ಪರಿಸರ ಸಂಗಾತಿ
ಸುಮನತನಯ ದೇಸಾಯಿ
ಪರಿಸರ ಸಂರಕ್ಷಣೆಯ ಮಹತ್ವ
ಹಾಗೂ
ಮುನ್ನೆಚ್ಚರಿಕೆಯ ಕ್ರಮಗಳು..!!!
ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಕ್ರಮಬದ್ಧವಾಗಿ, ಕಾಳಜಿಯಿಂದ, ಜವಾಬ್ದಾರಿಯುತವಾಗಿ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾಕೆಂದರೆ ಇತ್ತೀಚೆಗೆ ಆಗುತ್ತಿರುವ ಪ್ರಕೃತಿಯ ಮಾರಣಾಂತಿಕ ವಿಕೋಪಗಳು, ಅವಘಡಗಳು ನಾವು ಅಕ್ಷರಶಃ ತತ್ತರಸಿ ಹೋಗಲು ಮುಖ್ಯ ಕಾರಣವಾಗಿವೆ. ನಾವು ಮಾಡಿರುವ ಮತ್ತು ಮಾಡುತ್ತಿರುವ ಪರಿಸರ ನಾಶಕ್ಕೆ ಇಡೀ ಭೂಮಂಡಲದ ಚಿತ್ರಣವನ್ನು ಬದಲಾಯಿಸುತ್ತಿದೆ. ನಾವಿಲ್ಲಿ ಗಮನಿಸಬೇಕಾದ ಒಂದು ಅಂಶವೇನೆಂದರೆ, ಸುಮಾರು 15-20 ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚು ಜೋರಾಗಿ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಡದೆ ಮಳೆ ಸುರಿಯುತ್ತಿದ್ದರೂ ಕೂಡಾ ಮಳೆಯ ಕಾರಣದಿಂದ ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಕಳೆದುಕೊಳ್ಳುವುದಾಗಲಿ, ಕಿಲೋಮೀಟರ್‌ಗಳಷ್ಟು ನಡೆಯುವ ದೂರ ಇದ್ದರೂ ಶಾಲೆಗಳಿಗೆ ರಜೆ ಸಿಗುವುದಾಗಲಿ ಯಾವುದೂ ಇರಲಿಲ್ಲ.
ಆದರೆ ಈಗ ಯಾಕೆ ಹೀಗೆ..? ಹತ್ತು ದಿನ ಬಂದ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣ ನಾವೇ ಅಲ್ಲವೇ.!? ಇಂದು ಆಕ್ಸಿಜನ್ ಗಾಗಿ ಪರಿತಪಿಸುತ್ತಾ ಒದ್ದಾಡುತ್ತಿರುವುದು ಶೋಚನೀಯ ಸಂಗತಿಯಲ್ಲವೇ..? ಶುದ್ಧ ಗಾಳಿಯ ಕೊರತೆಯನ್ನು ಎದುರಿಸುವಷ್ಟರ ಮಟ್ಟಿಗೆ ನಾವಿಂದು ಪರಿಸರವನ್ನು ಹಾಳು ಮಾಡಿದ್ದೇವೆ.
ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡಿದೆವು, ನೀರು ಹರಿಯಬೇಕಾದ ಜಾಗವನ್ನೆಲ್ಲಾ ರಸ್ತೆಗಾಗಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ಮಾಡಿದೆವು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ಮನುಷ್ಯರು ಮುಚ್ಚಿದಾಗ ರಸ್ತೆಗಳು ನದಿಗಳಂತಾದವು. ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು.
ಹೀಗಾಗಿ ಇಂದು ಮನುಷ್ಯನು ಹೆಚ್ಚಿನ ಸೌಕರ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ್ದಾನೆ. ಪರಿಣಾಮ ಬೇಕಾದಷ್ಟು ಮಳೆ ಬರದಂತಾಯಿತು, ಮಳೆ ಬಂದರೂ ಇಡೀ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದ್ದು ನಾವೇ ಅಲ್ಲವೇ.!
ಪ್ರಕೃತಿಯನ್ನು ನಾವು ನಾಶ ಮಾಡಿದ ಕಾರಣ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ.
ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ, ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ.
ಪರಿಸರ ಮಾಲಿನ್ಯದ ವಿಧಗಳು: ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹೀಗೆ ಹಲವು ಪ್ರಕಾರದ ಮಾಲಿನ್ಯದಿಂದ ಜಗತ್ತು ತತ್ತರಿಸಿ ಹೋಗಿದೆ.
ಅದರಲ್ಲೂ ವಾಯುಮಾಲನ್ಯವು ಜೀವಜಗತ್ತಿಗೆ ಕಂಟಕವಾಗಿ ಮಾರಕವಾಗಿ ಪರಿಣಮಿಸಿದೆ. ವಾಯು ಜೀವಧಾತು. ಗಾಳಿಯಿಲ್ಲದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ವಾಯು ವಿಷವಾಗುತ್ತಿದೆ. ಹಾಗೆಯೇ ಶುದ್ಧನೀರು ಇಲ್ಲದಂತಾಗಿದೆ. ಕುಡಿಯುವ ನೀರಿಗಾಗಿ ಯುದ್ದ ಮಾಡಬೇಕಾದ ಪರಿಸ್ಥಿತಿ ಬಂದರೂ ಬರಬಹುದು.
ಹಾಗೆಯೇ ನೈತಿಕ ಅದಃಪತನವೂ ಕೂಡಾ ಪ್ರಕೃತಿಯ ಮುನಿಸಿಗೆ ಕಾರಣವಾಗುತ್ತದೆ ಎಂಬುವುದರಲ್ಲಿ ಸಂದೇಹವೇ ಇಲ್ಲ.
ನೈತಿಕ ಅದಃಪತನ:-
ಇತ್ತೀಚೆಗೆ ವಾಟ್ಸಾಪ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿದ ಅನೇಕಾನೇಕ ಅಂಶಗಳು ನೈತಿಕತೆಯೂ ಕೂಡಾ ಪ್ರಕೃತಿ ವಿಕೋಪಕ್ಕೆ ಪ್ರಮುಖ ಕಾರಣವಾಗತ್ತದೆ ಎಂಬುದನ್ನು ಎತ್ತಿ ತೋರಿಸುವಂತಿದೆ. ಇಂತಹ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ಸಂದರ್ಭದಲ್ಲಿ ಮಾನವೀಯತೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ಇಂದಿನ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯು ಎಷ್ಟೇ ಮುಂಚೂಣಿಯಲ್ಲಿದ್ದರೂ ಕೂಡಾ ನೈಸರ್ಗಿಕ ವಿಕೋಪಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವಷ್ಟು ಮಾನವ ಇನ್ನೂ ಬೆಳೆದಿಲ್ಲ /ಬೆಳೆಯೋದು ಇಲ್ಲಾ…!!!
ಸರ್ವಧರ್ಮ ಸಮನ್ವಯ ಮತ್ತು ಸಮಾನತೆ ನಿಸರ್ಗ ಕಲಿಸಿದ ಬಹುದೊಡ್ಡ ಪಾಠ. ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತರಲ್ಲರಿಗೂ ಪ್ರಳಯದಂತಹ ಸಮಯದಲ್ಲಿ ಗಂಜಿಕೇಂದ್ರವೇ ಮದ್ದು.
ನಿಮ್ಮ ತೋಳ್ಬಲ ಮತ್ತು ಜ್ಞಾನಬಲ ಎಷ್ಟೇ ವಿಶಾಲ, ಬಲಿಷ್ಠ & ಆಗಾಧವಾಗಿದ್ದರೂ ಕೂಡಾ
ದೈವಬಲದ ಮುಂದೆ ಇವೆಲ್ಲಾ
ಶೂನ್ಯ, ಕೆಲಸಕ್ಕೆ ಬಾರದಂತಾಗುತ್ತವೆ.
ಎಲ್ಲೆಲ್ಲಿ ಮಾನವ ಸಂಕುಲ/ಪ್ರಾಣಿ ಸಂಕುಲ ಅಪಾಯಕ್ಕೆ ಒಳಗಾಗುತ್ತದೆಯೋ,
ಅವಾಗ ಮಾತ್ರ ಈ
ದೇಶದ ಸೈನಿಕರು, ಆರಕ್ಷಕರು, ಅಗ್ನಿಶಾಮಕರು, ಆಸ್ಪತ್ರೆಯ ವಾಹನ ಚಾಲಕರು ನೆನಪಾಗುತ್ತಾರೆ ಹೊರೆತು,ಉಳಿದ ಸಮಯದಲ್ಲಿ ಅವರ ಕರ್ತವ್ಯ ಮತ್ತು ಯೋಗ್ಯತೆಗಳೆರೆಡೂ ನಿಶ್ಪ್ರಯೋಜಕ ಎನ್ನುವಂತಹ ಮನೋಭಾವ ದೂರವಾಗಬೇಕಾಗಿದೆ. ಕೋಟಿ ಕೋಟಿ ರೂಪಾಯಿಗಳು ಇದ್ದರೇನಂತೆ..? ಮಾನವೀಯತೆ, ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ.
ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನಧರ್ಮ ಎಂಬ ಹುಟ್ಟು ಅವಶ್ಯಕ.
ಸೃಷ್ಟಿಕರ್ತನ ಸೃಷ್ಟಿಯಲ್ಲಿ ಮನುಷ್ಯ ಮತ್ತು ಮೂಕ ಪ್ರಾಣಿಗಳ
ದೇಹ,ಗಾತ್ರ, ಆಕಾರ ಮತ್ತು ಬುದ್ಧಿಶಕ್ತಿಯಲ್ಲಿ ವ್ಯತ್ಯಾಸವಿದ್ದರೂ ಕೂಡ, ಬಾಯಾರಿಕೆ,ಹಸಿವು, ನೋವು ಮತ್ತು ಜೀವ ಒಂದೇಯಾಗಿದೆ. ಮೂಕ-ಪ್ರಾಣಿಗಳ ಮೇಲೆ ಕರುಣೆ ಮತ್ತು ದಯೆ ಇರಲಿ. ಕಣ್ಣಿಗೆ ಕಂಡ ಮೊದಲ ದೇವರು ತಂದೆ-ತಾಯಿಗಳಾದರೆ, ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸಿದ
ದೇಶದ ಸೈನಿಕರು & ಆರಕ್ಷಕರು,
ನೆರಳು ನೀಡಿದ ಆಶ್ರಯದಾತರು,
ಅನ್ನನೀಡಿದ ಅನ್ನದಾತರು/ರೈತರು,
ನಮ್ಮ ನೆರವಿಗೆ ಧಾವಿಸಿದ ದಾಸೋಹಿಗಳು ಭೂಮಿಯ ಮೇಲಿನ ನಿಜವಾದ ದೇವರುಗಳು.
ತಂದೆ-ತಾಯಿಯ ಮಾತಿಗಿಲ್ಲದ ಕಿಮ್ಮತ್ತು,
ಹಿರಿಯರಿಗಿಲ್ಲದ ಮರ್ಯಾದೆ,
ಹೆಣ್ಣಿನ ಕಣ್ಣೀರಿಗಿಲ್ಲದ ಬೆಲೆ,
ಗುರುವಿಗಿಲ್ಲದ ಗೌರವ,
ಪ್ರಾಣಿ-ಪಕ್ಷಿಗಳ ಮೇಲಿಲ್ಲದ ದಯೆ,
ಭವಿಷ್ಯದಲ್ಲಿ ಮತ್ತೊಂದು ಕ್ರೂರ ಮತ್ತು ಘನಘೋರ ಘಟನೆಗೆ ನಾಂದಿಯಾಗಬಲ್ಲದು.
ಬೌದ್ಧಿಕ ಪರಿಹಾರಗಳು:-
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಸರವಾದಿಗಳೆಲ್ಲ ಒಟ್ಟಿಗೆ ಸೇರಿ ಮುಂದಿನ ಪೀಳಿಗೆಗೆ ಈ ಭೂಮಂಡಲದ ರಕ್ಷಣೆಯನ್ನು ಅರಿತುಕೊಂಡು ಪರಿಸರದ ಬಗ್ಗೆ ಅರಿವು ಮೂಡಿಸುವ ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲು ಸನ್ನದ್ಧರಾದರು.ಈ ಒಂದು ಆಚರಣೆಯ ಫಲಶೃತಿಯಾಗಿ ಇಂದು ಜಗತ್ತಿನಾದ್ಯಂತ ಪರಿಸರದ ರಕ್ಷಣೆಯಾಗುತ್ತಿದೆ. ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿ ಗಿಡಮರಗಳನ್ನು ನೆಟ್ಟು ಸ್ವಲ್ಪ ಮಟ್ಟಿಗಾದರೂ ಕಾರ್ಯಪ್ರವೃತ್ತರಾಗಿದ್ದಾರೆ.
ಪರಿಸರ ದಿನಾಚರಣೆಯ ಮಹತ್ವ ಹಾಗೂ ಪರಿಣಾಮ:-
ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನಾಚರಣೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕು

ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನಾಚರಣೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.
1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ ನಂತರ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹ ಘನೋದ್ದೇಶಗಳು ಪರಿಸರ ಆಚರಣೆಯಲ್ಲಿ ಸೇರಿವೆ.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರ ಉಸಿರಾಗಬೇಕು. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ.
ಪರಿಸರದ ಶಿಶುಗಳೆನಿಸಿದ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರವು ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು, ನಮ್ಮ ಕ್ರೂರ ಕೆಲಸ-ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉಷ್ಣಾಂಶ, ಮಣ್ಣಿನ ಮಾಲಿನ್ಯ , ಅರಣ್ಯ ನಾಶ ಹೀಗೆ ಒಂದೇ, ಎರಡೇ ಪರಿಸರದಲ್ಲಿ ಇಂದು ಉಂಟಾಗಿರುವ ಏರುಪೇರುಗಳು. ಈ ಏರುಪೇರುಗಳಿಗೆ ಕಾರಣ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದ ಫಲವಾಗಿದ್ದು, ಅದರ ಪರಿಣಾಮವಾಗಿ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ.
ಈ ಎಲ್ಲದಕ್ಕೂ ಕಾರಣ ಪರಿಸರದ ಬಗ್ಗೆ , ಅದರ ಪ್ರಾಮುಖ್ಯತೆ ಬಗ್ಗೆ ನಮಗೆ ಸರಿಯಾದ ಅರಿವು ಇಲ್ಲದಿರುವುದೇ ಆಗಿದೆ. ಆದ್ದರಿಂದಲೇ ನಮ್ಮೆಲ್ಲರಲ್ಲೂ ಜಾಗೃತಿ ಮೂಡಿಸಲು, ಪರಿಸರದ ಪರ ನಮ್ಮ ಕರ್ತವ್ಯ ಪಾಲಿಸಲು, ನಮ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ ಮುಂದಿನ ಪೀಳಿಗೆಯ ಉಜ್ವಲವಾದ ನಾಳೆಗಳಿಗಾಗಿ, ಇಂದಿನ ಮಕ್ಕಳಿಗೆ, ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಲು ಆಚರಿಸುವ ದಿನವೇ ವಿಶ್ವ ಪರಿಸರ ದಿನ. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ.
ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. “ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ.” ಅಂದಾಗ ಮಾತ್ರ ನಾವು ಸುಖ ಸಂತೋಷದಿಂದ ಬದುಕಲು ಸಾದ್ಯ. ಅದಕ್ಕಾಗಿ ನಾವೆಲ್ಲರೂ ಇಂದೇ ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲೋಣ ಬನ್ನಿ..!! ಎಲ್ಲರೂ ಒಂದಾಗಿ ಮುಂದಿನ ಪೀಳಿಗೆಯ ಉಳುವಿಗಾಗಿ ಪರಿಸರವನ್ನು ಉಳಿಸೋಣ, ಸಂರಕ್ಷಿಸೋಣ. ಗಿಡಮರಗಳನ್ನು ನೆಟ್ಟು ಪರಿಸರವನ್ನು ಸಮೃದ್ಧವಾಗಿಸಲು ಇಂದೇ ಭೀಷ್ಮ ಪ್ರತಿಜ್ಞೆ ಮಾಡೋಣ ಬನ್ನಿ…!!!
ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.