ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಲೇಖನ

ಅಕ್ಷರದ ಅವ್ವ ಭಾರತದ

ಮೊದಲ ಶಿಕ್ಷಕಿ

ಸಾವಿತ್ರಿಬಾಯಿ ಫುಲೆ

ಡಾ.ಸುಜಾತಾ.ಸಿ.

Why Savitribai Phule is the Best Role Model for the Anti CAA-NRC Protests

                                    “ನೀನು ನಂಗೊAದು ರೊಟ್ಟಿ ಕೊಟ್ರೆ

                                    ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ

                                    ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ

                                    ಗಳಿಸೋ ಅವಕಾಶ ಕಿತ್ಕಳೋ ತಂಕ

                                    ನನ್ನ ಹಸಿವನ್ನ ತೀರ್ಸಿದಂಗೆ

                                    ಅದೇ ನಿನೇನಾದ್ರೂ ವಿದ್ಯೆ ಕಲ್ಸಿ

                                    ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ?

                                    ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ

                                    ಎಲ್ಲ ಒಟ್ ಸೇರಿ

                                    ನಮ್ ದಾರಿ ನಾವು ಹುಡುಕೋದ ಹೇಳಿಕೊಟ್ಟಂಗೆ”

ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಅಪ್ಪಟ ಸ್ತ್ರೀವಾವಾದ ಚಿಂತಕಿ ಮಾತೆ ಸಾವಿತ್ರಿ ಭಾ ಫುಲೆ ಅವರಿಗೆ ಮಹಿಳೆಯರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ಅವರ ಬದುಕು ಮತ್ತು ಬರಹದಲ್ಲಿ ಕಾಣಸಿಗುತ್ತದೆ. ಮೇಲಿನ ಕವಿತೆಯನ್ನು ನೋಡಿದರೆ ಮಹಿಳೆಯರಿಗೆ ಬಹಳ ಮುಖ್ಯವಾದುದು ಶಿಕ್ಷಣವೆಂಬುದನ್ನು ಸಾರಿ ಹೇಳುತ್ತದೆ. ಇಂತಹ ತಾಯಿಯನ್ನು ನಾವು ಪದೇ ಪದೇ ನೆನೆಯಬೇಕು ಹಾಗೇ ಅವಳ ಹೆಜ್ಜೆಯಲ್ಲಿಯೇ ನಮ್ಮ ಹೆಜ್ಜೆಗಳನ್ನು ಇಡುವದರಿಂದ ಮಾತ್ರ ಅವಳ ಹೋರಾಟಕ್ಕೆ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಭಾರತೀಯರಿಗೆ ಅದರಲ್ಲೂ ಶೂದ್ರಾತಿಶೂದ್ರ ಬಹುಸಂಖ್ಯಾತರಿಗೆ ಹಾಗೂ ಭಾರತದ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು ಅಕ್ಷರ ಬೀಜವನ್ನು ಬಿತ್ತಿ ಕ್ರಾಂತಿಯನ್ನೇ ಹುಟ್ಟು ಹಾಕಿದ ದಿಟ್ಟ ಮಹಿಳೆ ಅವ್ವ ಸಾವಿತ್ರಿ ಬಾಯಿ ಫುಲೆ.

ಸಾವಿತ್ರಿ ಬಾಯಿ ಅವರು ಬಡ ರೈತ ಕುಟುಂಬದಲ್ಲಿ ಶಿರವಳ ಹತ್ತಿರವಿರುವ ನಾಯಗಾವ ಎಂಬ ಹಳ್ಳಿಯಲ್ಲಿ ಝಗಡ ಪಾಟೀಲರ ಮಗಳಾಗಿ ೩ ನೇ ಜನೇವರಿ ೧೮೩೧ ರಲ್ಲಿ ಜನಿಸಿದರು. ಸಾವಿತ್ರಿಬಾಯಿ ಅವರಿಗೆ ಎಂಟು ವರುಷವಿರುವಾಗ ಗೋವಿಂದರಾವ್ ಅವರ ಮಗ ಜ್ಯೋತಿ ಬಾ ಫುಲೆ ಅವರಿಗೆ ಹದಿಮೂರು ವರ್ಷ ಇರುವಾಗ ವಿವಾಹ ಮಾಡುತ್ತಾರೆ. ಸಾವಿತ್ರಿಬಾಯಿ ಹುಟ್ಟಿದ ಊರಲ್ಲಿ ಶಿಕ್ಷಣದ ಪರಂಪರೆ ಇರಲಿಲ್ಲ. ಅನಕ್ಷರಸ್ಥಳಾದ ಸಾವಿತ್ರಿಯನ್ನು ಮದುವೆಯಾವ ಜ್ಯೋತಿಭಾ ಅಕ್ಷರ ಕಲಿಸಲು ಒರ್ವ ಶಿಕ್ಷಕನನ್ನು ನೇಮಿಸುತ್ತಾರೆ. ಆ ಶಿಕ್ಷಕರು ಕೇಶವ ಶಿವರಾಮ ಭಾವಳ್ಕರ ಎಂಬುವವರು. ಸಾವಿತ್ರಿಬಾಯಿಯವರಿಗೆ ಕಲಿಸಲು ಒಪ್ಪಿಕೊಂಡು ಅಕ್ಷರದ ಅಭ್ಯಾಸವನ್ನು ಮಾಡಿಸುತ್ತಾರೆ. ಹಾಗೆ ಸಮಯ ಸಿಕ್ಕಾಗ ಜ್ಯೋತಿಬಾಫುಲೆ ಅವರು  ಕೂಡಾ ಪಾಠ ಮಾಡಲು ಅಣಿಯಾಗುತ್ತಿದ್ದರು. ಇದರಿಂದ ಸಾವಿತ್ರಿಬಾಯಿ ಫುಲೆ ಅವರು ಸಂಗಾತಿ ಜ್ಯೋತಿಬಾಫುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿಯ ಜ್ಯೋತಿಯನ್ನು ಹಚ್ಚಲು ಕಾರಣವಾಯಿತು. ಸಮಾಜದ ಅನೇಕ ಮೌಢ್ಯಗಳನ್ನು ಶಿಕ್ಷಣದ ಅರಿವಿನ ಮೂಖಾಂತರ ಹೊರದೂಡುವ ಕೆಲಸವನ್ನು ದಂಪತಿಗಳು ಮಾಡಿದರು. ಅಕ್ಷರ ಕಲಿತ ಸಾವಿತ್ರಿಯವರು ಸುಮ್ಮನೆ ಕೂಡುವ ಜಾಯಮಾನದವಳಾಗಿರದೇ ತಮ್ಮ ಮನೆಯನ್ನೇ ಮೊಟ್ಟ ಮೊದಲಿಗೆ ಶಾಲೆಯನ್ನಾಗಿ ಮಾಡಿ ಗಂಡ ಹೆಂಡತಿ ಇಬ್ಬರು ಸೇರಿ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಜ್ಯೋತಿಬಾ ಅವರಿಗೆ ಹಿಂದೂ ಸ್ತ್ರೀಯರಿಗೆ ವಿಮೋಚನೆ ಮಾಡುವದು ಪ್ರಥಮ ಆದ್ಯ ಕರ್ತವ್ಯವೆಂದು ತಿಳಿದು ಎಲ್ಲ ಹೆಣ್ಣು ಮಕ್ಕಳ ಹಾಗೂ ಶೂದ್ರರಿಗೆ ಶಿಕ್ಷಣವನ್ನು ಕೊಡಲು ನಿರ್ಧರಿಸುತ್ತಾರೆ. ಒಂದು ದಿನ ಜ್ಯೋತಿಬಾ ಫುಲೆ ಅವರು ಮಿಸ್ ಫೆರಾರ್ ಅವರು ನಗರದಲ್ಲಿ ಅಮೇರಿಕನ್ ಮಿಷನ್ ನಡೆಸುತ್ತಿದ್ದ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡುತ್ತಾರೆ. ಅಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿ ತಾವು ಕೂಡ ಹಾಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಅವರನ್ನು ನೋಡಿ ಬಹಳವಾಗಿ ಪ್ರಭಾವಿತರಾಗುತ್ತಾರೆ.

೧೮೪೮ ರಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸುತ್ತಾರೆ. ಸಂಪ್ರದಾಯವಾದಿಗಳಿಂದ ಈ ಶಾಲೆ ಬಹುಬೇಗ ಮುಚ್ಚಿ ಹೋಗುತ್ತದೆ. ಮರಳಿ ಪ್ರಯತ್ನ ಮಾಡು ಎಂಬಂತೆ ಪುಣಿಯ ಬುಧವಾರ ಪೇಟೆಯಲ್ಲಿರುವ ಬಿಢೆ ಎಂಬುವರ ಮನೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಅಹಮ್ಮದ ನಗರದ ಮಿಸ್ ಫರಾರ್ ಫಾರ್ಮಲ್ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆದುಕೊಳ್ಳಲು ಕಳಿಸುತ್ತಾರೆ. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಎಂಬಾಕೆಯೂ ಕೂಡಾ ಕಲಿಯುತ್ತಿರುತ್ತಾರೆ. ಸಾವಿತ್ರಿಬಾಯಿ ಫುಲೆ ಅವರ ಕನಸಿಗೆ ನೀರೆಯುವಂತೆ ಫಾತಿಮಾಳು ಕೂಡಾ ಶಿಕ್ಷಕ ವೃತ್ತಿಯನ್ನು ಸಾವಿತ್ರಿಬಾಯಿ ಅವರ ಜೊತೆಗೂಡಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಾವಿತ್ರಿ ಬಾಯಿ ಫುಲೆ ಅವರ ಶಿಕ್ಷಕ ವೃತ್ತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ.

ಶಾಲೆ ಪ್ರಾರಂಭಿಸಿದ ಮೊದಲಲ್ಲಿ ಎಂಟು ಜನ ಹೆಣ್ಣು ಮಕ್ಕಳು ಮಾತ್ರ ಪ್ರವೇಶವನ್ನು ಪಡೆದುಕೊಂಡಿದ್ದರು. ನಂತರದ ದಿನದಲ್ಲಿ ನಲವತ್ತೇಂಟು ಜನರಿಂದ ಶಾಲೆ ಕಂಗೊಳಿಸಹತ್ತಿತ್ತು. ಅದೇ ಶಾಲೆಗೆ ಸಾವಿತ್ರಿಬಾಯಿ ಫುಲೆಯವರನ್ನು ಮುಖ್ಯ ಶಿಕ್ಷಕಿಯನ್ನಾಗಿ ನೇಮಿಸಿಕೊಳ್ಳಲಾಯಿತು. ನಿರಂತರವಾಗಿ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಶೈಕಣಿಕವಾಣಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಫಲತೆಯನ್ನು ಪಡೆಯಿತು. ಆ ಶಾಲೆಗೆ ಬರುವವರೆಲ್ಲರೂ ಕಡು ಬಡತನದಲ್ಲಿ ಇದ್ದ ಹೆಣ್ಣು ಮಕ್ಕಳು.ಶೂದ್ರರು ದಮನಿತರು. ಇತಂಹ ಪರಿಸ್ಥಿತಿಯಲ್ಲಿ ಶಾಲೆಗೆ ದುಡ್ಡು ಖರ್ಚು ಮಾಡುವದು ಹರಸಾಹಸವೇ ಆಗಿತ್ತು. ಅದನ್ನು ಅರಿತ ಫುಲೆ ದಂಪತಿಗಳು ಹೆಣ್ಣು ಮಕ್ಕಳಿಗೆ ಊಟ,ಸಮವಸ್ತç, ಆಟಕ್ಕೆ ಬೇಕಾದ ಸಾಮಿಗ್ರಿಗಳ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡುಬರಲು ಮತ್ತು ಮತ್ತೇ ಮರಳಿ ಮನೆಗೆ ಕಳಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಸಹಾಯವಾಯಿತು. 

ಶೂದ್ರರು ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆದು ಕೊಳ್ಳುವುದನ್ನು ಸಹಿಸದ ಕೆಲ ಜಾತಿವಾದಿ ಪುಣಿಯ ಬ್ರಾಹ್ಮಣರು ವಿರೋಧಿಸಿದರು. ಜ್ಯೋತಿಬಾ ಫುಲೆ ಅವರಿಗೆ ಬೇದರಿಕೆಗಳನ್ನು ಹಾಕಿದರು ಆದರೆ ಇಂತಹ ಗೊಡ್ಡು ಬೇದರಿಕೆಗೆ ಹೆದರದೆ ತಮ್ಮ ಗುರಿ ಮತ್ತು ಉದ್ದೇಶವನ್ನು ಫುಲೆಯವರು ಬಿಡಲಿಲ್ಲ. ಒಂದು ಕ್ಷಣ ಇಂದಿನ ಪರಿಸ್ಥಿತಿಯಲ್ಲಿ ನಾವು ನೋಡಿದರೆ ಅಂದು ಫುಲೆ ಅವರು ತಾವು ಮಾಡುವ ಕೆಲಸದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದರೆ ಎಲ್ಲ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ವಿಚಾರಿಸಿದರೆ ಮೈಯೆಲ್ಲ ನಡುಕ ಹುಟ್ಟುತ್ತದೆ. ಪರಿಸ್ಥಿತಿ ತುಂಬಾ ಹದಗೆಟ್ಟು ಕಲಿಸಲು ಬಂದ ಶಿಕ್ಷಕರನ್ನು ಕೂಡಾ ಬೆದರಿಸಿ ಹೆದರಿಸಿ ಅವರನ್ನು ಶಾಲೆಗೆ ಬರದಂತೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿಯವರನ್ನೇ ಮನೆಯಲ್ಲಿಯೇ ಪಾಠ ಮಾಡಲು ನೇಮಿಸಿಕೊಳ್ಳುತ್ತಾರೆ. ಇದನ್ನು ಅರಿತ ಇಡೀ ಪುಣಿ ತಲ್ಲಣಕ್ಕೆ ಇಡಾಗುತ್ತದೆ. ಮಹಿಳೆಯಾದವಳು ಮನೆಯಿಂದ ಹೊರಹೋಗಿ ಶಿಕ್ಷಕಿಯಾಗಿ ಕೆಲಸ ಮಾಡುವುದು ಮಹಾ ಅಪರಾಧವೆಂಬAತೆ ಸಂಪ್ರದಾಯಸ್ಥರೆಲ್ಲರೂ ವಿರೋದ ವ್ಯಕ್ತಪಡಿಸುತ್ತಾರೆ. ಇದು ರಾಷ್ಟಿçÃಯ ಗೌರವಕ್ಕೆ ಮಾಡಿದ ಅಪಮಾನವೆಂದು, ಇಂತಹ ಕೆಲಸ ಅಪವಿತ್ರವೆಂದು ಬ್ರಾಹ್ಮಣರು ಸಾವಿತ್ರಿಬಾಯಿಯವರು ಶಾಲೆಗೆ ಹೋಗುವಾಗ ಅವರ ಮೇಲೆ ಮಣ್ಣು, ಸೆಗಣಿಯನ್ನು ಎಸೆಯುತ್ತಾರೆ ದೃತಿಗೆಡದ ಸಾವಿತ್ರಿಬಾಯಿ ಅವರು “ದೇವರು ನಿಮಗೆ ಒಳ್ಳೆಯದು ಮಾಡಲಿ, ಅವನು ನಿಮ್ಮನ್ನು ಕ್ಷಮಿಸಲಿ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ” ಎಂದು ಸಾವಿತ್ರಿಬಾಯಿಯವರು ತಮ್ಮ ಮೇಲೆ ಸೆಗಣಿ ಎಸೆದವರಿಗೆ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಅವರು ಶಾಲೆಗೆ ಹೋಗುವಾಗ ತಮ್ಮ ಕೈಯಲ್ಲಿ ಒಂದು ಸೀರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು ಶಾಲೆ ಪ್ರವೇಶಿಸಿದ ನಂತರ ಸೆಗÀಣಿಯ ಸೀರೆಯನ್ನು ಕಳಚಿ ಕೈಯಲ್ಲಿ ತಂದ ಮತ್ತೋಂದು ಸೀರೆಯನ್ನು ಊಡುತ್ತಿದ್ದರು. ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪತಿಯ ಸಹಾಯದಿಂದ ಕೆಲಸದಲ್ಲಿ ನಿರತರಾಗುತ್ತಾರೆ. ಸಾವಿತ್ರಿಬಾಯಿಯವರು ಸ್ತ್ರೀಯರ ಸುಧಾರಣಿಗಾಗಿ ಜ್ಯೋತಿರಾವರ ಮಾರ್ಗದರ್ಶನದಲ್ಲಿ “ಮಹಿಳಾ ಸೇವಾ ಮಂಡಳ”ವನ್ನು ಸ್ಥಾಪನೆ ಮಾಡುತ್ತಾರೆ. ಪುಣಿಯ ಕಲೆಕ್ಟರ್ ಅವರ ಪತ್ನಿ ಇ.ಸಿ.ಜೋನ್ಸ ಎಂಬುವರು ಮಹಿಳಾ ಸೇವಾ ಮಂಡಳ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ.

ಮಹಿಳೆಯರನ್ನೆಲ್ಲಾ ಒಟ್ಟು ಗೂಡಿಸಲು ೧೮೫೨ ರಲ್ಲಿ ದೊಡ್ಡ ಪ್ರಮಾಣದ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮವನ್ನು ವಿತರಿಸಿ ಅವರಿಗೆಲ್ಲ ಊಡಿಯನ್ನು ತುಂಬುತ್ತಾರೆ. ೧೮೭೧ ರಲ್ಲಿ ಸ್ತ್ರೀ ವಿಚಾರವತಿ’ ಸಭಾ ಸ್ಥಾಪನೆ ಮಾಡುತ್ತಾರೆ.

ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಹೆಚ್ಚಿನ ತೊಂದರೆ ಇತ್ತು. ಅದರಲ್ಲಿ ವಿಧವೆಯರಾದರೆ ಅನೇಕ ಬ್ರಾಹ್ಮಣ ಮನೆತನದ ಮಾವ, ಮೈದುನ ಮುಂತಾದವರು ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದರು. ಲೈಂಗಿಕ ಶೋಷಣೆ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಅವರಿಗೆ ಮಕ್ಕಳಾದರೆ ‘ಬಾಲ ಹತ್ಯೆ’ ಮಾಡುತ್ತಿದ್ದರು. ಇಲ್ಲವೇ ಗರ್ಭವತಿಯಾದರೆ ಸ್ವತಃ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಡೆಗಟ್ಟುವ ಉದ್ದೇಶದಿಂದ ಜ್ಯೋತಿಭಾರವರು ‘ಬಾಲಹತ್ಯಾ ಪ್ರತಿಬಂಧಕ ಗೃಹ’ ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಈ ಗೃಹ ದೊಡ್ಡ ಆಧಾರವಾಗಿತ್ತು. ೧೮೬೩ರಲ್ಲಿ ಸ್ವಂತ ಮನೆಯಲ್ಲಿ ಸ್ಥಾಪಿಸಿದ ಅನಾಥ ಬಾಲಶ್ರಮವನ್ನು ಸಾವಿತ್ರಿಯವರು ೩೫ ಜನರಿಗೆ ಬಾಣಂತನವನ್ನು ಮಾಡಿದರು. ಸವರ್ಣೀಯ ವಿಧವೆಯರು ಅವರ ಸೇವೆ ಮಾಡುವಾಗ ಸಾವಿತ್ರಿಭಾಯಿಯವರಿಗೆ ಅದು ಎಂದು ಕೀಳಾಗಿ ತೋರಲಿಲ್ಲ. ೧೮೭೩ರಲ್ಲಿ ಕಾಶೀಬಾಯಿ ಎಂಬ ಬ್ರಾಹ್ಮಣ ವಿಧವೆಯ ಇಂತಹದೇ ಸಂಬಂಧದಿಂದ ಹುಟ್ಟಿದ ಮಗನನ್ನು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿಪುಲೆ ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಅಂತಾ ನಾಮಕರಣ ಮಾಡುತ್ತಾರೆ. ಅನನ್ನು ಎಂ.ಬಿ.ಬಿ.ಎಸ್ ಓದಿಸಿ ಡಾಕ್ಟರರನ್ನಾಗಿ ಮಾಡುತ್ತಾರೆ.ಹೀಗೆ ಮಹಿಳೆಯರಿಗಾಗಿ ವಿಧವೆಯರ ಪುನರ್ವಸತಿ, ವಿಧವಾ ಅನಾಥಾಶ್ರಮವನ್ನು ಕೂಡಾ ಸ್ಥಾಪಿಸುತ್ತಾರೆ. ಪುಲೆಯವರು ಸ್ಥಾಪಿಸಿದ್ದ ವಿಧವಾ ಅನಾಥಾಲಯವು ದೇಶದಲ್ಲಿಯೇ ಸ್ಥಾಪಿಸಿದ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದ್ದಿತು. ೧೮೬೮ರಲ್ಲಿ ತಮ್ಮ ‘ನೀರಿನಬಾವಿ’ಯನ್ನು ಕೆಳಜಾತಿಗಳಿಗೆ ಮುಕ್ತಗೊಳಿಸಿ ಬಿಡುತ್ತಾರೆ. ಇದರಿಂದ ಎಷ್ಟೋ ಕೆಳವರ್ಗದವರಿಗೆ ನೀರು ಸಿಕ್ಕಂತಾಗುತ್ತದೆ.

ಶಿಕ್ಷಣ ನೀಡುವ ದಾಹವು ಪುಲೆಯವರು ವಯಸ್ಕ ರೈತರು  ಮತ್ತು ದುಡಿಯುವವರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವAತೆ ಮಾಡಿತು. ತಮ್ಮ ಮನೆಯಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿ ಪ್ರತಿದಿವಸ ೨ ಗಂಟೆಗಳ ಕಾಲ ತಾವು ಮತ್ತು ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆಯವರು ‘ಅಶಿಕ್ಷಿತ ವಯಸ್ಕ, ರೈತರರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ನಿರಂತರ ಹೋರಾಟದಿಂದ ೭೩ ವರ್ಷದ ಮಹಾತ್ಮ ಜ್ಯೋತಿಬಾಪುಲೆಯವರು ಧೀರ್ಘ ಅನಾರೋಗ್ಯದಿಂದ ೧೮೯೦ರಲ್ಲಿ ನವೆಂಬರ್ ೨೮ರಂದು ನಿಧನರಾದರು. ಮಕ್ಕಳಾಗದ ದಂಪತಿಗಳಾಗಿದ್ದರಿAದ ದತ್ತು ಪುತ್ರ ಯಶವಂತನಿಗೆ ಸಂಸ್ಕಾರ ಮಾಡಲು ಕುಟುಂಬದವರು ಒಪ್ಪದೇ ಇದ್ದಾಗ ಸ್ವತಃ ಕೈಯಲ್ಲಿ ದಿವಟಿಯನ್ನು ಹಿಡಿದು ಜ್ಯೋತಿಯವರ ಅಂತ್ಯ ಸಂಸ್ಕಾರ ಮಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ. ಹಾಗೇ ಅವರು ತಮ್ಮ ಇಡೀ ಜೀವನದ ಉದ್ದಕ್ಕೂ ಹೆಣ್ಣುಮಕ್ಕಳಿಗಾಗಿ ಮತ್ತು ಅಶ್ಪೃಶ್ಯರಿಗಾಗಿ ಶಾಲೆ ಪ್ರಾರಂಭಿಸಿದರು. ಬಾಲಹತ್ಯಾ ಪ್ರತಿಬಂಧಕ ವಿಧವಾ ಅನಾಥಾಶ್ರಮ, ಕೂಲಿಕಾರ ರೈತರಿಗಾಗಿ ರಾತ್ರಿಶಾಲೆ, ಬಡವರಿಗಾಗಿ ಅನ್ನಛತ್ರಗಳನ್ನು ತೆರೆದರು. ಬ್ರಾಹ್ಮಣ ವಿಧವೆಯರ ತಲೆಬೋಳಿಸುವುದನ್ನು ವಿರೋಧಿಸಿದರು. ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ತೋಡಗಿದರು. ಹೀಗೆ ಎಲ್ಲ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಫುಲೆ ಎಂದರೆ ತಪ್ಪಾಗಲಾರದು.

ಒಟ್ಟಾರೆಯಾಗಿ ಸಮಾಜದ ಎಲ್ಲ ಅನಿಷ್ಟಗಳಿಗೂ ಕಾರಣವಾದ ಜಾತಿಪದ್ಧತಿ ಅಳಿಯಬೇಕೆಂದು ಜಾಲ್ತಿಯಲ್ಲಿದ್ದ ಬಹುಪಾಲು ವ್ಯವಸ್ಥೆ ಆಚರಣೆ ನಂಬಿಕೆಗಳಿಗೆ ಸವಾಲೆಸೆದರು. ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿ ಶಾಲೆಯನ್ನು ತೆರೆದರು ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವವನ್ನು ವಿರೋಧಿಸಿದರು. ವಿಧವೆಯರ ಮಾನವ ಹಕ್ಕುಗಳ ಎತ್ತಿ ಹಿಡಿದು ಮರು ವಿವಾಹವನ್ನು ಪ್ರತಿಪಾದಿಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ತಮಗೆ ತಿಳಿದಂತೆ ಕವಿತೆಗಳನ್ನು ಬರೆದರು. ಎಲ್ಲ ಧರ್ಮಗಳ ಶಾಸ್ತç-ಪುರಾಣ-ಗ್ರಂಥಗಳ ನಿರಾಕರಿಸಿ ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಹೊಸ ಗ್ರಂಥಗಳನ್ನು ರಚಿಸಿ ಓದುಗರ ಮನಸ್ಸನ್ನು ಸೋರೆಗೊಂಡ ಮಹಾನ್ ಕ್ರಾಂತಿಕಾರಿ ತಾಯಿಯಾಗಿ ನಮಗೆಲ್ಲ ಮಾರ್ಗದಾತೆಯಾದವರು. ಇಂತಹ ಮಾತೆ ಸಾವಿತ್ರಿಬಾಯಿಯವರ ಕಲಿಸಿದ ಪಾಠದ ಪರಿಣಾಮವಾಗಿ ಹದಿನಾಲ್ಕು ವರ್ಷದ ‘ಮುಕ್ತಾ’ ಎಂಬ ಹುಡಗಿ ೧೫ನೇ ಫೆಬ್ರುವರಿ ೧೮೫೫ ರಿಂದ ೯ ಮಾರ್ಚ ೧೮೫೫ ರ ಜ್ಞಾನೋದಯ ಎಂಬ ಪತ್ರಿಕೆಯ ಅಂಕಣದಲ್ಲಿ ‘ಹೊಲೆಯ ಮಾದಿಗರ ದುಖಃಗಳು’ ಎಂಬ ಪ್ರಬಂಧ ಪ್ರಕಟವಾಗುತ್ತದೆ. ಇದೆಲ್ಲದರ ಪರಿಣಾಮವಾಗಿ  ಅವರು ಕಟ್ಟಿದ ಕನಸು ನನಸಾಗಲು ಬಹಳ ಸಮಯ ಹಿಡಿಯುವದಿಲ್ಲ. ೧೮೪೮ ರಿಂದ ೧೮೫೨ರ ಅವಧಿಗೆ ೧೮ ಶಾಲೆಗಳನ್ನು ತೆರೆಯುತ್ತಾರೆ. ಇದರಿಂದ ನಮಗೆಲ್ಲಾ ತಿಳಿದು ಬರುವ ಸಂಗತಿ ಅವರ ಶ್ರಮ ಮತ್ತು ತ್ಯಾಗವನ್ನು ನಾವು ಕೊಂಡಾಡಲೇಬೇಕು.

ಜ್ಯೋತಿಬಾಫುಲೆ ಅವರ ನಿಧನದ ನಂತರ ಮಾತೆ ಎಂದಿಗೂ ದೃತಿಗೆಡಲಿಲ್ಲ. ಸತ್ಯಶೋಧಕ ಸಮಾಜದ ಮುಂದಾಳತ್ವವನ್ನು ವಹಿಸಿಕೊಂಡು ಪತಿಯ ಕೊರತೆಯನ್ನು ತುಂಬುತ್ತಾರೆ. ೧೮೯೭ರಲ್ಲಿ ಪ್ಲೇಗ್ ಮಹಾಮಾರಿ ರೋಗ ಬಂದ ಕಾರಣ ಜನಜೀವನ ಅಸ್ತ ವ್ಯಸ್ತವಾಗುತ್ತದೆ. ಅನೇಕ ಜನರು ಮಹಾಮಾರಿಗೆ ಬಲಿ ಕೂಡಾ ಆಗುತ್ತಾರೆ. ಮಾತೆ ಸಾವಿತ್ರಿಬಾಯಿ ಫುಲೆ ಅವರು ಹಗಲು ರಾತ್ರಿ ಎನ್ನದೆ ಸತ್ಯಶೋದಕ ಸದಸ್ಯರ ಜೊತೆ ಪ್ಲೇಗ್ ರೋಗದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೆ. ಪಾಂಡುರAಗ ಬಾಬಾಜಿ ಗಾಯಕವಾಡ ಎಂಬುವವರ ಪುತ್ರನಿಗೆ ಪ್ಲೇಗ್ ಹೆಮ್ಮಾರಿ ಆವರಿಸಿರುವುದು ಗೊತ್ತಾಗುತ್ತಿದ್ದಂತೆ ತಮ್ಮ ಜೀವದ ಹಂಗನ್ನು ತೋರೆದು ಅವನನ್ನು ಶ್ರುಶ್ರೂಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಮಾತೆ ಸಾವಿತ್ರಿಬಾಯಿ ಫುಲೆ ಅವರಿಗೆ ಪ್ಲೇಗ್ ರೋಗ ತಗಲುತ್ತದೆ. ೧೮೯೭ ರ ಮಾರ್ಚ್ ೧೦ ರಂದು ಮಾತೆ ಇಹಲೋಕ ತ್ಯಜಿಸುತ್ತಾರೆ. ಇಂತಹ ಮಹಾನ್ ಶಿಕ್ಷಕಿ, ಸಮಾಜ ಸುಧಾರಕಿಯನ್ನು ಎಷ್ಟು ನೆನೆದರೂ ಅದು ಕಡಿಮೆಯೆ ಎನ್ನಸದೆ ಇರಲಾರದು.

.

Leave a Reply

Back To Top