ಕಾವ್ಯ ಸಂಗಾತಿ
ಜಿತೇಂದ್ರ ಕುಮಾರ್
ಮನದ ಅನಿಸಿಕೆ
ಶುಭ್ರ ಆಕಾಶ, ಬೀಸುವ ಗಾಳಿ
ಅತಿ ಸುಂದರವೆನಿಸುತಿದೆ
ಮುಗಿಯದ ಚಿಂತೆ, ಕಾಡುವ ನೋವು
ಎಲ್ಲವೂ ದೂರವಾಗುತಿದೆ
ಉರಿ ಬೇಸಿಗೆ, ಸುಡುತಿಹ ನೋವು
ಯಾಕೋ ಹಿತವೆನಿಸುತಿದೆ
ಪ್ರತಿಕ್ಷಣ, ಪ್ರತಿ ಗಳಿಗೆಯಲ್ಲೂ
ನಗುವದು ತಾನೇ ಮೂಡುತಿದೆ
ಚೀರುವ ಜೀರುಂಡೆ, ಹಕ್ಕಿಯ ಚಿವ್ ಚಿವ್
ನಿನ್ನದೆ ಧ್ಯಾನದಿ ಹಾಡುತಿದೆ
ಹರಿಯುವ ನೀರಲಿ, ಮುಚ್ಚಿದ ಕಣ್ಣಲಿ
ನಿನ್ನದೇ ಬಿಂಬವು ಕಾಣುತಿದೆ
ಮುಗಿಯದ ದಿಗಂತ, ಅಪಾರ ಜ್ಞಾನ
ಯೋಚನೆ ಬೇಕೇ ಹೇಳೀಗ
ನಿನ್ನೆಯ ಕತ್ತಲೆ, ನಾಳೆಯ ಬೆಳಕಿಗೆ
ಸ್ವಗತದ ಸವಿ ಜೊತೆ ಇರುವಾಗ
ಜಿತೇಂದ್ರ ಕುಮಾರ್