ಹೊಸ ವರ್ಷದ ವಿಶೇಷ-2023

ಹೊಸ ವರ್ಷ ತರಲಿ ಹರ್ಷ

ಲತಾಶ್ರೀಈಶ್ವರ್

ನಮ್ಮ‌ಭಾರತಕ್ಕೆ ಯುಗಾದಿಯಿಂದ  ಹೊಸ ವರ್ಷ ಆರಂಭ. ಆದರೆ ಕ್ಯಾಲೆಂಡರ್ ದಿನವಾಗಿ ಜನವರಿ 1 ಹೊಸ ವರ್ಷದ ಆರಂಭ.  ಹಿಂದಿನ ಎರಡು ವರ್ಷ ಕೊರೋನಾ ಅಲೆಗಳ ಹೊಡೆತಕ್ಕೆ ನಾವೆಲ್ಲ ನಲುಗಿದೆವು. ಕೆಲವರಿಗಂತೂ ಇಡೀ ಬದುಕಿನಲ್ಲಿ  ಅನುಭವಿಸಬಹುದಾದಂತಹ  ಜೀವನ ಸತ್ಯದರ್ಶನ  ಎರಡೇ ವರ್ಷದಲ್ಲಿ ಮಾಡಿಸಿದ ಕರೋನ.

ಹಾಗಾದರೆ ಕರೋನಾದಿಂದ ಎಲ್ಲ ಕೆಟ್ಟದ್ದೇ ಆಯಿತಾ?  ಎಂದರೆ, ಖಂಡಿತಾ ಇಲ್ಲ ‌ . ಆದದ್ದೆಲ್ಲ ಒಳಿತೇ ಆಯಿತು ಎನ್ನುವ ದಾಸರ ಪದ‌ದಂತೆ,  ಕೆಟ್ಟಮೇಲೆ ಬುದ್ದಿ ಬಂತು ಎನ್ನುವ ಹಾಗೆ  ಎಂದು ಕೊಂಡರೆ,

ನಮ್ಮ ಯೋಗ,ಪ್ರಾಣಾಯಾಮ, ಆಯುರ್ವೇದ ಜೌಷಧಿಗಳು ಎಷ್ಟು ಮಹತ್ವದ್ದು ಎಂಬ ಅರಿವು ನಮಗೆಲ್ಲರಿಗಾಯಿತು. ಪಟ್ಟಣದ ಬದುಕಿನ  ಕಷ್ಟ ಗಳ ಅರಿವೂ ಎಲ್ಲರಿಗಾಯಿತು. ಈಗಿನ ಯುವಪಡೆಗಳು ಹಳ್ಳಿ, ಪಟ್ಟಣ,ಪ್ರಕೃತಿ  ಯ ಜೊತೆಗಿನ ನಂಟಿನೊಂದಿಗೂ ಹೇಗೆ ಬದುಕಬಹುದೆಂಬ ಅನ್ವೇಷಣೆ ಯೊಂದಿಗೆ, ಹೀಗೂ ಬದುಕಬಹುದು ಎಂಬ ರೀತಿ ಬದುಕತೊಡಗಿದ್ದಾರೆ. ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.

ಮತ್ತೊಂದು ಹೊಸವರುಷ ಬಂತು.  ಹೊಸ ವರುಷ ದಲ್ಲಿ  ಬರುವ ಯಾವುದೇ ಕಷ್ಟ ಸುಖಗಳನ್ನು ಎದುರಿಸಲು ಮನಸ್ಸು, ದೇಹ ಸನ್ನದ್ದವಾಗಿರಲಿ.   ಆಸೆಯೇ ದುಃಖಕ್ಕೆ ಮೂಲ,  ಹಾಗಾದರೆ ಎಲ್ಲ ಆಸೆ ಬಿಡಬೇಕಾ? ನಾವು ಮನುಷ್ಯರು ತಾನೆ.  ಆಸೆ ಇರಲಿ. ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚೋಣ.

ಯೋಗ, ಪ್ರಾಣಾಯಾಮ ದಿನನಿತ್ಯ ಮಾಡಲಾಗದಿದ್ದರು, ಹತ್ತು ಹೆಜ್ಜೆ ನಡೆದು ಹೋಗಿಬರೋಣ ಎಂದು ಕೊಂಡು ಅರ್ಧ ಗಂಟೆ ನಡೆಯೋಣ. ಮನೆಯಲ್ಲಿ ಪ್ರಾಣಿ ಗಳ ಸಾಕಲಾಗದಿದ್ದರೂ ಪರವಾಗಿಲ್ಲ, ಮನದಲ್ಲಿ ಪ್ರಾಣಿಗಳ ಬಗ್ಗೆ  ಒಲವು ತುಂಬಿರಲಿ.

ಆದಷ್ಟು ನಮ್ಮ ಬದುಕಿಗೆ ಸಂಬಂದಿಸಿದ ವ್ಯಕ್ತಿಗಳ ಜೊತೆಗೆ , ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ, ನಮ್ಮ‌ ಕರ್ತವ್ಯ ನಾವು ಮಾಡುತ್ತಾ ಸರಳವಾಗಿ  ಇರಲು ಪ್ರಯತ್ನಿಸೋಣ.

ಹಿತ್ತಾಳೆ ಕಿವಿ ಯಾಗುವುದನ್ನು ನಿಲ್ಲಿಸೋಣ.  ಎರಡೂ ದಿಕ್ಕಿನಲ್ಲಿ ಯೋಚಿಸಿ, ಪಕ್ಷಿನೋಟ ಬೀರಿ, ವಿಷಯವನ್ನು ನಿರ್ದರಿಸೋಣ.

ಎಲ್ಲರೊಂದಿಗೆ ಹಿತವಾಗಿ ಬೆರೆಯುತ್ತಾ, ಎಲ್ಲರೊಳಗೊಂದಾಗು ಮಂಕುತಿಮ್ಮನಾಗೋಣ.

 ಸಾಧ್ಯವಾಗಲಿಲ್ಲ ಎಂದರೆ ಎರಡು ಹೆಜ್ಜೆ ಹಿಂದೆ ನಿಲ್ಲೋಣ. ಒಳ್ಳೆಯದು ಮಾಡಲಾಗದಿದ್ದರೂ ಪರವಾಗಿಲ್ಲ, ಹಾಳುಮಾಡುವುದು ಬೇಡ.

ನಮ್ಮ‌ಮನಸ್ಸಿನ‌ ನೋವುಗಳನ್ನ  ಆಯ್ದ ವ್ಯಕ್ತಿಯ ಜೊತೆಗಷ್ಟೇ  ಹಂಚಿಕೊಳ್ಳೋಣ.

ಸಕಾರಾತ್ಮಕ‌‌‌ ಚಿಂತನೆ ಬೆಳೆಸಿಕೊಳ್ಳೋಣ.

ಜಂಗಮವಾಣಿ ಅಂದರೆ ಮೊಬೈಲ್ ನಿಂದಾಗಿ ಈಗ ಅಂಗೈ ನಲ್ಲಿ ಬ್ಯಾಂಕ್,  ವ್ಯಾಪಾರ ವಹಿವಾಟು .

 ಇದರ ಜೊತೆ ಮಾನವ  ಸಂಬಂಧಗಳ ಜೋಡಣೆ, ಪ್ರತಿಯೊಂದಕ್ಕು ಮುಖ್ಯಪಾತ್ರ ವಹಿಸಿದ

ಈ ಮೊಬೈಲ್ ನಿಂದನೇ ನಮ್ಮ ದಿನ ಪ್ರಾರಂಭ. ಹಿತಮಿತವಾಗಿ ಬಳಸಿದರಷ್ಟೇ  ಈ ಜಂಗಮ ವಾಣಿಯಿಂದ  ಸುಖ ಎನ್ನುವ ಅರಿವು ಎಲ್ಲರಲ್ಲಿ ಮೂಡಲಿ.

ಆದಷ್ಟು ಸ್ವಾವಲಂಬಿಗಳಾಗಿ ಬದುಕೋಣ.

ನಾವು ಭಾರತೀಯರದ್ದು ಗರಿಕೆ ಹುಲ್ಲಿನ ತರಹದ ಬದುಕು.   ನಮ್ಮ ದೇಶದ ಮೇಲೆ ಎರಗಿ ಬಂದ  ಅನೇಕ ಆಕ್ರಮಣಕಾರರ ಹಾವಳಿ,  ನೈಸರ್ಗಿಕ ವಿಕೋಪ ಗಳಾದ ಬಿರುಗಾಳಿ, ಮಹಾಮಳೆ, ಭೀಕರ ಭೂಕಂಪ , ಮಹಾಮಾರಿಯಂತಹ ಖಾಯಿಲೆಗಳು, ಎಂತೆಂತಹ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತ ತಲೆತಲಾಂತರದ  ಬದುಕು ನಮ್ಮದು. ಇಂತಹ ಕಷ್ಟಕೋಟಲೆಗಳ ಬಿರುಗಾಳಿ ಯನ್ನು ಧೈತ್ಯಾಕಾರದ ಮರ ತಡೆಯಬಲ್ಲದೇ? ಅದೇ ಗರಿಕೆ ಹುಲ್ಲಾದರೆ, ನಿಂತಲ್ಲೆ ಅಲುಗಾಡಿ, ಪರಿಸ್ಥಿತಿ ಶಾಂತವಾದ ನಂತರ ನಿಧಾನವಾಗಿ ಮತ್ತೆ ಹಸಿರಾಗಿ ಚಿಗುರೊಡೆಯತೊಡಗುತ್ತದೆ.

‌2022 ಕ್ಕೆ ವಂದನಾರ್ಪಣೆ ಸಲ್ಲಿಸಿ,  2023 ಕ್ಕೆ ಸ್ವಾಗತ ಗೀತೆಯೊಂದಿಗೆ ಹೊಸವರುಷವನ್ನು ಆದರದಿಂದ ಬರಮಾಡಿಕೊಳ್ಳುತ್ತಾ, ಎಲ್ಲವನ್ನು ಎದುರಿಸಿ ,  ಫೀನಿಕ್ಸ ಪಕ್ಷಿಯಂತೆ ಎದ್ದು ನಿಂತು,  ನೆಮ್ಮದಿ ಜೀವನದಿಂದ ಬಾಳುವ ಕಲೆ  ನಮ್ಮದಾಗಿಸಿಕೊಳ್ಳೋಣ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಟ್ಯ.  ಭಾಷೆ, ಮತ ಗಳ ಮೀರಿದ ಸೀಮಾತೀತ ವಿಶ್ವಮಾನವರಾಗಿ ಬದುಕೋಣ.

‌———————————–

Leave a Reply

Back To Top