ಕೊಂಕಣಿ ಕವಿಗಳ ಪರಿಚಯ
ಪರಿಚಯಿಸಿದವರು
ಶ್ರೀಯುತ ಗುರುದತ್ ಬಂಟ್ವಾಳಕಾರ್.(ಗುರು ಬಾಳಿಗಾ)
ಕರ್ನಾಟಕದ ಕೊಂಕಣಿ ಕವಿಗಳನ್ನು ಪರಿಚಯಿಸುವ ಒಂದು ಜವಾಬ್ದಾರಿಯನ್ನು ಸಂಗಾತಿ ಪತ್ರಿಕೆ ನನಗೆ ಕೊಟ್ಟಿದೆ.
ಮೊದಲಿಗೆ ನಾನು ಪರಿಚಯಿಸಲು ಇಚ್ಛಿಸುವ ಕವಿ ಶ್ರೀಯುತ ಗುರುದತ್ ಬಂಟ್ವಾಳಕಾರ್. ಗುರು ಬಾಳಿಗಾ ಎಂಬ ಕಾವ್ಯನಾಮದಿಂದ ಬರೆಯುವ ಇವರ ಕವಿತೆಗಳು ಸರಳ ಶಬ್ದಗಳಲ್ಲಿ ಆಳವಾದ ವಿಚಾರಗಳನ್ನು ಮಂಡಿಸುವುದರಲ್ಲಿ ಯಶಸ್ವಿಯಾಗುತ್ತವೆ.
ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿರುವ “ವಿಶ್ವ ಕೊಂಕಣಿ ಕೇಂದ್ರ” ದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುದತ್ ಬಂಟ್ವಾಳಕಾರ್ ಅವರು ಅಲ್ಲಿನ ಕೊಂಕಣಿ ಭಾಷಾ ಸಂಶೋಧನಾ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.
ಅವರ ಆಯ್ದ ಎರಡು ಕೊಂಕಣಿ ಕವಿತೆಗಳನ್ನು ನಿಮ್ಮ ಓದಿಗಾಗಿ ಕನ್ನಡದಲ್ಲಿ ಅನುವಾದಿಸಿದ್ದೇನೆ.
————
ಫುಲಾಂ ಪಾವ್ಸ್
ಫುಲಾಂ ಪಾವ್ಸ್
ದಿವಳೆ ಪರಬೇಚೊ
ತುಮಿ ಜಾಣಾ
ಫುಲಾಂಚೊ ನ್ಹಯ್
ಉಜ್ಯಾಚೊ
ಉಜ್ಯಾ ಫುಲಾಂಚೊ
ಜೆನ್ನಾ ತೆರಾವೆಳಾರ್
ಕಸ್ತೂರ್ ಮೊಗ್ರ್ಯಾಕ್
ಮೋಲ್ ಚಡತಾ
ತೆನ್ನಾ ಮ್ಹಜೀ ಆವಯ್ ಮ್ಹಣತಾ
ಹಾತ್ ಲಾಸತಾ!
ಬೊದಿಲೇರಾಚಿ ಪ್ರೇಮಿಕಾ
ಜೀನ್ ದುವಾಲ್
ಆನಿ
ಮ್ಹಜೀ ಬಾಯಲ್:
ಏಕಲಿ ಉಜ್ಯಾಂತೂಲಿ ಫೂಲ್
ದುಸರಿ
ಫುಲಾಚೊ ಉಜೊ.
— ಗುರು ಬಾಳಿಗಾ.
——–
ಹೂ ಮಳೆ.
ಮತಾಪಿನ ಹೂಮಳೆ
ದೀಪಾವಳಿಯದು
ಹೂವಿನದಲ್ಲ
ಬೆಂಕಿಯದು
ಬೆಂಕಿಯ ಹೂಗಳದು.
ನಮ್ಮೂರ ತೇರಿಗೆ..
ದುಬಾರಿ ಹೂಚಂಡು
ಕೈ ಸುಡುತ್ತೆಂದು
ಅಮ್ಮನ ಅಲವತ್ತು.
ಬೋದಿಲೇರನ ಪ್ರೇಯಸಿ
ಜೀನ್ ದುವಾಲ್
ಹಾಗೂ ನನ್ನ ಮಡದಿ..
ಅವಳು ಬೆಂಕಿಯ ಹೂವು
ಇವಳು ಹೂವಿನ ಬೆಂಕಿ.
— ಶೀಲಾ ಭಂಡಾರ್ಕರ್.
——–
ವೇಳ್
ಮೆಗೆಲೆ ಘರಾಚೆ
ಚಾರ ಕುಡಾಂತೂಯ್
ಏಕೇಕ್ ಘಡಿಯಾರ ಆಸಾ.
ಏಕ ಪಾಂಚ ಮಿನಿಟ ಮುಖಾರ್ ಆಸಾ
ದುಸರೆ ತೀನ ಮಿನಿಟ ಮಾಕಶಿ
ಉರಲೆ ದೋನಿ ಬ್ಯಾಟರಿ ಸರ್ನ್
ಬಂದ್ ಪಡಲಾ.
ದೆಕೂನ ಆಮಿ ಬಾಯಲ ಬಾಮೂಣ
ದೊಗಾನಯ್
ಆಮಚೆ ಮೊಬಾಯಲಾಂತೂಚ್
ವೇಳ ಚೊವಪ.
ಆಮಚೆ ದೊಗಾಂಚೇಯ್ ಮೊಬಾಯಲ್
ಎಕಾಮೆಕಾಂಕ ಪಾಂಚ ಮಿನಿಟಾಂ
ಮಾಕಶಿ ಮುಖಾರ ಆಸಾತ.
ತೇ ದೆಕೂನ
ಆಮಿ ಎಕಾಮೆಕಾಂಕ ಕೆನ್ನಾಯ್
ಸಾರಕೆ ವೆಳಾರ ಮೆಳಚೇಚ್ ನಾ.
ಮ್ಹಜೆ ಆವಯ್ ಬಾಪಯ್
ಆಮಚೆ ಲಾಗಶಿಲ್ಯಾ ಘರಾಂತ
ವಸ್ತಿ ಕರೂನ ಆಸಾತ್.
ಮ್ಹಜೆ ಬಾಪಯ್ ಕಂಪ್ಯೂಟರಾಂತ್
ವೇಳ ಪಳಯತಾ
ಮ್ಹಜೆ ಆವಯ್ ಟೀವೀಂತ್
ಆಮಿ ಸಾಂಜೆರ್ ಗೆಲ್ಯಾರ್
ತಾಂಚೆ ಸೀರಿಯಲ್ ಆಸತಾ
ನಾಸತಾನಾ ಆಮಕಾ
ವೇಳ ಮೇಳನಾ
ಆಮಚೊ ಸ ವರಸಾ ಪೂತ
ಆಮಚೆ ದೋನ ಘರಾಂಚೆ ಮಧೇಂತ್
ಯೇವನ ವಚೂನ ವೇಳ ಖೆಳಯತಾ.
ದೆಕೂನ್
ಆಮಿ ಸಕಡಾನಯ್
ತಾಕಾ ಚೋಯತಚ್ ವೇಳ ಸಮಜೂವಚೆ.
ಆನಿ ಆಖೇರೀಕ್ ತಾಕಾಚ್
ಬೆಸ್ಟಾವಚೆ ತೋ
ವೇಳ ಪಾಡ ಕರತಾ ಮ್ಹಣೂನ.
-ಗುರು ಬಾಳಿಗಾ
——-
ಸಮಯ
ನಮ್ಮ ಮನೆಯ ನಾಲ್ಕೂ
ಕೊಣೆಯೊಳಗಿನ
ಒಂದೊಂದು ಗಡಿಯಾರಗಳು.
ಒಂದು ಐದು ನಿಮಿಷ
ಮುಂದಿದ್ದರೆ.. ಇನ್ನೊಂದು
ಮೂರು ನಿಮಿಷ ಹಿಂದೆ.
ಇನ್ನೆರಡು ಬ್ಯಾಟರಿ ಮುಗಿದು
ನಿಂತು ಹೋಗಿವೆ.
ಹಾಗಾಗಿ ನಾವಿಬ್ಬರೂ
ಗಂಡ ಹೆಂಡತಿ
ಸಮಯ ನೋಡಿಕೊಳ್ಳುವುದು
ನಮ್ಮ ನಮ್ಮ ಮೊಬಾಯಿಲ್‍ಗಳಲ್ಲೇ.
ನಮ್ಮಿಬ್ಬರ ಮೊಬೈಲ್‍ನ
ಸಮಯ ಐದು ನಿಮಷ
ಹಿಂದೆ ಮಂದೆ ಇರುವುದರಿಂದ
ನಾವಿಬ್ಬರೂ
ಒಂದೇ ಸಮಯದಲ್ಲಿ
ಎಂದೂ ಸಿಗುತ್ತಿಲ್ಲ.
ನಮ್ಮ ತಂದೆ ತಾಯಿ
ನಮ್ಮ ಪಕ್ಕದಲ್ಲಿರುವ
ಮನೆಯಲ್ಲಿ ವಾಸವಾಗಿದ್ದಾರೆ.
ಅಪ್ಪ ತನ್ನ ಕಂಪ್ಯೂಟರ್ ಲ್ಲಿ
ಸಮಯ ನೋಡಿಕೊಂಡರೆ
ಅಮ್ಮ ಟಿವಿಯೊಳಗೆ.
ನಾವು ಸಂಜೆಯ ಹೊತ್ತು
ಅವರ ಬಳಿ ಹೋದಾಗ
ಅವರಿಗೆ ಸೀರಿಯಲ್ ಗಳಿರುತ್ತವೆ.
ಅದಿಲ್ಲದಾಗ ನಮಗೆ
ಸಮಯವಿರುವುದಿಲ್ಲ.
ನಮ್ಮ ಆರು ವರ್ಷದ ಮಗ
ಎರಡೂ ಮನೆಗಳಲ್ಲಿ
ಓಡಾಡುತ್ತಾ ಸಮಯ ಕಳೆಯುತ್ತಾನೆ.
ಅವನನ್ನು ನೋಡುತ್ತಲೇ
ನಾವು ಸಮಯವನ್ನು
ತಿಳಿಯುತ್ತೇವೆ.
ಕೊನೆಯಲ್ಲಿ..
ಸಮಯ ಹಾಳು
ಮಾಡುತ್ತಾನೆಂದು
ಅವನನ್ನೇ ಬೈಯುತ್ತೇವೆ.
*********************************************
ಧನ್ಯವಾದಗಳು ಕವಿ ಮತ್ತು ಅನುವಾದಕರಿಗೆ
ಧನ್ಯವಾದಗಳು ಸರ್
ಮೂಲ ಕವಿತೆ ಮತ್ತು ಅನುವಾದ ಎರಡೂ ಚೆನ್ನಾಗಿ ಬಂದಿದೆ.
ಧನ್ಯವಾದು ವತ್ಸಲಕ್ಕಾ