ಅನು ಮಹಾಲಿಂಗ
ಪುಟ್ಟ ನೀನು ಬಹಳ ಚೆಂದ
ನಿನ್ನ ನಗುವ ಇನ್ನೂ ಅಂದ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದಾಗ
ಇಡುವೆ ನಿನಗೆ ದೃಷ್ಟಿ ಬೊಟ್ಟು ನಾನಗ
ಬಿಸ್ಕೇಟ್ ಚಾಕೊಲೇಟ್ ಭಾರಿ ತರುವೆ
ನೀನಿಗ ಬೇಗ ತಿನ್ನು ಊಟವನ್ನು
ಅ ಆ ಕಲಿಯೊ ಕಂದಾ
ನಮ್ಮಯ ಭಾಷೆಯೆ ಚೆಂದ
ಚೆಂದದಿ ನುಡಿಯೋ ಅಂದದಿ ಕುಣಿಯೊ
ಚಂದ್ರವದನನೇ ಚುಕ್ಕಿ ಚಂದ್ರಮ
ತಾರಲೋಕದ ಅಧಿಪತಿ ನೀನು
ತಾರ ಬಳಗದೀ ಹೋಳೆಯುವೆ ಏನು
ನಿನ್ನಯ ಅಂಗಾಲು ಮುಂಗಾಲನೆಲ್ಲ
ಮುದ್ದಿಸಿ ತೊಳೆದು ಮುತ್ತನ್ನು ಇಡುವೆ
ನನ್ನಯ ಕನಸು ನಾಳೆಯ ನನಸು
ಜಗಕೆಲ್ಲ ಅಧಿಪತಿ ನೀನೆ ಕಂದಯ್ಯಾ
—————————–