ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

ಬುಡಕಟ್ಟು ಜನಾಂಗದ ಬಗ್ಗೆ ಬೆಳಕು ಚೆಲ್ಲುವ ಲೇಖನ

ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

ಆಶಾ ಸಿದ್ದಲಿಂಗಯ್ಯ

ಕಾಡುಗೊಲ್ಲ ಬುಡಕಟ್ಟು ಜನಾಂಗವು ತುಮಕೂರು, ಮತ್ತು ಚಿತ್ರದುರ್ಗ,ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಗೊಂಡಿದ್ದಾರೆ ಉಳಿದಂತೆ   ದಾವಣಗೆರೆ, ಬಳ್ಳಾರಿ ಗಡಿಭಾಗ  ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ರಾಮನಗರ  , ಮಂಡ್ಯ, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಯಲ್ಲಿ  ವಿರಳವಾಗಿ ಕಾಣಸಿಗುತ್ತಾರೆ. ಒಟ್ಟಾರೆ ಕರ್ನಾಟಕದಲ್ಲಿ ಇವರ ಜನಸಂಖ್ಯೆ ಹತ್ತು ಲಕ್ಷ ಇದೆ. ಕಾಡುಗೊಲ್ಲರನ್ನು ಮುನ್ನೆಲೆಗೆ ತರಲು  ಮತ್ತು ಸರ್ಕಾರ ಅವರನ್ನು ಗುರುತಿಸಲು ಹಿಂದುಳಿದ  ವರ್ಗಗಳ ಶಾಶ್ವತ  ಆಯೋಗದ ಮಾಜಿ ಅಧ್ಯಕ್ಷರಾದ ಸಿ. ಎಸ್ ದ್ವಾರಕನಾಥ ರವರು, ಚಲನಚಿತ್ರ ನಟರಾದ ಚೇತನ್ ಅಹಿಂಸಾರವರು, ಮತ್ತು ಕಾಡುಗೊಲ್ಲ ಆಸ್ಮಿತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಕೆ. ನಾಗಣ್ಣರವರು ಇನ್ನು ಅನೇಕರು ಹೋರಾಟ ಮಾಡಿದ್ದಾರೆ. ಅವರ ಹೋರಾಟದಿಂದಾಗಿ  ಸರ್ಕಾರ ಕಾಡುಗೊಲ್ಲರನ್ನು ಪ್ರತ್ಯೇಕಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. .  ಸಂಧರ್ಭದಲ್ಲಿ ಕಾಡುಗೊಲ್ಲ ಹೋರಟಗಾರರಲ್ಲಿ ಹಿರಿಯರಾದಂತಹ ದಿವಗಂತ ನಾಗಪ್ಪರವರನ್ನು ಸ್ಮರಿಸಬೇಕು.

ಈಗಲೂ ಕೂಡ ಕಾಡುಗೊಲ್ಲರ ಹಟ್ಟಿಗೆ ಹೋದರೆ ಈ ರೀತಿಯ ಗುಡಿಸಲುಗಳನ್ನು ಕಣ್ಣಾರೆ ನೋಡಬಹುದು. ಒಂದು ಕಡೆ ಮೂಢನಂಬಿಕೆಯಾದರೂ ಬುಡಕಟ್ಟು ಜೀವನವನ್ನು ಉಳಿಸಿಕೊಂಡಿರುವ ಜನಾಂಗ.

ಇವತ್ತಿಗೂ ಕಾಡುಗೊಲ್ಲ ಜನಾಂಗದವರು ಬಾಣಂತಿಯರನ್ನು ಈ ಗುಡಿಸಲಿನಲ್ಲಿ 2 ವರೆ ತಿಂಗಳು ಬಿಡುತ್ತಾರೆ  ಇದು ಆಧುನಿಕ ನಾಗರೀಕ ಸಮಾಜಕ್ಕೆ ಮೂಡನಂಬಿಕೆಯಾಗಿ ಕಂಡರೂ  ಬುಡಕಟ್ಟು ಸಮುದಾಯವೋಂದು  ಆದಿಮಾನವನ ಅವಾಸಸ್ಥಾನವನ್ನು ನೆನಪಿಸಿಕೊಳ್ಳುವ ಸಾಂಕೇತಿಕವಾದ ಆಚರಣೆಯ ರೀತಿ ಕಾಣುತ್ತದೆ  ಇಂತಹ  ಅನಾದಿಕಾಲದ ಬುಡಕಟ್ಟು ಜೀವನವಿಧಾನವನ್ನು ಉಳಿಸಿಕೊಂಡು ಬರುತ್ತಿರುವ ಕರ್ನಾಟಕದ ಏಕೈಕ ಬುಡಕಟ್ಟು ಎಂದರೆ ಅದು ಕಾಡುಗೊಲ್ಲರು ಮಾತ್ರ  ಇದು ಕೆಲವೊಮ್ಮೆ ತನ್ನನ್ನೇ ತಾನು ಶೋಷಣೆ ಮಾಡಿಕೊಳ್ಳುವ ಕ್ರಮವಾಗಿಯೂ ಕಾಣುತ್ತೆ.

 ಕಾಡುಗೊಲ್ಲರು ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಂತಹ ಧಾರ್ಮಿಕ ನಂಬಿಕೆಯನ್ನು ಗೌರವಿಸೋಣ. ಕಾಡುಗೊಲ್ಲರ ಆರಾಧ್ಯದೈವ ಜುಂಜಪ್ಪ, ಕಾಡುಗೊಲ್ಲರ ದೇವರ ಇಷ್ಟದ ಹೂವು ಸಾದ ಪುಷ್ಪ, ನಮ್ಮ ಬುಡಕಟ್ಟು ದೇವರುಗಳನ್ನು ಮುನ್ನೆಲೆಗೆ ತರೋಣ. ಗುಡಸಲಿನಲ್ಲಿ ಕಾಡಿನಲ್ಲಿ ಜನ್ಮ ತಳೆಯುವ ಕಾಡುಗೊಲ್ಲರ ಮಕ್ಕಳು ಕಷ್ಟ ಸಹಿಷ್ಣುತೆ ಹೊಂದಿರುತ್ತಾರೆ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುತ್ತಾರೆ.ಕಷ್ಟವನ್ನು ಎದುರಿಸುವ ಅವರ ಗುಣ ಅವರ ಪ್ರಬುದ್ಧತೆಯನ್ನು ತೋರುತ್ತದೆ. ಬ್ರಾಹ್ಮಣ್ಯವನ್ನು ಮರುಪ್ರಶ್ನೆ ಮಾಡದೇ ಪಾಲಿಸುವ ಜನರು ಬುಡಕಟ್ಟು ಜನಾಂಗದ ಧಾರ್ಮಿಕ ಭಾವನೆಗಳ ನಂಬಿಕೆಯನ್ನು ಪ್ರಶ್ನಿಸುತ್ತಾರೆ.

ಬುಡಕಟ್ಟು ಜನಾಂಗದ ಬಗ್ಗೆ ಅನ್ವೇಷಣೆ ಮಾಡುತ್ತ ಹೊದಂತೆ ಕಾಡಿನೊಂದಿಗೆ ಅವರ ಒಡನಾಟ ಪ್ರಕೃತಿಯೊಂದಗಿನ ಅವಿನಾಭಾವ ಸಂಬಂಧವನ್ನು ಪರಿಚಯಿಸುತ್ತದೆ.

ಆಧುನಿಕ ಸಮಾಜದ ಜೀವನದ ಜಂಜಾಟದಲ್ಲಿ ನಾಲ್ಕು ಜನ ಏನಾನ್ನುತ್ತಾರೊ ಎಂಬ ಭಯದಲ್ಲಿ ಜನರನ್ನ ಮೆಚ್ಚಿಸುವ ಬಗ್ಗೆಯೇ ಯೋಚಿಸುತ್ತಾ ಜೀವನ ಸವೆಸುವ ಅದೆಷ್ಟೋ ಮಧ್ಯಮ ವರ್ಗದ ಜನ ನಮ್ಮ ನಡುವೆ ಇದ್ದಾರೆ.

ಇದನ್ನೆಲ್ಲಾ ನೋಡಿದಾಗ ಬುಡಕಟ್ಟು ಜೀವನ ಶೈಲಿ, ಒತ್ತಡವಿಲ್ಲದ, ಪ್ರಕೃತಿ ಪರವಾದ ಜೀವನ ಪ್ರತಿಯೊಬ್ಬರಿಗೂ ಆದರ್ಶಮಯ.

ಮನೆಗಳು ಮಾನವನು ನೆಲೆಸಲು ಉಪಯೋಗಿಸುವ ಕಟ್ಟಡ. ಸಾಮಾನ್ಯವಾಗಿ ಸುತ್ತಲೂ ಗೋಡೆಗಳು ಮತ್ತು ಮೇಲೊಂದು ಸೂರನ್ನು ಹೊಂದಿದ್ದು, ಪ್ರತಿಕೂಲ ವಾತಾವರಣಗಳಿಂದ ತಮ್ಮ ಒಳಗಿರುವವರನ್ನು ರಕ್ಷಿಸುತ್ತವೆ. ಒಂದು ಮನೆಯಲ್ಲಿರುವ ಸಾಮಾಜಿಕ ಘಟಕವನ್ನು ಮನೆಜನ ಎಂದು ಕರೆಯಲಾಗುತ್ತದೆ. ಮಾನವ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಾಸಿಸಲು ಬಳಸುವ ನೈಸರ್ಗಿಕವಾದ ತಾಣ ಅಥವಾ ತಾನೇ ರಚಿಸಿದ ಆಸರೆ.

ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ, ಕಲ್ಲುಬಂಡೆಗಳ ಸಂದು, ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖ. ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದುದೇ ಸು.11000 ವರ್ಷಗಳ ಹಿಂದೆ, ಪ್ರ.ಶ.ಪು. ಸು. 9000 ಸುಮಾರಿಗೆ ಎನ್ನಬಹುದು. ಅದಕ್ಕೂ ಹಿಂದೆ ಆತ ತನ್ನ ಸುತ್ತಲಿನ ಪ್ರಾಕೃತಿಕ ಸನ್ನಿವೇಶಗಳನ್ನು ಅವಲಂಬಿಸಿದ್ದ. ಆಹಾರಕ್ಕಾಗಿ ಹಣ್ಣುಹಂಪಲುಗಳನ್ನು-ಅವು ಬೆಳೆದಷ್ಟು ಕಾಲ, ಪ್ರಾಯಶಃ ವರ್ಷದಲ್ಲಿ ಒಂದೆರಡು ತಿಂಗಳು-ತಿನ್ನುತ್ತಿದ್ದ. ಉಳಿದ ವೇಳೆಯಲ್ಲಿ ಸುತ್ತಲಿನಪ್ರಾಣಿಗಳೇ ಇವನ ಆಹಾರ. ಸ್ವಂತ ಜೀವಕ್ಕೆ ಅವುಗಳಿಂದ ಅಪಾಯ ಒದಗದಂತೆ ರಕ್ಷಣೆ ಪಡೆಯಲು ಮಾನವ ಮರದ ಪೊಟರೆಗಳಲ್ಲೋ ಬಂಡೆಗಳ ಸಂದುಗಳಲ್ಲೋ ರಾತ್ರಿಗಳನ್ನು ಕಳೆಯುತ್ತಿದ್ದ. ಸ್ವಾಭಾವಿಕವಾಗಿ ಗುಹೆಗಳೂ ಇವನ ತಂಗುದಾಣಗಳಾದುವು. ಆಹಾರಕ್ಕಾಗಿ ಅಲೆಮಾರಿಜೀವನವನ್ನು ಅವಲಂಬಿಸಿದ ಇವನಿಗೆ ಶಾಶ್ವತವಾದ ನೆಲೆಯ ಆವಶ್ಯಕತೆಯಿರಲಿಲ್ಲ. ಕ್ರಮೇಣ ಇವನ ಜೀವನಕ್ರಮದಲ್ಲಿ ಸುಧಾರಣೆಗಳಾದುವು.

ಆಹಾರವನ್ನು ಹುಡುಕುವ ಶ್ರಮಕ್ಕೆ ಬದಲಾಗಿ ಆಹಾರವನ್ನು ತಾನೇ ಬೆಳೆಯುವ ವಿಧಾನವನ್ನು ಅರಿತುಕೊಂಡ. ಈ ಘಟನೆ ಮಾನವನ ಇತಿಹಾಸದಲ್ಲಿ ಅತಿ ಪ್ರಮುಖವಾದದ್ದು. ಅಂದಿನಿಂದ ಇವನು ಅಲೆಮಾರಿಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ. ತನ್ನೊಡನಿದ್ದ ಜನರೊಡನೆ ಗುಂಪುಗೂಡಿ ವಾಸಿಸಲಾರಂಭಿಸಿದ್ದು ಈ ಅವಧಿಯಲ್ಲಿ. ಕ್ರಮೇಣ ತಾನು, ತನ್ನದು ಎಂಬ ಮನೋಭಾವ ಬೆಳೆದು ಕುಟುಂಬ ಪದ್ಧತಿ ಆರಂಭವಾಯಿತು. ಕುಟುಂಬದವರೆಲ್ಲ ಒಂದು ಕಡೆ ಇರಬೇಕೆನಿಸಿದ್ದಾಗಲೇ ಏಕಾಂತತೆಯ ಆವಶ್ಯಕತೆಯೂ ಉಂಟಾಯಿತು. ಅದಕ್ಕಾಗಿ ಮನೆಯ ರಚನೆ ತಲೆದೋರಿತು. ಈ ಮನೆಗಳು ಕೇವಲ ಪ್ರಾರಂಭಿಕ ಸ್ಥಿತಿಯ ಗುಡಿಸಲುಗಳು ಮಾತ್ರ.

ನೀಲಗಿರಿ ಬೆಟ್ಟಗಳಲ್ಲಿನ ತೋಡ ಜನಾಂಗದವರ ಗುಡಿಸಲಿನಂತೆಯೇ ಕಾಡುಗೊಲ್ಲರ ಗುಡಿಸಲು ಇದೆ.

ಈಗಲೂ ಇದೇ ರೀತಿಯ ಗುಡಿಸಲುಗಳನ್ನು ನಾವು ನಮ್ಮ ಕಾಡುಗೊಲ್ಲ ಜನಾಂಗದ ಗುಡಿಸಲಿನಲ್ಲಿಯೂ ಕಾಣಬಹುದು.

ಆದಿವಾಸಿತಾಣಗಳು ಪ್ರವಾಸತಾಣಗಳಾಗಲಿ. ಆ ಮೂಲಕ ಬುಡಕಟ್ಟು ಜನಾಂಗ ಮುನ್ನೆಲೆಗೆ ಬರಲಿ,ಅವರ ಅಭಿವೃದ್ಧಿ ಬಗ್ಗೆ ಸರಕಾರ ಗಮನ ಹರಿಸಲಿ.

************************************************

2 thoughts on “ಕಾಡುಗೊಲ್ಲ ಮತ್ತು ತೋಡ ಜನಾಂಗದ ಗುಡಿಸಲಿನಲ್ಲಿ ಸಾಮ್ಯತೆ

  1. ಕಾಡುಗೊಲ್ಲ ಸಮುದಾಯದ ಮಾಹಿತಿಪೂರ್ಣ ವಿವರಗಳ ಪರಿಚಯ ಲೇಖನ ಸೊಗಸಾಗಿ ಮೂಡಿ ಬಂದಿದೆ. ಧನ್ಯವಾದಗಳು

  2. ಆದಿವಾಸಿಗಳಿಗೂ ತನ್ನದೇ ಆದ ಶಾಂತಿ, ನೆಮ್ಮದಿಯುತ ಬದುಕಿನ ಅಗತ್ಯವಿದ್ದು, ಅವರು ಮತ್ತು ಅವರ ವಾಸಸ್ಥಳಗಳು ಮನರಂಜನೆಯ ಕೇಂದ್ರಗಳಲ್ಲ.. ಆದಿವಾಸಿಗಳ ತಾಣಗಳು ಪ್ರವಾಸಿತಾಣಗಳಾಗಲು…

    ಆದಿವಾಸಿಗಳು ಅವರ ಮೂಲನೆಲೆ ಕಾಡುಗಳಲ್ಲೇ ಇರಬೇಕೇ ಹೊರತು, ಸರಕಾರ, ರಾಜಕಾರಣಿಗಳ ಹಣದೋಚುವ ಯೋಜನೆಗಳಾದ ಪುನರ್ವಸತಿ ಕೇಂದ್ರಗಳಲ್ಲಿ ಅಲ್ಲ….

    -ಡಾ.ಹನಿಯೂರು ಚಂದ್ರೇಗೌಡ
    ಬುಡಕಟ್ಟು-ಜಾನಪದ ಸಂಶೋಧಕ,
    ಬೆಂಗಳೂರು. 8088594302
    kaadumedu23@gmail.com

Leave a Reply

Back To Top