ಹೊಸ ವರ್ಷದ ವಿಶೇಷ-2023

ಐಗೂರು ಮೋಹನ್ ದಾಸ್, ಜಿ.

ವಿದಾಯ ಹೇಳುತ್ತಿರುವ ಕ್ಯಾಲೆಂಡರ್ ಹೇಳಿದ ನೀತಿ ಪಾಠ..!

ಕೊಡಗಿನ ಮಧುರ ಚಳಿ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಹಿಂದೆಯೇ ಮನಸ್ಸು ಚಲಿಸುತ್ತಿದ್ದ ಕಾರಣ, ಮನೆ ಮಂದಿಯ ಕಣ್ಣು ತಪ್ಪಿಸಿ ಊಟದ ಮುನ್ನವೇ

ಒಂದು ಕೆಂಪು ‘ನೈಂಟಿ’ ಕುಡಿದು, ಮೆಲ್ಲನೆ ಸಿಗರೇಟ್ ಸಹ ಉರಿಸಿ ಬೂದಿ ಮಾಡಿಬಿಟ್ಟೆ…!

   ಈ ಸಮಯದಲ್ಲಿ ನನ್ನ ದುಸ್ಥಿತಿ ನೋಡಿ, ಗೋಡೆಯ ಮೇಲೆ ತೂಗು ಹಾಕಿದ್ದ ಕ್ಯಾಲೆಂಡರ್ ನಗುತ್ತಿತ್ತು…! ಈ ಕ್ಯಾಲೆಂಡರ್ ಗೆ ಇನ್ನೂ ಕೇವಲ ಒಂದು ದಿನ ಮಾತ್ರ ಬದುಕು…! ನಂತರ ಎಲ್ಲಾರು ತೂಗು ಹಾಕಿರುವ ಕ್ಯಾಲೆಂಡರ್

-ನ್ನು ತೆಗೆದು ಮೂಲೆಗೆ ಹಾಕಿ, ಹೊಸ ಕ್ಯಾಲೆಂಡರ್ ನ್ನು ತೂಗು ಹಾಕಿ, ಹಳೆಯ ಮಿತ್ರನ್ನು ಮರೆತು ಬಿಡುತ್ತಾರೆ..!ಇದು ನಾನು ಒರ್ವ ಮಾಡುತ್ತಿರುವ ‘ತಪ್ಪು’ ವಲ್ಲ…! ಜಗತ್ತಿನ ಹೆಚ್ಚಿನ ಮಂದಿಯೂ ಇಂದೇ ತಪ್ಪು ಮಾಡುತ್ತಾರೆ…! ಆದರೆ ಈ ಹಳೆಯ ಕ್ಯಾಲೆಂಡರ್ ನಮಗೆ ಈ ಹಿಂದೆ ಆನೇಕ ಬಾರಿ ‘ಸಹಾಯ’ ಮಾಡಿರುತ್ತದೆ…! ನಮಗೆ ಜೀವನದಲ್ಲಿ ಒಂದು ಸಣ್ಣ ‘ ಸಹಾಯ’ ಮಾಡಿದ ಮಂದಿಯನ್ನು ಸಹ ನಾವು ಮರೆಯಬಾರದು…!ಆದರಿಂದ ಈಗ ವಿದಾಯ ಹೇಳುತ್ತಿರುವ ಕ್ಯಾಲೆಂಡರ್ ಗೆ  ಪೂರ್ಣವಾಗಿ ಮಂಗಳ ಹಾಡದೇ, ಮನೆಯ ಒಂದು ಮೂಲೆಯಲ್ಲಿ ತುಸು ಸ್ಥಾನ ನೀಡಲೇಬೇಕು…!

   ನನ್ನ ಮನಸ್ಸು ಮತ್ತು ಮನದ ನೋವು ಕಂಡು ವಿದಾಯ ಹೇಳುತ್ತಿರುವ ಕ್ಯಾಲೆಂಡರ್ ನನಗೆ ಕೆಲವೊಂದು ನೀತಿ ಪಾಠ ಹೇಳಿತ್ತು…! ಆದನ್ನು ಈಗ ನಿಮಗೆ ಒಂದೊಂದು ಹೇಳುವೆ..! ಆಗ ನೀವು ಕಂಠಪೂತಿ೯ ಹೆಂಡ ಕುಡಿದು, ಈ ಕುಡುಕು ಹೇಳುತ್ತಿರಬಹುದು ಎಂದು ಮಾತ್ರ ಹೇಳಬೇಡಿ..!

      1. ಹೊಸ ವಷ೯ದ ನೆಪ ಹೇಳಿ, ವಷ೯ದ ಕೊನೆ ದಿನ

ನಿದ್ರೆ ಮಾಡದೇ ‘ಎಣ್ಣೆ’ ಪಾಟಿ೯ ಮಾಡಬೇಡಿ..!ಏಕೆಂದರೆ ವಷ೯ದ ಮೊದಲ ದಿನ , ನೀವು ” ಹಾಸಿಗೆ”ಯಿಂದ ಎದ್ದೇಳುವಾಗ ಸೂರ್ಯ ಮುಳುಗಿರಬಹುದು.. !

    2.ವರ್ಷದ 365 ದಿನ… 52 ವಾರ… 12 ತಿಂಗಳು ಕಳೆದು, ನೀವು ಹೊಸ ವಷ೯ದ ಸಂಭ್ರಮದಲ್ಲಿ ಮುಳುಗಿರುವಾಗ ಒಂದು ವಯಸ್ಸು ನ ‘ಆಯುಷ್ಯ’ ಕಡಿಮೆಯಾಗಿರುವ ವಿಚಾರ ಮರೆಯಬೇಡಿ…!

   3.ಸೋಮಾರಿತನ ದೂರ ಮಾಡಿ, ಬೆವರು ಸುರಿಸಿ ದುಡಿಯುವ ಮನಸ್ಸು ಮಾಡಿ…! ಆಗ ನಿಮಗೆ ‘ಲಕ್ಷ್ಮಿ’ದೇವತೆಯ ಕೃಪೆ ದೊರೆಯುತ್ತದೆ…!

  4. ಕೆಟ್ಟ ಘಳಿಗೆಯಲ್ಲಿ ಕಲಿದ ಸರ್ವ ಕೆಟ್ಟ ಚಟಗಳನ್ನು ಬಾಳಿನಿಂದ ದೂರ ಮಾಡಿ..! ಆಗ ಸಮಾಜದಲ್ಲಿ ಗೌರವದಿಂದ ಬದುಕು ಸಾಗಿಸುಹುದು…! ಆದರೆ ಆಯುಷ್ಯ ಮಾತ್ರ ಹೆಚ್ಚು ದೊರೆಯುವುದಿಲ್ಲ..!ಭಗವಂತನ ತೀಪು೯ಗೆ

ತಲೆಯಾಡಿಸಲೇ ಬೇಕು..!

   5. ಜೀವನದಲ್ಲಿ ‘ಮೂಢನಂಬಿಕೆ’ ಹಾದಿಯಲ್ಲಿ ಸಾಗಬೇಡಿ..! ಯಾವುದೇ ಅಸ್ವಾಮಿಗಳ ಭವಿಷ್ಯವನ್ನು ನಂಬಬೇಡಿ..! ಮುಂದಿನ ದಿನದ ಭವಿಷ್ಯ ಖಚಿತವಾಗಿ ಗೊತ್ತಿದ್ದರೇ ಅವರು ಸ್ವಾಮಿಗಳಾಗಿ ಬದುಕುತ್ತಿರಲಿಲ್ಲ..!

   6. ಪ್ರೀತಿ- ಪ್ರೇಮ-ಪ್ರಣಯ ಎಲ್ಲಾರ ಮನಸ್ಸಿನಲ್ಲಿ ಇರಲಿ.. ಆದರೆ ‘ಕಾಮ’ಕ್ಕೆ ದೊಡ್ಡ ಬೇಲಿ ಇರಲಿ…!

   7. ನಿಮ್ಮ ಜೇಬಿನಲ್ಲಿ ಹಣ… ನಿಮ್ಮ ಹೆಸರುನ ಜೊತೆ ಇರುವ ಪದವಿಗಳಿಂದ ನಿಮ್ಮನ್ನು ಈ ಸಮಾಜ ‘ಮನುಷ್ಯ’ ಎಂದು ಕರೆಯುವುದಿಲ್ಲ..! ಗುರು-ಹಿರಿಯರಿಗೆ ಬೆಲೆ ನೀಡಿ, ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಇದ್ದರೇ ಮಾತ್ರ ನೀವು

ಮನುಷ್ಯರು…! ಇಲ್ಲಾದಿದ್ದರೇ…..?

ನಾನು ಹೇಳುವುದಿಲ್ಲ…! ನೀವೇ ಕಲ್ಪನೆ ಮಾಡಿಕೊಳ್ಳಿ..!

   8. ಬದುಕಿನಲ್ಲಿ ಓದುವ ಅಭ್ಯಾಸವನ್ನು ಪುನಃ ಪ್ರಾರಂಭಿಸಿ…! ಮೊಬೈಲ್ ನ್ನು  ಹೆಚ್ಚು ಸಮಯ ಎತ್ತಿ ಮುದ್ದಾಡಬೇಡಿ…!

   9.ಚುನಾವಣೆ ಸಮಯದಲ್ಲಿ ಹಣ – ಹೆಂಡಕ್ಕೆ ‘ ಮತ’ವನ್ನು

ಮಾರಾಟ ಮಾಡಬೇಡಿ…!ಇದು ಅತ್ಯಂತ ಪಾಪದ ಕೆಲಸವಾಗಿದೆ…!

10. ಮನಸ್ಸಿನಲ್ಲಿ ಕನಸು – ಆಸೆಗಳು ಇರಲಿ.! ಆದರೆ ದುರಾಸೆ… ಅಸೂಯೆಗೆ ತುಸು ಜಾಗ ನೀಡಬೇಡಿ..! ಇದು

ಕೊರೊನಾ ವೈರಸ್ ಗಳನ್ನು ಮೀರಿಸುವ ವೈರಸ್…!

         ಕ್ಯಾಲೆಂಡರ್ ನ ನೀತಿ ಪಾಠ ಸಾಗುತ್ತಲೇ ಇತ್ತು…!ನಾನು ಸಂಕಟದಿಂದ ಯೋಚಿಸುತ್ತಲೇ ಕುಳಿತೆ…! ಆದರೆ ಒಂದು ಮಾತ್ರ ಸತ್ಯ…!

   2023ರಲ್ಲಿ ನಾನು ಬದಲಾಗುವೆ…!!!


Leave a Reply

Back To Top