ಜಯಶ್ರೀ ಭ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಜಯಶ್ರೀ ಭ ಭಂಡಾರಿ.

ಗಜಲ್

ಬಯಲ ಸಂತೆಯಲಿ ಅನುರಾಗ ಖರೀದಿಸಿ ಜಾರಿದೆಯಾ ನೀನು
ಮಿಲನ ಸಮಯದಲಿ ಜಗಳ ಮಾಡಿಕೊಂಡು ದೂರ ಸರಿದೆಯಾ ನೀನು

ಆರಾಧನೆಯ ಸಂದರ್ಭದಲಿ ಮೌನ ವಿರಾಗಿಯಾಗಿ ಹೋದುದು ಸರಿಯೇ
ಸಾಧನೆ ಮೆರೆದು ಸ್ನೇಹವ ಕಡಿದು ಹುಡುಕುವ ಪ್ರಯತ್ನ ತೋರಿದೆಯಾ ನೀನು

ಬಾಳಿನ ತೋಟದಿ ಸುಂದರ ಪುಷ್ಪಗಳು ಅರಳಲಿಲ್ಲವೆಂಬ ನೋವು
ಮುಳ್ಳಿನ ಬೇಲಿಯ ಮೇಲೆ ಬಟ್ಟೆ ಹರಡಿ ಕುಹಕದ ನಗೆ ಬೀರಿದೆಯಾ ನೀನು

ಸಂಗಾತಿ ಸರಿದಾರಿಗೆ ಬರದಿರೆ ಗೋಳಿನ ಕಥೆ ಯಾಗುವುದು ದಿನವು
ಭಂಗ ಬರದಂತೆ ಜೋಡಿಯಾಗಿ ನಡೆಯುವ ನಿಷ್ಠೆಯ ಮೀರಿದೆಯಾ ನೀನು.

ಸಾಂಗತ್ಯದಲಿ ಬಿರುಕು ಮೂಡಲು ಮನವು ಕೊರಗುವುದು ಜಯಾ
ಸಾರಥ್ಯದಲ್ಲಿ ಸಾರ್ಥಕತೆ ಬೇಡಲು ಕುಂಟು ನೆಪವೊಡ್ಡಿ ದೂರಿದೆಯಾ ನೀನು 


ಜಯಶ್ರೀ ಭ ಭಂಡಾರಿ.

Leave a Reply

Back To Top