ದ.ರಾ.ಬೇಂದ್ರ ಜನ್ಮದಿನದ ವಿಶೇಷ

ದ.ರಾ.ಬೇಂದ್ರ ಜನ್ಮದಿನದ ವಿಶೇಷ

“ದತ್ತಾತ್ರಯ”ರವರ ಜನನ: ೧೮೯೬ ಜನವರಿ ೩೧ ರಂದಾಯಿತು.
ತಂದೆ: ರಾಮಚಂದ್ರ ಭಟ್ಟರು.
ತಾಯಿ: ಅಂಬವ್ವ. (ಅಂಬಿಕೆ) ದ. ರಾ. ಬೇಂದ್ರೆಯವರ ಕಾವ್ಯನಾಮ “ಅಂಬಿಕಾತನಯದತ್ತ”
ಬೇಂದ್ರೆ ಮನೆತನದ ಹೆಸರು ಠೋಸರ. ಪೌರೋಹಿತ್ಯ ವೃತ್ತಿಯ ಕುಟುಂಬ. ಹಿಂದೊಂದು ಕಾಲದಲ್ಲಿ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದತ್ತಾತ್ರಯ ೧೧ ವರ್ಷದವನಿದ್ದಾಗ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ ವ್ಯಾಸಂಗ ಮುಗಿಸಿದ ಬಳಿಕ ಬೇಂದ್ರೆ ಪುಣೆ ಕಾಲೇಜ್ ನಲ್ಲಿ ೧೯೧೮ ರಂದು ಬಿ. ಎ. ಪದವಿ ಪಡೆದುಕೊಂಡು. ಅಧ್ಯಾಪಕ ವೃತ್ತಿ ಆಯ್ದುಕೊಂಡರು. ೧೯೩೫ ರಲ್ಲಿ ಎಂ.ಎ. ಪದವಿ ಪಡೆದು. ೧೯೪೪ ರಿಂದ ೧೯೫೬ ರ ವರೆಗೆ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ನಿರತರಾಗಿದ್ದವರು.
ದತ್ತಾತ್ರಯ ಜಿ ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿ ಎಂಬುವವರನ್ನು ವರಿಸಿದರು. ಮದುವೆಯ ಮುನ್ನವೇ ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ” ಪ್ರಕಟಗೊಂಡಿತ್ತು..
ಕವಿ. ದಾರ್ಶನಿಕ. ಈ ಯುಗದ ಒಬ್ಬ ಮಹಾಕವಿ. ದ. ರಾ. ಬೇಂದ್ರೆ. ಪುಣೆಯಲ್ಲಿ ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡರು. ಕವಿಗಳಿಗೆ, ಸಾಹಿತಿಗಳಿಗೆ. ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬೆಳಗುವಂತಹ ಕವನಗಳನ್ನ ರಚಿಸಿದ ಕೀರ್ತಿ ದ ರಾ ಬೇಂದ್ರೆ ಅವರದು. ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತಹ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ಗರಡಿಯನ್ನೇ ಶ್ರೀಮಂತಗೊಳಿಸಿದೆ ಎಂದರೆ ಅತಿಶೋಯುಕ್ತಿ ಆಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಗೈದ “ಧಾರವಾಡದಜ್ಜ” ಅವರ ಕೆಲವೊಂದು ಮಕ್ಕಳ ಕವಿತೆ. ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತನಗೊಳಿಸುತ್ತವೆ.
ಬೇಂದ್ರೆಯವರ ಸಾಹಿತ್ಯ ಬೇರು ಹಬ್ಬಿದ್ದು
ಧಾರವಾಡದಿಂದ. ಅಲ್ಲಿಂದಲೇ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು ೧೯೩೨ ರಲ್ಲಿ ಪ್ರಕಟಗೊಂಡ ಮೊದಲ ಕವನವಾದ ‘ಗರಿ’.. ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು ೧೯೧೯ ರಲ್ಲಿ. ೨೦೧೯ರಲ್ಲಿಯೂ ಪ್ರಸಿದ್ಧವಾಗಿದೆ.

“ನೂರು ವರ್ಷದ ಹಿಂದಿನ ಕವನ
ಬೆಳಗು” (ಮೊದಲ ಪದ್ಯ)
“ಮೂಡಲ ಮನೆಯಾ ಮುತ್ತಿನ ನೀರಿನ ಎರಕವsss ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾsss ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ ಜಗವೆಲ್ಲಾ ತೊಯ್ದಾ ಹೋಯ್ತೋ. ಎಂಬ ಪದ್ಯ..

ದ ರಾ ಬೇಂದ್ರೆಯವರ ಮುಡಿಗೇರಿ ಪ್ರಶಸ್ತಿಗಳು. ಗೌರವ-ಸಮ್ಮಾನ”ಗಳು..

ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದವರು.
೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು..
೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು..
೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆ ಜಿ. ಯವರಿಗೆ ಸನ್ಮಾನಿಸಲಾಗಿತ್ತು..
೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಲ್ಕರ್ ಬಹುಮಾನ ದೊರೆತಿತ್ತು..
೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಮುಡಿಗೇರಿಸಿಂಡರು..
೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ ಗೆ ಆಯ್ಕೆಯಾದವರು..
ಕಾಶಿ ವಿದ್ಯಾಪೀಠ. ವಾರಣಾಸಿ.: ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ “ಡಾಕ್ಟರೇಟ್” ಪಡೆದವರು..
“ಬಾರೋ ಸಾಧನಾ ಕೇರಿಗೆ” ಎಂದು ಸಾರಿದವರು.
ನಮ್ಮ “ಅಂಬಿಕಾತನಯದತ್ತ”ರು..

———————————


 ಸುರೇಶ ಮಲ್ಲಾಡದ..

Leave a Reply

Back To Top