ನಾನು ಓದಿದ ಪುಸ್ತಕ
ನೂರ್ ಇನಾಯತ್ ಖಾನ್ ಚಂದ್ರಶೇಖರ್ ಮಂಡೆಕೋಲು ಮೂರು ದಿನಗಳ ಕಾಲ ನನ್ನನು ಈ ಕೊರೋನಾ ರಜೆ ‘ನೂರ್ ಇನಾಯತ್ ಖಾನ್’ ನಾಝಿ ಹೋರಾಟದ ಆರ್ದ್ರ ಕಾವ್ಯವನ್ನು ಓದಲು ಹಚ್ಚಿತು. ನನ್ನ ಓದಿನ ಮಿತಿಯಲ್ಲಿ ನಾನು ಗ್ರಹಿಸಿದ ಕಿರು ಬರಹವಿದು. ಧರ್ಮ ಹಾಗೂ ಜನಾಂಗ ಶ್ರೇಷ್ಠತೆಯ ಭ್ರಷ್ಠ ಸಿಂಡ್ರೋಮ್ ಇಂದು ನಿನ್ನೆಯದಲ್ಲ.ನಾಳೆ ಹೋಗುತ್ತದೆಂಬ ಖಾತ್ರಿಯೂ ಇಲ್ಲ;ಆ ಮಾತು ಬೇರೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಝಿಗಳ ನಡೆಸಿದ ಮಾರಣ ಹೋಮಕ್ಕೆ ಯಾವತ್ತೂ ಕ್ಷಮೆ ಇಲ್ಲ.ಅತ್ಯಾಚಾರಕ್ಕೊಳಪಡಿಸಿ ಸಜೀವ ದಹಿಸುವ ಅವರ ಕ್ರೌರ್ಯವೊಂದು […]
ನಾ ಮೆಚ್ಚಿದ ಪುಸ್ತಕ
ಯಾದ್ ವಶೇಮ್ ನೇಮಿಚಂದ್ರ ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ […]
ನಾನು ಓದಿದ ಕಾದಂಬರಿ
ಮಲೆಗಳಲ್ಲಿ ಮದುಮಗಳು ಕುವೆಂಪು ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ “ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು […]
ನಾನು ಓದಿದ ಕಾದಂಬರಿ
ತುಂಗಭದ್ರ ಶ್ರೀಮತಿ ಎಂ.ಕೆ.ಇಂದಿರಾ ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ! ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ […]
ನಾನು ಓದಿದ ಕಾದಂಬರಿ
ಹರಿಚಿತ್ತ ಸತ್ಯ ವಸುಧೇಂದ್ರ ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ. ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ […]
ನಾನು ಓದಿದ ಕಾದಂಬರಿ
ಅಶ್ವತ್ಥಾಮನ್ ಜೋಗಿ ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ […]
ಪುಸ್ತಕ ಪರಿಚಯ
ಸಂಕೋಲೆಗಳ ಕಳಚುತ್ತ ಕೃತಿ: ಸಂಕೋಲೆಗಳ ಕಳಚುತ್ತ ಕವಿ: ಕು.ಸ.ಮಧುಸೂದನ ಪ್ರಕಾಶಕರು: ಕಾವ್ಯಸ್ಪಂದನ ಪ್ರಕಾಶನ, ಬೆಂಗಳೂರು ಪುಸ್ತಕ ದೊರೆಯುವ ವಿವರಗಳು ಸಂಕೋಲೆಗಳ ಕಳಚುತ್ತ ಪುಸ್ತಕತರಿಸಿಕೊಳ್ಳುವ ವಿವರಗಳು ಪುಸ್ತಕದ ಬೆಲೆ=150=00 ಬ್ಯಾಂಕ್ ವಿವರಗಳು IFSC CODE-CNRB0002698 AC/NO=1145101036761 Bhadravathiramachari Canara bank,rajajinagar 2nd block***********
ಪುಸ್ತಕ ಪರಿಚಯ
ಸಾರಾ ಶಗುಫ್ತಾ (ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.) ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..! ಹಾಲ ಮೇಲೆ ಆಣೆ… ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ […]
ಪುಸ್ತಕ ವಿಮರ್ಶೆ
ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. […]
ಪುಸ್ತಕ ಬಿಡುಗಡೆ
ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು. ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ […]