ಮಹಿಳಾ ದಿನದ ವಿಶೇಷ
ಅಮೃತಾ ಉಮೇಶ್ ಶೆಟ್ಟಿ ಶಿವಪುರ
ಗಝಲ್
ಮನೆಯವರ ಸುಖಕ್ಕಾಗಿ ಮನಸಿನ ಹಿತವ ಕೊಂದವಳು ಮಹಿಳೆ
ಪ್ರೀತಿಯ ಸಂಸಾರಕ್ಕೆ ಬೆಳಕ ದೀವಿಗೆಯಾಗಿ ನಿಂದವಳು ಮಹಿಳೆ
ಜಾರಿದ ಕಂಬನಿಗಳ ಮರೆಯಲ್ಲಿಯೇ ಒರೆಸಿ ಹೇಗೆ ನಗುವೆ
ತನ್ನವರ ಮೊಗದ ಖುಷಿಯ ಛಾಯೆಯಲಿ ಮಿಂದವಳು ಮಹಿಳೆ
ಹಗಲಿರುಳು ದುಡಿದರೂ ಇನಿತು ದಣಿವೆಂದು ಹೇಳದೆ ಸಾಗುವೆಯಾ
ಪೌರುಷದ ದರ್ಪಕೆ ಹರುಷಗಳನು ಮಾರುತ ನೊಂದವಳು ಮಹಿಳೆ
ಬದುಕಿನೆಲ್ಲೆಡೆ ದಾರಿಯ ಬವಣೆಗೆ ಬೆದರದೆ ಎಡೆಬಿಡದೆ ನಡೆದಳು
ಹೃದಯಗಳ ಒಳಗೆ ಮಧುರ ಭಾವನೆಗಳಿವೆ ಅಂದವಳು ಮಹಿಳೆ
ಗಂಡು ಹೆಣ್ಣೆಂಬ ಭೇದಗಳು ಅಳಿಯಲೆಂದು ಅಮ್ಮಿಯ ಕೋರಿಕೆ
ಹಳೆಬೇರಿನಿಂದ ಹೊಸ ಚಿಗುರನು ಮೂಡಿಸಿ ತಂದವಳು ಮಹಿಳೆ
Super