ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಭಗ್ನಪ್ರೇಮಿ ಭೂಮಿ
ತಬ್ಬಿದ ಕೈಗಳ
ಸ್ಪರ್ಶದ ಉತ್ಸುಕತೆಗೆ
ಹೊಕ್ಕುಳದ ವರ್ತುಲಕೆ
ರಂಗೋಲಿಯ ಚಿತ್ತಾರ
ಬಿಡಿಸಿದ
ಮುದ್ದಾದ ಚುಕ್ಕಿಗಳನಿಡುವ
ಬೆಂಡೆಯ ಬೆರಳುಗಳ
ಪ್ರತಿ ತಿರುವಿನಲೂ
ಎದೆ ಬಡಿತದ
ಪ್ರೀತಿ ಹಾಡಿನ ವಾದ್ಯವಾದೆ ನಾ
ನೂರರ ಗಡಿ
ದಾಟಿ ಸಾಗುತಿದ್ದ
ಶೃಂಗಾರದ ಊರ
ತಲುಪುವ ಅವಸರದ ತೀರುವ
ಇಂಗದ ದಾಹದಲ್ಲಿದ್ದ…
ಭಾವಮುಕ್ತ ಎನ್ನುವ ಸಾಲಿಗೆ
ಸೆರಗ ಜಾರಿಸಿ
ಬಂದಮುಕ್ತ ಮಾಡುವ
ಕರಗಳಿಗೆಳಿಗೆ ಶರಣೆನುತ್ತಾ
ನಾಚುವ ಕೆನ್ನೆ ಕೆಂಪಾಗಿಸಿ
ಅಮಲೇರಿದ ಕಣ್ಣುಗಳ
ನೋಡುವವನ
ರಂಗೇರಿಸಿದ ಆಟಕ್ಕೆ
ಅವನ ಪ್ರತಿ ಚಲನೆಗೆ
ಧನ್ಯತೆ ಹೇಳುವಾಗ..
ಜೊತೆಗೂಡಿದ
ಮಳೆ ಸಂಗೀತದ ಸಾಂಗತ್ಯ ನೀಡಿ
ವರ್ಷಧಾರೆಯ ಪ್ರಣಯಕೆ
ಸವಿ ಮುತ್ತುಗಳ ಪೋಣಿಸಲು
ಇಂಗದ ಪ್ರೇಮದ ನೆನಪುಗಳ
ಹೃದಯದೊಳಗಿನ
ಒಲವಿನ ಖಾತೆಗೆ ಜಮೆ ಮಾಡಿತು.
ಆದರೂ ನನ್ನ ಖಾತೆಯಿನ್ನೂ
ಖಾಲಿ ಖಾಲಿ
ಮಳೆ ಸುರಿದು
ಒಡಲಾಳ ಸೇರಿದಾಗ
ಲಾಭಕ್ಕೆ ಕಾದು ಕುಳಿತ ನಾನು
ಉದ್ಯಮಿಯಲ್ಲ
ನಿನ್ನ ಉಸಿರಿಗೆ
ಹಸಿರಾದ
ಭೂಮಿ
ಭಗ್ನ ಪ್ರೇಮಿ.
ಶೃತಿ ರುದ್ರಾಗ್ನಿ
ಚೆಂದದ ಸಾಲುಗಳು
Wow… So intense
So intense ….