ಕಾವ್ಯಸಂಗಾತಿ
ಎ.ಕಮಲಾಕರ ಅವರ
ಗಜಲ್


ಹೂವಿನಂಥ ಮನಸು ಹಾಳಾಗಿ ಹೋಯಿತು
ಪರರ ನಿಂದಿಸುವುದೇ ಗೀಳಾಗಿ ಹೋಯಿತು
ಮೊದಲು ನಿನ್ನ ನೀನು ತಿದ್ದಿಕೊಳ್ಳದೆ
ಬಂಗಾರದ ಬದುಕು ಗೋಳಾಗಿ ಹೋಯಿತು
ನಡೆಯಿರದೆ ನುಡಿಮುತ್ತುಗಳ ಚೆಲ್ಲಿದರೆ ಹೇಗೆ
ನಾಟಕವೇ ದಿನನಿತ್ಯ ಬಾಳಾಗಿ ಹೋಯಿತು
ಜ್ಞಾನ ವಿಜ್ಞಾನ ಪಾಂಡಿತ್ಯದ ಮಾತೇ ಆಯಿತು
ಅಜ್ಞಾನ ತುಂಬಿ ಮಸ್ತಕ ಧೂಳಾಗಿ ಹೋಯಿತು
ನಿಂದಿಸಲು ಭೋಧಿಸಲು ನಿನ್ಯಾರು ಕಮಲ್
ಪ್ರಕೃತಿ ಚಿಕಿತ್ಸೆಗೆ ಎದೆ ಹೋಳಾಗಿ ಹೋಯಿತು
ಎ.ಕಮಲಾಕರ