ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ 

ಪರೀಕ್ಷೆಗೆ ಹೆದರದಿರಿ..

ಮತ್ತೆ ಬಂತು ಪರೀಕ್ಷೆ! ಮಕ್ಕಳು ಇಡೀ ವರ್ಷ ಕಲಿತ ಪಾಠ ಪ್ರವಚನಗಳ, ಬರೆದ ಹೋಂ ವರ್ಕ್ ಗಳ ಕೊನೆಯ ತಿದ್ದುವಿಕೆ ಮತ್ತು ಕಲಿಕಾ ದೃಢತೆ! ಮುಂದಿನ ತರಗತಿಗೆ ತೇರ್ಗಡೆಗೊಳ್ಳುವ ಬಗ್ಗೆ ಶಿಕ್ಷಕರಿಗೆ ಮಾನದಂಡವಾಗಿ ಇರುವ ಅಳತೆಗೋಲು ಇದು. ಆದರೆ ದೇಶಕ್ಕೆ ರಾಜಕೀಯ ಬಿರುಗಾಳಿ ಬೀಸಿದ ಹಾಗೆ ತಮ್ಮ ಮಕ್ಕಳ ವಾರ್ಷಿಕ ಫಲಿತಾಂಶ ಇಂದು ಪೋಷಕರ ಡಿಗ್ನಿಟಿ, ಅಕ್ಕ ಪಕ್ಕದ ಮನೆಯವರ ಜೊತೆಗಿನ ಉತ್ತಮ ಬಾಂಧವ್ಯ , ಕುಟುಂಬದ ಜೊತೆಗಿನ ಸ್ಟೇಟಸ್ ಇವೆಲ್ಲವನ್ನೂ ಅವಲಂಬಿಸಿದೆ. ಅಷ್ಟೇ ಅಲ್ಲ , ದೇಶದಲ್ಲಿ ಪ್ರತಿ ರಾಜ್ಯದಲ್ಲಿ ಇರುವ ಜಾಣರ ಫಲಿತಾಂಶ, ಜಾಣರ ಶೇಕಡಾವಾರು ಲೆಕ್ಕಾಚಾರ, ರಾಜ್ಯಕ್ಕೆ ತೋರಿಸಲು ಜಿಲ್ಲಾವಾರು ಫಲಿತಾಂಶ, ತಾಲೂಕಿನ ಫಲಿತಾಂಶ, ಕ್ಲಸ್ಟರ್ ಫಲಿತಾಂಶ, ಶಾಲಾ ಫಲಿತಾಂಶ ಹೆಚ್ಚು ಇರಬೇಕು ಎಂಬ ಅದೇಕೋ ಗೊತ್ತಿರದ ಶೇಕಡಾ ಫಲಿತಾಂಶ! ಅಷ್ಟೇ ಅಲ್ಲ, ಶಾಲಾ ಗುಣಮಟ್ಟ ಕಲಿಕೆಯ ಲೆಕ್ಕಾಚಾರ! ಅದಕ್ಕಾಗಿ ಪರದಾಟ! ಆ ಮೂಲಕ ಶೇಕಡಾ ಫಲಿತಾಂಶದ ಮೂಲಕವೇ ತೇರ್ಗಡೆಯನ್ನು ಮಾತ್ರ ಅಲ್ಲ, ರಾಜ್ಯದ ಜಿಲ್ಲೆಗಳ ಪ್ರತಿಭೆ, ಜಾಣತನದ ಅರಿವು ಸಿಗುವುದು ಎಂಬ ಕಾರಣಕ್ಕಾಗಿ ಶಿಕ್ಷಕರ , ಉಪನ್ಯಾಸಕರ ಮೇಲೆ ಭೀಕರ ಒತ್ತಡ! ಅವರು ಅದನ್ನು ವಿದ್ಯಾರ್ಥಿಗಳ ಮುಂದೆ ಒತ್ತಡ ಹಾಗೆ ಆಗುವಷ್ಟು ಆಗಿದೆ.

ಈಗಂತೂ ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಮನೆ, ಕುಟುಂಬ, ಶಾಲೆ, ಊರು, ತಾಲೂಕು, ರಾಜ್ಯ, ಜಿಲ್ಲೆಗೆ ಹೆಮ್ಮೆ ತರುವ ಕಾರ್ಯ. ಅದರ ಮುಂದೆ ನಿಂತು ಅದು ಯಾಕೆ ಓದಲು ಬಾರದ ವಿದ್ಯಾರ್ಥಿಗಳನ್ನು ಕೂಡಾ ಆರರಿಂದ ಹದಿನಾಲ್ಕು ವರ್ಷಗಳ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದು ಪರೀಕ್ಷೆ ಬರೆಯಲಿ ಅಥವಾ ಬರೆಯದೆ ಇರಲಿ, ಪಾಸ್ ಮಾಡಿ, ಕೆಲ ಪೋಷಕರೂ ಹತ್ತನೇ ತರಗತಿಯವರೆಗೆ ಕಲಿಯದೆ ಇರುವ ಕಾರಣ ಅವರಿಗೆ ಶಾಲೆಗೆ ಬರಲು ಕೀಳರಿಮೆ. ಹಾಗಂತ ಕೆಲವು ಪೋಷಕರಿಗೆ ವಿದ್ಯೆಯ ಬಗ್ಗೆ ಅರಿವಿದೆ, ಇನ್ನೂ ಕೆಲವರಿಗೆ ಅರಿವಿದ್ದರೂ ಸಮಯ ಇಲ್ಲ. ಆದರೆ ಎಲ್ಲರ ಒತ್ತಡ ಮಕ್ಕಳ ಮೇಲೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರೂ, ವಿಷಯ ಶಿಕ್ಷಕರು, ಮನೆಯಲ್ಲಿ ಪೋಷಕರು ಎಲ್ಲರೂ ಎಲ್ಲಾ ಸಮಯದಲ್ಲೂ ಮಕ್ಕಳನ್ನು ಓದಿ ಓದಿ ಎಂದು ಪೀಡಿಸಿ, ಅವರ ಸಮಯವನ್ನೆಲ್ಲಾ ಓದಲೆಂದು ಇರಿಸಿ ಅವರ ಒಂದು ವರ್ಷವೆಲ್ಲಾ ಓದುವುದರಲ್ಲಿಯೇ ಕಳೆದು ಹೋಗುತ್ತದೆ. ಕೆಲವು ಸೋಮಾರಿ ಮಕ್ಕಳಿಗೆ ಇದು ಸರಿಯಾದುದೆ ಆದರೂ ಎಲ್ಲಾ ಮಕ್ಕಳಿಗೂ ತಮ್ಮ ಮುಂದೆ ಗುರಿ ಎಂಬುದು ಇರುವ ಕಾರಣ ಅತಿಯಾದ ಒತ್ತಡವನ್ನು ಅವರ ಮೇಲೆ ಹಾಕುವುದು ತರವೇ?

” ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು ಭತ್ತ ತುಂಬುವ ಚೀಲಗಳಾಗಬಾರದು” ಎಂದು ಕುವೆಂಪುರವರು ಹೇಳಿರುವಂತೆ ಮಕ್ಕಳಿಗೆ ಸ್ವಂತವಾಗಿ ಆಲೋಚಿಸಲು, ಸ್ವಂತವಾಗಿ ತಮ್ಮ ಅನಿಸಿಕೆಗಳನ್ನು ಬರೆಯಲು ಅವಕಾಶ ಸಿಕ್ಕಾಗ ಮಾತ್ರ ಸ್ವಂತಿಕೆ ಬರುತ್ತದೆ. ಈಗ ನಾವು ಪಾಯಿಂಟ್ ಬೈ ಪಾಯಿಂಟ್ ಕಲಿಸುವ ಕಾರಣ ಉತ್ತರವನ್ನು ಓದಿ ಬಾಯಿ ಪಾಠ ಮಾಡಿ ಕಲಿತಿದ್ದರೆ ಮಾತ್ರ ಆ ವಿದ್ಯಾರ್ಥಿ ಬರೆಯುತ್ತಾನೆಯೇ ಹೊರತು ಬೇರೇನೂ ಇಲ್ಲ. ಸ್ವಲ್ಪ ಗೊತ್ತಿಲ್ಲದೆ ಇದ್ದರೂ ಆ ಪ್ರಶ್ನೆಗೆ ಏನೂ ಬರೆಯದೆ, ಬಿಟ್ಟು ಬರುವುದೇ ಹೆಚ್ಚು. ಹೀಗಾದಾಗ ಪಾಸ್ ಅಂಕಗಳು ದೊರೆಯುವುದು ಕಷ್ಟ. ಇದಕ್ಕೆ ಪರಿಹಾರ ಬರೆಸುವುದೇ ಆಗಿದೆ. ಬರೆಸಿ, ತಿದ್ದಿಸಿ ಮತ್ತೆ ಮತ್ತೆ ಬರೆಯಿಸುವ ಕಾರ್ಯ ಏಕೆ ಎಂದರೆ ಅಕ್ಷರ, ಪದ, ವಾಕ್ಯ ರಚನೆಗಳನ್ನು ಸ್ವಂತವಾಗಿ ಬರೆಯಲು ಕಲಿಯದೆ ಇರುವುದು, ಅಕ್ಷರಗಳ ಕಡೆ ಉತ್ತಮ ಗಮನ ಕೊಡದೆ ಇರುವುದು, ಓದದೇ ಇರುವುದು, ಓದುವಾಗ ಚೆನ್ನಾಗೇ ಬರೆಯುತ್ತಿದ್ದರೂ ಅರೀಕ್ಷೆಯ ದಿನ ಮರೆತು ಹೋಗುವುದು, ಅಕ್ಷರ ಬಾರದೆ ಇರುವುದು, ಮರೆವು, ಟೆನ್ಶನ್, ಮನೆಯ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಇವೆಲ್ಲ ಕಡಿಮೆ ಅಂಕ ಗಳಿಕೆಗೆ ಕಾರಣ.

ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು. ಪರೀಕ್ಷೆಯ ಸಮಯದಲ್ಲಿ ಯಾವುದನ್ನೂ ಲೆಕ್ಕಿಸದೆ ಗಮನವನ್ನು ಕೇಂದ್ರೀಕರಿಸ ಬೇಕು. ಹೆದರಬಾರದು, ದೃತಿಗೆಡಬಾರದು, ಸ್ವಲ್ಪ ವ್ಯಾಯಾಮ, ಧ್ಯಾನ ಮಾಡಿ ಮನಸ್ಸನ್ನು ಆರಾಮಗೊಳಿಸಿ, ನಾನು ಈ ವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತೇನೆ ಎಂಬ ಮಾತನ್ನು ಹೇಳಿಕೊಂಡು ಮುಂದುವರೆಯಬೇಕು. ನಾವು ಬಯಸಿದ್ದನ್ನು ನಾವು ಸಾಧಿಸಬಲ್ಲೆವು. ನಾನು ಎಂಬ ಆತ್ಮವನ್ನು ಗಟ್ಟಿ ಮಾಡಿಕೊಳ್ಳಬೇಕು. ನೀವು ಆಸೆ ಪಟ್ಟಿರುವುದನ್ನು ನೀವು ಸಾಧಿಸಬಲ್ಲಿರಿ. ಛಲವಿರಲಿ, ಹಟವಿರಲಿ. ನೀವೇನಂತೀರಿ?


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154

Leave a Reply

Back To Top