“ಕಾರ್ಗಿಲ್ ವನಿತೆ…. ಗುಂಜನ್ ಸಕ್ಸೇನಾ”ವೀಣಾ ಹೇಮಂತ್ ಗೌಡ ಪಾಟೀಲ್, ಅವರ ಲೇಖನ

ಕಾರ್ಗಿಲ್ ವನಿತೆ…. ಗುಂಜನ್ ಸಕ್ಸೇನಾ

 ವಿಮಾನವನ್ನು ಹಾರಿಸಬೇಕು ಎಂಬ ಏಕೈಕ ಮಹದಾಕಾಂಕ್ಷೆ ಹೊಂದಿದ ಮಹಿಳೆಯೊಬ್ಬಳು ಪುರುಷ ಪ್ರಧಾನ ಮಿಲಿಟರಿ ವಾಯುಪಡೆ ಯೋಧರ ಗುಂಪಿನಲ್ಲಿ ಒಬ್ಬಳಾಗಿ ಸಾವಿರಾರು ಗಂಟೆಗಳ ಕಾಲ ಯುದ್ಧ ವಿಮಾನವನ್ನು ಹಾರಿಸಿದ ಭಾರತದ ಮೊದಲ ಪೈಲೆಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ. ಕಾರ್ಗಿಲ್ ಯುದ್ಧದಲ್ಲಿ ಮದ್ದು ಗುಂಡುಗಳ ಸಿಡಿತದ ನಡುವೆ ವೈರಿಗಳಿಂದ ಗಾಯಗೊಂಡ 900ಕ್ಕೂ ಹೆಚ್ಚು ಭಾರತೀಯ ಯೋಧರನ್ನು ರಕ್ಷಿಸುವಲ್ಲಿ ನಿರತಳಾದ ವೀರ ವನಿತೆ, 40ಕ್ಕೂ ಹೆಚ್ಚು ಬಾರಿ ತನ್ನ ಚೀತ ವಿಮಾನವನ್ನು ತುರ್ತು ಪರಿಸ್ಥಿತಿಗಳಲ್ಲಿ ಹಾರಿಸುತ್ತಾ ಯುದ್ಧ ದಲ್ಲಿ ಭಾಗಿಯಾದ ವೀರರಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸುವಲ್ಲಿ, ಗಾಯಗೊಂಡವರನ್ನು ರಕ್ಷಿಸುವಲ್ಲಿ ಮತ್ತು ವೈರಿ ಪಡೆಯವರು ನೆಲೆ ಮಾಡಿರುವ ಜಾಗಗಳನ್ನು ಗುರುತಿಸುವಲ್ಲಿ ಭಾರತೀಯ ಭೂಸೇನೆಯ ಯೋಧರ ಬೆನ್ನೆಲುಬಾಗಿ ತನ್ನ ಸ್ನೇಹಿತೆ ಕೇರಳ ರಾಜ್ಯದ ಇನ್ನೋರ್ವ ಫ್ಲೈಟ್ ಆಫೀಸರ್ ವಿದ್ಯಾ ರಾಜನರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಕಾರ್ಗಿಲ್ ವನಿತೆ ಎಂಬ ಹೆಸರನ್ನು ಪಡೆದ ವ್ಯಕ್ತಿ ಗುಂಜನ ಸಕ್ಸೇನ.

1975ರಲ್ಲಿ ಜನಿಸಿದ ಗುಂಜನ್ ಸಕ್ಸೇನಾ ತಂದೆ ಅನುಪ್ ಕುಮಾರ ಸಕ್ಸೇನಾ ಭೂಸೇನೆಯ ಲೆಫ್ಟಿನೆಂಟಾಗಿದ್ದರು. ತಾಯಿ ಗೃಹಿಣಿ. ಸಹೋದರ ಕೂಡ ಮುಂದೆ ಭೂಸೇನೆಯ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸಿದನು. ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಗುಂಜನ್ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿ 10ನೇ ತರಗತಿ ಮತ್ತು ಪಿಯುಸಿ ಗಳಲ್ಲಿ ತೇರ್ಗಡೆಯಾದಳು. ಮುಂದೆ ದೆಹಲಿಯ ಹಂಸರಾಜ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದ ಗುಂಜನ್  ಆಕಾಶದಲ್ಲಿ ವಿಮಾನ ಹಾರಿಸುವ ಮಹತ್ತರ ಆಕಾಂಕ್ಷೆಯನ್ನು ಚಿಕ್ಕಂದಿನಿಂದಲೇ ಹೊಂದಿದ್ದಳು.

ಇದಕ್ಕೆ ಸರಿಯಾಗಿ ಭಾರತೀಯ ವಾಯು ಸೇನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಯುದ್ಧವಿಮಾನ ಚಲಾಯಿಸಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಯಿತು. ತಂದೆಯ ಬೆಂಬಲದಿಂದ ಅರ್ಜಿ ಸಲ್ಲಿಸಿದ ಗುಂಜನ್ ಎಲ್ಲ ಪ್ರಾರಂಭಿಕ ಪರೀಕ್ಷೆಗಳಲ್ಲಿ ಪಾಸಾದಳು.ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಹೆಚ್ಚಿನ ತೂಕ ಮತ್ತು ನಿಗದಿತ ಮಾಪನಕಿಂತ ಒಂದು ಸೆಂಟಿಮೀಟರ್ ಕಡಿಮೆ ಎತ್ತರಗಳಲ್ಲಿ ನಪಾಸಾದಳು. ಅತ್ಯಂತ ನಿರಾಶಳಾದ ಗುಂಜನಳನ್ನು ಆಕೆಯ ತಂದೆ ಅನುಪ್ ಸಕ್ಸೇನಾ ಇನ್ನಿಲ್ಲದಂತೆ ಹುರಿದುಂಬಿಸಿದ ಪರಿಣಾಮವಾಗಿ ಕೇವಲ 15 ದಿನಗಳಲ್ಲಿ ಆಕೆ ತೂಕ ಇಳಿಸುವಲ್ಲಿ ಯಶಸ್ವಿಯಾದಳು, ಆದರೆ ಆಕೆಯ ಎತ್ತರ ನಿಗದಿತ ಎತ್ತರಕ್ಕೆ ಕೇವಲ ಒಂದು ಸೆಂಟಿಮೀಟರ್ ಕಡಿಮೆ ಇತ್ತು. ಆದರೆ ಆಕೆಯ ಕೈಗಳು ಮತ್ತು ಕಾಲ್ಗಳು ಅವಶ್ಯಕತೆಗಿಂತ ಒಂದುವರೆ ಸೆಂಟಿಮೀಟರ್ ಹೆಚ್ಚು ಉದ್ದವಿದ್ದ ಕಾರಣ ಆಕೆಗೆ ವಾಯುಪಡೆಯಲ್ಲಿ ಅವಕಾಶ ದೊರೆಯಿತು. ಮುಂದೆ ಆಕೆ ಉದಂಪುರ ಕ್ಯಾಂಪ್ನಲ್ಲಿ ಟ್ರೇನಿ ಪೈಲೆಟ್ ಆಫೀಸರ್ ಆಗಿ ಸೇರಿಕೊಂಡಳು.

ಮುಂದಿನದ್ದು ಹರಸಾಹಸ. ಪುರುಷ ಪಾರಮ್ಯದ ಸಮಾಜದಲ್ಲಿ ಮಹಿಳಾ ಟ್ರೇನಿಯಾಗಿ ಸೇರಿಕೊಂಡ ಈಕೆಗೆ ಪ್ರತ್ಯೇಕ ಕೋಣೆಯನ್ನೇನೂ ನೀಡಲಾಯಿತು. ಆದರೆ ಮಹಿಳೆಯರಿಗೆ ಬೇಕಾಗುವ ಯಾವುದೇ ರೀತಿಯ ವ್ಯವಸ್ಥೆಗಳು ಇಲ್ಲದ ಕೇವಲ ಪುರುಷರು ಮಾತ್ರ ಕಾರ್ಯನಿರ್ವಹಿಸುತ್ತಿದ್ದ  ಆ ಸಮಯದಲ್ಲಿ ಪ್ರತಿಯೊಂದು ಹೆಜ್ಜೆಗೂ ಆಕೆಗೆ ಅಡೆತಡೆಗಳು. ಮೊದಮೊದಲು ಆಕೆಯನ್ನು ಮಹಿಳೆ ಎಂಬ ಕಾರಣಕ್ಕೆ ನಿರ್ಲಕ್ಷಿಸಿದ, ಆಕೆಯ ಜೊತೆಗೆ ತರಬೇತಿ ಪಡೆಯಲು ನಿರಾಕರಿಸಿದ ಸಹೋದ್ಯೋಗಿಗಳ ಅಸಹಕಾರದಿಂದ ಬೇಸತ್ತ ಗುಂಜನ್ ಗೆ ಖುದ್ದು ಮೇಲಧಿಕಾರಿಗಳೇ ತರಬೇತಿ ನೀಡಿದರು. ಇದರ ಪರಿಣಾಮವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಆಕೆ ಯುದ್ಧ ವಿಮಾನ ಚಲಾಯಿಸುವ ಪರಿಣತಿಯನ್ನು ಗಳಿಸುವುದಲ್ಲದೆ ಕ್ಲಿಷ್ಟಕರ ಸಂದರ್ಭದಲ್ಲಿ ಲೀಲಾಜಾಲವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದಳು.

 ಇಷ್ಟಾದರೂ ಆಕೆಯೊಂದಿಗೆ ಸೋರ್ಟೀ(ನಿಗದಿತ ಸ್ಥಳದಿಂದ ಯುದ್ಧ ವಿಮಾನವನ್ನು ಚಲಾಯಿಸಿಕೊಂಡು ಅಪರಿಚಿತ ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ವಿಮಾನ ಹಾರಾಡಿಸಿ ಮತ್ತೆ ಮರಳಿ ಬರುವ ತರಬೇತಿ) ತರಬೇತಿಗೆ ಯಾವ ಪುರುಷ ಸಹೋದ್ಯೋಗಿಗಳು ಸಾತ್ ನೀಡುತ್ತಿರಲಿಲ್ಲ. ಇದರ ಜೊತೆಗೆ ಆಕೆಗೆ ಸೆಲ್ಯೂಟ್ ಮಾಡಬೇಕಾಗುತ್ತದೆ ಎಂದು ಆಕೆಗಿಂತ ಕೆಳ ಹಂತದ ನೌಕರರು ಆಕೆಯನ್ನು ತಪ್ಪಿಸಿ ಓಡಾಡುತ್ತಿದ್ದರು ಇದು ಆಕೆಯ ಆತ್ಮಾಭಿಮಾನಕ್ಕೆ ಬಲವಾದ ಪೆಟ್ಟನ್ನು ನೀಡುತ್ತಿತ್ತು.

 ಹೀಗೆ ಒಂದು ಬಾರಿ ಅತಿಯಾದ ನಿರಾಶೆಯನ್ನು ಅನುಭವಿಸಿದ ಗುಂಜನ್ ರಜೆ ಚೀಟಿಯನ್ನು ಬರೆದು ಪೋಸ್ಟ್ ಮಾಡಿ ಮನೆಗೆ ತೆರಳಿದಳು. ಆದರೆ ಆಕೆಗೆ ತರಬೇತಿ ನೀಡಿದ್ದ, ಆಕೆಯ ಸಾಮರ್ಥ್ಯ ಅರಿತಿದ್ದ ವಾಯುಪಡೆಯ ಮೇಲಧಿಕಾರಿ ಆಕೆಯ ರಜೆಯನ್ನು ತತ್ ಕ್ಷಣಕ್ಕೆ ರದ್ದುಗೊಳಿಸಿ, ತುರ್ತು ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದರು.

 ಅದು 1999ರ ಸಮಯ. ಕಾರ್ಗಿಲ್ ಯುದ್ಧ ಘೋಷಣೆಯಾಗಿತ್ತು. ಭಾರತದ ಭೂಸೇನೆಯ ಜೊತೆ ವಾಯು ಸೇನೆಯು ಯುದ್ಧದಲ್ಲಿ ಕಾರ್ಯ ಪ್ರವೃತ್ತವಾದ ನಿಮಿತ್ತ ಗುಂಜನ್ ಳನ್ನು ಕೂಡ ಕಾಶ್ಮೀರದ ಶ್ರೀನಗರ ಕ್ಯಾಂಪ್ಗೆ ಕಳುಹಿಸಿಕೊಟ್ಟರು. ಅಲ್ಲಿಯೂ ಕೂಡ ಮಹಿಳೆ ಎಂಬ ಕಾರಣಕ್ಕೆ ಆಕೆಯನ್ನು ಮರಳಿ ಕಳುಹಿಸಲು ಭಾರತದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸಿದರು.

 ಒಂದೊಮ್ಮೆ ಮೇಲಧಿಕಾರಿಗಳ ಆದೇಶವನ್ನು ಮೀರಿ ತುರ್ತು ಕರೆಯ ಮೇರೆಗೆ ಯುದ್ಧ ನಡೆಯುತ್ತಿದ್ದ ಕಣಿವೆಯಲ್ಲಿ ತನ್ನ ವಿಮಾನ ಚಲಾಯಿಸಿದ ಗುಂಜನ್ ಅಲ್ಲಿ ತನ್ನ ಮೇಲಧಿಕಾರಿಯನ್ನು ಮತ್ತಿತರ ಸೈನಿಕರನ್ನು ರಕ್ಷಿಸಿ ಅತ್ಯಂತ ಚಾಕಚಕ್ಯತೆಯಿಂದ ವೈರಿ ಪಡೆಗಳ ಹಿಡಿತಕ್ಕೆ ಸಿಲುಕದಂತೆ ತನ್ನ ವಾಹನವನ್ನು ಗಾಳಿಯಲ್ಲಿ ಉಡಾಯಿಸಿ ಸುರಕ್ಷಿತವಾಗಿ ಶ್ರೀನಗರ ಕ್ಯಾಂಪ್ ಗೆ ಮರಳಿದಳು. ಆಗ ಆಕೆಯ ಜೊತೆ ಕಾರ್ಯನಿರ್ವಹಿಸುತ್ತಿದ್ದ ಇನ್ನುಳಿದ 20 ವಾಯುಪಡೆಯ ಲೆಫ್ಟಿನೆಂಟ್ ಅಧಿಕಾರಿಗಳು ಆಕೆಯ ಸಾಹಸಮಯ ಉಡ್ಡಯನಕ್ಕೆ ಚಪ್ಪಾಳೆಯ ಮೂಲಕ ಗೌರವ ಸಲ್ಲಿಸಿ ಆಕೆಯನ್ನು ಸ್ವಾಗತಿಸಿದರು. ಇದು ಆಕೆಯ ಆತ್ಮ ಬಲ ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಮುಂದೆ ಸುಮಾರು 40ಕ್ಕೂ ಹೆಚ್ಚು ಬಾರಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಚೀತಾ hawk ಹೆಲಿಕಾಪ್ಟರ್ ನ್ನು ಚಲಾಯಿಸಿದ ಗುಂಜನ್ ಭೂಸೇನೆಯ ಯೋಧರಿಗೆ ಅವಶ್ಯವಿದ್ದ ಆಹಾರವನ್ನು, ಔಷಧಿಗಳನ್ನು ತಲುಪಿಸುವಲ್ಲಿ ಸಹಾಯ ಮಾಡಿದಳು. ಇದರ ಜೊತೆ ಜೊತೆಗೆ ಗಾಯಗೊಂಡ ಸೈನಿಕರನ್ನು ಆಸ್ಪತ್ರೆ ತಲುಪಿಸುವಲ್ಲಿ ಮತ್ತು ವೈರಿ ಪಡೆಯ ನೆಲೆಗಳ ಸುಳಿವನ್ನು ಗುರುತಿಸುವಲ್ಲಿ ಭೂ ಸೇನೆಗೆ ನೆರವಾದಳು.
ಕಾರ್ಗಿಲ್ ಯುದ್ಧದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಸಹೋದ್ಯೋಗಿ ವಿದ್ಯಾ ರಾಜನರೊಂದಿಗೆ ಕಾರ್ಯನಿರ್ವಹಿಸಿದ ಗುಂಜನ್ ಸಕ್ಸೇನಾಳಿಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಶೌರ್ಯ ವೀರ ಚಕ್ರವನ್ನು ನೀಡಿ ಗೌರವಿಸಿತು.1996 ರಿಂದ 2004 ರವರೆಗೆ ಸುಮಾರು ಎಂಟು ವರ್ಷಗಳ ಅವಧಿಯವರೆಗೆ ವಾಯು ಸೇನೆಯ ಲೆಫ್ಟಿನೆಂಟ ಆಗಿ ಕಾರ್ಯನಿರ್ವಹಿಸಿದ  ಗುಂಜನ್ ಸಕ್ಸೇನ 2004ರಲ್ಲಿ ಸೇವಾ ನಿವೃತ್ತಿ ಹೊಂದಿದರು. ವಾಯುಪಡೆಯ ವಿಂಗ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೌತಮ್ ನರೇನ್ ಅವರನ್ನು ಮದುವೆಯಾದ ಗುಂಜನ್ ಸಕ್ಸೇನ ಅವರು 2003ರಲ್ಲಿ ಮಗಳು ಪ್ರಜ್ಞಾಳಿಗೆ ಜನ್ಮವಿತ್ತಳು.

ವಿಮಾನ ಹಾರಿಸುವ ತನ್ನ ಮಹದಾಕಾಂಕ್ಷೆಯನ್ನು ಪ್ರಾಮಾಣಿಕತೆ,ನಿಷ್ಠೆ  ಮತ್ತು ಶ್ರದ್ದೆಯನ್ನು ಹೊಂದಿದ ಯೋಧಳಾಗಿ ಭಾರತ ಮಾತೆಯ ಹೆಮ್ಮೆಯ ಪುತ್ರಿಯಾದ ಗುಂಜನ್ ಸಕ್ಸೇನಾಳಂತಹ ಹೆಣ್ಣು ಮಕ್ಕಳು ಪ್ರತಿ ಮನೆಯಲ್ಲೂ ಹುಟ್ಟಲಿ ಎಂದು ಹಾರೈಸುವ


Leave a Reply

Back To Top