ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.

ಸಮಾಜಿಕ ಕಾರ್ಯಕರ್ತೆ

ಅವಾಬಾಯಿ ಬೊಮಾಂಜಿ ವಾಡಿಯಾ (1913-2005)

ಅವಾಬಾಯಿ ವಾಡಿಯಾ ಅವರು ಸೆಪ್ಟೆಂಬರ್ 18, 1913ರಂದು ಶ್ರೀಲಂಕಾದಲ್ಲಿ ಜನಿಸಿದರು. ಇವರು ಭಾರತೀಯ ಸಮಾಜ ಕಾರ್ಯಕರ್ತೆ ಹಾಗೂ ಬರಹಗಾರರಾಗಿದ್ದಾರೆ. ಇವರ ತಂದೆ ಡೋರಾಬ್ಜಿ ಮುಂಜೆರ್ಜಿ ತಾಯಿ ಪಿರೋಜ್‍ಬಾಯ್ ಆರ್ಸಿವಾಲಾ ಮೆಹ್ತಾ. ಇವರು ಶ್ರೀಮಂತ ಮತ್ತು ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಪಟ್ಟ ಪಾರ್ಸಿ ಮೂಲದ ಭಾರತದ ಗುಜರಾತ್‍ಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಹಡಗು ಅಧಿಕಾರಿಯಾಗಿದ್ದರು. ತಾಯಿ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಅವಾಬಾಯಿಯು ತನ್ನ ಆರಂಭಿಕ ಶಿಕ್ಷಣವನ್ನು ಕೊಲಂಬಿಯಾದಲ್ಲಿ ಪಡೆದರು. 1928ರಲ್ಲಿ ಇಂಗ್ಲೆಂಡಗೆ ತೆರಳಿದರು ಮತ್ತು ಲಂಡನ್‍ನ ಬಾಂಡೆಸ್‍ಬರಿ ಮತ್ತು ಕಿಲ್ಬರ್ನ್ ಪ್ರೌ ಸ್ಕೂಲ್‍ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಕಾನೂನು ಪದವಿಯನ್ನು ಪಡೆದುಕೊಂಡ ಅವಾಬಾಯಿ 1932ರಲ್ಲಿ ಇನ್ಸ್ ಆಫ್ ಕೋರ್ಟ್‍ಗೆ ವಕೀಲರಾಗಿ ಸೇರಿಕೊಂಡರು. ಬಾರ್ ಪರೀಕ್ಷೆಯಲ್ಲಿ ಪಾಸಾದ ಮೊದಲ ಶ್ರೀಲಂಕಾದ ಮಹಿಳೆ ಎಂಬ ಹೆಗ್ಗೆಳಿಕೆ ಇವರಿಗಿದೆ. ಇವರು ಲಂಡನ್‍ನ ಹೈಕೋರ್ಟ್ ಆಫ್ ಜಸ್ಟೀಸ್‍ನಲ್ಲಿ ಒಂದು ವರ್ಷ ಅಭ್ಯಾಸ ಮಾಡಿದರು. ಕಾನೂನು ವಿದ್ಯಾರ್ಥಿಯಾಗಿದ್ದ ಇವರು ಕಾಮನವೆಲ್ತ್ ದೇಶಗಳ ಲೀಗ್ ಮತ್ತು ಮಹಿಳೆಯರ ಅಂತಾರಾಷ್ಟ್ರೀಯ ಒಕ್ಕೂಟದ ಭಾಗವಾಗಿದ್ದರು. ಇವರು ಯಾರ್ಲಿಗಳಲ್ಲಿ ಪಿಕೆಟಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇವರು ಮಹಾತ್ಮ ಗಾಂಧಿ, ಮಹಮ್ಮದ ಅಲೀ ಜಿನ್ನಾ ಮತ್ತು ಜವಾರ್‍ಲಾಲ ನೆಹರು ಸೇರಿದಂತೆ ಅನೇಕ ಸ್ವಾತಂತ್ರ್ಯ ಚಳುವಳಿ ನಾಯಕರನ್ನು ಇಂಗ್ಲೆಂಡ್‍ನಲ್ಲಿ ಭೇಟಿಯಾಗಿದ್ದರು. ಇಂಗ್ಲೇಂಡ್‍ನಲ್ಲಿ ಕಿರಿಯ ವಕೀಲರ ಹುದ್ದೆಗೆ ಯಾವುದೇ ಸಂಸ್ಥೆಗಳಿಗೆ ಅರ್ಜಿಸಲ್ಲಿಸಿದ್ದರೂ ಅವುಗಳು ಇವರ ವಿರುದ್ಧವಾಗಿರುತ್ತಿದ್ದವು. ಎರಡು ವರ್ಷಗಳ ನಂತರ ಇಂಗ್ಲೇಂಡಿನಿಂದ ಮರಳಿ ಕೊಲಂಬೊಗೆ ಬಂದು ಅಲ್ಲಿ ಸುಪ್ರಿಂ ಕೊರ್ಟ್‍ಗೆ ಸೇರಿಕೊಂಡರು. 1939 ರಿಂದ 1941ರ ವರೆಗೆ ಕಾನೂನು ಅಭ್ಯಾಸ ಮಾಡಿದರು.

1941ರಲ್ಲಿ ಅವಾಬಾಯಿಯವರ ತಂದೆ ಉದ್ಯೋಗದಿಂದ ನಿವೃತ್ತರಾದ ಬಳಿಕೆ ತನ್ನ ಮಾತೃ ಭೂಮಿಗೆ ಮರಳಲು ನಿರ್ಧರಿಸಿದರು. 1941ರಲ್ಲಿ ಸಿಲೋನದಿಂದ ಭಾರತದ ಬಾಂಬೆಗೆ ಬಂದು ಶಾಶ್ವವಾಗಿ ನೆಲೆಸಿದರು. ಬಾಂಬೆಯಲ್ಲಿ ಬೊಮಾಂಜಿ ಖುರ್ಷೆಡಿಜ್ ಅವರೊಂದಿಗೆ ವಿವಾಹವಾಯಿತು. ಆದರೆ ಬಹಳ ಬೇಗನೆ ಬೇರೆಯಾದರು. ಕಾನೂನು ಬದ್ಧವಾಗಿ ವಿಚ್ಚೇದನ ಪಡೆಯಲಿಲ್ಲ. ಬೇರೆಯಾಗುವ ಸಂದರ್ಭದಲ್ಲಿ ಅವಾಬಾಯಿಯವರು ಗರ್ಭಿಣಿಯಾಗಿದ್ದರು.  ಹಾಗಾಗಿ ಅನಿವಾರ್ಯವಾಗಿ ಗರ್ಭಪಾತ ಮಾಡಿಸಿಕೊಂಡರು.

     ಅವಾಬಾಯಿಯವರು ಮುಂಬೈಯಲ್ಲಿ ಅಖಿಲ ಭಾರತ ಮಹಿಳಾ ಸಮ್ಮೇಳನದಲ್ಲಿ ಸೇರಿಕೊಂಡರು. ಅಲ್ಲಿ ಗರ್ಭನಿರೋಧಕ ಸಂಘಟಣೆಗೆ ಕೇಂದ್ರಿಕರಿಸಿ ಕೆಲಸವನ್ನು ಪ್ರಾರಂಭಿಸಿದರು. ಇವರು ಒಬ್ಬ ಸ್ತ್ರೀವಾದಿ ಮತ್ತು ಸಮಾಜಿಕ ಕಾರ್ಯಕರ್ತೆಯಾಗಿದ್ದು ತನ್ನ ತಂದೆಯ ಮರಣದ ನಂತರ ತಂದೆಯ ಆಸ್ತಿಯಲ್ಲಿ ಪಾಲನ್ನು ಪಡೆದುಕೊಂಡರು. ನಂತರ 1949ರಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಷನ್ ಆಫ್ ಇಂಡಿಯಾ(ಎಫ್‍ಪಿಎಐ)ಅನ್ನು ಸ್ಥಾಪಿಸಿದರು. 34 ವರ್ಷಗಳ ಕಾಲ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅವಾಬಾಯಿಯ ಈ ಪ್ರಯತ್ನದಿಂದಾಗಿ ಭಾರತದಲ್ಲಿ ಮೊಟ್ಟಮೊದಲಿಗೆ ಕುಟುಂಬ ಯೋಜನೆ ಎಂಬ ಯೋಜನೆಯನ್ನು ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಜವಾಹರಲಾಲಾ ನೆಹರುವರು ಜಾರಿಗೆ ತಂದರು. 1951ರಲ್ಲಿ ಗರ್ಭನಿರೋಧಕಗಳ ಕುರಿತು ಎಲ್ಲರಿಗೂ ಮಾಹಿತಿ ದೊರೆಯುವಂತೆ ಮಾಡಲು ನೆಹರು ಸರ್ಕಾರದಿಂದ ಬೆಂಬಲ ಪಡೆದು ಥರ್ಡ್ ಇಂಟರ್‍ನ್ಯಾಷನಲ್ ಕಾನ್ಫರೆನ್ಸ್ ಆನ್ ಪ್ಲಾನ್ ಪೆರೆಂಟ್‍ಹುಡ್ ಕಾರ್ಯಕ್ರಮವನ್ನು ಭಾರತದಲ್ಲಿ ನಡೆಸಲು ಅವಬಾಯಿ ನಿರ್ಧರಿಸಿದರು. ಗರ್ಭನಿರೋಧಕ ಕ್ಷೇತ್ರದಲ್ಲಿ ಕೆಲಸ ಮಾಡುವ ಏಂಟು ಸಂಸ್ಥೆಗಳಿಗೆ ಒಟ್ಟಿಗೆ ಬರಲು ಅವಕಾಶವನ್ನು ನೀಡಿದರು. ಸಮ್ಮೇಳನದಲ್ಲಿ ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರಾದ ಮಾರ್ಗರೇಟ್ ಸ್ಯಾಂಗರ ಮತ್ತು ಎಲಿಸ್ ಒಟ್ಟೆಸೆನ್-ಜೆನ್ಸ್‍ನ್ ಭಾಗವಹಿಸಿದರು. ಈ ಸಮ್ಮೇಳನಕ್ಕೆ ಬಂದವರು ‘ಇಂಟರ್‍ನ್ಯಾಷನಲ್ ಪ್ಲ್ಯಾನಡ್ ಪೇರೆಂಟ್‍ಹುಡ್ ಫೇಡರೇಶನ್ ಸ್ಥಾಪಿಸಲು’ ಮತಚಲಾಯಿಸಿದರು. ಹಾಗಾಗಿ ಇದು ಕೆಲವೇ ದಿನಗಳಲ್ಲಿ ಪ್ರಾರಂಭವಾಯಿತು.ಅವಾಬಾಯಿ ಅವರು ಅನೇಕ ಸರ್ಕಾರಿ ಸಮಿತಿಗಳಲ್ಲಿ ಮತ್ತು ಆಯೋಗಗಳಲ್ಲಿ ಸೇವೆಸಲ್ಲಿಸಿರುವರು. 1983 ರಿಂದ 1989 ವರೆಗೆ ಐಪಿಪಿಎಫ್‍ನಲ್ಲಿ ಅಧ್ಯಕ್ಷರಾಗಿ ಎರಡು ಬಾರಿ ತಮ್ಮ ಸೇವೆಯನ್ನು ಸಲ್ಲಿಸಿರುವರು. ಈ ಸಮಯದಲ್ಲಿ ಇವರಿಗೆ ಯುಎನ್ ‘ಜನಸಂಖ್ಯೆ ಪ್ರಶಸ್ತಿ’ 1985ರಲ್ಲಿ  ದೊರೆಯಿತು. ಹಾಗೇಯೆ ‘ಥರ್ಡ್ ವಲ್ರ್ಡ್ ಪ್ರಶಸ್ತಿ’ 1987ರಲ್ಲಿ ದೊರೆಯಿತು. 1957ರಲ್ಲಿ ಬಾಂಬೆಯಲ್ಲಿ ‘ಶಾಂತಿಗಾಗಿ ನ್ಯಾಯ’ ಎಂದು ಜುವೆನೈಲ್ ನ್ಯಾಯಾಲಯದ ಮಾಜಿಸ್ಟ್ರೇಟ್ ಸ್ಥಾಪನೆ ಮಾಡಲಾಯಿತು.

ಅವಾಬಾಯಿ ಅವರು ಭಾರತದ ಕುಟುಂಬ ಯೋಜನಾ ಸಂಘ ಪ್ರಾರಂಭವಾದಾಗಿನಿಂದ ಹಿಡಿದು ಅವರ ಮರಣದ ಕೊನೆಯ ಕ್ಷಣದವರೆಗೆ ಅದರ ಜೊತೆಗೆ ಸಂಬಂಧವನ್ನು ಹೊಂದಿದ್ದರು. ಅದರ ಅಧ್ಯಕ್ಷರಾಗಿ ಸೇವೆ ಕೂಡ ಸಲ್ಲಿಸಿದರು. ನಂತರ ಅದರ ಸ್ಥಾಪಕ ಸದಸ್ಯರು ಕೂಡ ಆಗಿದ್ದರು. ಇವರು ಭಾರತೀಯ ವಿಧ್ಯಾಭವನ, ಮಹಾರಾಷ್ಟ್ರ ಮಹಿಳಾ ಮಂಡಳಿಯ ಆಜೀವ ಸದಸ್ಯರಾಗಿದ್ದರು. ಎರಡು ಬಾರಿ ಅಖಿಲ ಭಾರತ ಮಹಿಳಾ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು. ಭಾರತದ ಪಾಪ್ಯುಲೇಷನ್ ಫೌಂಡೇಶನ್‍ನ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಜರ್ನಲ್ ಆಫ್ ಫ್ಯಾಮಿಲಿ ವೆಲ್ಫೇರ್‍ನ ಗೌರವ ಸಂಪಾದಕರಾಗಿದ್ದರು. ಇವರು ಕುಟುಂಬ ಯೋಜನೆ ಮತ್ತು ಲೈಂಗಿಕ ಆರೋಗ್ಯದ ಕುರುತು ಕೆಲವು ಪ್ರಕಟಣೆಗಳನ್ನು ಮಾಡಿದ್ದಾರೆ. 1. ಪಾಪ್ಯುಲೇಷನ್ ಏಜುಕೇಷನ್ ಫಾರ್ ದ ಯಂಗರ್ ಜನರೇಷನ್ 2. ದ ರೋಲ್ ಆಫ್ ವ್ಯಾಲೆಂಟರಿ ಆರ್ಗನೈಜೆಷನ್ ಇನ್ ಪ್ರೋಮೊಂಟಿಂಗ್ ಪ್ಯಾಮಿಲಿ ಪ್ಲಾನಿಂಗ್ ಆಂಡ್ ಪಾಪುಲೇಷನ್ ಪಾಲಿಸಿ. 3. ಸಮ್ ಕರಿಯರ್ಸ್ ಫಾರ್ ವುಮೇನ್ 4. ಪಾಪುಲೇಷನ್ ಡೌಲಪ್‍ಮೆಂಟ್ ಆಂಡ್ ದ ಇನ್‍ವಿರಾನ್‍ಮೆಂಟ್. 5. ದ ಲೈಟ್ ವಿಲ್ ಬಿಲಾಂಗ್ ಟು ಅಸ್ ಆಲ್ ಇತ್ಯಾದಿ.

 ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿಯು ಅವಾಬಯಿಯವರಿಗೆ ಡಾಕ್ಟರ್ ಆಫ್ ಲಾ ಪದವಿಯನ್ನು ನೀಡಿ ಗೌರವಿಸಿತು. ಹಾಗೇಯೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು 1971ರಲ್ಲಿ ನೀಡಿ ಗೌರವಿಸಲಾಯಿತು. 2005ರಲ್ಲಿ ಇವರು ತಮ್ಮ 91 ವಯಸ್ಸಿನಲ್ಲಿ ಮರಣ ಹೊಂದಿದರು. ಇವರು ತಮ್ಮ ವೈಯಕ್ತಿಕ ಸಂಪತ್ತಿನ ಒಂದು ಭಾಗವನ್ನು ಮಹಿಳಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಮೀಸಲಿಟ್ಟರು. ಹಾಗೆಯೇ ಇವರ ಹೆಸರನಲ್ಲಿ ಒಂದು ಟ್ರಸ್ಟ್ ಕೂಡ ಸ್ಥಾಪನೆಯಾಗಿದೆ. ಅವಾಬಾಯಿ ವಾಡಿಯಾ ಮೆಮೋರಿಯಲ್ ಟ್ರಸ್ಟ್. ಇದು ಇವರ ಹೆಸರಿನಲ್ಲಿ ಅನೇಕ ದತ್ತಿ ಉಪನ್ಯಾಸಗಳನ್ನು ನಡೆಸುತ್ತಿದೆ.

……………………..

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

One thought on “

Leave a Reply

Back To Top