ಎಸ್.ಎಸ್.ಪುಟ್ಟೇಗೌಡ ಅವರ ಕವಿತೆ-ಜೀವ ಹಣತೆ

ನಿನ್ನಡಿಗಳಲಿ ಬೆಳಗಿಸಲು ಮುಡುಪಿಟ್ಟ
ನನ್ನ ಜೀವ ಹಣತೆಯ ಸೊಡರು ಬಿರುಗಾಳಿ ಎಡರಿರುವ ಬಯಲಲ್ಲಿದೆ ದೇವ ನನ್ನದೆಯ ಉಸಿರ ಸತ್ವ ತೈಲವ ಸುರುವಿ ಕಿರು ದೀವಿಗೆ ಆರದಂತೆ ಜೋಪಾನಗೈದಿರುವೆ ಬನದ ಬದುಕಿನ ಹಣತೆ ಎಣ್ಣೆ ಮುಗಿವ ಕೊರತೆ
ನಿನ್ನೊಲವ ಗುಡಿಯಲ್ಲಿ ಒಮ್ಮೆ ಬೆಳಗಿದರೆ ಸಾಕು ನನಗಿರದು ಚಿಂತೆ
ಉಷೆಯ ವೇಗಕೆ ಹೊನ್ನನೆರಚುವ ಎನ್ನಾತ್ಮ ದೀವಿಗೆಯಿದು
ತಾರೆಗಳ ಲೋಕದಲಿ ಚಲುವ ಚಂದ್ರಿಕೆಯಾಗಿ ಶೋಭಿಸುವ ಜ್ಯೊತಿಯಿದು ನಿನ್ನ ಸನ್ನಿಧಿ ಸೇರದಿರೆ ಬಯಲೆ ಗತಿಯಾಗಿ ನಿಲಲಿನಿತು
ನೆರವಿಲ್ಲದೆ ಬಿರುಗಾಳಿಗೆ

ಹಣಕಿ ಮಿಣುಕಿ ನಂದುವುದು


Leave a Reply

Back To Top