“ಹೋಗಿ ತೀರಬೇಕು” ತೆಲುಗು ಕವಿತೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳಿ ಮೋಹನ್

ಮನವೆಲ್ಲಾ
ಮಳೆಗಾಲದ ಆಕಾಶದಂತೆ ಇದೆ
ಬೇಗ ಹೋಗಬೇಕು
ನನ್ನ ಮನೆಗೆ ನಾನು ಬೇಗ ಹೊರಡಬೇಕು

ನನ್ನ ಕೋಣೆಯ ಬೀಗ ತೆಗೆದು
ಬಾಗಿಲು ತೆರೆದ ಮೇಲೆ ಸ್ವಾಗತ ಹೇಳುವ
ಧೂಳನ್ನು ಕೊಡವಿ
ಕೋಣೆಗೆ ತಲೆತುಂಬ ಸ್ನಾನ ಮಾಡಿಸಿ
ಧೂಪವನ್ನು ಹಾಕಬೇಕು

ಇಷ್ಟು ದಿನಗಳ ಕಾಲ
ಏಕಾಂಗಿತನದ ರಾಗವನ್ನು ಹಾಡುತ್ತಿರುವ
ನನಗೆ ಅತ್ಯಂತ ಪ್ರೀತಿಯಾದ
ನೆಸ್ ಕೆಫೆ ಸನ್ ರೈಜ್ ಕಾಫಿಪುಡಿಯನ್ನು ಮಾತನಾಡಿಸಿ
ಗಟ್ಟಿಯಾಗಿರುವ ಹಾಲಿನಲ್ಲಿ ಕಾಫೀ ಬೆರಸಿಕೊಂಡ
ತೃಪ್ತಿಯಾಗಿ ಕುಡಿಯುತ್ತಾ
ಹೊಸದಾದ ಚಿಂತನೆಗಳನ್ನು
ಮನಸ್ಸಿನ ಪ್ರಾಂಗಣವೆಲ್ಲಾ ಹರಡಬೇಕು

ಹಸಿಹಸಿಯಾಗಿ ದಿನಗಳನ್ನು ಕುಪ್ಪೆ ಹಾಕುತ್ತಿರುವ
ಗಿಡ್ಡವಾದ ಆಲೋಚನಾಪರರಗೆ ಇಷ್ಟವಿಲ್ಲದಿದ್ದರೂ
ನನಗೆ ಸೌಕರ್ಯವಾದ ಉಡುಪುಗಳನ್ನು ಧರಿಸಿ
ಮನಸ್ಸಿನ ಬಳಲಿಕೆ ತೀರುಸುವ
ಆಶಾ ಭೋಂಸ್ಲೆ ಆಲಾಪಿಸಿದ
ಮಧುರ ಗೀತೆಗಳನ್ನು ಕೇಳಬೇಕು

ಕೆನ್ನೆಗಳು ಕಡುಬಿನಂತೆ ಇದೆ ಅಂತ
ತುಟಿಗಳು ಹಲಸಿನ ತೊಳೆಯಂತೆ ಇದೆ ಅಂತ
ಕಣ್ಣುಗಳು ನೈದಿಲೆ ಹೂವುಗಳಂತೆ ಇದೆ ಅಂತ
ನನ್ನ ಅಂದವನ್ನು ಅಪ್ಸರ ಯೊಂದಿಗೆ
ಹೋಲಿಸಿ ಹೊಗಳುತ್ತಾರೆ ಆಗಲೀ
ನನ್ನ ದೇಹವನ್ನು ಮುಚ್ಚಿಡುವ ಉಡುಪುಗಳ ಬಗ್ಗೆ
ಬಗೆಬಗೆಯಾಗಿ ಬಾಯಿ ಚಪ್ಪರಿಸುವುವರನ್ನು
ಡ್ರೈ ಕ್ಲಿನಿಂಗ್ ಗೆ ಕಳುಹಿಸ ಬೇಕು

ಇಲ್ಲಿ ನಿರ್ಬಂಧಗಳ ಬಿಸಿಯಲ್ಲಿ
ಉಸಿರುಗಟ್ಟಿಸುತ್ತಿದಂತೆ ಆಗುತ್ತಿದೆ
ಬೇಗನೆ ನನ್ನ ಮನೆಗೆ ನಾನು ಹೋಗಬೇಕು
ನನ್ನ ದುಡಿಮೆಗೆ ಅರಳುತ್ತಿರುವ ಸುಗಂಧದ ಹೂವುಗಳ
ಪರಿಮಳಗಳಲ್ಲಿ ಮನತುಂಬಿದ ಆನಂದವನ್ನು ಹೊಂದಬೇಕು

ನನ್ನ ನಾನು ಹೊಸದಾಗಿ ನಿರ್ವಚಿಸುಕೊಂಡು
ಹೊಸಹೊಸದಾಗಿ ಬದಲಾವಣೆ ಮಾಡಿಕೊಂಡು
ನನ್ನನ್ನು ಮಗಳಂತೆ ನೋಡಿಕೊಳ್ಳುವ
ಅತ್ತೆಮ್ಮನ ಮಡಿಲಲ್ಲಿ ತಲೆ ಇಕ್ಕಿ ವಿಶ್ರಾಂತಿ ಪಡೆಯಬೇಕು
ನನ್ನ ಮನೆಗೆ ನಾನು ಬೇಗ ಹೊರಡಬೇಕು


Leave a Reply

Back To Top