ಕಾವ್ಯ ಸಂಗಾತಿ
ವೃತ್ತಿ -ನಿವೃತ್ತಿ
ಎಸ್. ವಿ. ಹೆಗಡೆ
ದುಡಿವ ಎತ್ತಿನ ಕುತ್ತಿಗೆಯ
ದಾಗ ಹರಿದು ಹೋಯಿತು ಇಂದು॥
ಗೊತ್ತು ಗುರಿಯಿಲ್ಲದೆ ಓಡಲು
ಶುರು ಮಾಡಿದ ಕುದುರೆ ಹಲವು
ಹತ್ತು ಊರುಗಳ ಸುತ್ತಿ
ಹೊರಟ ಸ್ಥಳದಲ್ಲೇ ನಿಂತಿದೆ ಬಂದು ॥
ಗತಿಸಿ ಹೋದ ಹಾದಿಗಳ ತಿರುವು ಮುರಿವುಗಳ ಘಟನೆ ಗೋಟಾವಳಿಗಳ
ಬದುಕಿನಲಿ ಇಣುಕಿ ಹೋದ ಹೊಸ ಹಳೆಯ
ಜೀವಿಗಳ ಸ್ನೇಹ ಸಂಬಂಧಗಳ ವಿಧ ವಿಧ ಮಾತು ಮರ ಮಣ್ಣುಗಳ ನೆನೆದು ಮನ
ಮೆಲುಕು ಹಾಕುತಿದೆ ಇಂದು॥
ಯಾವ ಬಾವಿಯ ನೀರು ಯಾರ ಬಾಯೊಳಗೊ ಮುಂದೆ ಕುಡಿಯುವ
ನೀರು ಯಾವ ನಳದೊಳಗೊ
ಸಂವತ್ಸರದ ಇನ್ನೊಂದು ಸುತ್ತು
ಶುರುವಾಗಿ ಇಟ್ಟ ಹೆಜ್ಜೆಗಳು ಇನ್ನೆಷ್ಟು
ಮುಂದೆ ಸಾಗುವವೊ॥
ಹೊಸ ಬೆಳಕು ಹೊಸ ಹುಟ್ಟು
ಹೊಸ ಬಾಳ ಬಾಲ್ಯಕ್ಕೆ ಕಾಲಿಟ್ಟು
ನಡೆದಾಡುವ ಸಂತೋಷ ಅಷ್ಟಿಷ್ಟು
ನಡೆದಷ್ಟೂ ದೂರ ಜೊತೆಯಾಗಿರುವ
ಸಂಗಾತಿಗಳುಂಟು॥
Too good