ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಭೋರ್ಗರೆವ ಅಲೆಗಳು ಬಳಸಿ ಉಸಿರುಗಟ್ಟುತ್ತಿದೆ ನೋಡು ಇಲ್ಲಿ
ಮಾಗಿಯ ಚಳಿಯಲ್ಲಿಯೂ ಬೆವರುತ್ತಿದೆ ನೋಡು ಇಲ್ಲಿ
ಶತಮಾನಗಳ ಚರಿತ್ರೆಯ ಕಾಲಗರ್ಭದಲ್ಲಿ ಅಡಗಿದೆ
ಶೋಷಣೆಯ ಸುಳಿಯಲ್ಲಿ ಸುಳಿಯುತ್ತಿದೆ ನೋಡು ಇಲ್ಲಿ
ಕದಂಬ ಬಾಹುಗಳ ಬಿಗಿದಪ್ಪಿನಲ್ಲಿ ಬಿಗಿದಿದೆ ಸಖಿ
ಅಬಲೆಯ ಹೋರಾಟವು ಸೆಣೆಸಾಡುತ್ತಿದೆ ನೋಡು ಸಖಿ
ಒಂಟಿತನದ ಸರಪಣಿಯಲ್ಲಿ ಬಿಗಿದು ಕಟ್ಟಿದೆ ಜೀವನ
ಕಟ್ಟುಪಾಡುಗಳ ಸೆರೆಮನೆಯಲ್ಲಿ ಸಾಯುತ್ತಿದೆ ನೋಡು ಇಲ್ಲಿ
ಯುಗಯುಗಕ್ಕೂ ಬೆನ್ನಟ್ಟಿದೆ ಕಪ್ಪು ನೆರಳಿನ ಸ್ಥಿರತೆ “ಮಾಜಾ”
ನಿತ್ಯ ಸತ್ಯತೆಯಲ್ಲಿ ಗೋಚರಿಸುತ್ತಿದೆ ನೋಡು ಇಲ್ಲಿ
ಮನ ಮುಟ್ಟುವಂತ ಬರಹ ಸೂಪರ್.. ಜಿ
ಸ್ತ್ರೀ ಸಂವೇದನೆಯ ಅರ್ಥಪೂರ್ಣ ಗಜಲ್ ಅಭಿನಂದನೆಗಳು ಮೇಡಂ