ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಚಳಿಯೆಂಬ ಜಾದೂಗಾರ…..

ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು,
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಕೆ.ಎಸ್.ನರಸಿಂಹಸ್ವಾಮಿ

ಈ ಪದ್ಯದ ಸಾಲುಗಳು ಮನುಷ್ಯನ ಮನೋಭಾವಕೆ ಹಿಡಿದ ಕನ್ಬಡಿಯಂತೆ.ಯಾವ ಋತುವನ್ನು ಪೂರ್ಣಪ್ರಮಾಣದಲ್ಲಿ‌ ಮೆಚ್ಚುವ ಮನಸ್ಥಿತಿ ನಮ್ಮದಲ್ಲವೆಂದು ಒಪ್ಪಿಕೊಳ್ಳಲೇ ಬೇಕು.ಸಾಮಾನ್ಯವಾಗಿ ಚಳಿಬರುವ ಸೂಚನೆಯನ್ನು ನಮ್ಮ ದೇಹ ಬಲು ಬೇಗ ಸ್ಪಂದಿಸುತ್ತದೆ. ಗಡ ಗಡ ನಡುಗುವ ಕೈಕಾಲುಗಳು, ತಣ್ಣನೆಯ ನೀರು ಮುಟ್ಟಲಾಗದೇ ಒದ್ದಾಡುವ ಸ್ಥಿತಿ ನೆನೆದರೆ ಭಯ. ರಗ್ಗು ಹೊದ್ದು ಮಲಗಲು ಹೆಚ್ಚು ಇಷ್ಟ ಪಡುವ ಮಕ್ಕಳು,ಹಿರಿಯರು,ಚಳಿಯ ನಡುಕ ಸಹಿಸದೇ ಕೈಕಾಲಿಗೆ ಸಾಕ್ಸ್ ಧರಿಸಿ,ಅಥವಾ ಒಲೆಯ ಬುಡಕೆ ಶರಣಾಗುವ ಸನ್ನಿವೇಶ ಸರ್ವೇಸಾಮಾನ್ಯ.ಆದ್ರೆ ಅಮ್ಮಂದಿರಿಗೆ ಯಾವ ಚಳಿಯು ತಡೆಯಲಾರದು.ಬಿಸಿನೀರಿನಲ್ಲಿ ಕೈಯಿಟ್ಟು ಬೆಳಗಿನ ಕಾರ್ಯ ಪ್ರಾರಂಭಿಸುವುದನ್ನು ನೆನೆದರೆ ನೆಮ್ಮದಿ. ಚಳಿ ದೇಹದ ಸೌಂದರ್ಯ ಹೆಚ್ಚಿಸಲು ಹಾಗೂ ಬೇಡವಾದ ಚರ್ಮದ ಮೇಲ್ಪದರ ದೂರ ಸರಿಸಲು ಮರಗಟ್ಟಲು ಸಹಕಾರಿಯೆಂದು ಆ ಕ್ಷಣಗಳನ್ನು ತುಂಬಾ ನಾಜೂಕಿನಿಂದ ಬಗೆಹರಿಸಬೇಕು.ಸರಿಯಾದ ಆಹಾರ ಪದ್ದತಿಗಳನ್ನು ರೂಢಿಸಿಕೊಳ್ಳುವುದು ಬಹುಮುಖ್ಯ.ಚಳಿಗಾಲವು ಸಮಶೀತೋಷ್ಣ ವಾತಾವರಣಗಳಲ್ಲಿ ಶರತ್ಕಾಲ ಮತ್ತು ವಸಂತಕಾಲಗಳ ನಡುವೆ ಬರುವ ವರ್ಷದ ಅತ್ಯಂತ ಶೀತಲ ಋತು.ದಕ್ಷಿಣಾಯಣದಂದು, ದಿನಗಳು ಅತ್ಯಲ್ಪಾವಧಿಯನ್ನು ಹೊಂದಿರುತ್ತವೆ ಮತ್ತು ರಾತ್ರಿಗಳು ಅತಿದೀರ್ಘಾವಧಿಯನ್ನು ಹೊಂದಿರುತ್ತವೆ, ಮತ್ತು ಅಯನದ ನಂತರ ಋತು ಮುಂದುವರಿದಂತೆ ದಿನಗಳ ಅವಧಿ ಹೆಚ್ಚಾಗುತ್ತದೆ.ಚಳಿಯೆಂಬ ಜಾದೂಗಾರ ಮನಸ್ಸು ಮುದಗೊಳಿಸುವ ಮಾಯಾಕಾರ..

ಡಿಸೆಂಬರ್ ನಿಂದ – ಫೆಬ್ರವರಿವರೆಗೆ ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುವದರಿಂದ, ಬಹುಪಾಲು ಭಾರತದಲ್ಲಿ ತಂಪಾದ ಹವಾಮಾನ ಕಂಡುಬರುತ್ತದೆ. ಈ ಋತುವಿನಲ್ಲಿ ಹಿಮಾಲಯ ಪ್ರದೇಶದಲ್ಲಿ ಸರಾಸರಿ ತಾಪಮಾನ ೧೦–೧೫°C (೫೦–೫೯°F) ನಷ್ಟು ಇದ್ದು, ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಇದು ೨೦-೨೫°C (೬೮–೭೭°F) ಆಸುಪಾಸಿನಲ್ಲಿರುತ್ತದೆ. ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ (ಪಂಜಾಬ್, ಹರ್ಯಾಣ, ದೆಹಲಿ) ಸರಾಸರಿ ಗರಿಷ್ಠ ತಾಪಮಾನ ೧೬ – ೨೧°C (೬೧ – ೭೦°F) ಇದ್ದು, ಸರಾಸರಿ ಕನಿಷ್ಠ ತಾಪಮಾನ ೨-೮°C (೩೬-೪೬°F) ನಷ್ಟಿರುತ್ತದೆ. ಈ ಭಾಗದಲ್ಲಿ ಕೆಲವೊಮ್ಮೆ ಸೊನ್ನೆಗಿಂತಲೂ ಕಡಿಮೆ ತಾಪಮಾನ ಕಂಡು ಬರುತ್ತದೆ. ಅಮೃತಸರದಲ್ಲಿ ಇದು -೬°C (೨೧°F) ನಷ್ಟು ಕಡಿಮೆ ದಾಖಲಾಗಿದೆ. ಹಿಮಾಲಯ ಶ್ರೇಣಿಗಳು, ಉತ್ತರದ ಸೈಬೀರಿಯಾ ಪ್ರಾಂತದಿಂದ ಬರುವ ಶೀತಲ ಮಾರುತಗಳನ್ನು ತಡೆಯುವದರಿಂದ ದಕ್ಷಿಣ ಏಷ್ಯಾದಲ್ಲಿ ಚಳಿಗಾಲದ ತಾಪಮಾನವು ಇದೇ ರೇಖಾಂಶದಲ್ಲಿರುವ ಇತರೆ ಪ್ರದೇಶಗಳಿಗಿಂತ ಸಾಕಷ್ಟು ಬೆಚ್ಚಗಿರುತ್ತದೆ.

ಭಾರತೀಯ ಹವಾಮಾನ ಇಲಾಖೆ (IMD)ಯ ಪ್ರಕಾರ ಭಾರತದ ವಾರ್ಷಿಕ ವಾಯುಗುಣವನ್ನು ನಾಲ್ಕು ಅಧಿಕೃತ ಋತುಗಳನ್ನಾಗಿ ವಿಂಗಡಿಸಲಾಗಿದೆ. (ಕ)ಚಳಿಗಾಲ: ಜನವರಿ-ಫೆಬ್ರವರಿ (ಖ) ಬೇಸಿಗೆಕಾಲ : ಮಾರ್ಚ – ಮೇ (ಗ) ನೈಋತ್ಯ ಮಾನ್ಸೂನ್ ಅಥವಾ ಮುಂಗಾರು ಮಳೆಗಾಲ (ಘ) ಈಶಾನ್ಯ ಮಾನ್ಸೂನ್ ಅಥವಾ ಹಿಂಗಾರು ಮಳೆಗಾಲ.ಇವೆಲ್ಲವನ್ನೂ ಬಲ್ಲ ನಮಗೆ ಪ್ರಕೃತಿಯ ಸಹಜ ಬದಲಾವಣೆಯನ್ನು ಎದುರಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ.ನಿಸರ್ಗದ ಬದಲಾವಣೆಗೆ ದೇಹ ಕೂಡ ಪ್ರತಿಕ್ರಿಯಿಸುತ್ತದೆ. ಆರೋಗ್ಯದಲ್ಲಿ ಸಣ್ಣ ಏರುಪೇರು ಸಹಜ.

ಗಡ..ಗಡ…ಎಂದು ಮೈ ನಡುಗಿಸುವ ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಎಲ್ಲರೂ ಬೆಚ್ಚನೆಯ ಕಂಬಳಿ, ಚಾದರುಗಳನ್ನು ಮೈ ಮೇಲೇರಿಸುತ್ತ ಕೊಣೆಯ ಬೆಚ್ಚನೆಯ ಮೂಲೆಯೊಂದನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ, ನಿಮಗಿದು ಗೊತ್ತೆ…ಎಷ್ಟೊ ಹವ್ಯಾಸಿ ಹಾಗೂ ಸಾಹಸ ಪ್ರವೃತ್ತಿಯ ಯುವ ಪ್ರವಾಸಿಗರು ವರ್ಷಪೂರ್ತಿ ಈ ಕಾಲಕ್ಕೆಂದೆ ಎದುರು ನೋಡುತ್ತಿರುತ್ತಾರೆ. ಕಾರಣ ಈ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುವ ಸಾಹಸಮಯ ಕ್ರೀಡೆಗಳು ಹಾಗೂ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಪರೀಕ್ಷಿಸುವ ಚಟುವಟಿಕೆಗಳು.

ಮುಖ್ಯವಾಗಿ ಚಳಿಗಾಲದಲ್ಲಿ ಹೆಚ್ಚಿನ ಉತ್ಸಾಹಿ ಯುವ ಪ್ರವಾಸಿಗರು ಆಡ ಬಯಸುವುದು ಸ್ಕೀಯಿಂಗ್/ಸ್ಕೇಟಿಂಗ್ ಕ್ರೀಡೆಯನ್ನ. ಅಂದರೆ ಹಿಮದ ರಾಶಿಯ ಮೇಲೆ ವೇಗವಾಗಿ ಜಾರುತ್ತ ಸಾಗುವುದು. ಈ ಕ್ರೀಡೆಯಲ್ಲಿ ಕಾಲುಗಳಿಗೆ ವಿಶೇಷವಾಗಿ ತಯಾರಿಸಲ್ಪಟ್ಟ ಉಪಕರಣಗಳನ್ನು ಕ್ರಮಬದ್ಧವಾಗಿ ಸಿಕ್ಕಿಸಿಕೊಂಡು, ಕೈಗಳಲ್ಲಿ ಎರಡು ಊರುಗೋಲುಗಳ ಹಿಡಿದು ಅದರ ಸಹಾಯದಿಂದ ವೇಗವಾಗಿ ಹಿಮದಲ್ಲಿ ದೇಹದ ಸಮತೋಲನ ಕಾಯ್ದುಕೊಳ್ಳುತ್ತ ಸಾಗುವುದು. ಈ ಕ್ರೀಡೆ ವಿವರಿಸಿದಷ್ಟು ಸರಳವಲ್ಲವಾದರೂ ಕಲಿಯಲು ಅತಿ ಕಷ್ಟವಂತೂ ಅಲ್ಲ. ಇದಕ್ಕಾಗಿಯೆ ತರಬೇತಿ ಶಿಬಿರಗಳೂ ಸಹ ಲಭ್ಯವಿರುತ್ತವೆ.

ಚಳಿಗಾಲದ ಪ್ರವಾಸಿ ಕೇಂದ್ರಗಳು,ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಗುಲ್ಮಾರ್ಗ್ ಒಂದು ಸುಂದರ ಗಿರಿಧಾಮವಾಗಿದ್ದು ಸ್ಕಿಯಿಂಗ್ ಕ್ರೀಡೆಗೆ ಭಾರತದಲ್ಲೆ ಅತಿ ಹೆಚ್ಚು ಪ್ರಸಿದ್ಧಿಗಳಿಸಿದ ಪ್ರದೇಶವಾಗಿದೆ. ಏಷಿಯಾ ಖಂಡದಲ್ಲೆ ಸ್ಕಿಯಿಂಗ್ ಕ್ರೀಡೆಗೆ ಏಳನೇಯ ಶ್ರೇಷ್ಠ ಸ್ಥಳ ಎಂಬ ಕೀರ್ತಿಗೆ ಗುಲ್ಮಾರ್ಗ್ ಪಾತ್ರವಾಗಿದೆ. ಬೇಸಿಗೆಯ ರಾಜಧಾನಿ ನಗರವಾದ ಶ್ರೀನಗರಕ್ಕೆ ಅತಿ ಹತ್ತಿರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿರುವುದರಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ

ಋತು ಸಂಧಿಕಾಲವು ಹಲವಾರು ಕಾಯಿಲೆಗಳನ್ನು ಹೊತ್ತು ತರುತ್ತದೆ. ಜ್ವರ, ಕೆಮ್ಮು, ನೆಗಡಿ ಸಹಜ. ಅದರಲ್ಲೂ ಅಪಾಯಕಾರಿ ಅಂದೆನಿಸುವುದು ಉರಿಶೀತ. ಇದು ವಯೋವೃದ್ದರನ್ನು,ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ.ಚಳಿಯೆಂದಾಕ್ಷಣ ಚೈತನ್ಯ ತುಂಬುವ ಕಾಲಕ್ಕೆ ಒದಗುವ ಅನೇಕ ತಾಪತ್ರಯಗಳಿಗೆ ಒಡ್ಡಿಕೊಂಡು ಆರೋಗ್ಯ ಕಾಪಾಡುತ್ತ ಚಳಿಯ ಹಿತಾನುಭವವನ್ನು ಅನುಭವಿಸಬೇಕು.ಋತುವಿನ ಬದಲಾವಣೆಗೆ ಕಾರಣ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳ‌ನ್ನು ಹೊಂದುವುದು ಅತಿ ಮುಖ್ಯ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

7 thoughts on “

  1. ಮನುಷ್ಯನ ಮನೋಭಾವ ವಾಸ್ತವದ ನೆಲೆಗಟ್ಟಿನಲ್ಲಿ ಯವ ರೀತಿಯಲ್ಲಿ ಇರುವುದು ಎಂಬುದನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ…. ಜೊತೆಗೆ ಮಹತ್ವಪೂರ್ಣ ವಿಚಾರ ಸುಂದರ ವಾಗಿ ಬಿಂಬಿಸಿದ್ದಿರೀ.

    1. ಚಳಿಗಾಲದಲ್ಲಿ ಆಗುವ ಬದಲಾವಣೆ ಹಾಗೂ ಚಳಿಯ ಭವಣೆಯಲ್ಲಿ ಮನುಷ್ಯ ಪಡುವ ಪಾಡನ್ನು ಸುಂದರವಾಗಿ ಹೆಣೆದಿರುವೆ ಗೆಳತಿ ಬೌಗೋಳಿಕ ಜ್ಞಾನವನ್ನು ಬಿಚ್ಚಿಟ್ಟಿರುವ ನಿನ್ನ ಅಮೋಘ ಪ್ರತಿಭೆಗೆ ಮನ ಆನಂದ ಗೊಂಡಿತು ಗೆಳತಿ

  2. ತುಂಬಾ ದಿನಗಳ ನಂತರ ಇವರ ಬರಹ ಓದುವ ಅವಕಾಶ ಅದು ಕೂಡಾ ಬಸ್ಸಿನಲ್ಲಿ.ಆರಂಭದಲ್ಲಿ ಹೇಗಪ್ಪ ಮನಸ್ಸು ಗಟ್ಟಿ ಮಾಡಿಕೊಳ್ಳುವುದು ಅನಿಸಿತ್ತು.ಮೊದಲೇ ಚಳಿಗಾಲ… ಆದ್ರೆ ಓದುತ್ತ ಹೋದಂತೆ ವೈಜ್ಞಾನಿಕ ವಿಚಾರಧಾರೆಯೊಂದಿಗೆ ಲೇಖನ ಹಲವು ವಿಚಾರಗಳನ್ನು ತಿಳಿಯಪಡಿಸುತ್ತದೆ.ಧನ್ಯವಾದಗಳು ಮೆಡಮ್

  3. “ಭಾವ ಒಂದಾಗುವ ಬೆಸೆಯುವ
    ಹಿತವಾಗಿ ನಡುಗುವ,ಕಂಬಳಿಯೊಳಕ್ಕೆ ಮುದುರಿಕೊಳ್ಳುವ,
    ಬೆಳಗಾಗಿ ಏಬ್ಬಿಸಿದರೆ,ಶಫಿಸಿಕೊಂಡು ಬೆಚ್ಚನೆಯ ಕನಸುಗಳ ಸಹಿತ ಮತ್ತೆ ಮುದುರಿಕೊಳ್ಳುವ ಮನಸು
    ಮಾಗಿಯ ಚಳಿಯ ಘಮಲೇಹೀಗೆ…
    ಮತ್ತೆ ಮತ್ತೆ ಬೆಚ್ಚನೆಯ ಭಾವ ಅಪ್ಪಿಕೊಳ್ಳುವ ಸುಖದ ಸೊನೆ
    ತೆರೆದುಕೊಳ್ಳುವ ಬಗೆ.!

    ಚುಮು ಚುಮು ಚಳಿಗಾಲದ ಮಾಯಗಾರನ ಸೊಗಸು ಬಿಚ್ಚಿಕೊಳ್ಳುವ ಬಗೆಯನ್ನು ಕವಿಯತ್ರಿ ಶಿವಲೀಲಾ ಸಾಹಿತ್ಯದ ಹಂದರದಲಿ,ವಾಸ್ತವಿಕತೆಯ ಸಮಶೀತೋಷ್ಣ ತೆಯಲಿ ಸವಿಸ್ತಾರವಾಗಿ ಬಿಡಿಸಿಟ್ಟಿ ಪರಿ ಸೊಗಸೆನಿಸಿದೆ.ಸಕಾಲಿಕ ಲೇಖನ. ಉಪಯುಕ್ತ ಮಾಹಿತಿ ಒಳಗೊಂಡಿದೆ.

    ಸುಬ್ರಾಯ ಬಿದ್ರೆಮನೆ ಸಾಹಿತಿಗಳು

  4. ಖುಶಿಯಾಯಾತು. ಅಭಿನಂದನೆಗಳು.

    ಹೋಲಿಶೇಖರ ಸಾಹಿತಿಗಳು ಬೆಂಗಳೂರು

  5. ಶಿವಲೀಲಾ ಮೇಡಂರವರ ಲೇಖನಗಳೇ ಬಹು ಸೊಗಸು….
    ಭಾವದ,ವಿಚಾರಗಳ, ವೈಜ್ಞಾನಿಕ ಸಂಗತಿಗಳ ಹೂಗೊಂಚಲು….
    ಮನವ ಸೂರೆಗೊಳಿಸುತ್ತದೆ…
    ಸೂಪರ್ ಮೇಡಂ ಜೀ

Leave a Reply

Back To Top