“ಚತುರ ಮೊಲ” ಮಕ್ಕಳ ಕಥೆ-ಕಾಡಜ್ಜಿ ಮಂಜುನಾಥ

 ಒಂದು ಕಂದು ಬಣ್ಣದ ಮೊಲವಿತ್ತು ದಿನಾಲೂ ಕಾಡಿನ ಪ್ರಾಣಿಗಳನ್ನು ಗಮನಿಸಿ ಅವುಗಳ ಧ್ವನಿಯನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿತ್ತು .ಹಲವು ದಿನಗಳ ನಿರಂತರ ಪ್ರಯತ್ನದಿಂದ ಅನುಕರಣೆ ಮಾಡಲು ಕಲಿಯಿತು.ಈ ಅನುಕರಣೆಯ ಪ್ರತಿಭೆಯನ್ನು ಉಪಯೋಗಿಸಿಕೊಂಡು ಪ್ರಾಣಿಗಳ ಸ್ನೇಹವನ್ನು ಮಾಡಲು ಯೋಚಿಸಿತು.ಮೊದಲು ನರಿಯನ್ನು ಭೇಟಿ ಮಾಡಿತು. ನರಿಯಣ್ಣ,ನಮಸ್ಕಾರ ಹೇಗಿದ್ದಿಯಾ? ಎಂದು ಕೇಳಿತು. ಹಾ ! ನಾ ಚೆನ್ನಾಗಿದ್ದೇನೆ ಎಂದು ನರಿಯು ಶುಭಾಶಯ ವಿನಿಮಯ ಮಾಡಿಕೊಂಡಿತು.ನಂತರ ಮೊಲವು ನರಿಯಣ್ಣ ,ನರಿಯಣ್ಣ, “ನಾನು ಒಂದು ಧ್ವನಿಯನ್ನು ಅನುಕರಿಸುವೇ ಕೇಳುವೆಯಾ?”ಎಂದಿತು ಓಹೋ ಓಹೋ,ಹೌದ ಮಾಡು ಎಂದಿತು. ಮೊಲವು ಸಿಂಹದ ಧ್ವನಿಯನ್ನು ಅನುಕರಣೆ ಮಾಡಿತು.ಕೇಳಿಸಿಕೊಂಡ ನರಿಯು ಭೇಷ್ !ಭೇಷ್ !ಎಂದು ಸಂತಸದಿಂದ ಮೊಲದ ಬೆನ್ನುತಟ್ಟಿತು.ನಂತರ ಮೊಲವು ಆನೆಯ ಹತ್ತಿರ ಹೋಗಿ ಆನೆಯಣ್ಣ ನಮಸ್ಕಾರ ಹೇಗಿದ್ದಿಯಾ? ಎಂದಿತು.ಆನೆಯು ಪ್ರತಿಯಾಗಿ ನಮಸ್ಕರಿಸಿ ಯೋಗಕ್ಷೇಮವನ್ನು ವಿಚಾರಿಸಿತು .ನಂತರ ಮೊಲವು ಆನೆಯಣ್ಣ, ಆನೆಯಣ್ಣ,! “ನಾನು ಒಂದು ಧ್ವನಿಯನ್ನು ಅನುಕರಿಸುವೇ ಕೇಳುವೆಯಾ?” ಎಂದಿತು. ಹಾ ಆಗಬಹುದು ಎಂದಿತು.ನಂತರ ಮೊಲವು ನರಿಯ ಧ್ವನಿಯನ್ನು ಅನುಕರಿಸಿತು ಕೇಳಿಸಿಕೊಂಡ ಆನೆಯು ವಾವ್! ವಾವ್ !ಎಂದು ಖುಷಿಪಟ್ಟು ಸೊಂಡಿಲನ್ನು ಮೇಲೆತ್ತಿ ಘೀಳಿಟ್ಟು ಸಂಭ್ರಮಿಸಿತು.ತದನಂತರ ಮೊಲವು ಹುಲಿಯ ಹತ್ತಿರ ಹೋಗಿ ಹುಲಿಯಣ್ಣ ಹೇಗಿದ್ದಿಯಾ? ಎಂದು ಕೇಳಿತು.ಹುಲಿಯು ಪುಟ್ಟ ಮೊಲವನ್ನು ದಿಟ್ಟಿಸಿ! ನೋಡಿ ಹಾ ,ನಾನು ಚೆನ್ನಾಗಿದ್ದೇನೆ ಎನ್ ಸಮಾಚಾರ ಎಂದಿತು .ಮೊಲವು ಹುಲಿಯಣ್ಣ ;ಹುಲಿಯಣ್ಣ, “ನಾನು ಒಂದು ಧ್ವನಿಯನ್ನು ಅನುಕರಿಸುವೇ ಕೇಳುವೆಯಾ?”ಎಂದಿತು.ಹಾ, ಹಾ ,ಹಾ  ಹೌದ ಸರಿ ಮಾಡು ಎಂದು ತಲೆಯಾಡಿಸಿತು..ಮೊಲವು ಸಿಂಹದಂತೆ ಘರ್ಜನೆ ಮಾಡಿತು ಕೇಳಿಸಿಕೊಂಡ ಹುಲಿಯು ಆಶ್ಚರ್ಯದಿಂದ ತುಂಬಾ ಅಮೇಜಿಂಗ್ !ಅಮೇಜಿಂಗ್! ,ಎಂದು ಖುಷಿಪಟ್ಟಿತು.ಮೊಲವು ತನ್ನ ಅನುಕರಣಾ ಚತುರತೆಯ ಮೂಲಕ ಪ್ರಾಣಿಗಳ ಸ್ನೇಹವನ್ನು ಸಂಪಾದಿಸಿತು.ನಂತರ ನರಿಯು ಕಾಡಿನ ರಾಜ ಸಿಂಹದ ಹತ್ತಿರ ಹೋಗಿ ಮೊಲದ ಚತುರತೆಯನ್ನು ತಿಳಿಸಿತು.ಸಿಂಹವು ಇದರಿಂದ ಸಂತೋಷಗೊಂಡು ಮೊಲಕ್ಕೆ ಏನಾದರೂ ಪುರಸ್ಕಾರ ನೀಡಬೇಕೆಂದು ತೀರ್ಮಾನಿಸಿತು.ಸಿಂಹವು ಕಾಡಿನ ಪ್ರಾಣಿಗಳ ಸಭೆ ಕರೆಯಿತು.ನಂತರ ಸಭೆಗೆ ನರಿಯು ಮೊಲವನ್ನು ಪರಿಚಯಿಸಿತು ಜೊತೆಗೆ ಮೊಲದ ಅನುಕರಣೆಯ ಪ್ರತಿಭೆಯನ್ನು ತಿಳಿಸಿತು.ನಂತರ ಮತ್ತೊಮ್ಮೆ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುವಂತೆ ವಿನಂತಿಸಿತು.ಮೊಲವು ಸಂತಸದಿಂದ ಒಪ್ಪಿಕೊಂಡು ಮೊದಲಿಗೆ ಕಾಡಿನ ರಾಜ ಸಿಂಹದ ಧ್ವನಿಯನ್ನು ಅನುಕರಣೆ ಮಾಡಿತು.ಎಲ್ಲಾ ಪ್ರಾಣಿಗಳು ಕೇಕೆ ಹಾಕಿ ಸಂಭ್ರಮಿಸಿದವು. ನಂತರ ನರಿ,ಹುಲಿ,ಕರಡಿ,ಹೀಗೆ ಅನೇಕ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡಿತು. ಕೇಳಿದ ಎಲ್ಲಾ ಪ್ರಾಣಿಗಳು ಖುಷಿಯಿಂದ ಮೊಲವನ್ನು ಅಪ್ಪಿಕೊಂಡು ಮುದ್ದಾಡಿದವು!!.ನಂತರ ಕಾಡಿನ ರಾಜನಾದ ಸಿಂಹವು ಮೊಲಕ್ಕೆ ಬಹುಮಾನವನ್ನು ನೀಡಿ ಸನ್ಮಾನಿಸಿತು…


Leave a Reply

Back To Top