ಶಕುಂತಲಾ ಎಫ್ ಕೋಣನವರ ಗಜಲ್


ಮಾವಿನ ಚಿಗುರಲಿ ನಾಳೆಗೆ ಒಲವ ತೋರಣ  ಕಟ್ಟಬೇಕಿದೆ ಸಖ
ಬೇವಿನ ಎಸಳು ಏರಿಸುತ ಸಿಹಿಯ ಹೂರಣ ಅಟ್ಟಬೇಕಿದೆ ಸಖ

ಮಧುಮಾಸ ಕೋಗಿಲೆಯ ಹಾಡಿಗೆ ಹೃದಯ ಹೂವಾಗಿದೆ
ವಧುವಾಗಿ ಸಂಭ್ರಮಿಸಿದ ವಸುಧೆಗೆ ಕಾಣಿಕೆ ಕೊಡಬೇಕಿದೆ ಸಖ

ಹಕ್ಕಿಗಳ ಸಾಲು ಬಾನಂಗಳದಿ ರಂಗೋಲಿ ಬಿಡಿಸಿವೆ ನೋಡು
ಸೊಕ್ಕಿದ ಕಡಲಲೆಗಳ ಮೇಲೆ ಬೆರಳು ಹೆಣೆದು ಸಾಗಬೇಕಿದೆ ಸಖ

ಗಿಡ ಬಳ್ಳಿಗಳು ಹಸಿರುಡುಗೆಯ ಧರಿಸಿ ಸ್ವಾಗತಿಸಿವೆ ಋತುರಾಜನ
ಹುಡಿ ಎಬ್ಬಿಸುವ ಮಾರುತನ ಮಂದವಾಗೆಂದು ಕೂಗಬೇಕಿದೆ ಸಖ

ಯುಗಗಳು ಕಳೆದರೂ ಹಿಗ್ಗಿನಲಿ ಮುನ್ನುಗ್ಗುವುದಲ್ಲವೆ ಯುಗಾದಿ
ಸೊಗದ ಕಂಪಿದೆ ಶಕುಳ  ಮನತುಂಬ ಸುಖಿಸಿ ಹಾಡಬೇಕಿದೆ ಸಖ
—————————-

One thought on “ಶಕುಂತಲಾ ಎಫ್ ಕೋಣನವರ ಗಜಲ್

  1. ಅಡ್ಮಿನ್ ಅವರಿಗೆ ತುಂಬುಹೃದಯದ ಧನ್ಯವಾದಗಳು

Leave a Reply

Back To Top