ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಆತಂಕವಾದಿಗಳು

ರಜೆಯಲಿ ಮಕ್ಕಳು ಮೊಮ್ಮಕ್ಕಳ
ಬರುವಿಕೆಗಾಗಿ ಕಾಯುತಿರುವಾಗ
ಅಳಿಯಂದಿರು ಮೊದಲು ಬರುವರೆಂದು
ಬಾಂಬ್ ಸಿಡಿಸಿದರು ಮಕ್ಕಳು ನಗುತ
ನನ್ನೆಡೆ ನೋಡುತ ನಕ್ಕರು ನನ್ನವರು
ಎದೆಬಡಿತದಿಂದ ತಲ್ಲಣಗೊಂಡೆ ನಾ
ಮಾಡುವದೆಂತು ಅಡುಗೆ ಎಲ್ಲಕೆಲಸ
ಕೈಕೊಟ್ಟ ಕೆಲಸದವಳ ಶಪಿಸಿದೆ
ನಾಕು ದಿಕ್ಕಿನ ನಾಲ್ವರು ಅಳಿಯಂದಿರು
ನಾಳೆಯೇ ಪುಣೆಗೆ ಬರುವರೆಂದಾಗ
ಅಳಿಯಂದಿರಲ್ಲಾ ಆತಂಕವಾದಿಗಳು
ಎನ್ನುತ ಬೈಯ್ಯುತ ಆತಂಕಗೊಂಡೆ
ನಾನಾ ತರದ ತಿಂಡಿಭಕ್ಷ್ಯಭೋಜ್ಯಗಳು
ಚೈನೀಜ ಇಟಾಲಿಯನ್ ಉತ್ತರ
ದಕ್ಷಿಣ ಪದಾರ್ಥಗಳು ಕಣ್ಣಮುಂದೆ
ಕುಣಿದಾಡಿ ಆತಿಥ್ಯಕ್ಕೆ ತಯಾರಾದೆ
ಮಕ್ಕಳು ಮೊಮ್ಮಕ್ಕಳು ಬರುವುದಿಲ್ಲ
ಏನೋ ಕಸಿವಿಸಿ ಕಳವಳ ತವಕ
ಆದರೂ ದುಗುಡ ತೋರಗೊಡದೆ
ನಗುತ ಸ್ವಾಗತಿಸಿದೆ ಆತಂಕವಾದಿಗಳ
ಅನ್ನಪೂರ್ಣ ಸು ಸಕ್ರೋಜಿ ಪುಣೆ
