ಯುದ್ದ ಮತ್ತು ಶಿಕ್ಷಣ

ಲೇಖನ

ಯುದ್ದ ಮತ್ತು ಶಿಕ್ಷಣ

ರೇಶ್ಮಾಗುಳೇದಗುಡ್ಡಾಕರ್

ಕರೋನಾ ಕತ್ತಲೆ ಕಳೆದು ಹೊಸ ವರ್ಷದತ್ತ ಮುಖಮಾಡಿ ಹೊಸ ಕನಸುಗಳ ಮಡಿಲಲ್ಲಿ ತುಂಬಿಕೊಂಡು ಸಾಗುತ್ತಿದ್ದ ವಿಶ್ವ ಕ್ಕೆ ಇಂದು ಅಂತಕ ,ತಲ್ಲಣವಾಗುವಂತೆ ಮಾಡಿದೆ  ರಷ್ಯಾ ಮತ್ತು ಉಕ್ರೇನ್ ಸಮರ .

      ಇದು ನಮ್ಮದೇಶ ವನ್ನು ಜಾಗತೀಕವಾಗಿಯೂ ,ಸಾಮಾಜಿಕವಾಗಿಯೂ ಕಾಡುತ್ತಿದೆ ಶಿಕ್ಷಣಕ್ಕಾಗಿ ವಲಸೆ ಹೊರಟ ಭಾರತೀಯ ಸಾಲು ಸಾಲು  ವಿದ್ಯಾರ್ಥಿಗಳು  ಭವಿಷ್ಯ ,ಬದುಕು ಕತ್ತಲಾಗಿದೆ .

     ಬದುಕೇ ಇಲ್ಲವಾಗುವಾಗ  ಭವಿಷ್ಯದ ಚಿಂತೆ ಎಲ್ಲಿ ?

ಈ ಆತಂಕ ,ನೋವು ನಲ್ಲಿ ಕರ್ನಾಟಕದ ಪಾಲು ದಿನೆ ದಿನೆ ಹೆಚ್ಚುವ ಕಳವಳ ವ್ಯಕ್ತವಾಗುತ್ತಿದೆ .

ಅದರಲ್ಲೂ ನಮ್ಮ ರಾಜ್ಯದ ವಿದ್ಯಾರ್ಥಿ ನವೀನ್  ಈ ಯುದ್ದ ದಲ್ಲಿ ಸಿಲುಕಿ ಹತವಾಗಿದ್ದಾರೆ .ಇನ್ನೂ ಬದುಕಿ ತಾಯಿ ನೆಲಕ್ಕೆ  ಬರುವ  ಕೆಚ್ಚನ್ನು ಉಕ್ರೇನ್ ಅಲ್ಲಿ ಉಳಿದ ವಿದ್ಯಾರ್ಥಿಗಳು ಆಶಾಭಾವ ಕಂಗಳಿಂದ ನೋಡುತ್ತಿದ್ದಾರೆ  ಪತ್ರಿಕೆ, ಮಾದ್ಯಮಗಳು ಅಲ್ಲಿ ನ ಭಾರತೀಯ ರ ಶೋಚನೀಯ ಸ್ಥಿತಿಯನ್ನು ನಿತ್ಯವು ವರದಿ ಮಾಡುತ್ತಿವೆ.

   ರಷ್ಯಾ, ಉಕ್ರೇನ್  ನ ಅನಿರೀಕ್ಷಿತ ಸಮರ ಹಲವು ಪಾಠ ವನ್ನು ,ಚರ್ಚೆ, ವಿಚಾರಗಳನ್ನು  ಜಗತ್ತಿನಾದ್ಯಂತ ಪಸರಿಸಿದೆ…! ಟಾಯ್ ಸ್ಟಾಲ್ ರ ” ಯುದ್ಧ ಮತ್ತು ಶಾಂತಿ ” ಕೃತಿ‌ ನೆನಪಾಗುತ್ತದೆ  ಓದಿದವರ ಮನದಲ್ಲಿ ವಾಸ್ತವದ ಸತ್ಯವ ಅರಿತು ……

     ಇಲ್ಲ ಪ್ರಮುಖ ವಾಗಿ ಕಂಡ ಅಂಶ ಎಂದರೆ ಸಾಲು ಸಾಲು ಭಾರತೀಯ ರು ಅದರಲ್ಲಿಯೂ ಕರ್ನಾಟಕದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಉಕ್ರೇನ್ ನತ್ತ ಮುಖಮಾಡಿರುವದು . ಇಲ್ಲೇ ( ನಮ್ಮದೇಶದಲ್ಲೆ) ಪೊರಕ ಶಿಕ್ಷಣ ಕೈಗೆಟುಕುವುದಿಲ್ಲವೇ ? ಪ್ರತಿಭಾ ಪಲಾಯನ ತಡೆಯ ಬಹುದೇ? ಎಂಬ ಹಲವು ಪ್ರಶ್ನೆಗಳು ಉದ್ಬವವಾಗುತ್ತವೆ .

     ಭಾರತದಲ್ಲಿ ಶಿಕ್ಷಣಕ್ಕೆ ಬಹು ದೊಡ್ಡ ಇತಿಹಾಸವಿದೆ .ಅಂದಿಗೂ ಇಂದಿಗೂ ಸತತ ಅಂದರೆ ಗಾಂಧಿಜಿ ಅವರ ನಂತರ ನಿರಂತರ ಚರ್ಚೆ ಬಾಹು ಪಾಲು “ಶಿಕ್ಷಣ ” ಕುರಿತು ನಡೆಯುತ್ತದೆ . ನಮ್ಮದೇಶದಲ್ಲಿ

     ಸಂವಿಧಾನ ದಲ್ಲಿ  ಸಮವರ್ತಿ ಪಟ್ಟಿಯಲ್ಲಿ ಇರುವ ಶಿಕ್ಷಣ 21(A) ಮೂಲ ಭೂತ ಹಕ್ಕಾಗಿಯೂ , ಮತ್ತು  86 ನೇ  ತಿದ್ದುಪಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ವಾಗಿ

ಪ್ರಾಮುಖ್ಯತೆ ಪಡೆದು ಉಲ್ಲೇಖ ವಾಗಿದೆ ….. !!!! ?

       ಆದರೆ ವಾಸ್ತವವಾಗಿ ಜನಸಾಮಾನ್ಯರು ಶಿಕ್ಷಣ ಕ್ಕಾಗಿ ಹರಸಾಹಸ ಪಡ ಬೇಕಾಗಿದೆ  ನಿರಂತವಾಗಿ .

ಇತ್ತೀಚೆಗಷ್ಟೆ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2021 ರನ್ನು  ಅಳವಡಿಸಿಕೊಂಡಿದ್ದೇವೆ .ಅದರಲ್ಲೂ ನಮ್ಮ ಕರ್ನಾಟಕ ಇದನ್ನು ಅಳವಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಇದೆ ..! ಅಂತೆಯೆ ಶಾಲಾ – ಕಾಲೇಜುಗಳು   ಯಾವುದೇ ಗಹನವಾದ  ಕಾರಣವಿಲ್ಲದೆ ತರಗತಿಗಳು ರದ್ದಾಗಿವೆ … !!!.

 ನಾವು ನಿಜಕ್ಕೊ ಬದಲಾಯಿಸ ಬೇಕಾಗಿರುವದೇನು ? ನಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಮಾಡುವದಾದರೂ ಎನು ?

     ಲಕ್ಷ ಲಕ್ಷ  ಮೊತ್ತದ ಹಣವನ್ನು ಕಟ್ಟಲಾಗದೆ ಕೊರಗುವ ವಿದ್ಯಾರ್ಥಿಗಳು ಒಂದೆಡೆ , ನಿರಂತರ ರಜೆ ಯಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳು ಒಂದೆಡೆ .

    ಶಿಕ್ಷಣ ಕುರಿತು ಭಾಷಣ ಮಾಡುವ  ಅಥವಾ ,ಹೊಸ ಹೊಸ ನೀತಿ ಅನುಷ್ಠಾನ ಗೊಂಡರೆ  ಮಾತ್ರ   ಶಿಕ್ಷಣದ ಸರ್ವತೋಮುಖ ಪ್ರಗತಿ ಕಾಣಲು ಸಾದ್ಯವಿಲ್ಲ .

      ಇಂದಿಗೂ ನಾವು ಸುಸಜ್ಜಿತ ಪ್ರಯೋಗಾಲಯಗಳು ಕಾಣಲು ನಮ್ಮ ದೇಶದಲ್ಲಿ ಹರಸಾಹಸ ಪಡಬೇಕು ಎಂದು ಬಿ .ಜಿ. ಎಲ್ ಸ್ವಾಮಿ ಅವರು ತಮ್ಮ  ” ಮೈಸೂರು ಡೈರಿಯಲ್ಲಿ ” ತಿಳಿಸುತ್ತಾರೆ . ಇಂದಿಗೂ  ನಾವು ಇದೇ ಸ್ಥಿತಿಯನ್ನು ನಾವು ಕಾಣಬಹುದು  ಎಷ್ಟು ಮಹತ್ವ ನೀಡಿದ್ದೇವೆ ಶಿಕ್ಷಣಕ್ಕೆ ಎಂಬುದು ಇದು ಒಂದು ಪುಟ್ಟ ಉದಾಹರಣೆ ಅಷ್ಟೇ .

      ಈ ಕಾರೋನಾ ಹಾವಳಿ ಇಂದ ಹಲವಾರು ಶಾಲೆಗಳು ಮುಚ್ಚಿ ವಸತಿ ಗೃಹ , ಕಲ್ಯಾಣ ಮಂಟಪ ಗಳಾಗಿ ಬದಲಾಗಿವೆ , ಇನ್ನು ಉನ್ನತ ಶಿಕ್ಷಣ ಉಳ್ಳವರಿ ಮಾತ್ರ ಎಂಬಂತೆ ರೂಪಾಂತರವಾಗಿದೆ .

   ಬ್ರಿಟಿಷ್ ಸರ್ಕಾರದಲ್ಲಿ ನಮ್ಮದೇಶಕ್ಕೆ ಶಿಕ್ಷಣ ನೀಡುವದು ಅವರಿಗೆ ಒಂದು ಸವಾಲಾಗಿ ಪರಿಣಮಿಸಿ ಹಂತ ಹಂತವಾಗಿ ಶಿಕ್ಷಣ ಖಾಸಗಿಕರಣವಾಗುತ್ತದೆ . ಆದೇ ಇಂದು ಎಲ್ಲ ವಲಯಗಳು ಖಾಸಗಿರಣವಾಗಿ ಜನರನ್ನು ರಕ್ಕಸರಂತೆ ಕಾಡುತ್ತಿವೆ .  ಬೆಲೆ ಏರಿಕೆಯ ಬಡಿತ , ನಿರುದ್ಯೋಗ ಮೊರೆತ  . ಇನ್ನು ಉತ್ತಮ ಅಂಕ ಗಳಿಸಿದರೂ ಹಣ ಅಗತ್ಯ ಪ್ರತಿಭಾವಂತರ ಭವಿಷ್ಯ ಕಮರುವಂತೆ ಮಾಡುತ್ತಿದೆ . ಇಷ್ಟೇ ಲ್ಲಾ ಹಲವಾರು ಸಮಸ್ಯಗಳ ಸರಮಾಲೇ ಯೇ ನಮ್ಮ ಜನಸಾಮನ್ಯರ ಸುತ್ತ ಹೆಣೆದಿದೆ , ಆದರೆ ಇಂತಹ  ಸಮಸ್ಯೆಗಳ  ಪರಿಹಾರ ಕುರಿತು ಹೋರಾಟ. ನಮ್ನದೇಶದಲ್ಲಿ ಅಗುವದಿಲ್ಲ

ಕ್ಷುಲ್ಲಕ ಕಾರಣಗಳಿಗಾಗಿ ಹೋರಾಟ ,ಜಾಗೃತಿ ಸಾಮಾಜಿಕ ತಾಣದಲ್ಲಿ ಗಹನವಾದ ಚರ್ಚೆ ವರ್ಷಗಟ್ಟಲೇ ನಡೆಯುತ್ತವೆ …..!

ಇದು ನಮ್ಮ ಭೌದ್ದಕ ದಿವಾಳಿತನದ  ಪರಮಾಧಿಯೇ ಎಂಬ ಪ್ರಶ್ನೆ ಮೂಡುತ್ತದೆ .

        ನಮ್ಮ ಶಿಕ್ಷಣ ನಮಗೇ ದಕ್ಕುವದೇ ,  ಉನ್ನತ  ಶಿಕ್ಷಣ ಮದ್ಯಮ ಕೆಳ ಮದ್ಯಮ ವರ್ಗ ದ ಜನರಿಗೂ ಕೈಗೆಟುಕತ್ತದೆಯೇ ? ನವೀನ್ ಸಾವು ಇಂತಹ  ಚಿಂತನೆಯನ್ನು ಹುಟ್ಟು ಹಾಕಿದೆ .


      ‌‌‌‌‌      

                  

Leave a Reply

Back To Top