ಎದಿಹಿಗ್ಗು ಕಡೆತನಕ.
ಭಾವಲಹರಿ. ಎದಿಹಿಗ್ಗು ಕಡೆತನಕ. ರಶ್ಮಿ .ಎಸ್. ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬. ಬ್ಯಾಸಗಿ ಝಳ ತಾಕಲಾರ್ದ […]
ಹಿಮಾಲಯ ಪರ್ವತ ಶ್ರೇಣಿಗಳು”
ಲೇಖನ ಹಿಮಾಲಯ ಪರ್ವತ ಶ್ರೇಣಿಗಳು” ಆಶಾ ಸಿದ್ದಲಿಂಗಯ್ಯ ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ ಭಾಗವಾಗಿತ್ತು. ಅಲ್ಲಿ […]
ಮಾತು ಮನವನ್ನು ಅರಳಿಸಬೇಕು
ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು […]
ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ
ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ. “ನೀನು ನಂಗೊAದು ರೊಟ್ಟಿ ಕೊಟ್ರೆ ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ ಗಳಿಸೋ ಅವಕಾಶ ಕಿತ್ಕಳೋ ತಂಕ ನನ್ನ ಹಸಿವನ್ನ ತೀರ್ಸಿದಂಗೆ ಅದೇ ನಿನೇನಾದ್ರೂ ವಿದ್ಯೆ ಕಲ್ಸಿ ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ? ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ ಎಲ್ಲ ಒಟ್ ಸೇರಿ ನಮ್ ದಾರಿ ನಾವು […]
ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?
ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, […]
ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್
ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ […]
2020 ರ ಜೀವನ ಕಥನ
ಲೇಖನ 2020 ರ ಜೀವನ ಕಥನ ಸರಿತಾ ಮಧು ಕ್ರಿಕೆಟ್ ಆಟದಲ್ಲಿ 20- 20 ಆರಂಭವಾದಾಗ ಆಟದ ಗತಿಯೇ ಬದಲಾಗಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ನಮಗೂ ಹಾಗೆಯೇ ಸಿಹಿ ಕಹಿ ಗಳೆರಡೂ ಬೆರೆತು ಬಂದಿದೆ ಎನ್ನುವಷ್ಟರಲ್ಲಿ 2020 ಅನಿರೀಕ್ಷಿತ ತಿರುವು ನೀಡಿತ್ತಲ್ಲದೇ, ಬಹುದೊಡ್ಡ ಸವಾಲು ಹಾಕಿದ್ದು ಸುಳ್ಳಲ್ಲ. ಆರಂಭಿಕ ದಿನಗಳಲ್ಲಿ ಕೊರೊನಾ ಅಟ್ಟಹಾಸ ಬಹುತೇಕ ಜನರ ಪಾಲಿಗೆ ಕರಾಳವಾಗಿತ್ತು. ಅಕ್ಷರಶಃ ಜೀವನ ಸಂಕಷ್ಟಗಳನ್ನು ಇಂಚುಇಂಚಾಗಿ ಎದುರಿಸಬೇಕಾಯಿತು. ಪರದೇಶದ ಅಗೋಚರ ವೈರಾಣುವಿಗೆ ಇಡೀ ದೇಶದ ಆರ್ಥಿಕತೆ ತೊಡರುಗಾಲು ಹಾಕಿದ್ದು ನಮ್ಮ […]
ತೆರೆ ಮರೆಯಾಗಲಿರುವ ನತದೃಷ್ಟ ೨೦೨೦
ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ ಚಂದಕಚರ್ಲ ರಮೇಶ ಬಾಬು ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು. ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. […]
ಆಶ್ಚರ್ಯ,ಆಘಾತಗಳ ವರ್ಷ
ಆಶ್ಚರ್ಯ,ಆಘಾತಗಳ ವರ್ಷ ನೂತನ ದೋಶೆಟ್ಟಿ 2020ರ ವರ್ಷಕ್ಕೆ ಒಂದು ಪದದಲ್ಲಿ ಶೀರ್ಷಿಕೆ ಕೊಡಿ ಎಂದರೆ ನಾನು ‘ದಿಗಿಲು’ ಎಂದು ಕೊಡುತ್ತೇನೆ. ಇದು ಭಯ, ಆಶ್ಚರ್ಯ, ಆಘಾತ ಮೊದಲಾದವುಗಳು ಒಟ್ಟು ಸೇರಿ ಉಂಟು ಮಾಡಬಹುದಾದ ಹೇಳಲು ಆಗದ ಒಂದು ಸ್ಥಿತಿ. ಇಂಥ ಸ್ಥಿತಿ ಆಗಾಗ ಎಲ್ಲರ ಜೀವನದಲ್ಲೂ ಬರುತ್ತಲೇ ಇರುತ್ತದೆ. ಆದರೆ ಒಟ್ಟಾರೆ ಮನುಕುಲವೇ ಇಂಥ ಸಮೂಹ ಸ್ಥಿತಿಗೆ ಒಳಗಾಗಿದ್ದು ಆಧುನಿಕ ಕಾಲದಲ್ಲಿ ಇದು ಮೊದಲ ಬಾರಿ ಎಂದು ಹೇಳಬಹುದು. ವಿಶ್ವ ಮಹಾಯುದ್ಧ ಗಳು ನಡೆದ ಕಾಲದಲ್ಲಿ ಮಾಧ್ಯಮಗಳು, […]
ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ
ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ ಕತೆ ಆಶಾ ಸಿದ್ದಲಿಂಗಯ್ಯ ಅಮೆರಿಕಾದ ಗೊಂಬೆ-ತಯಾರಿಕಾ ಕಂಪೆನಿ ಮಾಟೆಲ್ ಇಂಕ್ 1959ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಒಂದು ಫ್ಯಾಷನ್ ಬೊಂಬೆಯೇ ಬಾರ್ಬಿ. ಅಮೆರಿಕಾದ ಮಹಿಳಾ ಉದ್ಯಮಿ ರುತ್ ಹ್ಯಾಂಡ್ಲರ್ (1916-2002) ಬಿಲ್ಡ್ ಲಿಲ್ಲಿ ಎಂಬ ಜರ್ಮನ್ ಗೊಂಬೆಯಿಂದ ಸ್ಪೂರ್ತಿ ಪಡೆದು ಬಾರ್ಬಿಯನ್ನು ರೂಪಿಸಿದರು.ಐವತ್ತು ವರ್ಷಗಳಲ್ಲಿ ಗೊಂಬೆ ಮಾರುಕಟ್ಟೆಯಲ್ಲಿ ಹಲವು ವಿವಾದ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಲೇ ಟೀಕೆಗೆ ಒಳಗಾಗುತ್ತಲೇ ಬೆಳೆಯಿತು ಬಾರ್ಬಿ ಹಾಗೂ ಆಕೆಯ ಜೀವನ ಶೈಲಿ. ಇತ್ತೀಚಿನ ದಿನಗಳಲ್ಲಿ ಬಾರ್ಬಿಗೆ ಪ್ರತಿಸ್ಪರ್ಧಿಯಾಗಿ ಬ್ರಾಜ್ಸರಣಿಯ […]