ನಮ್ಮ ಬಸವಣ್ಣ

ಲೇಖನ

ನಮ್ಮ ಬಸವಣ್ಣ

ರಂಗಸ್ವಾಮಿ ಮಾರ್ಲಬಂಡಿ

 ಹನ್ನೆರಡನೆ ಶತಮಾನದಲ್ಲಿ  ಕರ್ನಾಟಕದಲ್ಲಿ ಮುಖ್ಯವಾಗಿ ಉತ್ತರ  ಕರ್ನಾಟಕದ ಕೇಂದ್ರವಾಗಿ ರಾಜಕೀಯ ಅಧಿಕಾರದ ಜೊತೆಗೆ ಜ್ಞಾನವೂ ಆ ಸಂಸ್ಥಾನದಿಂದ ಪಸರಿಸುತಿತ್ತು ಸಾಹಿತ್ಯ ಅಂದರೆ ಭಾಷೆ ಪ್ರವೀಣರ ಚಾಣಾಕ್ಷ ಪ್ರದರ್ಶನ ಅಷ್ಟೆ ಅಲ್ಲ ಸಾಮಾನ್ಯರ ಮನೆಮಾತು ಎಂದು ಅದು ಜನರ ಜೀವನ ಉದ್ದಾರಕ್ಕೆ ಸುಲಭ ಮಾರ್ಗ ಎಂದು ಸಂಸ್ಥಾಗತವಾಗಿ ಪರಿವರ್ತನೆ ಮಾಡಿದ ಪ್ರತಿಭೆ ಬಸವಣ್ಣ ಎಂಬುದು ಕರ್ನಾಟಕ ಸಾಹಿತ್ಯ ಇತಿಹಾಸ ನಮಗೆ ವಿವರವಾಗಿ ಹೇಳುವುದು.

ಸಾಮಾನ್ಯನೊಬ್ಬನ ಜೀವನಕ್ಕೆ ಜ್ಞಾನವಷ್ಟೆ ಸಾಲದು ಅವ ಅಂದರೆ ಸಾಮಾನ್ಯನ ಜೀವನಕ್ಕೆ ಭಕ್ತಿಯೂ ಪ್ರಮುಖ ಆಯಾಮ ಅದು ದೊಡ್ಡ,ಸಣ್ಣ ಅಥವಾ ಮೇಲು ಕೀಳು ಎಂಬ ಭೇದ ಭಾವ ಇಲ್ಲದೆ ಎಲ್ಲರನ್ನು ಒಳಗೊಂಡ ಎಲ್ಲರಿಗೂ ದೇವರನ್ನು ಪ್ರಸಾಧಿಸಿದವ ಬಸವಣ್ಣ.

Kannada Vachanakararu

ಸಾಮಾನ್ಯನ ಸಾಹಿತ್ಯ:

     ಮನುಷ್ಯನು ತನ್ನ ಜೀವನಕ್ಕೆ ಸಾಹಿತ್ಯವೂ ಕೂಡ ನಿತ್ಯ ಅಗತ್ಯಗಳಲ್ಲಿ ಒಂದು ಅವನಿಗೆ ಬೇಕಾದ ಆಹಾರ ನೀರು ಯಾವ ರೀತಿಯೋ ಅದೇ ರೀತಿ ಸಾಹಿತ್ಯ ಕೂಡ ಒಂದು…! ಹಳ್ಳಿಯ ಕಟ್ಟೆಗಳ ಮೇಲೆ ಕೂತು ಹೇಳುವ ಮಾತು ಕೂಡ ಒಂದು ಸಾಹಿತ್ಯ ಪ್ರಕಾರವೇ…!

ಅದರ ಜೊತೆಗೆ ಒಂದು ಭಿನ್ನ ರೀತಿಯ ಸಾಹಿತ್ಯ ಮನುಷ್ಯನ ಭೌದ್ಧಿಕ ಪ್ರೌಢಿಮೆಯ ಒಂದು ರೂಪವಾಗಿ ಕೂಡ ಬೆಳದು ಬಂತು ಅದು ಮೊದ ಮೊದಲು ಭಾರತೀಯ ನೆಲದಲ್ಲಿ ಸಂಸ್ಕೃತ ಭಾಷೆ ಅಥವಾ ತಮಿಳು ಭಾಷೆ ಅಥವಾ ನಮ್ಮದೇ ಕನ್ನಡ ಭಾಷೆಯಲ್ಲಿ ವ್ಯವಸ್ಥಿತ ಸಾಹಿತ್ಯ ಅಥವಾ ರೂಪಕ ಸಾಹಿತ್ಯ ಅಥವಾ ಲಿಖಿತ ಸಾಹಿತ್ಯ ಅನಾಧಿ ಕಾಲದಿಂದ ರಚನೆ ಆಗಿತ್ತು ಆದರೆ ಕನ್ನಡ ಭಾಷೆಯಲ್ಲಿ ರಚನೆಯಾದಂತಹ ಸಾಹಿತ್ಯ ಕನ್ನಡ ಭಾಷೆಯಲ್ಲಿ ಒಂದು ರೀತಿ ಗತ್ತು ಅಥವಾ ಶಕ್ತಿಯನ್ನು ತೋರ್ಪಡಿಸಿ ಅದು ಕೇವಲ ಕನ್ನಡ ಪಂಡಿತರಷ್ಟೆ ಅರ್ಥ ಮಾಡಿಕೊಂಡು ಉಳಿದವರು ಬೆರಗುಗಣ್ಣಿನಿಂದ ನೋಡಿ ಸುಮ್ಮನಾಗಿರಿಸಿದ್ದಿತು ಅಂದರೆ ಆ ಮೂಲಕ ಅವರು ಸಾಮಾನ್ಯನಿಗೆ ಕನ್ನಡವನ್ನು ಕೂಡ ಪರಕೀಯ ಭಾಷೆಯನ್ನಾಗಿ ಮಾಡಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ ಹಾಗಂತ ನಾನು ಅವರನ್ನು ಹಿಂದಿನ ಸಾಹಿತ್ಯ ರಚನಕಾರರನ್ನು ತೆಗಳುತ್ತಿಲ್ಲ ಏಕೆಂದರೆ ಅವರ ಕಾಲದಲ್ಲಿ ಪರಿಸ್ಥಿತಿ ಒಂದು ವರ್ಗದ ಭಾಷೆಯಾದ ಸಂಸ್ಕೃತ ಭಾಷೆಗೆ ಪೋಟಿಯಾಗಿರಬಹುದು ಅಥವಾ ಕನ್ನಡದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಕೆಲಸ ಮಾಡಿರಬಹುದು.

Sharaneyaru (ಶರಣೆಯರು)

ಆದರೆ ಹನ್ನರಡೆನೇ ಶತಮಾನದಲ್ಲಿ ಬಸವಣ್ಣ ಮತ್ತು ಅವರ ಸಂಗಡಿಗರು ಹುಟ್ಟುಹಾಕಿದ ಸಾಹಿತ್ಯದ ಪ್ರಕಾರವೂ ಜನಸಾಮಾನ್ಯರಿಗೆ ಅಂದರೆ ಬೀದಿಯಲ್ಲಿ ಓಡಾಡುತ್ತಾ ತಿರುಗಾಡುವವನಿಗೆ ಸಾಹಿತ್ಯ ಅರ್ಥಮಾಡಿಸಿದವರು ಇವರು..! ಈ ಅನುಭವ ಮಂಟಪದ ಸಂಗಡಿಗರು.

ಜೊತೆಗೆ ಇಲ್ಲಿ ಇನ್ನೊಂದು ವಿಷಯ ಗಮನಿಸಿಬೇಕಾದದ್ದು ಏನೆಂದರೆ ಅವರು ಬಸವಣ್ಣನವರ ಅನುಭವ ಮಂಟಪದಲ್ಲಿ ಭಾರತೀಯ ನೆಲದ ಜಾತಿವ್ಯವಸ್ಥೆಯಲ್ಲಿ ಎಲ್ಲಾ ಜಾತಿಗಳ ಬುದ್ದಿವಂತರನ್ನು ಒಟ್ಟುಗೂಡಿಸಿ ಸಾಹಿತ್ಯ ರಚಿಸಿದವರು ಇವರು, ಅಂದರೆ ಸಾಹಿತ್ಯದ ಪ್ರಕಾರಕ್ಕೆ ಅವರು ಪ್ರತಿನಿಧಿಲಾರದ ಜಾತಿಗಳಿಗೆ ಪ್ರತಿನಿಧ್ಯ ಕಲ್ಪಿಸಿ ಕೊಟ್ಟ ಶ್ರಯಸ್ಸು ಈ  ಸಮಸಮಾಜವಾದಿ ಬಸವಣ್ಣಗೆ ಕೊಡಬೇಕೆಂಬುದು ನನ್ನ ಭಾವನೆ.ಅಲ್ಲಿಯವರೆಗೆ ಕೆಳಜಾತಿಯವರು ಅಕ್ಷರ ಕಲಿಯಬೇಕೆಂದರೆ ಮಹಾಭಾರತದ ಕರ್ಣನೇ ಆಗಿರಬೇಕಿತ್ತು ಎಂಬುದು ದುರ್ಧೈವದ ವಾಸ್ತವ…!ಆ ಮೂಲಕ ಬಸವಣ್ಣನವರು ಸಮಾಜೋದ್ದಾರಕ್ಕೆ ಅಥವಾ ಸಮಸಮಾಜದ ಕಲ್ಪನೆಗೆ ಸಾಹಿತ್ಯ ಕೂಡ ಒಂದು ಪ್ರಕಾರವೆಂದು ಗುರಿತಿಸಿದ ಪ್ರಭು ಬಸವಣ್ಣ.ಅದಕ್ಕಾಗಿ ಅವರು ಸಾಹಿತ್ಯವನ್ನ ಸಾಮಾನ್ಯನಿಗೆ ಅರ್ಥಮಾಡಿಸುವ ಸಲುವಾಗಿ ಆಡುಮಾತಿನ ಕನ್ನಡದಲ್ಲಿ  ಸಾಹಿತ್ಯ ಸೃಷ್ಟಿಸಿದರು.

ಸಮಸಮಾಜ ಕನಸು ಅಷ್ಟೆ ಅಲ್ಲ ವಾಸ್ತವವೂ:

ಸಾಹಿತ್ಯ ರಚನೆಕಾರರು ಅಲ್ಲಿಯವರಗೆ ಒಂದು ಸಂಸ್ಥಾನದಲ್ಲಿ ಅಂದರೆ ರಾಜಾಶ್ರಯದಲ್ಲಿ ಕವಿಯಾಗಿ ಅಥವಾ ಸಾಹಿತ್ಯಗಾರನಾಗಿ ಅಶ್ರಯ ಪಡೆದಿದ್ದರು ಅಂದರೆ ಅವರಿಗೆ ರಾಜಕೀಯ ಅಧಿಕಾರದ ಗದ್ದುಗೆ ಸಿಕ್ಕಿದ್ದಿಲ್ಲ ಆದರೆ ಬಸವಣ್ಣನಿಗೆ ಅಧಿಕಾರದ ಗದ್ದುಗೆ ಸಿಕ್ಕಿತ್ತು ಅಥವಾ ಬಿಜ್ಜಳನಿಗೆ ಇವರೇ ಅಧಿಕಾರ ಕೊಡಿಸಿದ್ದರೋ ಎಂಬುದು ಊಹಾತೀತ ಇನ್ನೊಂದು ರೂಪದಲ್ಲಿ ಗಿರೀಶ್ ಕಾರ್ನಾಡ್ ರವರು ತಮ್ಮ ನಾಟಕದಲ್ಲಿ ಪ್ರಸ್ತಾಪಿಸಿದಂತೆ ಅವರು ಅಧಿಕಾರವನ್ನು ಇಬ್ಬರು ಅಂದರೆ ಬಸವಣ್ಣ ಮತ್ತು ಬಿಜ್ಜಳ ಜೊತೆಗೂಡಿ ಸಮಾಜ ಬದಲಾವಣೆಗೆ ಪಡೆದಿರಬಹುದು.

ಮುಖ್ಯ ವಿಷಯ ರಾಜನ ಅಧಿಕಾರವೂ ಈ ಜಾತಿ ವ್ಯವಸ್ಥೆಗೆ ಒಂದು ಕಾರಣ ಅಲ್ಲದೆ ಅದರ ನಿರ್ಮೂಲನೆಗೆ ಸಾಧನ ಅಂತ ಕಂಡುಕೊಂಡ ವ್ಯಕ್ತಿಯೂ ಬಸವಣ್ಣ. ಅದಕ್ಕಾಗಿಯೇ ಅವರು ಮಹಾಭಾರತದ ಕಾಲದಲ್ಲಿ ವ್ಯಾಸ ಮಹರ್ಷಿ ಮಾಡದ ಅರಿಕೇಸರಿ ಕಾಲದಲ್ಲಿ ಪಂಪಮಾಡದ ತ್ಯಾಗವನ್ನ ಅಥವಾ ಧೈರ್ಯವನ್ನ ಬಸವಣ್ಣ ಮಾಡಿದ…!

ಅದರಲ್ಲಿ ಸಮಸಮಾಜದ ಕಲ್ಪನೆ ಅಷ್ಟೆ ಅಥವಾ ಎಲ್ಲರಿಗೂ ಆಹಾರ ಕೊಡುವ ಒಂದು ಆಶಯವೂ ಇದ್ದಿರಬಹುದು….! ಅದಕ್ಕಾಗಿಯೇ ಆಯ್ದಕ್ಕಿ ಲಕ್ಕಮ್ಮನಂತಹವರಿಂದ ಅನ್ನದ ಮಹತ್ವದ ಸಾಹಿತ್ಯ ರಚನೆ ಆಗಿರಬಹುದು ಕೂಡ.

ಭಕ್ತಿ:

ಬಸವಣ್ಣ ಸಾಹಿತಿಗಾರ ಅಥವಾ ರಾಜಕೀಯ ನೇತಾರರಷ್ಟೆ ಅಲ್ಲ ಒಬ್ಬ ತತ್ತ್ವ ಜ್ಞಾನಿಯೂ ಹೌದು ಅವರು ಸಾಮಾನ್ಯ ಜೀವನವೂ ಒಬ್ಬರ ಮೇಲೆ ಅವಲಂಬಿತವಾಗಿರುತ್ತೆ ವಿಶೇಷವಾಗಿ ದೇವರ ಮೇಲೆ ಬಹಳ ಅವಲಂಬಿತವಾಗಿರುತ್ತೆ ಎಷ್ಟರ ಮಟ್ಟಿಗೆ ಅಂದರೆ ಕಷ್ಟ ಸುಖಗಳ ಬೇಡಿಕೆ ಕಣಜವಾಗಿ ದೇವರ ಅವಿರ್ಭಸಿರುವುದು ಸುಳ್ಳಲ್ಲ.

ಆ ಕಾಲದಲ್ಲಿಯೂ ಅದು ಇದ್ದಿರಬಹುದು, ಅದಕ್ಕಾಗಿಯೇ ಬಸವಣ್ಣ ದೇವರನ್ನ ಎಲ್ಲರ ಕೈಗೆ ಮುಟ್ಟಿಸಿದ ಅದು ದೇಹದಲ್ಲಿಯೇ  ಕೀಳೆಂದು ಭಾವಿಸಿದ ಎಡ ಗೈ ಗೆ…!

ಇಷ್ಟಲಿಂಗ ಪೂಜೆ ಮೂಲಕ ನಮ್ಮ ದೇಹಾಂಗಗಳಿಗೆ ಅಷ್ಟೆ ಅಲ್ಲ ಸಮಾಜದಲ್ಲು ಸಮಾನತೆ ಹುಟ್ಟು ಹಾಕಿದರು.

ಜೊತೆಗೆ ಅವರು ಎಲ್ಲೊ ಇರುವ ದೇವರ ಬದಲಿಗೆ ದೇಹವೇ ದೇವರು ಎಂದು ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡವನಯ್ಯ ಎನ್ನೆ ಕಾಲೆ ಕಂಭ ಎನ್ನ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಎಂದು ಬಣ್ಣಿಸಿದಾಗ ನಾವು ದೇವರನ್ನು ನಮ್ಮ ದೇಹದಲ್ಲಿ ಕೂಡ ಕಾಣುವಂತೆ ಮಾಡಿದವರು ಬಸವಣ್ಣನವರು

ಅನ್ಯರಿಗೆ ಅಸಹ್ಯ ಪಡಬೇಡ:

    ಪ್ರಸ್ತುತ ಸಮಾಜಕ್ಕೆ ವಿಶೇಷವಾಗಿ ಈ ಸಾಲು ಮುಖ್ಯವೆನಿಸುವುದು ಏಕೆಂದರೆ ಪಕ್ಕದಲ್ಲಿರುವ ವ್ಯಕ್ತಿಗಳನ್ನ  ಅವರ ಅಸ್ಥಿತ್ವವನ್ನು ಒಪ್ಪಿಕೊಳ್ಳಲಾರದ ಸ್ಥಿತಿಯಲ್ಲಿ ಸಮಾಜಿಕ ದ್ವೇಷ ಹರಡುತ್ತಿದೆ, ಅವರ ಸರ್ವಕಾಲಿಕ ಪ್ರಸ್ತುತವಾಗಿರುವ ವಚನ

ಕಳಬೇಡ

ಕೊಲಬೇಡ

ಹುಸಿಯ ನುಡಿಯಲು ಬೇಡ

ಮುನಿಯಬೇಡ

ಅನ್ಯರಿಗೆ ಅಸಹ್ಯಪಡಬೇಡ

ತನ್ನ ಬಣ್ಣಿಸಬೇಡ

ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ

ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ..

     ಭಗವದ್ಗೀತೆಯ ಒಂದು ಶ್ಲೋಕದಲ್ಲಿ ಕೂಡ ಶ್ರೀ ಕೃಷ್ಣ ಕೂಡ ಸರ್ವರಲ್ಲು ನಾನು ಇದ್ದೇನೆ ಎಂದು ಹೇಳಿ ಎಲ್ಲ ಮನುಷ್ಯರು ಒಬ್ಬರ ಅಸ್ಥಿತ್ವದ ಪ್ರತೀಕ ಎಂದು ಸೂಚ್ಯವಾಗಿ ಹೇಳಿರವರು…

ತಮಗಾದ ಅನುಭವವನ್ನು ಸಂಗ್ರಹಿಸಿ ಸಾಹಿತ್ಯ ರಚನೆ ಮಾಡುವ ಕಲೆ, ಅಂತೆ ಕಂತೆಗಳಿಲ್ಲದೆ ನೀತಿ ಪಾಠ  ರಚನೆ ಮಾಡಿ ಸಾಹಿತ್ಯ ಹುಟ್ಟಿಹಾಕಿದ ಪ್ರತೀತಿ ಅದು ಅನುಭವ ಮಂಟಪಕ್ಕೆ ಸಾಧ್ಯ.

ಪ್ರಸ್ತುತ ಕಾಲಘಟ್ಟದಲ್ಲಿ ಮಾತ್ರ ಇರುವ ಶಿಕ್ಷಣವನ್ನು ಎಲ್ಲರಿಗೂ ನೀಡಿ ಸಾಹಿತ್ಯ ಹುಟ್ಟುಹಾಕುವ ಸಾಹಿತ್ಯವೇ  ಗಟ್ಟಿ ಸಾಹಿತ್ಯ ಏಕೆಂದರೆ ಆಯಾ ಕಾಲಘಟ್ಟದಲ್ಲಿ ಕೇವಲ ಒಂದು ವರ್ಗಕ್ಕೆ ಸಿಕ್ಕ ಶಿಕ್ಷಣ ಅದರಲ್ಲಿ ಯಾರೊ ಕಣ್ಣಲ್ಲಿ ಕಸರು ಬಿದ್ದಂತೆ ಸಾಹಿತ್ಯ ರಚನೆಯಾಗತಿತ್ತು ಆದರೆ ಈ ಅನುಭವ ಮಂಟಪದಲ್ಲಿ ಸಾಹಿತ್ಯ ರಚನೆಕಾರರರು ಶಿಕ್ಷಣ ಇದ್ದೊ ಇಲ್ಲದೆ ಸಾಹಿತ್ಯ ರಚನೆ ಮಾಡಿದರು ಅದರ ಘನತೆ ಮತ್ತು ಕೀರ್ತಿ ಬಸವಣ್ಣ ಮತ್ತು  ಅದಕ್ಕೆ ಅನುಮತಿ ಕೊಟ್ಟ ಬಿಜ್ಜಳನಿಗೆ ಮಾತ್ರ ಸಾಧ್ಯ.


ರಂಗಸ್ವಾಮಿ ಮಾರ್ಲಬಂಡಿ

Leave a Reply

Back To Top