ವಿಷ್ಣು ಆರ್.ನಾಯ್ಕ ಕವಿತೆ-ಪೇಪರ್ ಮಾರುವವ.

ಕಾವ್ಯ ಸಂಗಾತಿ

ಪೇಪರ್ ಮಾರುವವ.

ವಿಷ್ಣು ಆರ್.ನಾಯ್ಕ

ಆತ ಯಾರೋ ಗೊತ್ತಿಲ್ಲ
ನನ್ನೂರಿನ ಬಸ್ ನಿಲ್ದಾಣದ ತುಂಬ
ಎಡೆಬಿಡದೆ ಸುತ್ತುತ್ತಾನೆ..
ಮೇಲ್ನೋಟಕ್ಕೆ ಆತ ಅನಾಥ
ನಡುಗುವ ಕೈಗಳು
ಬಿಳಿಯ ಶರ್ಟು, ಲುಂಗಿ
ಕಣ್ಣಲ್ಲಿ ಕಾಣುವ ಮಿಂಚು

ಪೇಪರ್ ಸರ್.. ಪೇಪರ್..
ಪೇಪರ್ …ಬೇಕಾ ಸರ್..
ಉದಯ ವಾಣಿ.. ವಿಜಯವಾಣಿ..
ಮುಖ ನಿಟ್ಟಿಸಿದೆ..
ಪೇಪರ್ ಕೊಂಡುಕೊಂಡೆ…
ಒಂದು ಪೇಪರ್ ಮಾರಿದ ಸಂತೃಪ್ತಿ
ಒಂದೋ ‌….ಎರಡೋ ರೂಪಾಯಿ
ಕಮಾಯಿಸಿದ ಕಾಂತಿ
ಕಣ್ಣಲ್ಲಿ ಇಣುಕುವ ಧನ್ಯವಾದ.

ಪೇಪರ್ ಮೂಲ ಬೆಲೆಯಲ್ಲೇ 
ನಮಗೆ ಕೊಡುವ ಈತನಿಗೆ ದಿನಕ್ಕೆ
ಎಷ್ಟು ಕಮೀಷನ್…?
ಒಂದು ಪತ್ರಿಕೆಗಾ..?
ಇಡೀ ದಿನ ಪೇಪರ್ ಮಾರಿದ್ದಕ್ಕಾ…?
ಗೊತ್ತಿಲ್ಲ…
ಜೀವನ ನಿರ್ವಹಣೆ ಇಷ್ಟರಿಂದ ಸಾಧ್ಯವೇ? 
ಅದು ಗೊತ್ತಿಲ್ಲ…

ಪ್ರತಿದಿನ ಮಳೆ , ಚಳಿ, ಮಂಜನೂ
ಲೆಕ್ಕಿಸದೆ ಬೆಳಿಗ್ಗೆ ಆರು ಗಂಟೆಗೆ ಹಾಜರ್…
ಬರುತ್ತಾನೆ…
ಸುತ್ತುತ್ತಾನೆ….
ಬೇರೆ ಬೇರೆ ಬಸ್ಸುಗಳನ್ನೇರುತ್ತಾನೆ..
ಹೊಸ ಕನಸುಗಳೊಂದಿಗೆ…
ಅಂದಿನ ದಿನದ ರಸದೌತಣದೊಂದಿಗೆ…
ಬಣ್ಣ ಬಣ್ಣದ ಪತ್ರಿಕೆಗಳು..
ವಿಧವಿಧದ ಸುದ್ದಿಗಳು…
ಸಿಗುವ ವಿಧವಿಧದ ಜನಗಳು..
ಎಲ್ಲರೊಡನೆ ಬೆರೆಯುತ್ತಾನೆ…
ಚಿಲ್ಲರೆ ಇದ್ದರೂ ಒಂದೊ.. ಎರಡೋ …
ರೂಪಾಯಿ ಕಡಿಮೆ ಕೊಡುವವರು..
ಕೊಡದೇ ಇದ್ದುದಕ್ಕೆ ಕೋಪಿಸಿ ಕೊಳ್ಳುವವರು..
ತಿರಸ್ಕರಿಸುವವರು…

———————————————


ಇಷ್ಟರ ಮಧ್ಯೆಯು ಆತ ಅವ್ಯಾಹತವಾಗಿ 
ತಿರುಗುತ್ತಾನೆ…
ಜ್ಞಾನ ಹಂಚುತ್ತಾನೆ…
ಎಲ್ಲರಿಗೆ ಬದುಕುವ ಕಲೆ ಕಲಿಸುತ್ತಾನೆ…
ಸ್ಫೂರ್ತಿ ನೀಡುತ್ತಾನೆ..
ಭೂತ ಕಾಲದ ಗೋರಿಯಲ್ಲಿ ನೆನಪಾಗಿ ಕಾಡುತ್ತಾನೆ…

4 thoughts on “ವಿಷ್ಣು ಆರ್.ನಾಯ್ಕ ಕವಿತೆ-ಪೇಪರ್ ಮಾರುವವ.

  1. ವಸ್ತು ಸ್ಥಿತಿ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

Leave a Reply

Back To Top