ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಅತ್ತೆ ಸೊಸೆ ಸಂಬಂಧದ ಸ್ವರೂಪ”-ಭಾರತಿ ಅಶೋಕ್

ವಿಶೇಷ ಲೇಖನ

ಕನ್ನಡ ಹಾಸ್ಯ ಸಾಹಿತ್ಯದಲ್ಲಿ

ಅತ್ತೆ ಸೊಸೆ ಸಂಬಂಧದ ಸ್ವರೂಪ”

ಭಾರತಿ ಅಶೋಕ್

ಅಧುನಿಕ ಪರಿಕಲ್ಪನೆಯಲ್ಲಿ ಗಂಡ ಹೆಂಡತಿ ಮಕ್ಕಳುನ್ನೊಳಗೊಂಡ ಒಂದು ಚಿಕ್ಕ ಸಮಾಜಿಕ ಸಂಸ್ಥೆಯೇ ಕುಟುಂಬ.ಇಂದು ಪಾಶ್ಚಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿ ಮಾರ್ಪಟ್ಟಿವೆ. ಇದರಿಂದ ಕೌಟುಂಬಿಕ ಸಂಬಂಧಗಳು ನಾಶವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಭಕ್ತ ಕುಟುಂಬಗಳೇ ಹೆಚ್ಚು ಕಾಣ ಸಿಗುತ್ತವೆ.

    ಆದರೆ ಹಿಂದೆ ಹೀಗಿರಲಿಲ್ಲ  ಅಪ್ಪ-ಅಮ್ಮ, ಅಣ್ಣ-ತಮ್ಮಂದಿರು ತಮ್ಮ ಸಂಸಾರದೊಂದಿಗೆ ಒಂದೇ ಸೂರಿನಡಿ ವಾಸಿಸುತ್ತಿದ್ದರು ಅದು ಅವಿಭಕ್ತ ಕುಟುಂಬ. ಅಲ್ಲಿ ಮನೆಯ ಹಿರಿಯನೇ ಮನೆಯ ಜವಾಬ್ಧಾರಿ ಹೊಂದಿರುತ್ತಿದ್ದ.  ಕುಟುಂಬದ ಸದಸ್ಯರಿಗೆ  ಕೆಲಸ ಹಂಚಿಕೆ ಆಗುತ್ತಿತ್ತು. ಎಲ್ಲರೂ ಎಲ್ಕರ ಏಳಿಗೆಗಾಗಿ ದುಡಿಯುತ್ತಿದ್ದರು.  ಅಂತಹ ಕುಟಬಗಳಲ್ಲಿ ಅತ್ತೆ ಸೊಸೆ ಸದಾ ಹೊಂದಾಣಿಕೆಯಲ್ಲಿ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವುದು ಇದ್ದೇ  ಇತ್ತು. ಅತ್ತೆ ಯಾವಾಗಲೂ ಸೊಸೆಯ ಮೇಲೆ ಸವಾರಿ ಮಾಡಿದರೂ ಸೊಸೆ ಅದನ್ನು ಸಹಿಸಿಕೊಂಡು ಸಂಸಾರದ ಹೊರೆಯನ್ನು ನಿಭಾಯಿಸುವುದು ಇತ್ತು. ಅತ್ತೆ ಎಲ್ಲಾ ಕೆಲಸ ಕಾರ್ಯಗಳನ್ನು ಸೊಸೆಯಿಂದ ಮಾಡಿಸುತ್ತಿದ್ದಳು, ಅಂದರೆ ಸೊಸೆ ಅತ್ತೆ ಹೇಳಿದಂತೆ ಕೇಳಿಕೊಂಡು ಇರುತ್ತಿದ್ದ ಕಾಲವದು.  ಅತ್ತೆಗೆ ಸೊಸೆಯ ಮೇಲೆ ಸಂಪೂರ್ಣ ಹಿಡಿತ ಇರುತ್ತಿತ್ತು. ಸೊಸೆ ಇದೆಲ್ಲವನ್ನು ತನ್ನ  ಸಂಸಾರಕ್ಕಾಗಿ ಎಷ್ಟೇ ಕಷ್ಟವಾದರೂ ಸಹಿಸಿಕೊಂಡು ಗಂಡನ ಮನೆಯಲ್ಲಿಯೇ ಇದ್ದು ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದಳು, ಕಾರಣ ಅವಳಿಗೆ ತವರಿಗೆ ಹೋಗುವ ಅವಕಾಶಗಳು ಇರಲಿಲ್ಲಿ. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು” ಎನ್ನುವಂತೆ ಒಮ್ಮೆ ಮದುವೆ ಮಾಡಿ ಕಳುಹಿಸದರೆ ತಂದೆ ತಾಯಿಗಳು ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೈ ತೊಳೆದುಕೊಂಡು ಸುಮ್ಮನಾಗುತ್ತಿದ್ದರು, ಅದರ ಅರಿವು ಹೆಣ್ಣಿಗು ಇದ್ದ ಕಾರಣ ಅವಳು ತವರನ್ನು ನೆನೆಸದೇ ಕಷ್ಟವೋ, ಸುಖವೂ ಗಂಡನ ಮನೆಯಲ್ಲಿಯೇ ತನ್ನ ಆಸೆ, ಕನಸುಗಳನ್ನು ಕೊಂದುಕೊಂಡು ಬದುಕುತಿದ್ದ ಕಾಲವದು.

    ಆದರೆ… ಸ್ವಾತಂತ್ರ್ಯಾ ನಂತರ ಅಂದರೆ ನವೋದಯ ಸಂದರ್ಭದಲ್ಲಿ ಬ್ರಟೀಷ್ ಶಿಕ್ಷಣ ವ್ಯವಸ್ಥೆಯು ಮಹಿಳೆಯನ್ನು ಬಾಹ್ಯವಾಗಿ ಹೊಸ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡಿತು.,. ಅದುವರೆಗೂ ಕೇವಲ ಮೆನೆಯ ಒಳಗೆ ತನ್ನ ಅಸ್ತಿತ್ವ ಹೊಂದಿದ್ದ ಹೆಣ್ಣು ತಾನಾಯ್ತು ತನ್ನ ಮನೆ ಕೆಲಸವಾಯ್ತು ಎಂದು ಇರುತ್ತಿದ್ದ ಕಾಲದಲ್ಲಿ ಅವಳು ಹೊರಗೆ ಹೇಗಿರಬೇಕು ಎನ್ನುವುದು ಅಷ್ಟು ಮುಖ್ಯವಾಗಿರಲಿಲ್ಲ ಆದರೆ ಕಾಲ ಬದಲಾದಂತೆ ಅವಳು ಆಧುನಿಕತೆಗೆ  ತೆರೆದುಕೊಂಡು ಅಡುಗೆ ಮನೆಯಿಂದ ಹೊರ ಪ್ರಪಂಚಕ್ಕೆ ಬಂದಾಗ ಮನೆಯ ಒಳಗೆ ಇರುತ್ತಿದ್ದ ತನ್ನ ಇರುವಿಕೆಗೂ ಹೊರಗಿನ ಅವಳ ಇರುವಿಕೆಗೂ ತನ್ನನ್ನು ಅಣಿಗೊಳಿಸಿಕೊಳ್ಳುವುದು ಅನಿವಾರ್ಯವಾಯಿತು ಶಿಕ್ಷಣ ಪಡೆದ ನಂತರ ಹೆಣ್ಣು ಎಂದರೆ ಹೀಗಿರಬೇಕು,ಎನ್ನುವ ಒಂದು ಮಾದರಿಯನ್ನು ಬ್ರಿಟೀಷ್ ಸಾಮಾಜಿಕ ಬದುಕು ಕಟ್ಟಿಕೊಟ್ಟಿತು.ಹಾಗೆ ತಾನು ಮನೆ ಮತ್ತು ಸಮಾಜದಲ್ಲಿ ತನ್ನನ್ನು ಸರಿದೂಗಿಸಿಕೊಂಡು ಹೋಗಲು ಅವಳಿಗೆ ಸೌಂದರ್ಯ ಪ್ರಜ್ಞೆಯೂ ಕಾಡುತ್ತದೆ. ಆಯಾ ಸಂದರ್ಭಕ್ಕೆ ಅವಳು ತನ್ನನ್ನು ಮತ್ತೆ ಮತ್ತೆ ಆಧುನಿಕತೆಗೆ ಒಡ್ಡಿಕೊಳ್ಳುತ್ತಾ ತಾರ್ಕಿಕವಾಗಿ ಚಿಂತಿಸುವುದನ್ನು ಕಾಣುತ್ತೇವೆ. ಅದಕ್ಕಾಗಿ ಅವಳು ಆಧುನಿಕ ಸೌಂದರ್ಯವರ್ಧಕಗಳಿಗೆ ಮಾರು ಹೋಗುತ್ತಾಳೆ, ತಾನು ಸಾಧ್ಯವಾದಷ್ಟು ಯೌವನವನ್ನು ಕಾಪಾಡಿಕೊಳ್ಳಲು ಸ್ಪರ್ಧೆಗೂ ಇಳಿಯುತ್ತಾಳೆ.

     ಟಿ ಸುನಂದಮ್ಮನವರ  “ಅಖಿಲ ಭಾರತ  ಅತ್ತೆಯರ ಪರಿಷತ್ತು” ಎನ್ನುವ ಲೇಖನದಲ್ಲಿ ಅಕ್ಕ ಪಕ್ಕದ ಮನೆಯ ಅತ್ತೆಯಂದಿರು ತಮ್ಮ ಮನೆಯ ಸೊಸೆಯಂದಿರ ಮುಂದೆ ತಾವು ಯಾವುದರಲ್ಲೂ ವಯಸ್ಸಿನ ಹೆಣ್ಣು ಮಕ್ಕಳಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಳ್ಳಲು ಅತ್ತೆಯರು ಎಲ್ಲಾ ಒಂದಾಗಿ ಸಂಘ ಕಟ್ಟಿಕೊಳ್ಳುವ ಮೂಲಕ ಮನೆಯಲ್ಲಿ ಸೊಸೆಯಂದಿರು  ತಮ್ಮನ್ನು ನೋಡುವ ರೀತಿ ಬದಲಾಗಬೇಕಾದರೆ ತಾವು ತಮ್ಮನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ಅಲ್ಲಿ ಚರ್ಚಿಸುತಾ…..”ಗಂಡು ಮಕ್ಕಳು ಆದಷ್ಟು ತಡೆದು ಮದುವೆಯಾಗಬೇಕು, ಮದುವೆ ಆಗಿ ಐದು ವರ್ಷವಾದರೂ ಮಕ್ಕಳನ್ನು ಪಡೆಯಬಾರದು  ಆ ಮೂಲಕ ನಮಗೆ ‘ಅಜ್ಜಿ ಪಟ್ಟ’ ಆದಷ್ಟು ನಿಧಾನವಾಗಿ ಸಿಗಲು ಅನುಕೂಲವಾಗುವುದು” ಇದರಿಂದ(ವಿ ಸೂ : ಮೊಮ್ಮಕ್ಕಳು ನಮ್ಮನ್ನು ಎಂದೂ “ಅಜ್ಜಿ”ಎಂದು ಸಂಭೋದಿಸಕೂಡದು) ಅಲ್ಲಿಗೆ ಕುಟುಂಬ ಎನ್ನುವ ಕಲ್ಪನೆ ಸ್ಥಿತ್ಯಂತರ ಹೊಂದಿ  ಹಿಂದೆ ಆದಷ್ಟು ಬೇಗ ಮಗನಿಗೆ ಮದುವೆ ಮಾಡಿ ಮೊಮ್ಮಕ್ಕಳೊಂದಿಗೆ ತಮ್ಮ ವೃದ್ಧಾಪ್ಯವನ್ನು ಕಳೆಯಬೇಕೆನ್ನುವ ಕಾಲವೂ ಮುಗಿಯಿತು ಎಂದು ಅನ್ನಿಸದೇ ಇರದು. ಆದರೂ   ನಂತರದಲ್ಲಿ  ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದುದರ ವಿಡಂಬನೆ ಇಲ್ಲಿಯೂ ಕಾಣುತ್ತದೆ. ಇದು ಕೇವಲ ವಿಡಂಬನೆ ಎಂದರೂ ನಿಜಕ್ಕೂ- ಪಾಶ್ಛಾತ್ಯ ಸಂಸ್ಕೃತಿಯ ಅನುಕರಣೆ ನಮ್ಮ ಕುಟುಂಬ ವ್ಯವಸ್ಥೆಯ ಮೇಲೆ ಬೀರಿದ ಪರಿಣಾಮದ ತೀವ್ರತೆ ಎಷ್ಟು ಎನ್ನುವುದು ಗಮನಕ್ಕೆ ಬಾರದೇ ಇರದು.

    ಕುಟುಂಬದ ಕಲ್ಪನೆ ಸ್ಥಿತ್ಯಂತರಗೊಂಡು ಕುಟುಂಬದ ಕಾಳಜಿ ವೈಯುಕ್ತಿಕತೆಯೆಡೆಗೆ ತಿರುಗಿ ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿವೆ. ಸ್ವಾರ್ಥ ಸಾದನೆಗಾಗಿ ಹೋರಾಟ ನಡೆಯುವುದು ಕೌಟುಂಬಿಕ ಸಂಬಂಧಗಳು , ಕೆಲವೊಮ್ಮೆ ಮುರುಟಿದಂತೆ ತೋರಿದರೂ ಸನಾತನ ಸಂಸ್ಕೃತಿಯನ್ನು ನೆಲೆಯಾಗಿಸಿಕೊಂಡ ಭಾರತದಂತಹ ರಾಷ್ಟ್ರಗಳಲ್ಲಿ  ಮತ್ತೆ ಮತ್ತೆ ಆಂತರ್ಯದಲ್ಲಿ ಜೀವಂತವಾಗಿರುವುದು ಕಂಡು ಬರುತ್ತದೆ.  ಆದರೆ ಪಶ್ಚಾತ್ಯ ಸಂಸ್ಕೃತಿಯನ್ನು ಒಪ್ಪಿ ಅಪ್ಪಿಕೊಂಡ ಜನತೆ  ಸಂಸ್ಕೃತಿಯನ್ನು ಮರೆತಂತೆಯೇ, ಅದರಿಂದ ಅನಾಹುತ ಎಂದಿಗೂ ಬೆನ್ನ ಹಿಂದೆಯೇ. ಸ್ವಾರ್ಥಕ್ಕೆ ಬೆಲೆ ಕೊಟ್ಟು  ತಮ್ಮ ಜವಾಬ್ಧಾರಿಯಿಂದ ನುಸುಳಿಕೊಳ್ಳಲು ನೋಡಿದರೆ ಅದರಿಂದ ಮುಂದೊಂದು ದಿನ ಖಚಿತವಾಗಿ ನೈಚಿಕ ಹೊಣೆಗೇಡಿತನಕ್ಕೆ ತಲೆಬಾಗಲೇಬೇಕು ಎನ್ನುವುದು ನಿಜ. ಅದನ್ನು ಮೀರಿದರೆ ಕೌಟುಂಬಿಕ ಸುಖದಿಂದ ವಂಚಿತರಾಗುವುದಷ್ಟೇ ಅಲ್ಲ,ತಮ್ಮಿಂದ ಮಕ್ಕಳು ಮೊಮ್ಮಕ್ಕಳಿಗೆ ಸಿಗಬೇಕಾದ ಪ್ರೀತಿ, ಪ್ರೇಮ, ವಾತ್ಸಲ್ಯದಿಂದಲೂ ಅವರನ್ನು ವಂಚಿಸಿದಂತಾಗುತ್ತದೆ.

    ಕುಟುಂಬ ಎಂದರೆ ಮಕ್ಕಳ ಸಾಮಾಜೀಕರಣದ ನಿಯೋಗ ಸಂಸ್ಕೃತಿಯ ಪ್ರತೀಕ, ‘ಹೆಣ್ಣು ಆ ಕುಟುಂಬದ ಕಣ್ಣು’ ಅವಳು ಕುಟುಂಬ,ಸಂಸಾರಕ್ಕೆ ಹೆಚ್ಚು ಮಹತ್ವ ನೀಡಿ ಮಕ್ಕಳ ಪ್ರತಿಯೊಂದು ಚಟುವಟಿಕೆಗೆ ಕುಟುಂಬ ಅದಕ್ಕೆ ಹಿರಿಯ ಜೀವಗಳು ಆಧಾರ ಸ್ಥಂಬಗಳು, ಅಲ್ಲಿಯೇ ಪ್ರಾರಂಭಗೊಳ್ಳುತ್ತವೆ. ಹೆಣ್ಣು ಕುಟುಂಬದ ಒಳಗೂ ಹೊರಗೂ ದುಡುಯುತ್ತಾ ಸಂಸಾರದ ಜವಾಬ್ಧಾರಿಯಿಂದ ನುಸುಳಿಕೊಳ್ಳದಂತೆ ಮಗಳು, ಹೆಂಡತಿ, ಸೊಸೆ, ತಾಯಿ ,ಅತ್ತೆಯಾಗಿ ತನ್ನೆಲ್ಲಾ ಜವಾಬ್ಧಾರಿಯನ್ನು ಕುಟುಂಬದಲ್ಲಿದ್ದುಕೊಂಡು ನಿಭಾಯಿಸುವುದು ಇಂದಿಗೂ ನಡೆದು ಬಂದಿದೆ. ಆದರೆ ಸ್ವಾತಂತ್ರ್ಯಾ ನಂತರದಲ್ಲಿ  ಕೆಲವೊಂದು ಬದಲಾವಣೆಗಳು ಸಮಾಜದ ಮೇಲಾದವು ಇನ್ನು ಕೆಲವು ನೇರವಾಗಿ ಕುಟುಂಬದ ಮೇಲೆ.  ಹೆಣ್ಣು ವಿದ್ಯಾವಂತಳಾದಳು ನಿಜ ಅದು ಅವಲ ಸುಸಂಸ್ಕೃತ ಬದುಕಿನ ಮೇಲೆ ಒಂದಷ್ಟು ಪೆರಿಣಾಮ ಬೀರಿದರೂ ಕೌಟುಂಬಿಕ ಜವಾಬ್ಧಾರಿಯನ್ನು ಅವಳು ಮರೆತಿಲ್ಲ, ಹೊರತಾಗಿ ಜವಾಬ್ಧಾರಿಯನ್ನು ಹೆಚ್ಚಿಸಿದೆ. . 

    ಹಿಂದಿನಿಂದಲೂ ನಮ್ಮ ಸಾಂಪ್ರದಾಯಿಕ ಕುಟುಂಗಳಲ್ಲಿ “ಅತ್ತೆ”ಎಂದರೆ ಅವಳು ಸದಾ ಸೊಸೆಯನ್ನು ತನ್ನ ಹಿಡಿತದಲ್ಲಿರಬೇಕು, ಎನ್ನುವ ಒಂದು ಮಾದರಿ ನಮ್ಮ ಮುಂದಿದೆ ಈಗಲೂ ಅದು ಬಹಳಷ್ಟು ಕುಟುಂಬಗಳಲ್ಲಿ ಹಾಗೆ ಉಳಿದಿದೆ, ಆದರೆ ಆಧುನಿಕೋತ್ತರ ಭಾರತದಲ್ಲಿ ಇದು ಸ್ವಲ್ಪ ಬದಲಾವಣೆ ಆಗುವುದು ಕಾಣುತ್ತೇವೆ. ಈ ಬದಲಾವಣೆ ಅತ್ತೆಯನ್ನು ಬದಲಾಯಿಸದೇ ಸೊಸೆಯನ್ನು ಬದಲಾವಣೆಗೆ ಒಡ್ಡಿದೆ ಎಂದು ಹೇಳಬಹುದು, ಅತ್ತೆ ಎನ್ನುವ ಪಟ್ಟ ಅದು ಸೊಸೆಯನ್ನು ಸದಾ ಕಾಡುವ ಸ್ವಪ್ನದಂತೆ. ಸೊಸೆಯಾದವಳು ತಾನು ಅತ್ತೆಯಾಗುವವರೆಗೂ ಅದನ್ನು ಅನುಭವಿಸಲೇಬೇಕು ಎನ್ನುವ ಸಾಂಪ್ರದಾಯಿಕ ತತ್ವ ಬದಲಾಗಿದೆ, ಕಾರಣ ಮತ್ತದೇ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಕಲಿತ ಹೆಣ್ಣು ಮಕ್ಕಳು  ಹಿಂದಿನಂತೆ ಬದುಕಲು ಆಗದು ಅವರೀಗ ಸುಶಿಕ್ಷಿತರು ಅವರು ಹೊರಗೆ ಹೋಗಿ ದುಡಿಯಬಲ್ಲರು, ಹೀಗಿದ್ದಾಗ ಅವರು ದಾಸ್ಯವನ್ನು ಒಪ್ಪಕೊಳ್ಳುವುದಿಲ್ಲ ತಾನು ಅತ್ತೆಯಂತೆ ಇನ್ನೊಂದು ಮನೆಯಿಂದ ಬಂದವಳು ಅವಳಿಗಿರುವ ಅಧಿಕಾರ ನಮಗೂ ಇದೆ. ಎನ್ನುವ ತಾರ್ಕಿಕ ವಾದ ಅವರದ್ದು. ಅಷ್ಟೇ ಅಲ್ಲದೇ ಅತ್ತೆ ಕಿರುಕುಳ ಹೆಚ್ಚಿದರೆ ಗಂಡನೊಂದಿಗೆ ಪ್ರತ್ಯೇಕವಾಗಿ ಬದುಕುವ ಧೈರ್ಯವೂ ಅವಳಿಗಿದೆ.

ಇಂತಹ ಇನ್ನೊಂದು ಮಾದರಿಯನ್ನು ನಾ ಕಸ್ತೂರಿಯವರ “ಶಂಖವಾದ್ಯ” ಕೃತಿಯಲ್ಲಿ ತೋರಿಸಿದ್ದಾರೆ, ಅತ್ತೆ, ಸೊಸೆ ಇಬ್ಬರೂ ಒಬ್ಬರನ್ನೊಬ್ಬರು  ಇಷ್ಟ ಪಡುತ್ತಾರೆ, ಆದರೆ ಅದನ್ನು ಬಹಿರಂಗದಲ್ಲಿ  ತೋರಿಸಿಕೊಳ್ಳುವಲ್ಲಿ ಅವರಿಬ್ಬರಿಗೂ  ಆಗದು, ಇಬ್ಬರಲ್ಲೂ ಒಂದು ರೀತಿಯ ಇಗೋ  ಅದು ಇಬ್ಬರಿಗೂ ತಿಳಿದಿದೆ, ಆದ್ದರಿಂದ ಅವರಿಬ್ಬರೂ ಒಂದು ಒಪ್ಪಂದಕ್ಕೆ ಬರುತ್ತಾರೆ, ಕಲಿತ ಸೊಸೆಗೆ ಕನ್ನಡ ಬಾರದು, ಅತ್ತೆಗೆ ಇಂಗೀಷ್ ಬಾರದು ಇದು ಇಬ್ಬರಿಗೂ ಒಳ್ಳೇಯದೇ ಆಯಿತು ಎಂದು ಭಾವಿಸಿಕೊಳ್ಳುತ್ತಾರೆ, ಅದಕ್ಕಾಗಿ ಯಾರೂ ಇಲ್ಲದಿದ್ದಾಗ ತಾವಿಬ್ಬರೇ ಸ್ವಲ್ಪ ಸಮಯ ಒಂದೆಡೆ ಕುಳಿತು ಸೊಸೆ ಇಂಗ್ಲೀಷ್ ನಲ್ಲಿ ಅತ್ತೆಯನ್ನು ಬೈದುಕೊಂಡು, ಅತ್ತೆ ಕನ್ನಡದಲ್ಲಿ ಸೊಸೆಯನ್ನು ಬೈದುಕೊಂಡು ಇಡೀ ದಿನ ನೆಮ್ಮದಿಯಿಂದ ಬದುಕುವುದು, ಇದರಿಂದ ತಮ್ಮೊಳಗಿನ ಅತ್ತೆ/ಸೊಸೆ ಬಗೆಗಿನ ತಮ್ಮ ತಮ್ಮ ಸಿಟ್ಟನ್ನು ಒಮ್ಮೆ ಹೊರ ಹಾಕಿ ನಿರಾಳವಾಗಿ ಬದುಕುತ್ತಾರೆ,

ಸೊಸೆಯ ಬಗೆಗೆ ಅತ್ತೆಯಲ್ಲಿ ತಾಯ್ತತನದ ಪ್ರೀತಿ ಅಂತಃಕರಣ ಇರುವುದು ಮಾತೃಹೃದಯಿ ಮಾನವೀಯ ನೆಲೆಯಲ್ಲಿಯೂ ಅತ್ತೆ ಗುರುತಿಸಿಕೊಳ್ಳುತ್ತಾಳೆ,ಮನುಷ್ಯ ತನ್ನ ಕೋಪ ತಾಪದಿಂದ ಮುಕ್ತನಾದಾಗ ನಿಜ ಮಾನವನಾಗುತ್ತಾನೆ ಎನ್ನುವುದನ್ನು ಇಲ್ಲಿಯೂ ನಾ ಕಸ್ತೂರಿಯವರು ತೋರಿದ್ದಾರೆ.

ಅತ್ತೆ ಮನೆಯಿಂದ ಹೊರಟು ನಿಂತಾಗ ಪಕ್ಕದ ಮನೆಯ ನಾಗಮ್ಮನಿಗೆ ಗಂಗಮ್ಮ “ಗಂಡ ಬೇರೆ ಮನೆ ಮಾಡಿ ಸಂಸಾರ ಹೂಡೋವರೆಗೂ ಬರಲ್ವಂತೆ! ಅದೇನೋ ನನ್ನನ್ನು ಓಲ್ಢ್ ಹ್ಯಾಗ್; ಅಂದುಕೊಂಡಿದ್ದಾಳೆ” ಎಂದು ಹೇಳುವಾಗ ಅತ್ತೆ ಸೊಸೆಯರಿಬ್ಬರ ಮನದಿಂಗಿತ ಅರ್ಥ ಆಗುತ್ತದೆ. ಅತ್ತೆ ಸೊಸೆಯರ ಇನ್ನೊಂದು ಮಾದರಿಯನ್ನು ಪರಿಚಯಿಸುತ್ತಾರೆ ಅಂದರೆ ಸ್ವತಂತ್ರ್ಯೋತ್ತರ ಭಾರತದಲ್ಲಿ  ಅತ್ತೆ ಸೊಸೆ ಇಬ್ಬರೂ ಶಿಕ್ಷಣಕ್ಕೆ ತೆರೆದುಕೊಂಡಾಗ ಅತ್ತೆ ಇಲ್ಲದೆ ಮನೆಯಲ್ಲಿ ಬದುಕುವ ಹೊಸ ಸಾಧ್ಯತೆಯನ್ನು ಸೊಸೆ ನಿಜವಾಗಿಸಲು ಹೊರಟಾಗ ಅದಕ್ಕೆ ತಾಯಿಯೂ ಬೆಙಬಲವಾಗಿ ನಿಲ್ಲುವುದು ಸಹ ಕಾಣುತ್ತೇವೆ, ಅದಕ್ಕೆ ಪೂರಕವೆನ್ನುವಂತೆ ಅತ್ತೆಯೂ ಸಹ ಹೋದರೆ ಹೋಗಲಿ ಅವಳು ಚನ್ನಾಗಿ ಬದುಕಲಿ ನಮ್ಮನ್ನು ಬದುಕಲು ಬಿಡಲಿ ಎನ್ನುವ ಮನಸ್ಥಿಯೋ ಅಥವಾ ನಾನು ಅವಳಿಗಿಂತ ಕಡಿಮೆ ಅಲ್ಲ ನಾನೂ ಅವಳಿಲ್ಲದ ಬದುಕನ್ನು ಬದುಕಲು ಉತ್ಸುಕಳು ಎನ್ನುವುದು ಮತ್ತು ಆ ಸಾಧ್ಯತೆ ತನ್ನಲ್ಲೂ ಇದೆ ಎನ್ನುವುದೋ ಆಕೆಯ ಮಾತಿಲ್ಲೇ ಗ್ರಹಿಸಬೇಕು  ಅದೇನೋ ನನ್ನನ್ನು “ಓಲ್ಡ್ ಹ್ಯಾಗ್ ಅಂದುಕೊಂಡಿದ್ದಾಳೆ”ಎನ್ನವಲ್ಲಿ ನಾನು ಹಳೆಯ ಮಾದರಿ ಅತ್ತೆ ಅಲ್ಲ ನೀನು ಸ್ವತಂತ್ರಳು ನಾನೂ ನಿನ್ನ ಹಾಗೆ ಎನ್ನುವ ದಾಟಿಯೂ ಹೌದು.ಹಾಗೆ ಸೊಸೆ ಹೋದರೆ ಹೋಗಲಿ ಎನ್ನುವಲ್ಲಿ ಅವಳಿಗೂ ಸ್ವಾತಂತ್ರ್ಯವಿದೆ ಅವಳು ಸ್ವತಂತ್ರಳಾಗಿ ಬದುಕಲಿ ಎನ್ನುವ ಧೋರಣೆಯೂ ಇಲ್ಲಿದೆ.  ಇದು ಒಂದು ಸ್ವರೂಪದ ಅತ್ತೆ ಸೊಸೆಯರ ಮಾದರಿಯಾಗಿದೆ ಇಬ್ಬರಲ್ಲೂ ಸ್ವತಂತ್ರ್ಯದ ಮನೋಭಾವ ಆದರೆ ಇದು ನಿಜಕ್ಕೂ ಈ ಪಲ್ಲಟ ಕೌಟುಂಬಿಕ ಬದುಕನ್ನು ನೆಮ್ಮದಿಯಿಂದ ದೂರ ಒಯ್ಯುತ್ತದೆ.

    ಅದು ಅತ್ತೆ ಸೊಸೆ ಎಂದರೆ ಸದಾ ಕಚ್ಚಾಡಿಕೊಂಡು ಒಂದಿಲ್ಲೊಂದು ರಂಪಾಟ ಕೂಗಾಟಗಳನ್ನು ನೋಡುತ್ತಿದ್ದ ನಮಗೆ ಅದಕ್ಕಿಂತ ಭಿನ್ನವಾದ ಮಾದರಿ ಎಂದರೆ ಅತ್ತೆ ಸೊಸೆ ಇಬ್ಬರೂ ತುಂಬಾ ಅನ್ಯೂನ್ಯವಾಗಿರುವುದು ಸದಾ ಒಬ್ಬರನ್ನೊಬ್ಬರು  ಕಾಳಜಿ ಮಾಡುವುದು, ಇದೊಂತರ ಎರಡನೇ ಮಹಾ ಯುದ್ದದ ನಂತರ ಬಲಾಢ್ಯ ರಾಷ್ಟçಗಳಲ್ಲಿ ನಡೆಯುತ್ತಿದ್ದ ಶೀತಲ ಸಮರದಂತೆ  ಹೊರಗಡೆ ನಗು ನಗುತಾ ಇದ್ದರೂ ಒಳಗೊಳಗೆ ಒಬ್ಬರನ್ನೊಬ್ಬರು ಬೈದುಕೊಳ್ಳುವುದು, ಆದರೆ ಇದು ಅವರಿಬ್ಬರ ನಡುವಿನ ದ್ವೇಷವಂತೂ ಅಲ್ಲ ಒಂದಂತು ನಿಜ ಅದು ಅವರಿಬ್ಬರಲ್ಲಿ ಈ ಬುಸುಗುಡುವಿಕೆ ಕೇವಲ ಸಿಟ್ಟಿನ ಮಟ್ಟದ್ದಾಗಿರುತ್ತಿತ್ತು ದ್ವೇಷಿಸುವ ಮಟ್ಟದ್ದಲ್ಲ.

    ಆದರೆ ಒಂದು ಅಂಶವನ್ನು ಇಲ್ಲಿ ಗಮನಿಸಲೇಬೇಕು ಅದೇನೆಂದರೆ..ಅತ್ತೆ ಸೊಸೆ ಎಷ್ಟೇ ಜಗಳ ಮಾಡಿದರೂ ಇಬ್ಬರ ಮದ್ಯೆ ಸೂಕ್ಷ್ಮವಾದ ಒಂದು ಸಂಬಂಧದ ಎಳೆಯ ಸೆಳೆತೆ ಇರುವುದನ್ನು ಮರೆಯುವಂತಿಲ್ಲ ಅದು ತಾಯಿ ಮಗಳ ಸಂಬಂಧ, ಮಾನವೀಯ ಸಂಬಂಧ ಅದನ್ನು ಬೀಚಿಯವರ ದಾಸಕೂಟ ಕಾದಂಬರಿಯಲ್ಲಿನ ಅತ್ತೆ ಸೊಸೆ ಸಂವಾದದಲ್ಲಿ ಗಮನಿಸಬಹುದು-“ಇದೇನು ಹುಚ್ಚುಚ್ಚೇ ಕಾವೇರಿ ?ಇದೆಲ್ಲ ನನಗೆ ಸೇರೊಲ್ಲವ್ವ ನನ್ತಾಯಿ” ಕಾವೇರಿ ನಾಗಮ್ಮನಿಗೆ ಮಲ ಅತ್ತೆ ಆಗಿದ್ದರೂ ನಾಗಮ್ಮ ಕಾವೇರಿಯನ್ನು ಹೆಸರಿನಿಂದ ಕರೆಯುವದು ಅದು ಬರೀ ಮಾತಿನ ಸಲುಗೆಯಾಗಿರದೇ ಅವರಿಬ್ಬರೂ  ಹೆಚ್ಚಾಗಿ ಅಕ್ಕ, ತಂಗಿಯಂತೆ ,ತಾಯಿ ಮಗಳಂತೆ ಬದುಕುತ್ತಿದ್ದುದು, ಒಬ್ಬರ ನೋವಿಗೆ ಇನ್ನೊಬ್ಬರು ಮಿಡಿಯುವುದು, ಸಾಂತ್ವಾನಿಸುವುದು ಯಾವ ತಾಯಿ ಮಗಳಿಗೂ ಕಡಿಮೆ ಇರುವುದಿಲ್ಲ.  ಇದರಿಂದ ಭಾರತೀಯ ಹೆಣ್ಣು ಮಕ್ಕಳು ಅಂತಹ ಮಾನವೀಯ ಸೂಕ್ಷ್ಮ ಮನಸ್ಥಿತಿಯನ್ನು ತಮ್ಮ ಹುಟ್ಟಿನಿಂದಲೇ ಪಡೆದುಕೊಂಡು ಹುಟ್ಟಿರುತ್ತಾರೆ ಎನ್ನಿಸುತ್ತದೆ. ಇಂತಹ ಎಷ್ಟೋ ಸನ್ನಿವೇಶಗಳನ್ನು ಬೀಚಿಯವರು ನಮ್ಮ ಮುಂದಿರುಸುತ್ತಾರೆ ಇಂತಹದ್ದೇ ಸನ್ನಿವೃಶವನ್ನು ನಾ ಕಸ್ತೂರಿಯವರ ಶಂಖವಾದ್ಯ ಕೃತಿಯಿಂದ ನೋಡಬಹುದು. .”ಬೇಡ, ಬೇಡ, ನಾನು ಸಹಿಸಲಾರೆ! ಬಸುರಿ ಹುಡುಗಿ ಏನೋ ಆಡಿತು ನಾನೇಕೆ ಅದಕ್ಕೆ ಟೀಕೆ ಮಾಡಿಕೊಂಡು ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆಯಬೇಕು?” ಇದು ಸುಶಿಕ್ಷಿತ ಸೊಸೆ ಮತ್ತು ಅಶಿಕ್ಷಿತ ಅತ್ತೆಯ ನಡುವಿನ ಜಗಳ ಅತ್ತೆ ತನ್ನ ಪಾರುಪತ್ಯ ನಡೆಯಲಿ ಎಂದು ಸೊಸೆ ತಾನೇಕೆ ಅತ್ತೆಯ ಮಾತಿಗೆ ತಗ್ಗಿ ಬಗ್ಗಿ ನಡೆಯಲಿ ಎನ್ನುವ ಜಟಾಪಟಿಯಲ್ಲಿ ಮುನಿಸಿಕೊಂಡು ದೂರಾದರೂ ಸೊಸೆ ಗರ್ಭವತಿ ಅವಳು ತಾಯಿಯಾಗುವ ಸಂದರ್ಭದಲ್ಲಿ ಅತ್ತೆಯಾದವಳು ಸೊಸೆಯನ್ನು ನೋಡಲು ಆಸ್ಪತ್ರೆಗೆ ಬರುವುದು ಆಕೆಗೆ ತನ್ನ ಸೊಸೆಯ ಮೇಲಿರುವ ಮಮತೆಯಿಂದಲ್ಲದೇ ಇನ್ನೇನಾಗಿರಲು ಸಾಧ್ಯ. ಆಕೆಯ ಮಾತಿನಲ್ಲಿ ಅಂತಃಕರಣ ಇರುವುದನ್ನು ಗಮನಿಸಿದರೆ ಆಕೆ ಸೊಸೆಯನ್ನು ನೋಡಲು ಅಷ್ಟು ದೂರ ನಡೆದುಕೊಂಡು ಬರುವುದು, ತಾಯಿ ಪ್ರೀತಿಯ ಉತ್ತುಂಗವನ್ನು ತೋರುತ್ತದೆ.   

    ಸೊಸೆಯನ್ನು ಶೊಷಿಸುವ ಸ್ವರೂಪದ ರೋಚಕತೆ ಅದರ ಹಿಂದಿನ ವ್ಯತಕತೆ ಹಿಂದಿನಿಂದ ಬಂದ  ಹೆಣ್ಣನ್ನು/ ಸೊಸೆಯನ್ನು ಶೋಷಿಸುವ ಅತ್ತೆಯರು ಆಧುನಿಕ  ಕಾಲದಲ್ಲಿ ತಮ್ಮ ಮಿತಿಗಳನ್ನು ಅರಿತು, ಹೆಣ್ಣಿನ ಸ್ವಾತಂತ್ರ್ಯವನ್ನು ಗೌರವಿಸಿ ಸಾಮರಸ್ಯಸ ಬದುಕು ರೂಢಿಸಿಕೊಂಡು, ಆಧುನಿಕತೆ ಎಂದರೆ ಕೇವಲ  ಜೀವನಶೈಲಿಯ ಬದಲಾವಣೆಯಲ್ಲ. ಅದು ಹೆಣ್ಣಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಾಗಿದೆ. ತಾನು ಸೊಸೆಯಾಗಿ  ಅನುಭವಿಸಿದ ಕಿರುಕುಳವನ್ನು  ತಾನು ಅತ್ತೆಯಾಗಿ  ತನ್ನ ಸೊಸೆಗೆ ತಾನು ಅನುಭವಿಸಿದ ಹಿಂಸೆಯನ್ನು ನೀಡಿ ತಾನು ಸುಖಿಸುವ ಕನಸು ಹೊತ್ತ ಅತ್ತೆ  ತಾನೇ ಯಾಮಾರುವುದು ಆಧುನಿಕತೆಯ ಪ್ರಭಾವವಾಗಿದೆ. ಆಧುನಿಕ ಶಿಕ್ಷಣ ಕ್ರಮವೂ ಅತ್ತೆ ಸೊಸೆಯರ  ನಡುವಿನ ಸ್ಪರ್ಧೆಯನ್ನು ಮೊದಲಿಗಿಂತ ಭಿನ್ನವಾಗಿಸಿದೆ ಎನ್ನುವುದು ವಾಸ್ತವ, ಕುಟುಂಬದಲ್ಲಿ ತಮ್ಮ ಛಾಪು ಮೂಡಿಸಲು ಹೆಣಗಾಡುತ್ತಿದ್ದವರು ಒಬ್ಬರಿಗೊಬ್ಬರು ಆದಷ್ಟು ಸ್ವತಂತ್ರವನ್ನು ನಿರೀಕ್ಷಿಸುವಂತಾಗಿದೆ, ಒಂದು ಕಾಲಕ್ಕೆ ಅತ್ತೆ ತನ್ನ ಸೊಸೆನ್ನು ಮನೆಗೆ ಬಂದ ಬಂಧುಗಳ ಎದುರಿಗೆ  ಸೊಸೆಗೆ ಹಿಂದಿನ ದಿನದ ಹಳಸಿದ ಹಿಟ್ಟಿಗೆ ನಾಲ್ಕು ದಿನದ ಹುಳಿ ಮಜ್ಜಿಗೆ  ಬೆರೆಸಿ ಬಡಿಸಿ “ಬಿಸಿಗಂಜಿ ತುಪ್ಪ ಹಾಕಿದಿನಿ, ಉಣ್ಣು ಹೆಣ್ಣೇ” ಅಂದಳಂತೆ  ಸೊಸೆ ತಿನ್ನಲಾರದೇ’ನನಗೆ ಬೇಡ’ ಕರುವಿಗೆ ಹಾಕಿ ಅಂದಳಂತೆ, ಅತ್ತೆ ಮಗನಿಗೆ  ವಾರಂಟ್ ಕೊಟ್ಟಳಂತೆ “ಬಂದೋರೆದುರಿಗೆ  ಅವಮಾನ ಮಾಡಿದಳು  ನಿನ್ನ ಹೆಂಡತಿ : ಅವಳನ್ನು ತವರಿಗೆ  ನೂಕಿ ಬಾ “ ಅಂತ! ಆಹಾ! ಆಗಿರಬೇಕು ಅತ್ತೆ ಪಟ್ಟ ಅಂತ ಆಶೆಪಟ್ಟು ಗಂಡ ಹೆಂಡತಿಗೆ ತಂದಿಟ್ಟು ತಾನು ಮಗನಿಗೆ ನೇರಾನೇರಾವಾಗುವ ಕಾಲವೂ ಮುಗಿದು ಒಟ್ಟಿಗೆ ಒಂದೆಡೆ ಕೂತು ಸಹ ಭೊಜನ ಮಾಡುವ ಸಾಮರಸ್ಯದ ಕಾಲವಿದಾಗಿದೆ.  ಆದರೂ ಅತ್ತೆ ತನ್ನ ಗತದ  ವೈಭವವನ್ನು  ಕೇವಲ ಮೆಲುಕು ಹಾಕಬೇಕಷ್ಟೇ…. ಸೊಸೆಯಂದಿರು ತಾವು ಹಿಂದೆ ತಮ್ಮ ಅತ್ತೆಯಿಂದ ಅನುಭವಿಸಿದ ನೋವು ಅವಮಾನವನ್ನು ಪರಿಸ್ಥಿತಿಯ ಲಾಭ ಪಡೆದು ಅದನ್ನು ಅತ್ತೆಗೆ ತಿರುಗುಬಾಣ ಮಾಡದಿದ್ದರೆ ಎಲ್ಲವೂ ಸುಗಮ.


Leave a Reply

Back To Top