದೊರಕಿದೆ.ಇವರ ವಚನಗಳಲ್ಲಿ ಅಲೌಕಿಕ ಬದುಕಿನ ಪ್ರಾಮುಖ್ಯತೆ, ಕಂದಾಚಾರ, ಮನ್ನಸ್ಸಿನ ತಾಕಳಾಟ ಮುಂತಾದ ವಿಷಯಗಳಲ್ಲಿ ಜನಜಾಗೃತಿಯನ್ನು ಮೂಡಿಸುವ ವಚನ ತಾತ್ವಿಕ ರೂಪದಲ್ಲಿವೆ.
ಕೊನೆಯ ದಿನಗಳಲ್ಲಿ ಅಪ್ಪನ ಶರಣರು….
ಕಲ್ಯಾಣ ಕ್ರಾಂತಿಯ ನಂತರ ಬಸವೇಶ್ವರ ರೊಂದಿಗೆ ಜೀವನದ ಕೊನೆಯ ಕ್ಷಣದವರೆಗೂ ಅವರ ಪ್ರೀತಿಗೆ ಪಾತ್ರರಾದ ಏಕೈಕ ವ್ಯಕ್ತಿ ಎಂದರೆ ಅದು ಹಡಪದ ಅಪ್ಪಣ್ಣ ರವರು ತಮ್ಮ ಕೊನೆಯ ದಿನವನ್ನು ಕೂಡಲಸಂಗಮಕ್ಕೆ ಹತ್ತಿರವಿರುವ ತಂಗಡಗಿಯಲ್ಲಿ ಕಳೆಯುತ್ತಾರೆ.
ಬನವಾಸಿಯ ಮುದುಕೇಶ್ವರ ದೇವಾಲಯದಲ್ಲಿ ಶಿವೋತ್ಸವ ಮಂಟಪದಲ್ಲಿ ಅನೇಕ ಶರಣರ ವಿಗ್ರಹದೊಂದಿಗೆ ಇವರ ವಿಗ್ರಹ ಸಹ ಇದೆ.
ಕ್ರಾಂತಿಕಾರಿಕಚಿಂತನೆ, ವೈಚಾರಿಕ ಆಲೋಚನೆ, ಧಮನಿ ನಿರತರಿಗೆ ದನಿಯ ರೂಪವಾಗಿ ದಾರಿ ತಪ್ಪಿದ ಸಮಾಜವನ್ನು ಬಂಡಾಯದ ರೂಪವಾಗಿ ಇವರ ವಚನಗಳು ಚಿಕಿತ್ಸಕವಾಗಿವೆ.ಕೇವಲ ಭಕ್ತಿ ಭಾವ ಅಲ್ಲದೆ ಉತ್ತಮ ಜೀವನದ ಮೌಲ್ಯಗಳಾಗಿ ಕಾಣಿಸುತ್ತದೆ.
ಗುಂಬಳ್ಳಿ ಬಸವರಾಜ್