ಕಾವ್ಯ ಸಂಗಾತಿ
ಸಾಕ್ಷಿ ಕೊಂದಿದ್ದಾರೆ
ಒಲವು
.
ನನ್ನೊಳಗಿನ ಅಕ್ಷರಗಳನ್ನು
ಯಾರೋ ಕೊಂದಿದ್ದಾರೆ
ಯಾರಿರಬಹುದು?
ಗುಮಾನಿ ಬಂದವರ
ಮೇಲೆಲ್ಲಾ ಕಂಪ್ಲೆಂಟ್ ಕೊಡಲಾಗುತ್ತದೆಯೇ?
ಕೊಂದದ್ದಕ್ಕೆ ಸಾಕ್ಷಿ
ಹೊಂದಿಸುವುದಾದರೂ ಹೇಗೆ?
ಕೊಲೆಗಾರನೆಂಬ ಹಣೆಪಟ್ಟಿ
ಹೊತ್ತು ನಡೆಯುವ
ನಿಜ ಮನುಷ್ಯರಿಗಿಲ್ಲಿ ಅಭಾವವಿದೆ
ಅರಿವಿನ ಭಾವವಿಲ್ಲ
ಹೇಗಾದರೂ ಸರಿ ಸಾಕ್ಷಿಯನ್ನು
ಕೊಂದು ತಪ್ಪಿಸಿಕೊಳ್ಳುವರು
ಮೈ ಕೈಗಾದ ರಕ್ತದ ಕಲೆಗಳನ್ನು
ಗುರುತಿಲ್ಲದಂತೆ ತೊಳೆದುಬಿಡುವರು
ಪೊಲೀಸ್ ಸ್ಟೇಷನ್
ಮೆಟ್ಟಿಲು ಹತ್ತಿ
ಕಂಪ್ಲೆಂಟ್ ಕೊಟ್ಟಿದ್ದೇನೆ
ಎಲ್ಲಿ, ಹೇಗೆ,ಯಾವಾಗ,ಯಾರು?
ಎಂಬ ಪ್ರಶ್ನೆಗಳಿಗೆ
ನಾನೇ ಸಾಕ್ಷಿ ಕೊಡಬೇಕಂತೆ
ಸತ್ತ ಸಾಕ್ಷಿಗಳಿಗೆ
ಜೀವ ತುಂಬಲಿ ಹೇಗೆ
ಅನ್ಯಾಯ ನುಂಗಿ ಬದುಕಲಿ ಹೇಗೆ?