ಅನುವಾದ ಸಂಗಾತಿ
ನಾನೂ ನಮ್ಮ ಗೆಳೆಯರು
ತೆಲುಗು ಮೂಲ:ವಿಲ್ಸನ್ ರಾವು ಕೊಮ್ಮವರಪು
ಕನ್ನಡಕ್ಕೆ:ಕೋಡೀಹಳ್ಳಿ ಮುರಳೀ ಮೋಹನ್



ನಾನು ಕತ್ತರಿ –
ನಾನು ಬ್ಲೇಡಿಗಿಂತ ಹರಿತವಾದ ಕತ್ತಿ –
ನಾನು ಬಾಚಣಿಗೆ –
ನಾವು ಮೂವರೂ ವೇದಕಾಲದಿಂದಲೂ ಗೆಳೆಯರು.
ಮಕ್ಕಳ ಮೊದಲ ಕ್ಷೌರದಿಂದ ಹಿಡಿದು,
ಉಪನಯನ, ಮದುವೆ, ತೀರ್ಥಯಾತ್ರೆ, ಹರಕೆ ತೀರಿಸುವವರೆಗೆ –
ಮರಣಾನಂತರದ ವಿಧಿಗಳ ತನಕ –
ನಾವು ಒಟ್ಟಾಗಿ ‘ಚಿಟಪಟ’ ಸದ್ದಿನೊಂದಿಗೆ ನಾಟ್ಯ ಮಾಡಿದ ಕಡೆ,
ನಮ್ಮ ಕಣ್ಣುಗಳ ನಿಖರ ದೃಷ್ಟಿ, ಕೈಗಳ ಸ್ಥಿರ ನೈಪುಣ್ಯದಿಂದ
ಎಷ್ಟೋ ತಲೆಗಳಿಗೆ ಸೌಂದರ್ಯದ ಕಿರೀಟ ತೊಡಿಸಿದ್ದೇವೆ.
ನಾವು ಮೂವರೂ ಒಟ್ಟಾಗಿ ಎಲ್ಲಿರುತ್ತೇವೆಯೋ,
ಅಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ
ತಲೆಗಳು ಪರಿಶುದ್ಧವಾಗಿ, ಪವಿತ್ರತೆಯನ್ನು ಪಡೆಯುತ್ತವೆ.
ಕೆಡುಕನ್ನು ನಿವಾರಿಸಿ, ಶಿಶುವಿಗೆ ಉತ್ತಮ ಭವಿಷ್ಯ ಸಿಗಲೆಂದು
ದೇವರನ್ನು ಪ್ರಾರ್ಥಿಸಿ,
ಮೊದಲ ಕ್ಷೌರ ಮಾಡಿದರೆ,
ಆ ಕೈಗಳ ಕೌಶಲ್ಯಕ್ಕೂ,
ಆ ಕಣ್ಣುಗಳ ಪ್ರಾಮಾಣಿಕತೆಗೂ
ದೇವರ ಆಶೀರ್ವಾದ ದೊರೆತಂತೆ.
ಕುಲವೃತ್ತಿಯ ಗೌರವವನ್ನು ಕಾಪಾಡಿಕೊಂಡು,
ಕ್ಷೌರ ಮಾಡಿದ ಕೈ ತನ್ನ ಪ್ರಾಚೀನ ಪರಂಪರೆಯನ್ನು ಎಂದಿಗೂ ಮರೆಯುವುದಿಲ್ಲ.
ಕ್ಷೌರವೃತ್ತಿ ಕೇವಲ ಕೂದಲು ಕತ್ತರಿಸುವುದು, ಗಡ್ಡ ಬೋಳಿಸುವುದಷ್ಟೇ ಅಲ್ಲ;
ಅದು ಒಂದು ಸಂಸ್ಕೃತಿ, ಒಂದು ಪರಂಪರೆ.


ಹೊಸ ವಿಷಯ ಆಯ್ಕೆಯಾಗಿದೆ. ಕ್ಷೌರಿಕನ ಉಪಕರಣಗಳಿಗೆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಕಲ್ಪಿಸಿದ್ದು ಕವಿಯ ಹಿರಿಮೆ ಎನ್ನಬಹುದಾಗಿದೆ. ಮೂಲ ಕವಿಗೂ ಅನುವಾದಕರಿಗೂ ಅಭಿನಂದನೆ.
ಧನ್ಯವಾದಗಳು ಸರ್