ವೈಶಿಷ್ಟ್ಯಪೂರ್ಣ ದ್ವನಿಯ ಗಾಯಕ, ತಲತ್ ಮೊಹಮ್ಮದ್-ಸಾವಿತ್ರಿ ಸಿರ್ಸಿ ಅವರ ಬರಹ.

ಆಹ್ವಾನಿತ ಲೇಖನ

ಸಾವಿತ್ರಿ ಸಿರ್ಸಿ

ವೈಶಿಷ್ಟ್ಯಪೂರ್ಣ ದ್ವನಿಯ ಗಾಯಕ,

ತಲತ್ ಮೊಹಮ್ಮದ್

ಫಿರ್ ವಹೀ ಶಾಮ್, ವಹಿ ಗಮ್, ವಹಿ ತನ್ಹಾಯಿ”(ಜಹಾ ಆರಾ). ಕೇಳಿದಾಗಲೆಲ್ಲಾ ನನಗೆ ನೆನಪಾಗುವುದು, ನಿಸಾರ್ ಅಹಮದ್ ಅವರ, ‘ ಮತ್ತದೇ ಬೇಸರ, ಅದೇ ಸಂಜೆ, ಅದೇ  “. ಅವೆರಡರ ಸಾಹಿತ್ಯ. ಬೇರೆ,ಬೇರೆ. ಅದೆಂತಹ ಶಾಂತ, ನದಿಯಂತೆ ಹರಿಯುವ  ಧ್ವನಿ ತಲತ್ ಅವರದು. ನಮ್ಮ ಮನೆಯಲ್ಲಿ, ಅಣ್ಣ ತಂದಿದ್ದ ಅವರು ಹಾಡಿದ, ಆಗಿನ‌ ಕಾಲದ ಧ್ವನಿ ತಟ್ಟೆ ಇತ್ತು. Talath in blue mood” ಅದನ್ನು ಎಷ್ಟು ಬಾರಿ, ಕೇಳಿದರೂ ಮಧುರವೆನಿಸುತ್ತಿತ್ತು. ಒಮ್ಮೆ ಸಂಗೀತ ನಿರ್ದೇಶಕರೊಬ್ನರು ಹೇಳಿದ್ದರು. ಸಂಗೀತ, ಕೇಳಿದರೆ, ಕಾಲು ಕುಣಿಸುವುದಕ್ಕಿಂತ, ಹೃದಯ ತಟ್ಟುವಂತಿರಬಬೇಕು. ಅಂತಹ ಧ್ವನಿ ತಲತ್ ಅವರದ್ದು. 

ಶಾಮೆ ಗಂ ಕೀ ಕಸಮ್, ಚಿತ್ರ ಫೂಟ್ ಪಾತ್.

ಜಿಂದಗಿ ದೇನೆವಾಲೆ ಸುನ್, ಚಿತ್ರ ದಿಲ್ನಾದಾನ್

ಸಬ್ ಸೆ ಮಧುರ್ ಗೀತ್ , ಚಿತ್ರ ಪತಿತಾ

ಮೈ ದಿಲ್ ಹೂ, ಇಕ್ ಅರ್ಮಾನ್ ಭರಾ, ಚಿತ್ರ,ಅನ್ಹೋನಿ

ಮೈ ಪಾಗಲ್, ಮೇರಾ ಮನವಾ, ಚಿತ್ರ, ಆಶಿಯಾನಾ

ಜಾಯೆ ತೊ ಜಾಯೆ ಕಹಾ ಚಿತ್ರ, ಟ್ಯಾಕ್ಸಿ ಡ್ರೈವರ್

ಸಬ್ ಕುಚ್ ಲುಟಾಕೆ, ಹೋಶ್ ಮೆ, ಚಿತ್ರ ತರಾನಾ

ಹಮ್ಸೆ ಆಯಾ ನಾಗಯ, ಚಿತ್ರ ದೇಕ್ ಕಬೀರಾ ರೋಯಾ

ಆಹ್ಲಾದಕರ ಗೀತೆಗಳಾದ

ರಿಮ್, ಝಿಮ್ ಕೆ ಪ್ಯಾರೆ, ಪ್ಯಾರೆ ಗೀತ್, ಚಿತ್ರ ಉಸ್ನೆ ಕಹಾ ತಾ

ಜಲ್ ತೇ ಹೈ ಜಿಸ್ಕೇ ಲಿಯೇ ಚಿತ್ರ ಸುಜಾತ

ಇತನನ ಮುಜಸೆ ತೂ ಪ್ಯಾರ್ ಬಢಾ, ಚಿತ್ರ ಛಾಯಾ

ನೀಲಾ ಅಂಬರ್ ಝೂಮೆ ಧರ್ತಿಕೊ ಚೂಮೆ ಚಿತ್ರ ಏಕ್ ಗಾವ್ ಕಿ ಕಹಾನಿ

ಹೀಗೆ ಸುಮಧುರ ಗೀತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಟ್ಟು ೭೪೭ ಗೀತೆಗಳು, ತಲತ್ ಅವರ ಧ್ವನಿಯಲ್ಲಿ ಹರಿದುಬಂದಿದೆ. ಜೊತೆಗೆ  ೧೩ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಏಕ್ ಗಾವ್ ಕಿ ಕಹಾನಿ

ಡಾಕ್ ಬಾಬು

ವಾರಿಸ್

ದಿಲೆನಾದಾನ್

 ಚಲನಚಿತ್ರ ರಂಗದ ಗಾಯಕನಟ, ಎಂದು ಹೆಸರು ಗಳಿಸಿದ್ದರು

೧೯೨೪  ರಲ್ಲಿ ಲಕ್ನೋವಿನಲ್ಲಿ ಜನಿಸಿದ ತಲತ್, ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದರು. ಸಂಗೀತ ಕಲಿಯಲು ಮನೆಯಲ್ಲಿ,  ಪ್ರೋತ್ಸಾಹ ಕೊಡುತ್ತಿರಲಿಲ್ಲ. ಆದರೆ ಸಂಗೀತದ ಬಗ್ಗೆ ಒಲವಿದ್ದ ತಲತ್, ಸಂಗೀತದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಅವರ ಆಸಕ್ತಿ ಮನಗಂಡು, ಅವರನ್ನು ಮಾರಿಸ್ ಮ್ಯೂಸಿಕ್ ಕಾಲೇಜಿನಲ್ಲಿ, ದಾಖಲು ಮಾಡಿದರು., ಪಂಡಿತ್ ಎಸ್. ಸಿ. ಆರ್ ಭಟ್ ಅವರಿಂದ ತರಬೇತಿ ಪಡೆಯ ತೊಡಗಿದರು. ಆಗ ಅವರಿಗೆ ೧೬ ವರ್ಷ. ಅಗಲೇ ಆಲ್ ಇಂಡಿಯಾ ರೇಡಿಯೋವಿನಲ್ಲಿ, ಗಜಲ್ ಗಳನ್ನು ಹಾಡುತ್ತಿದ್ದರು.  ಆಗ HMV ಯವರು ತಲತ್ ಅವರ ಮೊದಲ ಡಿಸ್ಕ್ ಹೊರತಂದರು. ಅನಂತರ ಅವರು ಕಲ್ಕತ್ತೆಗೆ ತೆರಳಿ, ಚಲನಚಿತ್ರಗಳಿಗೆ  ಧ್ನನಿ ನೀಡ ತೊಡಗಿದರು. ಜೊತೆಗೆ ಚಲನಚಿತ್ರಗಳಲ್ಲಿ ಅಭಿನಯಿಸ ತೊಡಗಿದರು. 

೧೯೫೦ ರ ಹೊತ್ತಿಗೆ ಹಿಂದಿ ಚಲನಚಿತ್ರ ರಂಗದಲ್ಲಿ ಹೆಸರು  ಗಳಿಸ ತೊಡಗಿದರು.

ತಲತ್ ಅವರು ಪ್ರಸಿದ್ಧಿ ಪಡೆದಿದ್ದೇ ಅವರ ವೈಶಿಷ್ಟ್ಯ ಪೂರ್ಣ ಧ್ವನಿಯಿಂದ.  ಹಲವು ಸಂಗೀತ ನಿರ್ದೇಶಕರು  ಅದನ್ನು ಧ್ವನಿಯ ದೋಷ ಎಂದು ಭಾವಿಸಿದರು. ಆದರೆ ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಅದಕ್ಕೊಂದು, ಆಯಾಮ ನೀಡಿದರು. ತಲತ್ ಅವರ ಸಂದರ್ಶನದಲ್ಲಿ ಅವರೇ ಹೇಳಿದಂತೆ, ನನ್ನ ಧ್ವನಿಯಲ್ಲಿ ಒಂದು ರೀತಿಯ quiver  ಇದೆ. ಅದನ್ನು ಬಿಟ್ಟು ಹಾಡಿದರೆ ನನಗೇ ಇಷ್ಟವಾಗುವುದಿಲ್ಲ, ಎಂದಿದ್ದರು.

ಮುಂದೆ ಹೊಸ ಗಾಯಕರ ಪ್ರಾಬಲ್ಯ  ಹೆಚ್ಚಾದಂತೆ. ತಲತ್ ಅವರನ್ನು , ಗಜಲ್ ಮತ್ತು ದುಃಖ ಭರಿತ ಗೀತೆಗಳಿಗೆ ಸೀಮಿತ ಗೊಳಿಸಲಾಯಿತು. ಇದು ತಲತ್ ಅವರಿಗೆ ಬಹಳ ನೋವುಂಟು ಮಾಡಿತು. ಅವರ ಕೊನೆಯ ಗೀತೆ ೧೯೮೫ ರಲ್ಲಿ ರೆಕಾರ್ಡ್ ಮಾಡಲಾಯಿತು. ಅವರು ೧೯೯೮ ರಲ್ಲಿ, ತಮ್ಮ ೭೪ ನೇ ವಯಸ್ಸಿನಲ್ಲಿ ನಿಧನರಾದರು.

ಅವರು ನಿಧನರಾದ ಅನಂತರವೂ, ಅವರು ಸಂಗೀತ ಪ್ರಿಯರ ಮನಸ್ಸಿನಲ್ಲಿ  ಉಳಿದೇ ಇದ್ದಾರೆ. ಅವರ ವೈಶಿಷ್ಟ್ಯ ಪೂರ್ಣ ಧ್ವನಿಯನ್ನು ನಕಲು ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರ ಗೀತೆಗಳನ್ನು, ಸಂಗೀತ ಸ್ಪರ್ಧೆಗಳಲ್ಲಿ, ಕಾರ್ಯ ಕ್ರಮಗಳಲ್ಲಿ ಅನುಕರಿಸುವುದು  ಬಹಳ ಕಡಿಮೆ.


ಸಾವಿತ್ರಿ ಸಿರ್ಸಿ

3 thoughts on “ವೈಶಿಷ್ಟ್ಯಪೂರ್ಣ ದ್ವನಿಯ ಗಾಯಕ, ತಲತ್ ಮೊಹಮ್ಮದ್-ಸಾವಿತ್ರಿ ಸಿರ್ಸಿ ಅವರ ಬರಹ.

  1. ತಲತರ ದನಿಯನ್ನು ನಕಲು ಮಾಡುವದು ಸಾಧ್ಯವಿಲ್ಲ. ಈ ಮಾತು ಸತ್ಯ. ಸೂಕ್ಷ್ಮ ಕಂಪನದಿಂದ ಕೂಡಿದ, ನಾಜೂಕಿನ ಮಲ್ಲಿಗೆ ಹೂದಳದ ದನಿ. ರಾತ್ರಿಯ ನಿಶ್ಯಬ್ದ ಕತ್ತಲೆಯಲ್ಲಿ ಅವರ “ಜಲತೇ ಹೈ ಜಿಸಕೇ ಲಿಯೇ” ಹಾಡನ್ನು ಕೇಳುವ ಆನಂದಾನುಭವಕ್ಕೆ ಸಾಟಿಯಿಲ್ಲ.

Leave a Reply

Back To Top