ಕಾವ್ಯಸಂಗಾತಿ

ಅವನ ಪ್ರೀತಿಯೆಂದರೆ

ವಿಜಯಲಕ್ಷ್ಮಿ ಪುಟ್ಟಿ

ಅವನ ಪ್ರೀತಿಯೆಂದರೆ ಸುಗ್ರಾಸ ಭೋಜನ ಹೊಟ್ಟೆ ತುಂಬಿ ಬಹಳಷ್ಟು ಮಿಕ್ಕಿದಂತೆ ಹಂಚಿಕೊಳ್ಳಲು ಸ್ವಲ್ಪವೂ ಮನಸ್ಸಿಲ್ಲ…

ಅವನ ಪ್ರೀತಿಯೆಂದರೆ ವಾಕಿಂಗ್ ನಲ್ಲಿಯ ಕಾಡು ರಸ್ತೆಬದಿಯ ಒಂದು ಪುಟ್ಟ ನೀಲಿ ಹೂವು ತುಸು ಒರಟು
ಕುಂಡದ ದಟ್ಟ ಕಡು ಕೆಂಪು ಗುಲಾಬಿ ಅಲ್ಲ

ಅವನ ಪ್ರೀತಿಯೆಂದರೆ ದಟ್ಟ ನೆನಪು ಕುಂತಲ್ಲಿ ನಿಂತಲ್ಲಿ ಕಾಡಿಸದೆ ಪೀಡಿಸದೆ ಮನ ನೋಯಿಸದ ಮುದನೀಡುವ ಕನಸು

ಆತನ ಪ್ರೀತಿಯೆಂದರೆ ಬೊಗಸೆ ತುಂಬಾ ಬಿರಿವ ಮಲ್ಲಿಗೆ ನನ್ನ ನೋಡಿ ನಕ್ಕಂತೆ ಮೆಲ್ಲಗೆ ಸುವಾಸನೆಲಿ ಜಗವ ಮರೆತಂತೆ ಯಾರೊಂದಿಗೂ ಹಂಚಿಕೊಳ್ಳಲು………………ಮನಸ್ಸೇ ಇಲ್ಲ??


One thought on “

  1. ನೆನೆಸಿಕೋ ಅವನಲ್ಲದ್ ಪ್ರೀತಿ ಯನು, ಅವನಿಲ್ಲದ ಪ್ರೇಮವನು ಅವನಿಲ್ಲದ ಮವ ನ್ನೂ

Leave a Reply

Back To Top