ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಹೊಸ ಅಂಕಣ ಎರಡು ವಾರಕ್ಕೊಮ್ಮೆ ಪ್ರಕಟವಾಗುತ್ತದೆ.

ಅವ್ಯಕ್ತ

ಓದುವ ಮುನ್ನ

ಮಕ್ಕಳು ಮುಂದಿನ
ಸಮಾಜವನ್ನು ಕಟ್ಟುವಂತಹ ಶಿಲ್ಪಿಗಳು ಎಂದು ನಂಬಿರುವವಳು ನಾನು. ನಮ್ಮ ಸುತ್ತ ನೋಡಿದಾಗ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣಬಹುದು ಎಜುಕೇಶನ್
ಎಂಬುದನ್ನು ಬರೀ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ತೆಗೆಯಲು ಸೀಮಿತವಾಗಿರಿಸಿರುವುದು,ಹಣ ಮಾಡುವುದು, ಸ್ವಾರ್ಥ ಜೀವನ
ನಡೆಸುವುದು…ಅಥವಾ ಎಜುಕೇಶನ್
ಎಂದರೆ ಒಂದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು, ಸ್ವಾರ್ಥ ಹಾಗೂ ನಿಸ್ವಾರ್ಥ ಎರಡರನಡುವೆ ಸಮತೋಲನ ತರುವುದು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು…ಮೊದಲನೆಯ ತರಹದ ವ್ಯಕ್ತಿಗಳು ಹಲವರಿದ್ದರೂ, ಎರಡನೆಯ ತರದವರು ಬೆರಳೆಣಿಕೆಯಷ್ಟು ಈ ನಿಟ್ಟಿನಲ್ಲಿ
ನಾನು ನನ್ನ ಹೆಚ್ಚಿನ್ನ ಸಮಯವನ್ನುಮಕ್ಕಳೊಂದಿಗೆ ಕಳೆದಿದ್ದೇನೆ, ಮಕ್ಕಳ ಮನಸ್ಸನ್ನು ಅರಿಯಲು, ತೊಂದರೆಗಳನ್ನು
ಪರಿಶೀಲಿಸುವುದುನನ್ನ ದಿನನಿತ್ಯ ಜೀವನದ ಒಂದು ಭಾಗ.

ನಾವು ಕಲಿತ
ರೀತಿಯಲ್ಲಿ ನಮ್ಮ ಮಕ್ಕಳಿಗೆ ಹೇಳಿ ಕೊಡಲಾಗುವುದಿಲ್ಲ ಏಕೆಂದರೆ ಇಂದಿನ ಸಮಾಜ ಹಾಗೆ ಉಳಿದಿಲ್ಲ…

ಈ ನಿಟ್ಟಿನಲ್ಲಿ ನನ್ನ ಮಕ್ಕಳೊಂದಿಗಿನ ಅನುಭವಗಳನ್ನು ಸುಮ್ಮನೆ ಬರೆದಿಡಲು ಪ್ರಾರಂಭಿಸಿದೆ ಒಂದು ನಂಬಿಕೆ ಮನಸ್ಸಿನಲ್ಲಿ ಇತ್ತು ಎಂದಾದರೂಯಾರಾದರೂ ಅನುಭವಗಳನ್ನು ಮುಂದಿಟ್ಟುಕೊಂಡು ಇನ್ನಷ್ಟು ಮಕ್ಕಳಿಗೆ ಒಳ್ಳೆಯದಾಗಲಿ.. ಸಂಗಾತಿ ಪತ್ರಿಕೆಯು ಈ ಮೂಲಕ ನನ್ನ ಅನುಭವ ಹಾಗೂ ಬರವಣಿಗೆಯನ್ನು ಗುರುತಿಸಿಅದನ್ನು ಪ್ರಕಾಶಿಸಲು ಅವಕಾಶ ನೀಡಿದೆ.ಇದರಿಂದ ಹಲವು ಮಕ್ಕಳಿಗೆ, ಮಕ್ಕಳ ಬಗ್ಗೆ ಕಾಳಜಿ ಇರುವವರಿಗೆ ಸಹಾಯವಾಗಬಹುದು ಎಂದು ಆಶಿಸುತ್ತೇನೆ. ಸಮಾಜದ ಬೆಳವಣಿಗೆ ನಮ್ಮ ಜವಾಬ್ದಾರಿಯಾಗಿರುತ್ತದೆ ಒಟ್ಟಾಗಿ ಅದನ್ನು ಚಂದಗೊಳಿಸುವ ಬೆಳೆಸುವ!

ಬದಲಾವಣೆ

ಇನ್ನೆರಡು ದಿನಗಳಲ್ಲಿ
ಶಿಕ್ಷಕರ ದಿನಾಚರಣೆ ಇದ್ದಿದ್ದರಿಂದ ಓದೋದು ಬಿಟ್ಟು ಕುಸುಕುಸು ಪಿಸಿಪಿಸಿ ಮಾತಾಡ್ಕೊಂಡು ಕೂತಿದ್ರು. ನಾನು ಪೀಠಿಕೆ ಹಾಕಿದೆ “ಎಷ್ಟು ದುಡ್ಡು ಕಲೆಕ್ಟ್ ಮಾಡ್ತಾ
ಇದ್ದೀರಾ ಎಲ್ರೂ… ಟೀಚರ್ಸ್ ಡೇಗೆ?” ಮ್ಯಾಮ್1000, 500, 1500…ನನಗೆ
ಕೇಳಿ ಆಶ್ಚರ್ಯ, ಕಸಿವಿಸಿಯಾಯಿತು ತೋರಿಸ್ಕೊಳ್ಲಿಲ್ಲ.

ಎಲ್ರುನ್ನೂ ಸುಮ್ನೆ
ಕೇಳ್ದೆ “ನಿಮ್ಮ ಇಷ್ಟದ  ಶಿಕ್ಷಕರ ಬಗ್ಗೆ ಒಬ್ಬೊಬ್ಬರುಎರಡೆರಡು
ಸಾಲಿನಷ್ಟು ಹೇಳಿ”.ಎಲ್ಲರೂ ಪುಸ್ತಕ ಮುಚ್ಚಿಟ್ಟು
ತಾಮುಂದು ನಾಮುಂದು ಅಂತ ಹೇಳಕ್ಕೆ ಶುರುಮಾಡಿದ್ರು…  ಒಂದು ನಿಮಿಷ
ಬಿಟ್ಟು ಸ್ವಲ್ಪಸ್ವರ ಏರಿಸಿ “ಸಾಕು ಈಗ ನನ್ನ
ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಕೊಡಿ”ಅಂದೆ. ಎಲ್ಲರೂ ಅಶಕ್ತವಾಗಿ(ನಿಶ್ಯಬ್ಧವಾಗಿ) ಕೇಳತೊಡಗಿದರು.

ನಾನು ಕೇಳಿದೆ “ ನಿಮ್ಮ ಗುರುಗಳು ಯಾವತ್ತಾದ್ರು ಹೀಗ್ ಹೇಳಿದ್ರಾ?“ನೀನು ಹಣವಂತನಾಗಬೇಕು, ನೀನು ನನಗೆ ಬಟ್ಟೆಬರೆ ಇತ್ಯಾದಿ ಕೊಡ್ಸು, ನೀನು ನನ್ನ ಹುಟ್ಟಿದ ಹಬ್ಬ ವಿಜ್ರಂಭಣೆಯಿಂದಆಚರ್ಸು, ನೀನು ನಂಗೆ ತಿಂಡಿ ತಿನಿಸು ಕೊಡ್ಸು, ನೀನು ದೊಡ್ಡ ಮನುಷ್ಯ ಆಗಿ ನನ್ನ ಹೆಸರನ್ನು ಹೊರಗಡೆ ಸಮಾಜಕ್ಕೆ
ಹೇಳು, ನನಗೆ ತುಂಬಾ ಕಷ್ಟ ಇದೆ ನನಗೆ ಸಹಾಯ ಮಾಡು…???” ಮಕ್ಕಳು ತಟ್ಟನೆ ಹೇಳಿದ್ರು “ಇಲ್ಲ, ಯಾವತ್ತೂ
ಹೇಳಿಲ್ಲ…”

ಮನಸಲ್ಲಿನಗಾಡಿಕೊಂಡು
“ಹೌದಾsssss! ,
ಹಾಗಾದ್ರೆ ಹೀಗ್ಹೇಳಿದ್ದಾರಾ?.. ನೀನು
ಗುಣವಂತನಾಗು,  ಬೇಕೆಂದವರಿಗೆ
ಸಹಾಯ ಮಾಡು, ನಕ್ಕು ನಗಿಸು ಯಾರನ್ನೂನೋಯಿಸ್ಬೇಡ , ಹಿರಿಯರನ್ನು ಪ್ರೀತಿ ಗೌರವದಿಂದ ನೋಡ್ಕೋ, ಕಿರಿಯರ ಮೇಲೆ ಕಾಳಜಿ ಇರ್ಲಿ,  ನಿನ್ನ ಜವಾಬ್ದಾರಿಯನ್ನು
ಸರಿಯಾಗಿ ನಿರ್ವಹಿಸು, ದೇಶಕ್ಕೆ ಒಳ್ಳೆಯ ಪ್ರಜೆಯಾಗು,ಮನೆಗೆ ಒಳ್ಳೆಯ ಮಗುವಾಗು” ಎಲ್ರೂ “ಹೌದು
ಹೌದು!” ಅಂತ ಇನ್ನಷ್ಟು ವಿಚಾರಗಳನ್ನಹಂಚ್ಕೊಂಡ್ರು.

ಎರಡು ನಿಮಿಷ ನಿಶ್ಶಬ್ದವಾಗಿ
ಇದ್ದು… “ನಿಮ್ಮ ಪ್ರಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಅತ್ಯಂತ ಒಳ್ಳೆ
ಉಡುಗೊರೆ ಎಂದರೆ ಅವರು ಹೇಳ್ಕೊಟ್ಟಿರೋ ವಿಚಾರಧಾರೆನನಿಮ್ಮಲ್ಲಿ ಬೆಳೆಸಿಕೊಳ್ಳೋದಲ್ವೇ ಮಕ್ಳೇ?” “ACTIONS SPEAK my
children”…ಅಂದೆ..

ಎಲ್ಲರೂ ಎರಡ್ನಿಮಿಷ
ನಿಷಬ್ದರಾದ್ರು.
ಅದ್ರಲ್ಲಿ ಒಬ್ಬಳು ಕೇಳಿದ್ಲು”ಈಗಇರೋ
ಹಣದಲ್ಲಿ ನಾವು ಹೇಗೆ ಸಹಾಯ ಮಾಡದು? ನನ್ಟೀಚರ್ ಯಾವಾಗ್ಲೂಬೇರೆಯವರಿಗೆ ಸಹಾಯ ಮಾಡಿ, ಅಂತಾರೆ!” ನಾನು ಈ ಪ್ರಶ್ನೆಗೆ ಕಾಯುತ್ತಿದ್ದ್ನೇನೋ ಅನ್ನೋಹಾಗೆ
ಥಟ್ಟನೆ ಹೇಳಿದೆ “ಯೋಚಿಸ್ನೋಡು! ನಿಮ್ಮ ಶಾಲೆಯಲ್ಲಿ
ಬಡಮಕ್ಕಳಿರ್ಬೌದಲ್ವಾ?… ” ಅವಳು ಸಂಭ್ರಮದಿಂದ
“ಹೌದು ಮಿಸ್, ಹಾಗಾದರೆ, ಈ ಸರಿ ನಾವು ಕಲೆಕ್ಟ್ ಮಾಡಿರೋ ಹಣಾದಲ್ಲಿನಾಲ್ಕೆದು ಚಾರ್ಜರ್ ಲೈಟ್ಗಳನ್ನತಂದುಅಕ್ಕನ ಮನೆಯಲ್ಲಿಕರೆಂಟ್ಟ್ಲಿಲ್ವಲ್ಲಾ… ಅವಳಿಗೆಕೊಡೋಣ.
ಓದಕ್ಕೆ ಸಹಾಯಆಗುತ್ತೆ.!! “

ನಾನು “ಶಹ್ಬಾಶ್ ಮಗ್ಳ!ಇದು ನಿಜವಾದ ಶಿಕ್ಷಕರ ದಿನಾಚರಣೆ!” ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ರು.

ಎಲ್ಲಾ ಮಕ್ಕಳಿಗೆ ಕುರಿತು ಹೇಳಿದೆ

 “ಬದಲಾವಣೆಗೆ ಎಂದು ಕಾದು ಕುತ್ಕೋ ಬಾರದು
ಮನಸ್ಸು ಮಾಡಿ ಬದಲಾವಣೆ ನಮ್ಮಿಂದಲೇ ಪ್ರಾರಂಭ ಮಾಡ್ಬೇಕು
.”

About The Author

Leave a Reply

You cannot copy content of this page

Scroll to Top