ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಸಂಪೂರ್ಣ ಮತ್ಲಾಗಜಲ್

ಉದಯ ರವಿಯ ಕಿರಣಕೆ ಹೂ ಅರಳುವಂತೆ ನೀ ಗಜಲ್
ಸಂಜೆ ಬಾನಲಿ ಕೆಂಬಣ್ಣ ದಿಗಂತದಿ ಹರಡುವಂತೆ ನೀ ಗಜಲ್

ನಭದಿ ಬಿಳಿಮೋಡ ವಿವಿಧ ರೂಪಗಳ ತಳೆದಂತೆ ನೀ ಗಜಲ್
ಎರಡೇ ಸಾಲಲಿ ಹಲವು ಅರ್ಥಗಳು ಹೊಳೆವಂತೆ ನೀ ಗಜಲ್

ವಕ್ರಚಂದ್ರ’ ತಾ ಬೆಳೆದು ಪೂರ್ಣ ಪ್ರಜ್ವಲಿಸುವಂತೆ ನೀ ಗಜಲ್
ಕಾಳಿದಾಸನ ಮೇಘ ಸಂದೇಶಕೆ ಸರಿ ಹೋಲುವಂತೆ ನೀ ಗಜಲ್

ಬೇಸಿಗೆಯ ಹೊಂಗೆ ನೆರಳಿನ ತಂಪು ನೆನಪಿಸುವಂತೆ ನೀ ಗಜಲ್
ನೀಲಾಕಾಶದಿ ಸಣ್ಣ ತಾರೆಯೂ ಹೆಚ್ಚು ಮಿನುಗುವಂತೆ ನೀ ಗಜಲ್

ಹೋಲಿಯಲಿ ಬಣ್ಣಗಳು ವಿವಿಧ ಭಾವ ಮೂಡಿಸಿದಂತೆ ನೀ”ಗಜಲ್
ಕೃಷ್ಣಾ! ಏಲ್ಲಾ ಗೋಪಿಕೆಯರಲ್ಲಿ ಗೋಪಾಲ ಇರುವಂತೆ ನೀ ಗಜಲ್.


ಬಾಗೇಪಲ್ಲಿ

Leave a Reply

Back To Top