ಅಂಕಣ ಬರಹ

ಜಸೀಲಾ ಕೋಟೆ

ಮಹಿಳೆ ಮತ್ತು ಸಮಾಜ

ಮಹಿಳೆ ಮತ್ತು ದೌರ್ಜನ್ಯ

ಅದಕ್ಕೆ ಇರುವ ಕಾನೂನಾತ್ಮಕ ಪರಿಹಾರಗಳು

ಮಹಿಳೆ ಮತ್ತು ದೌರ್ಜನ್ಯ ಅದಕ್ಕೆ ಇರುವ ಕಾನೂನಾತ್ಮಕ ಪರಿಹಾರಗಳು
ಜಶೀಲಾ ಕೋಟೆ
ಎಚ್.ಡಿ.ಕೋಟೆ :

ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾ, ಯತೈತಾಸ್ತುನ ಪೂಜ್ಯಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ’ ||
ಎಂಬುದು ಮನುಸ್ಮೃತಿ ಯಿಂದ ತೆಗೆದ ಪ್ರಸಿದ್ದ ಶ್ಲೋಕವಾಗಿದೆ. ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೈವತ್ವವು ಅರಳುತ್ತದೆ ಮತ್ತು ಎಲ್ಲಿ ಸ್ತ್ರೀಯರು ಅವಮಾನಿತರಾಗುತ್ತಾರೋ, ಅಲ್ಲಿ ಎಲ್ಲಾ ಕ್ರಿಯೆಗಳು ಎಷ್ಟು ಉದಾತ್ತವಾಗಿದ್ದರೂ ಫಲರಹಿತವಾಗಿರುತ್ತವೆ.


ಆದರೆ ನಿಜಕ್ಕೂ ಮನುಷ್ಯ ತನ್ನ ಹುಟ್ಟಿಗೆ ಕಾರಣರಾದ ತಾಯಿ, ಬದುಕಿಗೆ ಅಧಾರ್ಂಗಿಯಾಗುವ ಹೆಂಡತಿ, ಸಹೋದರತ್ವ ಪ್ರೀತಿ ಉಣಬಡಿಸುವ ಸಹೋದರಿ, ಹೀಗೆ ಹಲವಾರು ಪಾತ್ರಗಳನ್ನು ತನ್ನ ಬದುಕಿನ ಉದ್ದಕ್ಕೂ ಪಾತ್ರವಹಿಸುವ ಹೆಣ್ಣಿನ ಮೇಲೆ ದಿನ ನಿತ್ಯ ಶೋಷಣೆ ಮತ್ತು ದೌರ್ಜನ್ಯದಿಂದ ಹಿಂಸೆ ನಡೆಸುತ್ತಿರುವುದು ಖಂಡನೀಯ.
ಭಾರತ ದೇಶದಲ್ಲಿ ಹೆಣ್ಣಿಗೆ ಹೆಚ್ಚು ಬೆಲೆ ಮತ್ತು ಗೌರವ. ದೇವತೆಗಳಿಗೆ ಮತ್ತು ಪೃಕೃತಿಗೆ ಹೆಣ್ಣನ್ನು ಹೋಲಿಸಲಾಗುತ್ತದೆ. ದೇವತೆಗೆ ಹೋಲಿಸುವ ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವುದು ಎಷ್ಟು ಸರಿ ?. ದೌರ್ಜನ್ಯ ಎನ್ನುವ ಪದ ಮಗುವು ತಾಯಿ ಗರ್ಭದಲ್ಲಿ ಇರುವಾಗಲೇ ಶುರುವಾಗುತ್ತದೆ. ತಾಯಿ ಹೊಟ್ಟೆಯಲ್ಲಿರುವ ಮಗು ಗಂಡು ಅಥವ ಹೆಣ್ಣು ಎಂದು ನೋಡುವ ಮೂಲಕ ಲಿಂಗ ತಾರತಮ್ಯ ಪ್ರಾರಂಭವಾಗುತ್ತದೆ. ಹಿಂದಿನ ವರ್ಷಗಳಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ನಡೆಯುತ್ತಿತ್ತು. ಕಾನೂನು ಬಲಗೊಂಡ ನಂತರ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿಲ್ಲ.
ಇಲ್ಲಿಂದ ಪ್ರಾರಂಭವಾಗುವ ಹೆಣ್ಣಿನ ಮೇಲಿನ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯವಾಗಿ ಕುಟುಂಬದ ಒಳಗಡೆಯಿಂದ ಶುರುವಾಗುತ್ತದೆ ಶಿಕ್ಷಾರ್ಹ ಅಪರಾಧವಾದ ಈ ದೌರ್ಜನ್ಯಗಳಿಗೆ ಶಿಕ್ಷೆ ಏನೆಂದು ಜನಗಳಿಗೆ ಗೊತ್ತಿದೆ. ಸಮಾಜಕ್ಕೆ ತಿಳುವಳಿಕೆ ಇದೆ. ಕಾನೂನು ಎಂದು ಏನು ತಿಳಿದಿದೆ. ಆದರೂ ಇಂತಹ ದೌರ್ಜನ್ಯದ ಪ್ರಕರಣಗಳು ಹೆಣ್ಣಿನ ಮೇಲೆ ದಿನ ನಿತ್ಯ ನಡೆಯುತ್ತಲೇ ಇದೆ. ಈ ದೌರ್ಜನ್ಯಗಳನ್ನು ನಿಲ್ಲಿಸಲು ದೇಶದಲ್ಲಿ ಬಲಿಷ್ಠವಾದ ಕಾನೂನು ಇದೆ. ಆದರೂ ಇಂತಹ ದೌರ್ಜನ್ಯಗಳನ್ನು ನಿಲ್ಲಿಸಲಾಗುತ್ತಿಲ್ಲ. ಇನ್ನೂ ಹೆಚ್ಚಿನ ನೋವಿನ ವಿಷಯ ಏನೆಂದರೆ, ಸಮಾಜದಲ್ಲಿ ದಿನ ನಿತ್ಯ ನಡೆಯುತ್ತಿರುವ ಎಷ್ಟೋ ದೌರ್ಜನ್ಯಗಳು ಆಚೆಗೆ ಬರುವುದೇ ಇಲ್ಲ. ಇಂತಹ ಪ್ರಕರಣಗಳಲ್ಲಿ ಅಕ್ಷರಶಃ ಆ ಮಹಿಳೆ ದಿನ ನಿತ್ಯ ಸತ್ತಂತೆ ಜೀವನ ಮಾಡುತ್ತಿರುತ್ತಾಳೆ. ತನ್ನ ನೋವನ್ನು ಯಾರಿಗೂ ಹೇಳುವುದೇ ಇಲ್ಲ.
2 ನೇ ಶತಮಾನದಲ್ಲಿ ಬಸವಣ್ಣನವರು, ಅವರ ವಚನಗಳಲ್ಲಿ ವಚನ ಸಾಹಿತ್ಯದ ಮೂಲಕ ಅದರಲ್ಲೂ ದಲಿತ ಮಹಿಳೆಯನ್ನು ತನ್ನ ತಾಯಿ, ಅಕ್ಕ ಎಂದು ಕರೆದಿದ್ದಾರೆ. ಎನ್ನ ತಾಯಿ ನಿಂಬವ್ವ ನೀರ ನೆನೆದಂಬಳು ಎನ್ನಕ್ಕ ಕಂಚಿಯಲ್ಲಿ ಬಾಣಸವ ಮಾಡವಳು ಎಂದಿದ್ದಾರೆ.
ತನ್ನ ಒಳಗಿದ್ದ ತನುವ ಗೆದ್ದಳು. ಮನದೊಳಗಿದ್ದು ನಮವ ಗೆದ್ದಳು. ಅಕ್ಕನ ಶ್ರೀಪಾದಕ್ಕೆ ನಮೋ ಎನ್ನುತ್ತಾನೆ ಚೆನ್ನಬಸವಣ್ಣ. ಹೀಗೆ ಬಸವಣ್ಣನವರು ಮತ್ತು ಚೆನ್ನಬಸವಣ್ಣನವರು ತಮ್ಮ ವಚನ ಸಾಹಿತ್ಯದಲ್ಲಿ, ಸಮಾಜದಲ್ಲಿ ಮಹಿಳೆಯ ಪಾತ್ರ ಮತ್ತು ಅವಳ ಹಿರಿಮೆಗಳನ್ನು ಹಾಗೂ ಒಂದು ಕುಟುಂಬಗಳಲ್ಲಿ ಮಹಿಳೆಯ ಪಾತ್ರ ಎಷ್ಟಿರುತ್ತದೆ ಎಂದು ತಿಳಿಸಿದ್ದಾರೆ.
ಆದರೂ ಇಂದಿಗೂ ಸಮಾಜದಲ್ಲಿ ಹೆಣ್ಣಿನ ಮೇಲೆ ಆಸೀಡ್ ಎರಚುವುದು, ಲೈಂಗಿಕ ದೌರ್ಜನ್ಯ ಮಾಡಿ ಕೊಲೆ ಮಾಡುವುದು, ವರದಕ್ಷಿಣೆ ಹಿಂಸೆ ಕೊಟ್ಟು ಸಾಯಿಸುವುದು, ಹಾಗೂ ಕೌಟುಂಬಿಕ ಹಿಂಸೆಯಿಂದ ಮಹಿಳೆಯನ್ನು ನರಳಿಸುವುದು ಇವೆಲ್ಲವೂ ದಿನ ನಿತ್ಯ ಮುಂದುವರೆಯುತ್ತಲೇ ಇದೆ. ಸಮಾಜ ತನ್ನನ್ನು ತಾನು ಜ್ಞಾನದಿಂದ ಅರಿಯದೆ ಮನಪರಿವರ್ಗನೆ ಆಗದೆ ಈ ದೌರ್ಜನ್ಯಗಳನ್ನು ನಿಲ್ಲಿಸುವುದು ಹೇಗೆ ಸಾಧ್ಯ.
ಆದರೂ ಇದಕ್ಕಿರುವ ಕಾನೂನಾತ್ಮಕ ಪರಿಹಾರಗಳನ್ನು ತಿಳಿಯೋಣ, 2005ರ ಮಹಿಳಾ ಕೌಟುಂಬಿಕ ಸಂರಕ್ಷಣಾ ಕಾಯಿದೆ ವರದಕ್ಷಿಣೆ ನಿಷೇಧಕಾಯ್ದೆ ಫೋಕ್ಸೋ 2012ರ ಕಾಯ್ದೆ ಬಾಲ್ಯವಿವಾಹ ನಿಷೇಧ ಕಾಯ್ದೆ ನಿರ್ಭಯ ಕಾಯ್ದೆ, ಮಹಿಳಾ ಸಂರಕ್ಷಣಾ ಕಾಯ್ದೆ ಮಹಿಳಾ ಆಯೋಗ, ಸಖಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಂತ್ವನ ಕೇಂದ್ರ ಹೀಗೆ ಇಂತಹ ಕಾಯ್ದೆಗಳನ್ನು ಜಾರಿಗೆ ತಂದಿರುವ ಸರಕಾರ, ಮಹಿಳೆಯರ ಸಂರಕ್ಷಣೆಗೆ ನಿಂತಿದೆ.
ದೌರ್ಜನ್ಯಕ್ಕೆ ಇಳಗಾದ ಮಹಿಳೆ, ನ್ಯಾಯಾಲಯದ ಮೂಲಕ ತನ್ನ ನೋವು ದುಃಖ ದುಮ್ಮಾನಗಳಿಗೆ ನೇರವಾಗಿ ಉಚಿತ ಕಾನೂನು ಪ್ರಾಧಿಕಾರಗಳ ಸೇವೆಯನ್ನು ಪಡೆಯಬಹುದು. ತುತರ್ು ಸಮಸ್ಯೆಗೆ ಪೊಲೀಸ್ ಸಹಾಯವಾಣಿ 112 ನ್ನು ಸಂಪಕರ್ಿಸಬಹುದು.  
ಒಟ್ಟಾರೆಯಾಗಿ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಹೆಣ್ಣು ತನ್ನ ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡು, ಆಥರ್ಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಇತರ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಚಾಪು ಮೂಡಿಸಿ, ನಾನು ಯಾರಿಗೂ ಕಮ್ಮಿ ಇಲ್ಲ ಎಂದು ತನ್ನ ಸಾಧನೆಯನ್ನು ತೋರಿಸಿ ನೆಗೆ ಬೀರಿದ್ದಾಳೆ. ಬದುಕುವ ಉತ್ಸಾಹ ಮತ್ತು ಹುಮ್ಮಸ್ಸು ನಮ್ಮನ್ನುಪುಟಿದೇಳುವಂತೆ ಮಾಡಿದಾಗ ಎಲ್ಲಾ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಹಲವಾರು ಮಹಿಳಾ ಸಾಧಕರು ಮಾಡಿ ತೋರಿಸಿದ್ದಾರೆ. ಇಂತಹ ಅನೇಕ ಮಹಿಳೆಯರು
ಸಾಧಿಸಿ ತೋರಿಸಿ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ನಾವು ಮಹಿಳೆಯರು ಪುಟಿದೇಳುವ ನೀರಿನ ಚಿಲುಮೆಯಂತೆ ನಮ್ಮದೇ ಹಾದಿಯನ್ನು ನಾವೇ ಸೃಷ್ಟಿಸಿ, ಸ್ವಾಭಿಮಾನದಿಂದ ಬದುಕೋಣ.


Leave a Reply

Back To Top