ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ಮನಸ್ಸು ಒಪ್ಪುವಂತೆ ಬದುಕು


ಮನಸ್ಸು ಒಪ್ಪುವಂತೆ ಬದುಕು,
ಅತಿಶಯಿತ ಚಿಂತನೆ ಕೈಬಿಡು.
ನೀ ಹಾದುಹೋದ ದಾರಿಗೆ ನಿನ್ನ ಹೆಜ್ಜೆಯ ಗುರುತು,
ನಿನ್ನದೇ ಆದ ಬದುಕು ನಿನ್ನ ಗುರುತು.
ಪ್ರತಿಯೊಂದು ದಿನವೂ ಹೊಸ ಬೆಳಕಾಗಲಿ,
ನಿನ್ನ ನಗೆ ಚಿಮುಕಲಿ ಹಸಿರು ಚಿನುಕಾಗಿ.
ಮರುಕು ತರುವ ನೆನಪುಗಳನ್ನು ತೊರೆದು,
ಇಂದಿನ ಕನಸು ನಿನ್ನ ಬೆಳಕಾಗಲಿ.
ಮನದ ಭಾರ ತಗ್ಗಿಸಿ ನೋಡು,
ಜೀವನದ ಹಾಡು ಕೇಳಿ ನೋಡು.
ಅಲೆಗಳ ಆಘಾತದಲ್ಲಿ ನಡುಗದೆ ನಿಂತು,
ನಿನ್ನ ಪಥದ ಲಯವೇ ನೀನಾಗು.
ನಿನ್ನ ನೆನಪಿನಲ್ಲಿ ಬಾಳು ಹಗುರಾಗಲಿ,
ಸತ್ಯದ ಬೆಳಕಾಗಲಿ ನಿನ್ನ ಹೃದಯದಲ್ಲಿ.
ಮನಸ್ಸು ಒಪ್ಪುವಂತೆ ಬದುಕು,
ನಿನ್ನ ಬದುಕು ಗಾನವಾಗಲಿ ಜಗಕೆ
——————————————————————————————————–
ದೀಪಾ ಪೂಜಾರಿ ಕುಶಾಲನಗರ