ಕಾವ್ಯ ಸಂಗಾತಿ
ಸಾರ್ಥಕ ಬದುಕು
ಖಾಕಿಯೊಳಗಿನ ಕವಿ (ನಾಗಪ್ಪ.ಬಿ.ಪಿಎಸ್ಐ)
ಹನಿ-ಹನಿಯಾಗಿ
ಸುರಿದ ಮಳೆಯು
ತುಸು ಭುವಿಯಲಿಂಗಿ
ಹಳ್ಳ-ಕೊಳ್ಳವಾಗಿ
ಕೆರೆಯ ಸೇರಿ ಹೊಳೆಯಾಗಿ ಹರಿದು
ನದಿಯ ಸೇರುವುದು
ನೀರಿಗೆ ನದಿಯೂ ಕೊನೆಯಲ್ಲ….
ಕಾಡು-ಮೇಡು
ಗಿರಿ-ಕಂದರಗಳಲಿ
ಬಾಗಿ- ಬಳುಕಿ
ಕೆಳಗೆ ಬಿದ್ದು
ಹಾಗೆಯೇ ಮೇಲೆದ್ದು
ಜರಿ-ತೋರೆಗಳನು ತನ್ನೊಡಲಲಿ ಸೇರಿಸಿಕೊಂಡು
ಸಾಗರದಲಿ ಕೊನೆಗೆ
ತಾ ಲೀನವಾಗುವುದು…
ತನ್ನ ಪಯಣದುದ್ದಕ್ಕೂ
ತನಗಲ್ಲದಿದ್ದರೂ
ಪ್ರಕೃತಿಯ ಜೀವಿ-ನಿರ್ಜಿವಿಗಳ ಬದುಕಿಗೆ
ಆಸರೆ-ಆಧಾರವಾಗಿ
ನೋಡುಗರಿಗೆ
ರಮಣೀಯ ಸ್ಥಳವಾಗಿ
ಆಸಕ್ತರಿಗೆ ಚಾರಣತಾಣವಾಗಿ
ಸಂತಸ-ಸಡಗರ
ಮನಕೆ ಮುದ ನೀಡುವುದು….
ಸಾರ್ಥಕ ಬದುಕು ಹಾಗಿರಬೇಕು ನದಿಯಂತೆ
ಹುಟ್ಟು-ಸಾವುಗಳ ಮಧ್ಯೆ
ಬೇಕು-ಬೇಡಗಳ
ತಾನು ಬಯಸದೆ
ನೆರೆಯ ಜನರ ಸೇವೆಯಲಿ ಸವೆದು
ತನ್ನದೆಲ್ಲವನು
ಜಗಕೆ ಊಣಿಸಿ
ಮನ ತಾ ತೃಪ್ತನಾಗಬೇಕು
ಪರರ ಬಾಳಿಗೆ ಬೆಳಕಾಗಿ….
ಖಾಕಿಯೊಳಗಿನ ಕವಿ (ನಾಗಪ್ಪ.ಬಿ.ಪಿಎಸ್ಐ)
Suuuuuuperrrrr sir
Superb sir
Nice sir